»   » ಬ್ಲ್ಯಾಕ್ ಮನಿ ಹಗರಣದಲ್ಲಿ ನಟ ಸೂರ್ಯ ಹೆಸರು

ಬ್ಲ್ಯಾಕ್ ಮನಿ ಹಗರಣದಲ್ಲಿ ನಟ ಸೂರ್ಯ ಹೆಸರು

By: ಶಂಕರ್, ಚೆನ್ನೈ
Subscribe to Filmibeat Kannada
Actor Surya
ತಮಿಳು ನಟ ಸೂರ್ಯ ಅಭಿಮಾನಿಗಳಿಗೆ ಇದು ಶಾಕಿಂಗ್ ನ್ಯೂಸ್. ಕಪ್ಪುಹಣ ಹಗರಣದಲ್ಲಿ ಈಗಾಗಲೆ ಹಲವಾರು ರಾಜಕಾರಣಿಗಳ ಹೆಸರುಗಳು ಕೇಳಿಬಂದಿವೆ. ಆದರೆ ಇದೇ ಮೊದಲ ಬಾರಿಗೆ ದಕ್ಷಿಣ ಭಾರತದ ನಟನೊಬ್ಬನ ಹೆಸರೂ ಈ ಹಗರಣಗದಲ್ಲಿ ಕೇಳಿಬಂದಿದ್ದು ಹೊಸ ಚರ್ಚೆಗೆ ನಾಂದಿ ಹಾಡಿದೆ.

ಕಪ್ಪುಹಣವನ್ನು ವೈಟ್ ಆಗಿ ಬದಲಾಯಿಸುತ್ತಿರುವ (Money laundering) ಒಂದು ಗ್ಯಾಂಗ್ ನ ಗುಟ್ಟುರಟ್ಟು ಮಾಡಲು ತೆಲುಗು ನ್ಯೂಸ್ ಚಾನಲ್ ಎಬಿಎನ್ ಕುಟುಕು ಕಾರ್ಯಾಚರಣೆ ನಡೆಸಿತು. ಈ ಸ್ಟಿಂಗ್ ಆಪರೇಷನ್ ನಲ್ಲಿ ನಟ ಸೂರ್ಯ ಹೆಸರು ಕೇಳಿಬಂದಿದ್ದು ಅಚ್ಚರಿ ಮೂಡಿಸಿದೆ.

ಬ್ಲ್ಯಾಕ್ ಮನಿಯನು ವೈಟ್ ಮಾಡುತ್ತಿರುವ ಗ್ಯಾಂಗ್ ನ ಸದಸ್ಯನೊಬ್ಬ ಟಿವಿ ಚಾನಲ್ ಜೊತೆ ಮಾತನಾಡುತ್ತಾ, "ನಟ ಸೂರ್ಯ ತಮಗೆ ರೆಗ್ಯುಲರ್ ಕಸ್ಟಮರ್. ಅವರು ಭಾರಿ ಮೊತ್ತದಲ್ಲಿ ಆಗಾಗ ರು.50 ರಿಂದ ರು.100 ಕೋಟಿ ಕಪ್ಪುಹಣವನ್ನು ಬಿಳಿಹಣವನ್ನಾಗಿ ಬದಲಾಯಿಸಿಕೊಂಡಿದ್ದಾರೆ" ಎಂದಿದ್ದಾನೆ.

"ತಮ್ಮ ಗ್ರಾಹಕರ ಪಟ್ಟಿಯಲ್ಲಿ ಟಿಆರ್ಎಸ್ ಮುಖಂಡ ಕೆಟಿಆರ್ ಸಹ ಇದ್ದಾರೆ" ಎಂದು ಹೇಳಿರುವುದು ಗಮನಾರ್ಹ ಸಂಗತಿ. ಆದರೆ ಈ ಗ್ಯಾಂಗ್ ಸದಸ್ಯರು ಸಿನಿಮಾ, ರಾಜಕೀಯ ಮುಖಂಡರ ಹೆಸರುಗಳನ್ನು ಬಳಸಿಕೊಂಡು ಬ್ಲ್ಯಾಕ್ ಮನಿ ದಂಧೆ ನಡೆಸುತ್ತಿದ್ದಾರಾ? ಅಥವಾ ನಿಜವಾಗಿಯೂ ಅವರ ಹಸ್ತ ಇದರಲ್ಲಿ ಇದೆಯೇ ಎಂಬ ಗೊಂದಲಗಳು ಇವೆ.

ನಟ ಸೂರ್ಯ ಅವರ ಹೆಸರು ಈ ಹಗರಣದಲ್ಲಿ ಕೇಳಿಬಂದಿರುವ ಕಾರಣ ಅವರ ಅಭಿಮಾನಿಗಳು ಶಾಕ್ ಗೆ ಗುರಿಯಾಗಿದ್ದಾರೆ. ಚಾನಲ್ ನಿರ್ವಹಿಸಿದ ಸ್ಟಿಂಗ್ ಆಪರೇಷನ್ ನ್ ಬಗ್ಗೆ ಸರ್ಕಾರಿ ತನಿಖಾ ಸಂಸ್ಥೆಗಳೂ ದೃಷ್ಟಿ ಹರಿಸಿವೆ. ಕಾನೂನು ಪ್ರಕಾರ ವಿಚಾರಣೆ ನಡೆದರೆ ಈ ಹಗರಣದ ಸತ್ಯಾಸತ್ಯತೆಗಳು ಬಯಲಾಗಬಹುದು. ಕಪ್ಪುಹಣ ಹಗರಣದಲ್ಲಿ ತನ್ನ ಹೆಸರು ಕೇಳಿಬಂದಿರುವ ಬಗ್ಗೆ ನಟ ಸೂರ್ಯ ಇನ್ನೂ ಪ್ರತಿಕ್ರಿಯಿಸಿಲ್ಲ.

English summary
ABN news channel has telecasted a sting operation on conversion of black money to white (Money laundering). Surprisingly the operation reveals several big shot names from film industry as well political fraternity. The names involved was Tamil hero Surya and TRS leader KTR.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada