twitter
    For Quick Alerts
    ALLOW NOTIFICATIONS  
    For Daily Alerts

    Udumba Review: ಲವ್ವು, ನೋವ್ವು, ವೈರಿಯ ಸಾವು

    |

    ಸಿನಿಮಾ: ಉಡುಂಬಾ

    ನಿರ್ದೇಶಕ: ಶಿವರಾಜ್

    ತಾರ ಬಳಗ: ಪವನ್, ಚಿರಶ್ರೀ ಅಂಜನ್, ಶರತ್ ಲೋಹಿತಾಶ್ವ

    'ಉಡುಂಬಾ' ಕರಾವಳಿ ತೀರದ ಕತೆ. ಒಂದು ಊರು, ಇಬ್ಬರು ಪ್ರೇಮಿಗಳು, ಪ್ರೀತಿಗೆ ಆಗುವ ಅಡಚಣೆ, ಪ್ರೇಮಿಗಾಗಿ ಹೋರಾಟ, ಖಳ ನಟನ ಸಾವು ಇದಿಷ್ಟು ಈ ಸಿನಿಮಾದಲ್ಲಿ ಬಂದು ಹೋಗುವ ದೃಶ್ಯಗಳು. ಇದರ ನಡುವೆ ಒಂದು ಸರ್ ಪ್ರೈಸ್ ಅಂಶ ನೋಡುಗರಿಗಾಗಿ ಕಾದಿದೆ.

    ಮೀನು ಹಿಡಿಯುವ ಹುಡುಗ ಶಿವು ಪ್ರೀತಿಯ ಸಾಗರದಲ್ಲಿ ಬೀಳುತ್ತಾನೆ. ಲವ್ ಎಂದ ಮೇಲೆ ನೋವು ಇದ್ದದ್ದೆ. ಶಿವು ಪ್ರೀತಿ ಮಾಡಿದ ಹುಡುಗಿ ಗೀತಾ ಏಪ್ರಿಲ್ ಫುಲ್ ಮಾಡುತ್ತಾಳೆ. ಇತ್ತ ಊರಿನ ಗೌಡನ ಮಗ ಕೂಡ ಅದೇ ಹುಡುಗಿ ಮೇಲೆ ಕಣ್ಣು ಹಾಕುತ್ತಾನೆ. ಹೀಗಿರುವ ಶಿವು ಜೀವನದಲ್ಲಿ ಒಂದು ತಿರುವು ಸಿಗುತ್ತದೆ.

    Kurukshetra Movie Review : ಮಹಾ ಕಾವ್ಯದ ಮಹಾ 'ದರ್ಶನ' Kurukshetra Movie Review : ಮಹಾ ಕಾವ್ಯದ ಮಹಾ 'ದರ್ಶನ'

    ಮೀನುಗಾರನ ಪಾತ್ರದಲ್ಲಿ ನಟ ಪವನ್ ನಟನೆ ಚೆನ್ನಾಗಿದೆ. ಆಕ್ಷನ್ ದೃಶ್ಯಗಳಲ್ಲಿ ಅವರು ಹೆಚ್ಚು ಮಿಂಚಿದ್ದಾರೆ. ಉಡದ ರೀತಿ ಅವರ ಪಾತ್ರ ಇದೆ. ನಟಿ ಚಿರಶ್ರೀ ಅಂಜನ್ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಊರಿನ ಗೌಡವಾಗಿರುವ ಶರತ್ ಲೋಹಿತಾಶ್ವ ಅನುಭವ ಸಿನಿಮಾಗೆ ಸಹಾಯ ಆಗಿದೆ. ಉಳಿದ ಕೆಲವು ಕಲಾವಿದರು ಇನ್ನಷ್ಟು ಚೆನ್ನಾಗಿ ಪಾತ್ರವನ್ನು ಬಳಸಿಕೊಳ್ಳಬಹುದಿತ್ತು.

    udumba kannada movie review

    ಸಿನಿಮಾದ ಕಥೆ ಕೆಲವು ಬಾರಿ ಗೊಂದಲಕ್ಕೆ ದೂಡುತ್ತದೆ. ಇದೇ ಕಾರಣಕ್ಕೆ ಕೆಲವೊಂದು ದೃಶ್ಯ ಬೋರ್ ಎನಿಸುತ್ತದೆ. ಫಸ್ಟ್ ಹಾಫ್ ಚೆನ್ನಾಗಿದೆ. 'ನೋಡಿದ ಮೊದಲನೇ ದಿನವೇ ಶರಣಾದೆ ನಾ..' ಹಾಡು ಇಂಪಾಗಿದೆ.

    udumba kannada movie review

    Nanna Prakara Review: ಮೂರು ಥ್ರಿಲ್ಲಿಂಗ್ ಕಥೆಗಳ ಒಂದು ಸಿನಿಮಾ Nanna Prakara Review: ಮೂರು ಥ್ರಿಲ್ಲಿಂಗ್ ಕಥೆಗಳ ಒಂದು ಸಿನಿಮಾ

    ಪ್ರೀತಿ, ಪ್ರೇಮ, ಫ್ಯಾಮಿಲಿ ಕಥೆಯ ಜೊತೆಗೆ ಆಕ್ಷನ್ ತುಂಬಿರುವ 'ಉಡುಂಬಾ' ಮನರಂಜನೆಯ ಅಂಶಗಳನ್ನು ಹೊಂದಿದೆ. ಹಳ್ಳಿಯಲ್ಲಿ ನಡೆಯುವ ಕಥೆಯನ್ನು ಕಮರ್ಷಿಯಲ್ ಆಗಿ ನಿರ್ದೇಶಕರು ಹೇಳಿದ್ದಾರೆ.

    English summary
    Actor Pawans 'Udumba' kannada movie review.
    Friday, August 23, 2019, 17:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X