For Quick Alerts
  ALLOW NOTIFICATIONS  
  For Daily Alerts

  ಮತ್ತೆ ಬಂದ ಉಪೇಂದ್ರನನ್ನು ಕಂಡ ವಿಮರ್ಶಕರು ಏನು ಹೇಳಿದರು..?

  By Naveen
  |

  'ಉಪೇಂದ್ರ ಮತ್ತೆ ಬಾ' ಸಿನಿಮಾ ನಿನ್ನೆ (ಶುಕ್ರವಾರ) ರಾಜ್ಯಾದಂತ್ಯ ರಿಲೀಸ್ ಆಗಿತ್ತು. ತೆಲುಗಿನ 'ಸೊಗ್ಗಾಡಿ ಚಿನ್ನಿನಾಯನ' ಚಿತ್ರದ ರಿಮೇಕ್ ಇದಾಗಿದ್ದು, ಉಪೇಂದ್ರ ತಮ್ಮ ಅಭಿನಯದ ಮೂಲಕ ಪ್ರೇಕ್ಷಕರಿಗೆ ಇಷ್ಟ ಆಗಿದ್ದಾರೆ.

  'ಉಪೇಂದ್ರ ಮತ್ತೆ ಬಾ' ಒಂದು ಕೌಟುಂಬಿಕ ಸಿನಿಮಾ. ಹಾಗಂತ ಇಲ್ಲಿ ಹೆಚ್ಚು ಸೆಂಟಿಮೆಂಟ್ ಇರಲಿಲ್ಲ. ಉಪೇಂದ್ರ ರಾಜುವಿನ ಮಜವಾದ ಫ್ಯಾಮಿಲಿ ಕಥೆಯೇ 'ಉಪೇಂದ್ರ ಮತ್ತೆ ಬಾ' ಸಿನಿಮಾ ಆಗಿತ್ತು.

  ಇನ್ನು 'ಉಪೇಂದ್ರ ಮತ್ತೆ ಬಾ' ಸಿನಿಮಾದ ಬಗ್ಗೆ ಕನ್ನಡದ ಜನಪ್ರಿಯ ಪ್ರತಿಕೆಗಳಲ್ಲಿ ಬಂದ ವಿಮರ್ಶೆ ಮುಂದಿದೆ ಓದಿ...

  ಆತ್ಮದೊಂದಿಗೆ ಉಪ್ಪಿ ಕಥಾ ಪ್ರಸಂಗ - ವಿಜಯ ಕರ್ನಾಟಕ

  ಆತ್ಮದೊಂದಿಗೆ ಉಪ್ಪಿ ಕಥಾ ಪ್ರಸಂಗ - ವಿಜಯ ಕರ್ನಾಟಕ

  ತೆಲುಗಿನಲ್ಲಿ ಸೂಪರ್ ಹಿಟ್ ಆದ ಸಿನಿಮಾಗಳನ್ನು ಕನ್ನಡದಲ್ಲಿ ರಿಮೇಕ್ ಮಾಡುವುದು ಮಾಮೂಲಿ ವಿಷಯ. ಆ ಸಾಲಿಗೆ ಹೊಸ ಸೇರ್ಪಡೆ 'ಉಪೇಂದ್ರ ಮತ್ತೆ ಬಾ'. ರೀಮೇಕ್ ಸಿನಿಮಾ ಆದ್ದರಿಂದ ನಿರ್ದೇಶಕರ ಹೆಚ್ಚುಗಾರಿಕೆ ಏನೂ ಇಲ್ಲ. ಸಿನಿಮಾವನ್ನು ಮಂಡ್ಯದ ಭಾಗದಲ್ಲಿ ಚಿತ್ರೀಕರಣ ಮಾಡಿ ನೇಟಿವಿಟಿಯನ್ನು ತರಲು ಅವರು ಪ್ರಯತ್ನ ಪಟ್ಟಿದ್ದಾರೆ. ಆದರೆ ಮಂಡ್ಯ ಭಾಗದಲ್ಲಿ ರಾಜು ಕುಟುಂಬದವರು ಎಲ್ಲಿದ್ದಾರೆ ಎಂಬುದು ಪ್ರೇಕ್ಷಕನ ಪ್ರಶ್ನೆಯಾಗಿದೆ. ಕುಟುಂಬದ ಕತೆ ಎಂದಾಕ್ಷಣ ಇಲ್ಲಿ ಸೆಂಟಿಮೆಂಟ್ ಇಲ್ಲ ಬದಲಾಗಿ ಉಪ್ಪಿಯ ರಸಿಕತೆ ಇದೆ. ಅಪ್ಪ ಮತ್ತು ಮಗನಾಗಿ ಉಪೇಂದ್ರ ಚೆನ್ನಾಗಿ ನಟಿಸಿದ್ದಾರೆ. ಇನ್ನು ಉಪ್ಪಿ - ಪ್ರೇಮಾ ಕಾಂಬಿನೇಶನ್ ವರ್ಕ್ ಆಗಿದೆ. ಶ್ರುತಿ ಹರಿಹರನ್ ಸೀರೆಯುಟ್ಟುಕೊಂಡೇ ಪಡ್ಡೆಗಳಿಗೆ ಕಚಗುಳಿ ಇಡುತ್ತಾರೆ. - ಹರೀಶ್ ಬಸವರಾಜ್.

  ನಾಮಬಲ ನೆಚ್ಚಿಕೊಂಡ ಆತ್ಮಕಥೆ - ವಿಜಯವಾಣಿ

  ನಾಮಬಲ ನೆಚ್ಚಿಕೊಂಡ ಆತ್ಮಕಥೆ - ವಿಜಯವಾಣಿ

  ಹಳ್ಳಿಯೊಂದರ ಜಮೀನ್ದಾರ ಉಪೇಂದ್ರ ರಾಜು ಮಾತಿನ ಮೂಲಕವೇ ಹುಡುಗಿಯರ ಹೃದಯ ಕದಿಯುವ ಚೋರ. ಗಂಡನ ಈ ಗುಣವನ್ನೇ ಮೆಚ್ಚುವ ಸತಿಮಣಿ ಪ್ರೇಮಾ. ದಂಪತಿ ಪುತ್ರ ರಾಮು ಇದೆಲ್ಲದಕ್ಕೂ ತದ್ವಿರುದ್ಧ. ಹುಡುಗಿಯರಿಂದ ದೂರ ಇರುವ ರಾಮುಗೆ ವೈದ್ಯ ವೃತ್ತಿಯಿಂದಾಗಿ ಪತ್ನಿಯೊಂದಿಗೆ ಇರುವುದಕ್ಕೂ ಸಮಯವಿಲ್ಲ. ಮಗನ ಈ ಗುಣ ಹೊಗಲಾಡಿಸುವುದಕ್ಕೆಂದು ಮೃತನಾಗಿರುವ ಉಪೇಂದ್ರ, ಮರಳಿ ಆತ್ಮವಾಗಿ ಎಂಟ್ರಿ ನೀಡುತ್ತಾನೆ. ಮುಂದೇನಾಗುತ್ತದೆ? ಉಪೇಂದ್ರರಾಜು ಮೃತನಾಗಿದ್ದೇಕೆೆ? ತೆರೆ ಮೇಲೆ ಈ ಪ್ರಶ್ನೆಗಳಿಗೆ ಉತ್ತರ ದಕ್ಕಲಿದೆ. ತೆಲುಗಿನ 'ಸೊಗ್ಗಾಡೆ ಚಿನ್ನಿ ನಾಯನಾ' ಚಿತ್ರದ ಯಥಾವತ್ ನಕಲು 'ಉಪೇಂದ್ರ ಮತ್ತೆ ಬಾ'. ಮೂಲಕ್ಕೆ ನಿಷ್ಠರಾಗಿರುವ ನಿರ್ದೇಶಕರು, ಚಿತ್ರಕಥೆಯಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳದೆ ಚಿತ್ರ ಮಾಡಿದ್ದಾರೆ.

  ಮತ್ತೆ ಬಾ ಎನ್ನುವುದಕ್ಕೆ ಒಂದೇ ಕಾರಣ - ಉದಯವಾಣಿ

  ಮತ್ತೆ ಬಾ ಎನ್ನುವುದಕ್ಕೆ ಒಂದೇ ಕಾರಣ - ಉದಯವಾಣಿ

  'ಉಪೇಂದ್ರ ಮತ್ತೆ ಬಾ'. ಈ ತರಹದ ಕಥೆ ಮತ್ತು ಚಿತ್ರಗಳು ಹೊಸದೂ ಅಲ್ಲ, ವಿಶೇಷವೂ ಅಲ್ಲ. ಮತ್ಯಾವ ಕಾರಣಕ್ಕೆ ಈ ಚಿತ್ರ ನೋಡಬೇಕು ಎಂದು ಕೇಳಿದರೆ, ಉಪೇಂದ್ರ ಎಂಬ ಒಂದು ಕಾರಣ ಬಿಟ್ಟರೆ, ಇನ್ನೊಂದು ಕಾರಣ ಹೇಳುವುದು ಕಷ್ಟ. ಪ್ರಮುಖವಾಗಿ ಇಲ್ಲೊಂದು ವರ್ಣರಂಜಿತ ಪಾತ್ರವನ್ನು ಉಪೇಂದ್ರ ಬಹಳ ಸಲೀಸಾಗಿ ನಿರ್ವಹಿಸಿದ್ದಾರೆ. ಮಹಾನ್‌ ರಸಿಕನಾಗಿ, ತುಂಟನಾಗಿ, ಹೆಣ್ಮಕ್ಕಳ ಪಾಲಿನ ಮೋಸ್ಟ್ ವಾಂಟೆಡ್‌ ಆಗಿ ಅವರು ಕಂಗೊಳಿಸಿದ್ದಾರೆ. ಪ್ರೇಮಾಗೆ ಇದು ಬಹಳ ಒಳ್ಳೆಯ ಕಂಬ್ಯಾಕ್ ಸಿನಿಮಾ ಎಂದರೆ ತಪ್ಪಿಲ್ಲ. ಪ್ರೇಮ ಬಿಟ್ಟರೆ ಶ್ರುತಿ ಹರಿಹರನ್‌ಗೂ ಒಂದೊಳ್ಳೆಯ ಪಾತ್ರವಿದೆ. ಗಂಭೀರವಾಗಿ ಶುರುವಾಗುವ ಚಿತ್ರ, ನಂತರ ನಿಧಾನವಾಗಿ, ಕ್ರಮೇಣ ಜಾಳುಜಾಳಾಗಿ, ಬೋರ್‌ ಹೊಡೆಸಿ, ಒಂದು ಹಂತದಲ್ಲಿ ಸಾಕು ಎನಿಸುತ್ತಿದ್ದಂತೆ ಚಿತ್ರ ಟೇಕಾಫ್ ಆಗುತ್ತದೆ. - ಚೇತನ್ ನಾಡಿಗರ್

  'ಉಪೇಂದ್ರ ಮತ್ತೆ ಬಾ' ವಿಮರ್ಶೆ: ರಸಿಕರ 'ರಾಜು' ಫ್ಯಾಮಿಲಿ ಕಥೆ

  Upendra Matte Baa Review - Times Of India

  Upendra Matte Baa Review - Times Of India

  Upendra, a shameless flirt who is dead and in hell, is sent back to earth by Yama when his wife Prema calls on him during a family crisis. What follows is him trying to set his bashful son's marital life straight, while also seeking retribution for his death. The original Telugu film proved to be a big saving grace for Nagarjuna. Having said that, the Kannada remake has a few novelties. One of the biggest draws is the pairing of Upendra and Prema once again.

  There is also a cameo by Chandini. The film has some colourful songs and fights, too. But the pace of the film seems inconsistent and one can't help but cringe during the excessive display of navels that seems unnecessary after a point. If family dramas with some action, family sentiment, songs, dances and supernatural elements fascinate you, you might just enjoy the fare. Upendra does entertain and Prema and Sruthi Hariharan provide the needed eye candy. There are cameos by actresses to add to the appeal. But if you're looking for any kind of logic or sense in the plot, this would not be what you want.

  English summary
  Read 'Upendra matte baa' movie critics review.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X