twitter
    For Quick Alerts
    ALLOW NOTIFICATIONS  
    For Daily Alerts

    ವಿಮರ್ಶಕರ ಮನ ಗೆದ್ದುಬಿಟ್ಟಳಾ 'ಹೆಬ್ಬೆಟ್ ರಾಮಕ್ಕ'.?

    By Harshitha
    |

    ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕನ್ನಡ ಸಿನಿಮಾ 'ಹೆಬ್ಬೆಟ್ ರಾಮಕ್ಕ' ಬಿಡುಗಡೆ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ರಾಜಕೀಯದಲ್ಲಿ ಮಹಿಳಾ ಮೀಸಲಾತಿಯ ದುರುಪಯೋಗವನ್ನೇ ಆಧಾರಿಸಿರುವ ಚಿತ್ರ ಇದು. ಅನಕ್ಷರಸ್ಥ ಮಹಿಳೆ ಜನ ಪ್ರತಿನಿಧಿಯಾದರೆ, ಆಗುವ ಅಧಿಕಾರ ದುರ್ಬಳಕೆ ಸುತ್ತ ಈ ಚಿತ್ರದ ಕಥೆ ಹೆಣೆಯಲಾಗಿದೆ.

    ಕರ್ನಾಟಕದಲ್ಲಿ ಚುನಾವಣೆಯ ಕಾವು ಹೆಚ್ಚಾಗಿರುವಾಗಲೇ 'ಹೆಬ್ಬೆಟ್ ರಾಮಕ್ಕ' ರಿಲೀಸ್ ಆಗಿದೆ. ರಾಷ್ಟ್ರ ಪ್ರಶಸ್ತಿ ಪಡೆದಿರುವ 'ಹೆಬ್ಬೆಟ್ ರಾಮಕ್ಕ' ಚಿತ್ರ ಹೆಂಗಳೆಯರ ಮನ ಗೆದ್ದಿದೆ. ಹಾಗೇ ವಿಮರ್ಶಕರ ಮನಗೆಲ್ಲುವಲ್ಲಿಯೂ 'ಹೆಬ್ಬೆಟ್ ರಾಮಕ್ಕ' ಯಶಸ್ವಿಯಾದಳೇ.?

    ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ಕರ್ನಾಟಕದ ಜನಪ್ರಿಯ ದಿನ ಪತ್ರಿಕೆಗಳು ಪ್ರಕಟ ಮಾಡಿರುವ 'ಹೆಬ್ಬೆಟ್ ರಾಮಕ್ಕ' ಚಿತ್ರದ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ. ಓದಿರಿ...

    ವರ್ತಮಾನದ ಬಿಕ್ಕಟ್ಟಿಗೆ ಹಿಡಿದ ಕನ್ನಡಿ - ಪ್ರಜಾವಾಣಿ

    ವರ್ತಮಾನದ ಬಿಕ್ಕಟ್ಟಿಗೆ ಹಿಡಿದ ಕನ್ನಡಿ - ಪ್ರಜಾವಾಣಿ

    ಪಂಚಾಯತ್ ರಾಜ್‌ ವ್ಯವಸ್ಥೆಯಲ್ಲಿ ಮಹಿಳೆಯರಿಗೂ ಸೂಕ್ತ ರಾಜಕೀಯ ಸ್ಥಾನಮಾನ ಸಿಕ್ಕಿದೆ. ಆದರೆ, ಕೆಲವು ಸ್ಥಳೀಯ ಸಂಸ್ಥೆಗಳಲ್ಲಿ ಅನಕ್ಷರಸ್ಥ ಮಹಿಳಾ ಜನಪ್ರತಿನಿಧಿಗಳ ಅಧಿಕಾರ ಅವರ ಗಂಡ, ಕುಟುಂಬದ ಸದಸ್ಯರ ಹಿಡಿತಕ್ಕೆ ಸಿಲುಕಿದೆ. ಅಂತಹ ಮಹಿಳೆಯರ ಮೂಕವೇದನೆ, ಅವರ ಒಡಲಾಳದ ಬೇಗೆ ಅವ್ಯಕ್ತ ಚರಿತ್ರೆಯಾಗಿಯೇ ಉಳಿದುಬಿಟ್ಟಿದೆ. ಅಧಿಕಾರದಲ್ಲಿ ಮಹಿಳಾ ಮೀಸಲಾತಿಯ ದುರುಪಯೋಗವನ್ನು ‘ಹೆಬ್ಬೆಟ್ ರಾಮಕ್ಕ' ಚಿತ್ರದ ಮೂಲಕ ವಿಡಂಬನಾತ್ಮಕವಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಎನ್.ಆರ್‌. ನಂಜುಂಡೇಗೌಡ. ‘ಹೆಬ್ಬೆಟ್ ರಾಮಕ್ಕ' ಒಂದು ಕಥೆಯಾಗಿ ಉಳಿಯದೆ ವರ್ತಮಾನದ ವಿದ್ಯಮಾನಗಳಿಗೆ ಕನ್ನಡಿ ಹಿಡಿಯುವ ಪ್ರಯತ್ನ ನಡೆಸುತ್ತದೆ. ಮಹಿಳಾ ಮೀಸಲಾತಿಯ ದುರ್ಬಳಕೆ ಬಗ್ಗೆ ಹೇಳುವ ನಿರ್ದೇಶಕರ ಹಂಬಲಕ್ಕೆ ಬಿ. ಸತೀಶ್ ಅವರ ಛಾಯಾಗ್ರಹಣ ಸಮರ್ಥವಾಗಿ ಸ್ಪಂದಿಸಿದೆ - ಕೆ.ಎಚ್.ಓಬಳೇಶ್

    'ಹೆಬ್ಬೆಟ್ ರಾಮಕ್ಕ' ವಿಮರ್ಶೆ: ಪ್ರತಿಯೊಬ್ಬರೂ ನೋಡಲೇಬೇಕಾದ ಸಿನಿಮಾ'ಹೆಬ್ಬೆಟ್ ರಾಮಕ್ಕ' ವಿಮರ್ಶೆ: ಪ್ರತಿಯೊಬ್ಬರೂ ನೋಡಲೇಬೇಕಾದ ಸಿನಿಮಾ

    ಹಳ್ಳಿ ರಾಜಕಾರಣಕ್ಕೆ ಕನ್ನಡಿ ಹಿಡಿದ ಚಿತ್ರ: ವಿಜಯ ಕರ್ನಾಟಕ

    ಹಳ್ಳಿ ರಾಜಕಾರಣಕ್ಕೆ ಕನ್ನಡಿ ಹಿಡಿದ ಚಿತ್ರ: ವಿಜಯ ಕರ್ನಾಟಕ

    ರಾಜಕೀಯ ಇತಿಹಾಸದಲ್ಲಿ ಮಹಿಳೆಯರು ಚುನಾಯಿತರಾದರೆ ಅಧಿಕಾರ ನಡೆಸುವುದು ಅವರ ಪತಿ ಅಥವಾ ಅವರ ಸಂಬಂಧಿಕರು. ಇದು ಮಹಿಳಾ ಮೀಸಲಾತಿಯ ದುರುಪಯೋಗ ಇದನ್ನೇ ಆಧಾರವಾಗಿಟ್ಟುಕೊಂಡು ಸಿನಿಮಾ ಮಾಡಿದ್ದಾರೆ ನಿರ್ದೇಶಕ ನಂಜುಂಡೇಗೌಡ. ಹೆಬ್ಬೆಟ್ ರಾಮಕ್ಕ ಪಂಚಾಯತ್ ರಾಜ್‌ ವ್ಯವಸ್ಥೆಯಲ್ಲಿನ ಮಹಿಳೆಯರಿಗೆ ಸಿಕ್ಕಿರುವ ರಾಜಕೀಯ ಸ್ಥಾನಮಾನದ ಬಗ್ಗೆ ಚರ್ಚೆ ಮಾಡುತ್ತದೆ. ನಿರ್ದೇಶಕರು ಬಹಳ ಸೂಕ್ಷ್ಮವಾದ ವಿಷಯವನ್ನು ವಿಡಂಭನಾತ್ಮಕವಾಗಿ ಚಿತ್ರಿಸಿದ್ದಾರೆ - ಹರೀಶ್

    Stamp of Disapproval

    Stamp of Disapproval

    Tara and Devaraj are impressive in their performances but both seem ill-fit for the roles. They just don't look like middle-aged villagers. The rest of the cast is a total misfit. Some of them cannot match their acting with the dialogue delivery while the rest cannot stop overacting. Hebbet Ramakka is a poor showcase of Sandalwood's filmmaking abilities. The best thing about the film is the dialogues. Getting a litterateur, SG Siddaramaiah, to write dialogues delivers the results. The fake village accent that is common in films is thankfully missing. Words that are fast disappearing from the language are given a new lease of life - Shyam Prasad S

    Hebbettu Ramakka Movie Review : Times of India

    Hebbettu Ramakka Movie Review : Times of India

    That Devaraj and Thara are powerhouse performers is known; Hebbet Ramakka gives both the senior actors enough space to prove their versatility. This film is entertaining and also has a message in the end. Director NR Nanjunde Gowda has chosen a subject that is relevant and the release time couldn't have been better, with the Assembly elections around the corner, considering the film revolves around politics and power play - Sunayana Suresh

    English summary
    Kannada Actress Tara and Kannada Actor Devaraj starrer Kannada Movie 'Hebbet Ramakka' has received good response from the critics. Here is the collection of 'Hebbet Ramakka' reviews by Top News Papers of Karnataka.
    Sunday, April 29, 2018, 14:16
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X