»   » ಪರಾಕ್ರಮ ಮೆರೆದ 'ಬಾಹುಬಲಿ', ರಾಜಮೌಳಿ 'ಕಲ್ಪನೆ'ಗೆ ಮಿತಿಯಿಲ್ಲ

ಪರಾಕ್ರಮ ಮೆರೆದ 'ಬಾಹುಬಲಿ', ರಾಜಮೌಳಿ 'ಕಲ್ಪನೆ'ಗೆ ಮಿತಿಯಿಲ್ಲ

Posted By:
Subscribe to Filmibeat Kannada

''ಬಾಹುಬಲಿಯನ್ನ ಕಟ್ಟಪ್ಪ ಯಾಕೆ ಕೊಂದ'' ಇದು 'ಬಾಹುಬಲಿ ದಿ ಕನ್ ಕ್ಲೂಷನ್' ಚಿತ್ರದ ಬಹುದೊಡ್ಡ ಪ್ರಶ್ನೆ. ಆದ್ರೆ, ಈ ಪ್ರಶ್ನೆಯನ್ನ ಮೀರಿದ ಅಂಶಗಳನ್ನ ಈ ಚಿತ್ರ ಹೊಂದಿದೆ. ಒನ್ಸ್ ಅಗೈನ್ ನಿರ್ದೇಶಕ ರಾಜಮೌಳಿ ಪ್ರೇಕ್ಷಕರಿಗೆ ದೃಶ್ಯ ವೈಭವದ ಮೂಲಕ ಭರಪೂರ ಮನರಂಜನೆ ನೀಡಿದ್ದಾರೆ'' ಪೂರ್ತಿ ವಿಮರ್ಶೆಯನ್ನ ಮುಂದೆ ಓದಿ.....

Rating:
4.0/5

ಚಿತ್ರ: ಬಾಹುಬಲಿ ದಿ ಕನ್ ಕ್ಲೂಷನ್
ನಿರ್ಮಾಣ: ಪ್ರಸಾದ್, ಶೋಬು ಯರ್ಲಗಡ್ಡಾ
ಚಿತ್ರಕಥೆ: ವಿಜೇಂದ್ರ ಪ್ರಸಾದ್
ನಿರ್ದೇಶನ: ಎಸ್.ಎಸ್ ರಾಜಮೌಳಿ
ನಿರ್ದೇಶನ: ಎಂ.ಎಂ.ಕೀರವಾಣಿ
ಛಾಯಾಗ್ರಹಣ: ಕೆ.ಕೆ ಸೆಂಥೀಲ್ ಕುಮಾರ್
ತಾರಾಗಣ: ಪ್ರಭಾಸ್, ರಾಣಾ, ಅನುಷ್ಕಾ ಶೆಟ್ಟಿ, ಸತ್ಯರಾಜ್, ರಮ್ಯಾಕೃಷ್ಣ, ನಾಸೀರ್, ಮತ್ತು ಇತರರು.
ಬಿಡುಗಡೆ: ಏಪ್ರಿಲ್ 28, 2017

ಕಾಳಕೇಯನ ಜೊತೆ ಯುದ್ಧ ಮುಗಿದ ನಂತರ!

'ಬಾಹುಬಲಿ ದಿ ಬಿಗಿನಿಂಗ್' ಚಿತ್ರದಲ್ಲಿ ಕಾಳಕೇಯನ ಯುದ್ಧದ ಮೂಲಕ ಭಾಗ-1 ಅಂತ್ಯವಾಗುತ್ತೆ. ನಿರೀಕ್ಷೆಯಂತೆ ಅಲ್ಲಿಂದ ಭಾಗ-2 ತೆರೆದುಕೊಳ್ಳುತ್ತೆ. ಯುದ್ಧ ಗೆದ್ದ 'ಬಾಹುಬಲಿ' ಮತ್ತು 'ಬಲ್ಲಾಳದೇವ' ಇಬ್ಬರಲ್ಲಿ ಬಾಹುಬಲಿ ರಾಜ ಎಂದು ರಾಜಮಾತ ಮೊದಲ ಭಾಗದಲ್ಲಿ ಘೋಷಿಸಿದ್ದರು. ಆದ್ರೆ, ಮಾಹಿಶ್ಮತಿ ಸಾಮ್ರಾಜ್ಯಕ್ಕೆ ನಿಜವಾಗಲೂ ದೊರೆ ಯಾರಾಗ್ತಾರೆ ಎಂಬುದು ಇಲ್ಲಿ ಕುತೂಹಲವಾಗಿ ಸಾಗುತ್ತೆ.

ಮೊದಲಾರ್ಧ ಇಂಟ್ರೆಸ್ಟಿಂಗ್!

ಒಂದೆಡೆ ಸಾಮ್ರಾಜ್ಯಕ್ಕಾಗಿ ಚದುರಂಗದ ಆಟ, ಮತ್ತೊಂದೆಡೆ ಮೋಹಕವಾದ ಪ್ರೇಮಕಥೆ. ಕುಂದಲಿ ರಾಜ್ಯದ ಯುವರಾಣಿ ದೇವಸೇನಾ ಮತ್ತು ಮಾರುವೇಷದಲ್ಲಿರುವ ಬಾಹುಬಲಿಯ ಪ್ರೇಮ ಕಥೆಯೇ ಮೊದಲಾರ್ಧದ ಹೈಲೈಟ್. ಇದರ ಮಧ್ಯೆ ರಾಜ್ಯ ಮತ್ತು ರಾಣಿಗಾಗಿ ಹೋರಾಟ. ಆದ್ರೆ, ರಾಜ್ಯ ಯಾರಿಗೆ ಸಿಗುತ್ತೆ? ರಾಣಿ ಯಾರಿಗೆ ಸಿಗ್ತಾಳೆ ಎಂಬುದು ಸಿನಿಮಾದಲ್ಲಿ ನೋಡಿ

ಸೆಕೆಂಡ್ ಹಾಫ್ ಸೇಡಿನ ಆಟ

ಚಿತ್ರದ ಸೆಕೆಂಡ್ ಹಾಫ್ ನಲ್ಲಿ ಸೇಡಿನ ಕಥೆ. ತಮ್ಮ ತಂದೆಯ ಸಾವಿಗೆ ಕಾರಣವಾದ ಬಲ್ಲಾಳದೇವನನ್ನು ಕೊಲ್ಲಲು ಮಹೇಂದ್ರ ಬಾಹುಬಲಿ ಪಣ ತೊಡುತ್ತಾನೆ. ಇದಕ್ಕಾಗಿ ಕ್ಲೈಮ್ಯಾಕ್ಸ್ ಯುದ್ದ.

ಪ್ರಭಾಸ್ ನಟನೆ!

ನಿರೀಕ್ಷೆಯಂತೆ ಪ್ರಭಾಸ್ 'ಬಾಹುಬಲಿ' ಪಾತ್ರಕ್ಕೆ ಹೇಳಿ ಮಾಡಿಸಿದ ನಟ ಎಂಬುದನ್ನ 'ಭಾಗ 2' ರಲ್ಲೂ ಸಾಬೀತು ಪಡಿಸಿದ್ದಾರೆ. ಅಮರೇಂದ್ರ ಬಾಹುಬಲಿ ಮತ್ತು 'ಮಹೇಂದ್ರ ಬಾಹುಬಲಿ' ಪಾತ್ರಗಳಲ್ಲಿ ಅಮೋಘ ನಟನೆ. ಯುದ್ಧದ ದೃಶ್ಯಗಳಂತೂ ಪ್ರಭಾಸ್ ಅವರನ್ನ ಅಬ್ಬರ ನೋಡುವುದು ಕಣ್ಣಿಗೆ ಹಬ್ಬ.

ಅನುಷ್ಕಾ ಶೆಟ್ಟಿ ನಟನೆ!

ಮೊದಲ ಭಾಗದಲ್ಲಿ ಹೀಗೆ ಬಂದು ಹಾಗೆ ಹೋಗುವ ಅನುಷ್ಕಾ ಶೆಟ್ಟಿ, ಭಾಗ-2ರಲ್ಲಿ ಅತಿ ಮುಖ್ಯವಾದ ಪಾತ್ರ. ಕುಂದಲಿ ರಾಜ್ಯದ ಯುವರಾಣಿ ದೇವಸೇನ ಪಾತ್ರದಲ್ಲಿ ಇಷ್ಟವಾಗುತ್ತಾರೆ. ಅನುಷ್ಕಾ ಕೂಡ ಸಾಹಸ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದು, ರೋಚಕವಾಗಿ ಮೂಡಿಬಂದಿದೆ.

ಉಳಿದವರು ನಟನೆ

ಈ ಹಿಂದಿನಂತೆ ರಾಣಾ ದಗ್ಗುಬಾಟಿ ಇಲ್ಲಿಯೂ ತಮ್ಮ ಅಜಾನುಬಾಹುಗಳಿಂದ ಅಬ್ಬರಿಸುತ್ತಾರೆ. ನಾಸೀರ್ ತಮ್ಮ ಶಕುನಿ ಶೈಲಿಯ ಪಾತ್ರದಿಂದ ಗಮನ ಸೆಳೆಯುತ್ತಾರೆ. ತಮನ್ನ ಇಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ.

ಕಾಡುವ 'ಕಟ್ಟಪ್ಪ' ಮತ್ತು 'ರಾಜಮಾತ'

ಕಟ್ಟಪ್ಪನ ಪಾತ್ರದಲ್ಲಿ ಅಭಿನಯಿಸಿರುವ ಸತ್ಯರಾಜ್ ಅವರನ್ನ ಕನ್ನಡಿಗರು ವಿರೋಧಿಸಿದ್ದರು. ಆದ್ರೆ ಕಟ್ಟಪ್ಪನ ಪಾತ್ರ ಸಿನಿಮಾ ಮುಗಿದ ಮೇಲೆ ನೋಡುಗರ ಮನದಲ್ಲಿ ಉಳಿಯುತ್ತೆ. ಅದೇ ರೀತಿ ರಾಜಾಮಾತ ಪಾತ್ರದಲ್ಲಿ ರಮ್ಯಾಕೃಷ್ಣ ಅವರ ನಟನೆ ಗಮನಾರ್ಹ.

ರಾಜಮೌಳಿ ನಿರ್ದೇಶನ

ನಿರ್ದೇಶಕ ರಾಜಮೌಳಿ 'ಬಾಹುಬಲಿ' ಮೊದಲ ಭಾಗಕ್ಕಿಂತ ಇಲ್ಲಿ ಹೆಚ್ಚು ಶ್ರಮ ವಹಿಸಿದ್ದಾರೆ. ಹೆಚ್ಚು ಗ್ರಾಫಿಕ್ಸ್ ನಿಂದ ಅದ್ಭುತಗಳನ್ನ ತೆರೆಮೇಲೆ ತಂದಿದ್ದಾರೆ. ಗ್ರಾಫಿಕ್ಸ್ ಅತಿಯಾಗಿ ಬಳಸಿರುವುದರಿಂದ ಇದು ಫ್ಯಾಂಟಸಿ ಸಿನಿಮಾ ಎಂಬ ಭಾವನೆ ಮೂಡವುದಂತೂ ನಿಜಾ.

ಕಟ್ಟಪ್ಪ ಬಾಹುಬಲಿಯನ್ನ ಕೊಂದಿದ್ದು ಯಾಕೆ?

'ಬಾಹುಬಲಿ ಭಾಗ 2' ಚಿತ್ರದ ಬಹುದೊಡ್ಡ ಕುತೂಹಲ ಕಟ್ಟಪ್ಪ ಬಾಹುಬಲಿಯನ್ನ ಕೊಂದಿದ್ದು ಯಾಕೆ? ನಿಜ ಏನಪ್ಪಾ ಅಂದ್ರೆ ಬಾಹುಬಲಿನಾ ಕೊಂದಿದ್ದು ಕಟ್ಟಪ್ಪನೇ. ಆದ್ರೆ, ಯಾಕೆ ಕೊಂದ ಎಂಬ ಸತ್ಯ ನಾವು ಹೇಳಲ್ಲ. ಯಾಕಂದ್ರೆ ಈ ಕೂತೂಹಲವನ್ನ ಚಿತ್ರಮಂದಿರದಲ್ಲೇ ನೋಡಿ.

ಚಿತ್ರದ ಅಸ್ತ್ರ 'ದೃಶ್ಯ-ಸಂಗೀತ'

'ಬಾಹುಬಲಿ' ಚಿತ್ರದ ಬಹುದೊಡ್ಡ ಅಸ್ತ್ರ ಎಂದರೇ, ಹಿನ್ನಲೆ ಸಂಗೀತ ಹಾಗೂ ದೃಶ್ಯ ವೈಭವ. ರಾಜಮೌಳಿ ಅವರು ವಿಶ್ಯೂಲ್ ಎಫೆಕ್ಟ್ ನೋಡುಗರನ್ನ ಹುಬ್ಬೇರಿಸುತ್ತೆ. ಸೆಂಥೀಲ್ ಕುಮಾರ್ ಅವರ ಕ್ಯಾಮರಾ ವರ್ಕ್ ಕೂಡ ಅಷ್ಟೇ ಅದ್ಭುತವಾಗಿದೆ. ಇನ್ನು ಎಂ.ಎಂ ಕೀರವಾಣಿ ಅವರು ಹಿನ್ನಲೆ ಸಂಗೀತಕ್ಕೆ ಪುಲ್ ಮಾರ್ಕ್ಸ್. ಹಾಡುಗಳು ಮರೆತುಹೋದರು ಹಿನ್ನಲೆ ಸಂಗೀತ ಗಮನ ಸೆಳೆಯುತ್ತೆ.

ಮೇಕಿಂಗ್ ಅದ್ಭುತ!

'ಬಾಹುಬಲಿ' ಸಿನಿಮಾನೇ ಹಾಗೆ, ಅಲ್ಲಿ ಪಾತ್ರಗಳಿಗಿಂತ ಮೇಕಿಂಗ್ ಒಂದು ಕೈ ಮೇಲೆ ನಿಲ್ಲುತ್ತೆ. ಈ ಚಿತ್ರದಲ್ಲೂ ಅದು ಪ್ರೂವ್ ಆಗಿದೆ. ಊಹಿಸಲಾಗದ ದೃಶ್ಯಗಳು, ಮೈಜುಮ್ಮೆನ್ನಿಸುವ ಗ್ರಾಫಿಕ್ಸ್ ನಿಂದ ತೆರೆಮೇಲೆ ಅದ್ಭುತಗಳು ಸೃಷ್ಟಿಯಾಗಿವೆ. ಯಾವ ಹಾಲಿವುಡ್ ಸಿನಿಮಾಗಳಿಗೂ ಕಮ್ಮಿಯಿಲ್ಲ ಎಂಬ ಮೇಕಿಂಗ್ ಚಿತ್ರದಲ್ಲಿದೆ. ಕಥೆ ಮೇಲೆ ಆಸಕ್ತಿ ಕಳೆದುಕೊಂಡರು ಮೇಕಿಂಗ್ ಕೊನೆಯವರೆಗೂ ಪ್ರೇಕ್ಷಕರನ್ನ ಹಿಡಿದು ಕೂರಿಸುತ್ತೆ.

English summary
SS Rajamouli Directed, Prabhas, Rana, Anushka shetty, Sathyaraj and others Acted Baahubali 2 Movie has hit the screens today (April 28st). Here is the Complete Review of Baahubali 2.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada