»   » ಚಿತ್ರ ವಿಮರ್ಶೆ: ಭೀಕರ, ಭಯಂಕರ, 'ಕಲ್ಪನಾ-2' ಥರ ಥರ.!

ಚಿತ್ರ ವಿಮರ್ಶೆ: ಭೀಕರ, ಭಯಂಕರ, 'ಕಲ್ಪನಾ-2' ಥರ ಥರ.!

Posted By:
Subscribe to Filmibeat Kannada

ಇಲ್ಲದೇ ಇರುವ ದೆವ್ವವನ್ನ ಸೃಷ್ಟಿ ಮಾಡಿ, 'ಭಯಾನಕ' ಪ್ರೋಗ್ರಾಂ ಸಿದ್ಧಪಡಿಸಿ, ಟಿ.ಆರ್.ಪಿ ಗಿಟ್ಟಿಸಿಕೊಳ್ಳಲು ಪಾಳು ಬಿದ್ದಿರುವ ಬಂಗಲೆಗೆ ಬರುವ ವಾಹಿನಿಯೊಂದರ ತಂಡ, ಅಲ್ಲಿರುವ ದೆವ್ವದ ಕೈಗೆ ಸಿಲುಕಿ ನಲುಗುವ ಕಥೆ 'ಕಲ್ಪನಾ-2'.


ತಮಿಳಿನ 'ಕಾಂಚನಾ-2' ಚಿತ್ರದ ರೀಮೇಕ್ ಆಗಿರುವ 'ಕಲ್ಪನಾ-2' ಪಕ್ಕಾ ಪೈಸಾ ವಸೂಲ್ ಸಿನಿಮಾ. 'ಕಲ್ಪನಾ-2' ಚಿತ್ರದ ಸಂಪೂರ್ಣ ವಿಮರ್ಶೆ ಕೆಳಗಿರುವ ಫೋಟೋ ಸ್ಲೈಡ್ ಗಳಲ್ಲಿದೆ. ಓದಿರಿ...

Rating:
3.0/5

ಚಿತ್ರ : ಕಲ್ಪನಾ-2
ನಿರ್ಮಾಣ : ಡಾ.ರಾಜೇಂದ್ರ.ಕೆ.ಎಂ
ನಿರ್ದೇಶನ : ಆರ್.ಅನಂತ ರಾಜು
ಸಂಗೀತ ನಿರ್ದೇಶನ : ಅರ್ಜುನ್ ಜನ್ಯ
ಛಾಯಾಗ್ರಹಣ : ಎಂ.ಆರ್.ಸೀನು
ಸಂಕಲನ : ಜೋ.ನಿ.ಹರ್ಷ
ತಾರಾಗಣ : ಉಪೇಂದ್ರ, ಅವಂತಿಕಾ ಶೆಟ್ಟಿ, ಪ್ರಿಯಾಮಣಿ ಮತ್ತು ಇತರರು
ಬಿಡುಗಡೆ : ಜುಲೈ 15, 2016


ಹೀರೋಗೆ ಭೂತ ಅಂದ್ರೆ ಭಯ.!

ಭೂತ, ಪ್ರೇತ, ಪಿಶಾಚಿ ಅಂದ್ರೆ ಗಡಗಡ ನಡುಗುವ ಖಾಸಗಿ ವಾಹಿನಿಯೊಂದರಲ್ಲಿ ಕ್ಯಾಮರಾಮ್ಯಾನ್ ಆಗಿ ಕೆಲಸ ಮಾಡುವ ರಾಘವ (ಉಪೇಂದ್ರ) ಅನಿವಾರ್ಯವಾಗಿ 'ಹಾರರ್ ರಿಯಾಲಿಟಿ ಶೋ' ಶೂಟ್ ಮಾಡಲು ಮಂಗಳೂರಿಗೆ ಹೊರಡಬೇಕಾಗುತ್ತದೆ.


ಇಲ್ಲದ ದೆವ್ವ ಇರುವ ಜಾಗ ಅದು.!

ದೆವ್ವ ಇಲ್ಲದ ಬಂಗಲೆಯಲ್ಲಿ ಚಿತ್ರೀಕರಣ ಮಾಡಲು ಬರುವ ಕಾರ್ಯಕ್ರಮದ ನಿರ್ದೇಶಕಿ ನಂದಿನಿ (ಅವಂತಿಕಾ ಶೆಟ್ಟಿ) ದೇಹದಲ್ಲಿ 'ಕಲ್ಪನಾ' ಸೇರಿಕೊಳ್ಳುತ್ತಾಳೆ. ಅಲ್ಲಿಂದ ಶುರುವಾಗುವುದೇ ಅಸಲಿ ಕಥೆ.


ಯಾರು ಈ ಕಲ್ಪನಾ.?

ಇಡೀ ಸಿನಿಮಾದ ಸಸ್ಪೆನ್ಸ್ ಈ 'ಕಲ್ಪನಾ'. ಅವಳ ಹಿನ್ನಲೆ ಏನು.? ಪ್ರೇತಾತ್ಮವಾಗಿ ಆಕೆ ನಂದಿನಿ ದೇಹ ಸೇರುವುದು ಯಾಕೆ? ಅದರಲ್ಲಿ ರಾಘವ (ಉಪೇಂದ್ರ) ಪಾತ್ರವೇನು? ಎಂಬ ಕುತೂಹಲ ಇದ್ದರೆ, 'ಕಲ್ಪನಾ-2' ಚಿತ್ರವನ್ನ ಥಿಯೇಟರ್ ನಲ್ಲೇ ನೋಡಿರಿ....


ಉಪೇಂದ್ರ ನಟನೆ ಹೇಗಿದೆ.?

ಭಯ ಪಡುವ ಹುಡುಗನಾಗಿ ಪ್ರೇಕ್ಷಕರನ್ನ ನಗಿಸುವ ಉಪೇಂದ್ರ, ದೆವ್ವದ ಅವತಾರ ತಾಳಿದಾಗ ಎದೆ ನಡುಗಿಸುತ್ತಾರೆ. 'ಜಡೆ ಶಿವ...ಕೆಟ್ಟ ಶಿವ' ಎಂಬ ಡೈಲಾಗ್ ಗಳಿಂದ ಮಾಸ್ ಪ್ರೇಕ್ಷಕರಿಂದ ಶಿಳ್ಳೆ ಗಿಟ್ಟಿಸುತ್ತಾರೆ.


ಅಚ್ಚರಿ ಮೂಡಿಸಿದ ಅವಂತಿಕಾ ಶೆಟ್ಟಿ.!

'ಕಲ್ಪನಾ-2' ಚಿತ್ರದಲ್ಲಿ ಅವಂತಿಕಾ ಶೆಟ್ಟಿ ಸರ್ಪ್ರೈಸ್ ಪ್ಯಾಕೇಜ್. 'ಕಲ್ಪನಾ'ಳನ್ನ ಆವಾಹಿಸಿಕೊಂಡಿರುವ ಅವಂತಿಕಾ ನಟನೆಗೆ ಹಿಂದು ಮುಂದು ನೋಡದೆ ಫುಲ್ ಮಾರ್ಕ್ಸ್ ಕೊಡಬಹುದು.


ಪ್ರಿಯಾಮಣಿ ಪಾತ್ರವೇನು.?

ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡರೂ ಪ್ರಿಯಾಮಣಿ ಆಕ್ಟಿಂಗ್ ಸೂಪರ್.


ಉಳಿದವರು.?

ತುಳಸಿ ಶಿವಮಣಿ, ರಮೇಶ್ ಭಟ್, ಚಿತ್ರಾ ಶೆಣೈ, ಶೋಭರಾಜ್, ಕುರಿ ಪ್ರತಾಪ್, ವಿನಯ ಪ್ರಕಾಶ್ ಕೊಟ್ಟ ಪಾತ್ರಗಳಿಗೆ ಜೀವ ತುಂಬಿದ್ದಾರೆ.


ಪ್ಲಸ್ ಪಾಯಿಂಟ್ಸ್ ಏನು.?

'ಕಲ್ಪನಾ-2' ಚಿತ್ರದ ಪ್ಲಸ್ ಪಾಯಿಂಟ್ ಅಂದ್ರೆ ಚಿತ್ರದ ಕಥಾಹಂದರ. ಒಂದು ಕಂಪ್ಲೀಟ್ ಎಂಟರ್ ಟೇನಿಂಗ್ ಚಿತ್ರಕ್ಕೆ ಏನೇನು ಬೇಕೋ, ಎಲ್ಲವೂ ಹದವಾಗಿ ಬೆರೆತಿರುವ ಸಿನಿಮಾ ಇದು.


ಪಾತ್ರಗಳ ಆಯ್ಕೆ ಚೆನ್ನಾಗಿದೆ

'ಕಲ್ಪನಾ-2' ಚಿತ್ರದಲ್ಲಿ ನಟಿಸಿರುವ ಪಾತ್ರಧಾರಿಗಳೆಲ್ಲರೂ ಘಟಾನುಘಟಿಗಳೇ. ಉಪ್ಪಿ ಅಮ್ಮನ ಪಾತ್ರದಲ್ಲಿ ಅಭಿನಯಿಸಿರುವ ತುಳಸಿ, ಸಮಸ್ಯೆಗೆ ಸಿಲುಕುವ ನಂದಿನಿ ಪಾತ್ರಧಾರಿ ಅವಂತಿಕಾ ಶೆಟ್ಟಿ ಮತ್ತು ಪ್ರಿಯಾಮಣಿ...ಆಯಾ ಪಾತ್ರಗಳಿಗೆ ಹೇಳಿ ಮಾಡಿಸಿದ ಕಲಾವಿದರು.


ವಿಶ್ಯುವಲ್ ಎಫೆಕ್ಟ್ಸ್ ಹೇಗಿದೆ.?

ವಿಶ್ಯುವಲ್ ಎಫೆಕ್ಟ್ಸ್ ಅಲ್ಲಲ್ಲಿ ಬೆಚ್ಚಿ ಬೀಳಿಸುತ್ತೆ. ಆದ್ರೆ, ಕ್ಲೈಮ್ಯಾಕ್ಸ್ ಭಾಗದ ಗ್ರಾಫಿಕ್ಸ್ ಮಾತ್ರ ಕೊಂಚ ಪೇಲವ. ಎಂ.ಆರ್.ಸೀನು ಕ್ಯಾಮರಾ ಕೈಚಳಕ ಪ್ರಶಂಸನೀಯ.


ಮೊದಲಾರ್ಧ ಫುಲ್ ಸ್ಪೀಡ್.!

ಕಾಮಿಡಿ, ಹಾರರ್ ಮಿಶ್ರಿತವಾಗಿರುವ 'ಕಲ್ಪನಾ-2' ಚಿತ್ರದ ಮೊದಲಾರ್ಧ ಮುಗಿಯುವುದೇ ಗೊತ್ತಾಗುವುದಿಲ್ಲ. ಸೆಕೆಂಡ್ ಹಾಫ್ ನಲ್ಲಿ ಫ್ಲ್ಯಾಶ್ ಬ್ಯಾಕ್ ಇರುವುದರಿಂದ ನಿಧಾನ ಅಂತ ಭಾಸವಾಗುವುದು ಸಹಜ.


ಸಂಗೀತ.?

ಬ್ಯಾಕ್ ಗ್ರೌಂಡ್ ಸಂಗೀತ ಚಿತ್ರಕಥೆಗೆ ಪೂರಕವಾಗಿದೆ. ಅರ್ಜುನ್ ಜನ್ಯ ಟ್ಯೂನ್ಸ್ ಮಾಡಿರುವ ಹಾಡುಗಳ ಪೈಕಿ ಕ್ಲೈಮ್ಯಾಕ್ಸ್ ನಲ್ಲಿ 'ಮುನೇಶ್ವರ...' ಹಾಡಿಗೆ ಪಡ್ಡೆ ಹುಡುಗರು ಸ್ಟೆಪ್ ಹಾಕದೆ ಸುಮ್ಮನೆ ಕೂರಲ್ಲ. ಉಳಿದ ಹಾಡುಗಳು ಅಷ್ಟಕಷ್ಟೆ.


ಫೈನಲ್ ಸ್ಟೇಟ್ ಮೆಂಟ್

'ಕಲ್ಪನಾ-2' ಪಕ್ಕಾ ಕಮರ್ಶಿಯಲ್ ಸಿನಿಮಾ. ತಮಿಳಿನ 'ಕಾಂಚನಾ-2' ಚಿತ್ರವನ್ನ ನೀವು ನೋಡಿಲ್ಲ ಅಂದ್ರೆ, 'ಕಲ್ಪನಾ-2' ಚಿತ್ರವನ್ನ ಮಿಸ್ ಮಾಡಿಕೊಳ್ಳಬೇಡಿ. ಯಾಕಂದ್ರೆ, ಕೊಡುವ ಕಾಸಿಗೆ ಈ ಸಿನಿಮಾ ಮೋಸ ಮಾಡಲ್ಲ.


English summary
Kannada Actor Real Star Upendra starrer Kannada Movie 'Kalpana 2' has hit the screens today (July 15th). Complete review of the movie is here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada