Just In
Don't Miss!
- News
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 72ನೇ ಗಣರಾಜ್ಯೋತ್ಸವ ಸಂಭ್ರಮ
- Finance
ಬಜೆಟ್ 2021: ಕ್ರಿಕೆಟ್ ಬ್ಯಾಟ್ಗಳ ಮೇಲಿನ ಸುಂಕ ಕಡಿತಗೊಳ್ಳುವ ಸಾಧ್ಯತೆ
- Sports
ಅಫ್ಘಾನಿಸ್ತಾನ vs ಐರ್ಲೆಂಡ್, 3ನೇ ಏಕದಿನ ಪಂದ್ಯ, Live ಸ್ಕೋರ್
- Automobiles
ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಯಮಹಾ ವೈಝಡ್ಎಫ್-ಆರ್25 ಬೈಕ್
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Education
Republic Day Speech And Essay Ideas: ಗಣರಾಜ್ಯೋತ್ಸವ ಪ್ರಯುಕ್ತ ಭಾಷಣ ಮತ್ತು ಪ್ರಬಂಧ ಬರೆಯಲು ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವಿಮರ್ಶೆ: ಗಂಡನ ಬಿಟ್ಟು ಹೋಗುವ ಹೆಂಡತಿಯ ಅಂತರಂಗದ ಹುಡುಕಾಟವೇ 'ಗೂಗಲ್'
ಸಂಸಾರದ ಬಂಡಿ ಮುಂದಕ್ಕೆ ಸಾಗುವುದೇ ಪ್ರೀತಿ ಹಾಗೂ ನಂಬಿಕೆ ಮೇಲೆ. ಆ ಪ್ರೀತಿ, ನಂಬಿಕೆ ಮುರಿದು ಬಿದ್ದರೆ ಬದುಕು ಮೂರಾಬಟ್ಟೆ. ಗಂಡ-ಹೆಂಡಿರ ಜಗಳ ಉಂಡು ಮಲಗುವ ತನಕ ಅಂತಾರೆ. ಆದ್ರೆ, ಗಂಡನ ಜೊತೆಗೆ ಜಗಳವೇ ಆಡದೆ, ಆಸೆ ಪಟ್ಟು ಇನ್ನೊಬ್ಬನ ಹಿಂದೆ ಹೋಗುವ ಹೆಂಡತಿಯ ಅಂತರಂಗದ ಹುಡುಕಾಟದ ಕಥೆಯೇ 'ಗೂಗಲ್'.
ಚಿತ್ರ: ಗೂಗಲ್
ನಿರ್ಮಾಣ: ಉತ್ಸವ್ ಮೂವೀಸ್
ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ಸಂಗೀತ, ನಿರ್ದೇಶನ: ವಿ.ನಾಗೇಂದ್ರ ಪ್ರಸಾದ್
ತಾರಾಗಣ: ವಿ.ನಾಗೇಂದ್ರ ಪ್ರಸಾದ್, ಶುಭಾ ಪೂಂಜಾ, ದೀಪಕ್, ಅಮೃತಾ ರಾವ್, ಶೋಭರಾಜ್, ಮುನಿ ಮತ್ತು ಇತರರು
ಬಿಡುಗಡೆ ದಿನಾಂಕ: ಫೆಬ್ರವರಿ 16, 2018

'ಗೂಗಲ್' ಸುತ್ತ
ಹೆಂಡತಿ ಹಾಗೂ ಮಗಳನ್ನ ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಹಗಲಿರುಳು ದುಡಿಯುವ ಗಂಡ ಹರೀಶ್ (ವಿ.ನಾಗೇಂದ್ರ ಪ್ರಸಾದ್), ಮೂರು ಹೊತ್ತು ಮನೆಯಲ್ಲೇ ಇರುವ ಹೆಂಡತಿ ನಂದಿನಿ (ಶುಭಾ ಪೂಂಜಾ), ಇವರಿಬ್ಬರಿಗೆ ಮುದ್ದಾದ ಒಂದು ಹೆಣ್ಣು ಮಗು. ಸುಂದರ ಸಂಸಾರದಲ್ಲಿ ಬಿರುಗಾಳಿಯಂತೆ ಬರುವ ಬಾಲು (ದೀಪಕ್). ಬಾಲು ಹಿಂದೆ ಹೊರಡುವ ನಂದಿನಿ. ಪತ್ನಿಯನ್ನ ಹುಡುಕಲು 'ಗೂಗಲ್' ತನಕ ಪ್ರಯಾಣ ಬೆಳೆಸುವ ಪತಿಯ ಹುಡುಕಾಟದ ಕಥೆಯೇ ಈ ಸಿನಿಮಾ.

ಏನಿದು 'ಗೂಗಲ್'?
'ಗೂಗಲ್' ಪ್ರಖ್ಯಾತ ಸರ್ಚ್ ಇಂಜಿನ್ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯ. ಆದ್ರೆ, ಈ ಸಿನಿಮಾದಲ್ಲಿ 'ಗೂಗಲ್' ಅಂದ್ರೆ ಬೇರೆ. ಅದೇನು ಅಂತ ತಿಳಿದುಕೊಳ್ಳಲು ನೀವು ಚಿತ್ರ ನೋಡಿ.

ರಿಯಲ್ ಸ್ಟೋರಿ
2001 ರಲ್ಲಿ ನಡೆದಿರುವ ನೈಜ ಘಟನೆಯನ್ನ ವಿ.ನಾಗೇಂದ್ರ ಪ್ರಸಾದ್ ತೆರೆಮೇಲೆ ತಂದಿದ್ದಾರೆ. ಮಧ್ಯಮ ವರ್ಗದ ಕುಟುಂಬದಲ್ಲಿ ನಡೆಯುವ ಕಥೆ ಇದಾದ್ರಿಂದ, ಚಿತ್ರದಲ್ಲಿ ನೈಜತೆಗೆ ಹೆಚ್ಚು ಒತ್ತು ನೀಡಲಾಗಿದೆ.

ವಿ.ನಾಗೇಂದ್ರ ಪ್ರಸಾದ್ ಅಭಿನಯ ಹೇಗಿದೆ.?
ಕುಟುಂಬದ ಒಳಿತಿಗಾಗಿ ಹಗಲಿರುಳು ದುಡಿಯುವ ಗಂಡನಾಗಿ, ಇದ್ದಕ್ಕಿದ್ದಂತೆ ಮನೆ ಬಿಟ್ಟು ಹೋಗುವ ಹೆಂಡತಿಯನ್ನು ಹುಡುಕುವ ಅಸಹಾಯಕ ಪತಿಯಾಗಿ, ಮಗಳ ಮುದ್ದಿನ ತಂದೆಯಾಗಿ ವಿ.ನಾಗೇಂದ್ರ ಪ್ರಸಾದ್ ಅಭಿನಯ ಅಚ್ಚುಕಟ್ಟಾಗಿದೆ.

ಶುಭಾ ಪೂಂಜಾ ನಟನೆ
ಹರೀಶ್ ಪತ್ನಿ ನಂದಿನಿಯಾಗಿ, ಒಂದು ಮಗುವಿನ ತಾಯಿಯಾಗಿ ಶುಭಾ ಪೂಂಜಾ ನಟನೆ ಚೆನ್ನಾಗಿದೆ. ಚಿತ್ರದಲ್ಲಿ ಮಡಿವಂತಿಕೆ ತೋರದೆ, ಕೊಟ್ಟ ಸವಾಲಿನ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ ಶುಭಾ ಪೂಂಜಾ.

ಉಳಿದವರ ಕಥೆ.?
ಡ್ಯಾನ್ಸ್ ಹಾಗೂ ಡೈಲಾಗ್ ಡೆಲಿವರಿಯಲ್ಲಿ ದೀಪಕ್ ಇನ್ನೂ ಪಳಗಬೇಕು. ಅಮೃತಾ ರಾವ್ ಕೂಡ ಅಭಿನಯದಲ್ಲಿ ಮಾಗಬೇಕು. ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಶೋಭರಾಜ್ ಹಾಗೂ ಮುನಿ ಇಷ್ಟವಾಗುತ್ತಾರೆ.

ಪ್ಲಸ್-ಮೈನಸ್ ಏನು.?
ಎಂದಿನಂತೆ ಹೀರೋ-ಹೀರೋಯಿನ್ ಮರ ಸುತ್ತುವ ಪ್ರೀತಿಯ ಕಥೆ ಹೊಂದಿರುವ ಸಿನಿಮಾ 'ಗೂಗಲ್' ಅಲ್ಲ. ಮಾಮೂಲಿ ಲವ್ ಸ್ಟೋರಿಗಳನ್ನು ದಾಟಿ, ಒಂದು ಹೆಣ್ಣಿನ ಆಸೆ ಅಂತರಂಗದ ಸುತ್ತ ಸಿನಿಮಾ ಮಾಡಿದ್ದಾರೆ ವಿ.ನಾಗೇಂದ್ರ ಪ್ರಸಾದ್. ಕೆಲವು ಕಡೆ ಕನ್ಟಿನ್ಯೂಟಿ ಮಿಸ್ ಆಗಿದೆ. ದಯಾಳ್ ಇರುವ ಸನ್ನಿವೇಶ ಬೇಕಾಗಿರಲಿಲ್ಲ ಅನ್ನೋದು ಬಿಟ್ಟರೆ ಮುಂದೇನಾಗುತ್ತೆ ಎಂಬ ಕುತೂಹಲವನ್ನ ಕಡೆಯವರೆಗೂ ಪ್ರೇಕ್ಷಕರಲ್ಲಿ ಉಳಿಯುವಂತೆ ಮಾಡುವಲ್ಲಿ ವಿ.ನಾಗೇಂದ್ರ ಪ್ರಸಾದ್ ಯಶಸ್ವಿ ಆಗಿದ್ದಾರೆ.

ಫೈನಲ್ ಸ್ಟೇಟ್ ಮೆಂಟ್
'ಗೂಗಲ್' ಸಿನಿಮಾ ವಿ.ನಾಗೇಂದ್ರ ಪ್ರಸಾದ್ ಅವರ ಒನ್ ಮ್ಯಾನ್ ಶೋ. ಈ ವಾರಾಂತ್ಯದಲ್ಲಿ ನೀವು ಫ್ರೀ ಇದ್ದರೆ, 'ಗೂಗಲ್'ನ ಒಮ್ಮೆ ನೋಡ್ಬಹುದು..