For Quick Alerts
ALLOW NOTIFICATIONS  
For Daily Alerts

'ಸಿದ್ದಾರ್ಥ' ವಿಮರ್ಶೆ: ಅಣ್ಣಾವ್ರ ಹೆಸರುಳಿಸಿದ ಮೊಮ್ಮಗ

|

ಅಂತೂ ಇಂತೂ ಅಣ್ಣಾವ್ರ ಕುಟುಂಬದ ಮೂರನೇ ತಲೆಮಾರಿನ ಕುಡಿ ಇಂದು ಬೆಳ್ಳಿತೆರೆ ಮೇಲೆ ಅದ್ದೂರಿಯಾಗಿ ಪದಾರ್ಪಣೆ ಮಾಡಿದೆ. ರಾಘವೇಂದ್ರ ರಾಜ್ ಕುಮಾರ್ ಸುಪುತ್ರ ವಿನಯ್ ರಾಜ್ ಕುಮಾರ್ 'ಸಿದ್ದಾರ್ಥ'ನಾಗಿ ದೊಡ್ಡ ಪರದೆ ಮೇಲೆ ಮಿಂಚಿದ್ದಾರೆ.

'ಸಿದ್ದಾರ್ಥ'...ಯಾವುದೇ ಆಂಗಲ್ ನಿಂದ ಬುದ್ಧ ಅಲ್ಲ! ಅಂತ ಡೈಲಾಗ್ ಹೊಡೆದು ಜನಪ್ರಿಯತೆ ಗಳಿಸಿದ್ದ ವಿನಯ್, ಪ್ರೇಕ್ಷಕರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಗಿದ್ದಾರಾ? ತಲೆಮಾರಿನ ಘನತೆಯಂತೆ ನಿರೀಕ್ಷಿಸಿದ ಮಟ್ಟಕ್ಕೆ 'ಸಿದ್ದಾರ್ಥ' ಪ್ರೇಕ್ಷಕರ ಇಷ್ಟಾರ್ಥ ಸಿದ್ದಿಸಿದ್ದಾನಾ? ಅಣ್ಣಾವ್ರ ಹೆಸರನ್ನ ಮುದ್ದಿನ ಮೊಮ್ಮಗ ಉಳಿಸಿದ್ದಾನಾ? ಅದಕ್ಕೆ ಉತ್ತರ ಇಲ್ಲಿದೆ. 'ಸಿದ್ದಾರ್ಥ' ಚಿತ್ರದ ವಿಮರ್ಶೆಗಾಗಿ ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ....

Rating:
3.5/5
Star Cast: ವಿನಯ್ ರಾಜ್ ಕುಮಾರ್, ಅಪೂರ್ವ ಅರೋರಾ, ಆಶೀಶ್ ವಿದ್ಯಾರ್ಥಿ, ಅಚ್ಯುತ್ ಕುಮಾರ್, ಸಾಧು ಕೋಕಿಲ
Director: ಪ್ರಕಾಶ್

'ಸಿದ್ದಾರ್ಥ' ಕಥಾಹಂದರ

'ಸಿದ್ದಾರ್ಥ' ಕಥಾಹಂದರ

ಚಿತ್ರದ ಕಥಾನಾಯಕ ಸಿದ್ದಾರ್ಥ (ವಿನಯ್ ರಾಜ್ ಕುಮಾರ್). ಹೆಸರಿಗೆ 'ಸಿದ್ದಾರ್ಥ' ಆದರೂ, ಇವನು ಕೊಡೋ ಪಂಚ್ ನೋಡಿದ್ರೆ ಯಾರೂ ಇವನನ್ನ 'ಬುದ್ಧ' ಅಂತ ಕರೆಯೋಲ್ಲ. ಹುಟ್ಟು ಪೋಲಿ ಹುಡುಗ. ಸ್ನೇಹಜೀವಿ. ದುಡ್ಡು ಸಿಗುತ್ತೆ ಅಂದ್ರೆ ಯಾವುದೇ ಸವಾಲು ಸ್ವೀಕರಿಸುವುದಕ್ಕೂ 'ಸಿದ್ದಾರ್ಥ' ಸಿದ್ಧ. ಅದು ಅಪ್ಪನನ್ನ ಆಟದಲ್ಲಿ ಸೋಲಿಸುವುದರಿಂದ ಹಿಡಿದು ನಾಯಕಿಯ ಮುಂದೆ ಬೆತ್ತಲಾಗುವವರೆಗೂ 'ಸಿದ್ದಾರ್ಥ'ನಿಗೆ 'ನಥಿಂಗ್ ಈಸ್ ಇಂಪಾಸಿಬಲ್'.

ಸಣ್ಣ ಎಳೆ, ಸಿಂಪಲ್ ಸಿನಿಮಾ

ಸಣ್ಣ ಎಳೆ, ಸಿಂಪಲ್ ಸಿನಿಮಾ

ಇಂತಹ 'ಸಿದ್ದಾರ್ಥ'ನಿಗೆ 'ಖುಷಿ' (ಅಪೂರ್ವ ಅರೋರಾ) ಅನ್ನುವ ಹುಡುಗಿ ಪರಿಚಯವಾಗುತ್ತಾಳೆ. ಎಲ್ಲರಂತೆ 'ಸಿದ್ದಾರ್ಥ'ನಿಗೂ ಲವ್ @ ಫಸ್ಟ್ ಸೈಟ್ ಆಗುತ್ತೆ. ಖುಷಿಯನ್ನ ಮೆಚ್ಚಿಸುವುದಕ್ಕೆ ಗಿಟಾರ್ ಹಿಡಿಯುವ ಸಿದ್ದಾರ್ಥ ಕೊನೆಗೆ ಕುಟುಂಬದ ಸಮ್ಮತಿಯನ್ನೂ ಪಡೆಯುತ್ತಾನೆ. ಅಲ್ಲಿಗೆ ಕಥೆ ಶುಭಂ ಅಂದುಕೊಳ್ಳುವಷ್ಟರಲ್ಲಿ, ಪ್ರೀತಿಸಿದ ಹುಡುಗಿ ಮುಖ್ಯನೋ ಇಲ್ಲಾ ಚಿಕ್ಕವಯಸ್ಸಿಂದ ಜೊತೆಯಾಗಿರುವ ಸ್ನೇಹಿತರು ಮುಖ್ಯನೋ ಅನ್ನುವ ಪ್ರಶ್ನೆ 'ಸಿದ್ದಾರ್ಥ'ನಿಗೆ ಕಾಡುತ್ತೆ. ಅಲ್ಲಿಂದ ಶುರುವಾಗುವುದೇ ಅಸಲಿ ಕಥೆ.

'ಗಿವ್ ಮೀ ಎ ಬ್ರೇಕ್' ಅರ್ಥ ಏನು..?

'ಗಿವ್ ಮೀ ಎ ಬ್ರೇಕ್' ಅರ್ಥ ಏನು..?

'ಸಿದ್ದಾರ್ಥ' ಚಿತ್ರದ ಅಡಿಬರಹ 'ಗಿವ್ ಮೀ ಎ ಬ್ರೇಕ್'. ಇದು ವಿನಯ್ ವೃತ್ತಿ ಜೀವನಕ್ಕೆ ಅವಶ್ಯಕವಾಗಿದ್ದರೂ, ಕಥೆಗೆ ಹೇಳಿಮಾಡಿಸಿರುವಂತದ್ದು. ಸ್ನೇಹಿತರಿಗೆ ಸಮಯ ಕೊಡಬೇಕು ಅಂತ ಪ್ರೇಯಸಿಯಿಂದ 'ಬ್ರೇಕ್' ತೆಗೆದುಕೊಳ್ಳವ 'ಸಿದ್ದಾರ್ಥ'ನಿಗೆ ಮುಂದೆ ಖುಷಿ ಸಿಗುತ್ತಾಳಾ. ಇದೇ ಗ್ಯಾಪಲ್ಲಿ ಎಂಟ್ರಿಕೊಡುವ ನಿಕ್ಕಿ ಗಲ್ರಾನಿ, ಐಶ್ವರ್ಯ, ದೀಪಿಕಾ ದಾಸ್ ಪಾತ್ರಗಳೇನು? ಈ ಪ್ರಶ್ನೆಗಳಿಗೆ ನೀವು ಚಿತ್ರಮಂದಿರದಲ್ಲಿ 'ಸಿದ್ದಾರ್ಥ'ನನ್ನ ನೋಡಿ ಉತ್ತರ ಕಂಡುಕೊಳ್ಳಬೇಕು. [ಅಪ್ಪಾಜಿಯನ್ನ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೀನಿ-ರಾಘಣ್ಣ]

ಮೊದಲ ಪ್ರಯತ್ನದಲ್ಲಿ ವಿನಯ್ ಪಾಸ್..!

ಮೊದಲ ಪ್ರಯತ್ನದಲ್ಲಿ ವಿನಯ್ ಪಾಸ್..!

'ಸಿದ್ದಾರ್ಥ' ಪಾತ್ರ ವಿನಯ್ ರಾಜ್ ಕುಮಾರ್ ಗೆ ಪರ್ಫೆಕ್ಟ್.ಕಾಲೇಜಿನಲ್ಲಿ ಓದುತ್ತಿರುವ ತುಂಟ ಹುಡುಗ 'ಸಿದ್ದಾರ್ಥ', ವಿನಯ್ ಅಭಿನಯದಿಂದ ಪ್ರೇಕ್ಷಕರಿಗೆ ಇಷ್ಟವಾಗುತ್ತಾನೆ. ವಿನಯ್ ಗಿದು ಮೊದಲ ಪ್ರಯತ್ನವಾಗಿರುವುದರಿಂದ ನಟನೆಯಲ್ಲಿ ಫುಲ್ ಮಾರ್ಕ್ಸ್ ಕೊಡುವುದು ಕಷ್ಟ. ಆದ್ರೆ, ವಿನಯ್ ಪಟ್ಟಿರುವ ಪರಿಶ್ರಮಕ್ಕೆ ಧಾರಾಳವಾಗಿ ಪಾಸ್ ಮಾಡಬಹುದು. ಸಾಹಸ ದೃಶ್ಯಗಳಲ್ಲಿ ಲೀಲಾಜಾಲವಾಗಿ ಫೈಟ್ ಮಾಡಿರುವ ವಿನಯ್, ರಾಜ್ ಕುಟುಂಬದ 'ಆಕ್ಷನ್ ಹೀರೋ' ಅಂದ್ರೆ ತಪ್ಪಾಗಲ್ಲ. ಡ್ಯಾನ್ಸ್ ಮತ್ತು ಡೈಲಾಗ್ ಡೆಲಿವರಿಯಲ್ಲಿ ವಿನಯ್ ಇನ್ನೂ ಪಳಗಬೇಕು. ಆಂಗಿಕ ಅಭಿನಯ ಮತ್ತು ಮುಖ ಭಾವಗಳನ್ನ ಕೊಂಚ ಸುಧಾರಿಸಿಕೊಂಡರೆ ವಿನಯ್ ರಾಜ್ ಕುಮಾರ್, ದೊಡ್ಮನೆ ಕುಟುಂಬದ ಮುಂದಿನ 'ಸೂಪರ್ ಸ್ಟಾರ್' ಆಗುವುದರಲ್ಲಿ ಡೌಟೇ ಇಲ್ಲ. [ರಾಜ್ ಕುಮಾರ್ ಮೊಮ್ಮಗ ಅಂತ ಬಿಲ್ಡಪ್ ಕೊಟ್ಟಿಲ್ಲ-ರಾಘಣ್ಣ]

ಕಣ್ಮನ ಸೆಳೆಯುವ 'ಅಪೂರ್ವ'

ಕಣ್ಮನ ಸೆಳೆಯುವ 'ಅಪೂರ್ವ'

ಕನ್ನಡತಿ ಅಲ್ಲದೇ ಇದ್ದರೂ 'ಅಪೂರ್ವ' ನೀಡಿರುವ ಅಭಿನಯ ಅಮೋಘ. ಡೈಲಾಗ್ ಗಳನ್ನ ಸ್ಪಷ್ಟವಾಗಿ ಹೇಳಿರುವ ಅಪೂರ್ವಗೆ ಕನ್ನಡ ಬರಲ್ಲ ಅಂತ ಎಲ್ಲೂ ಭಾಸವಾಗುವುದಿಲ್ಲ. ತೆರೆಮೇಲೆ ಪುಟ್ಟ ಹುಡುಗಿಯಾಗಿ ಕಾಣುತ್ತಾರೆ ಅನ್ನುವುದನ್ನ ಬಿಟ್ಟರೆ ಅಪೂರ್ವ, ಕನ್ನಡ ಚಿತ್ರರಂಗಕ್ಕೆ ಭರವಸೆಯ ನಾಯಕಿ. [ಅಣ್ಣಾವ್ರ ಮೊಮ್ಮಗ ಅನ್ನುವ 'ಅಹಂ' ನನಗಿಲ್ಲ-ವಿನಯ್]

ಉಳಿದ ಪಾತ್ರವರ್ಗ

ಉಳಿದ ಪಾತ್ರವರ್ಗ

ಉಳಿದಂತೆ ಆಶೀಶ್ ವಿದ್ಯಾರ್ಥಿ, ಸುಧಾರಾಣಿ, ನಯನ ಪುಟ್ಟಸ್ವಾಮಿ, ಸಾಧು ಕೋಕಿಲ, ಐಶ್ವರ್ಯ, ದೀಪಿಕಾ ದಾಸ್, ನಿಕ್ಕಿ ಗಲ್ರಾನಿ ಕೊಟ್ಟ ಪಾತ್ರಗಳನ್ನ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. [ಯೂಟ್ಯೂಬಲ್ಲಿ ಝೇಂಕರಿಸಿದ 'ಸಿದ್ದಾರ್ಥ' ಟ್ರೇಲರ್]

ರಾಜಣ್ಣ, ಶಿವಣ್ಣ, ಅಪ್ಪು ಅಭಿಮಾನಿಗಳಿಗೆ ರಸದೌತಣ

ರಾಜಣ್ಣ, ಶಿವಣ್ಣ, ಅಪ್ಪು ಅಭಿಮಾನಿಗಳಿಗೆ ರಸದೌತಣ

ಹೇಳಿ ಕೇಳಿ 'ಸಿದ್ದಾರ್ಥ' ರಾಜ್ ಕುಟುಂಬದ ನೂತನ ಕುಡಿಯ ಸಿನಿಮಾ. ಅಂದ್ಮೇಲೆ ಚಿತ್ರದಲ್ಲಿ ಎಲ್ಲಾದರೂ ಒಂದು ಕಡೆ ಅಣ್ಣಾವ್ರ ಕುಟುಂಬದ ಚಹರೆ ಕಾಣಲೇಬೇಕು. ಅದನ್ನ ಬಹಳ ಜಾಣತನದಿಂದ ನಿರ್ದೇಶಕ ಪ್ರಕಾಶ್ ತೆರೆಮೇಲೆ ಬಳಸಿಕೊಂಡಿದ್ದಾರೆ. ಹಾಗಂತ ಅಪ್ಪು, ಶಿವಣ್ಣ ಇಲ್ಲಿ ಅತಿಥಿ ಪಾತ್ರ ನಿರ್ವಹಿಸಿಲ್ಲ. ಬದಲಾಗಿ ಅವರ ಹಾಡುಗಳು ಎಲ್ಲರನ್ನ ರಂಜಿಸುತ್ತೆ. ಅದ್ಹೇಗೆ ಅಂತ ನಾವು ಹೇಳಲ್ಲ. ಅದನ್ನ ತೆರೆಮೇಲೆ ನೋಡಿದ್ರೆ, ನಿಮಗೆ ಸಿಗುವ ಮಜಾನೇ ಬೇರೆ. [ರಾಜ್ ಮೊಮ್ಮಗ ವಿನಯ್ ರಾಜ್ ಕುಮಾರ್ ವಿಶೇಷ ಸಂದರ್ಶನ]

ಗಿಮಿಕ್ ಇಲ್ಲ....ಎಲ್ಲೂ ಕೆಮ್ಮಂಗಿಲ್ಲ..!

ಗಿಮಿಕ್ ಇಲ್ಲ....ಎಲ್ಲೂ ಕೆಮ್ಮಂಗಿಲ್ಲ..!

ನಿಜ ಹೇಳ್ಬೇಕಂದ್ರೆ, 'ಸಿದ್ದಾರ್ಥ' ಚಿತ್ರದಲ್ಲಿ ಭೇಷ್ ಅನ್ನುವಂತಹ ಕಥೆ ಇಲ್ಲ. 'ಸಿದ್ದಾರ್ಥ' ಸಿಂಪಲ್ ಸ್ಟೋರಿ ಆದರೂ, ಎಲ್ಲೂ 'ಬೋರ್' ಮಾಡುವುದಿಲ್ಲ. ಅನಾವಶ್ಯಕ ಸನ್ನಿವೇಶಗಳಿಂದ ಕಿರಿಕಿರಿ ತರಿಸುವುದಿಲ್ಲ. ಎಲ್ಲೂ ಗಿಮಿಕ್ ಮಾಡಿಲ್ಲ. ನಿದ್ದೆ ಅಂತೂ ಹತ್ತಿರವೇ ಸುಳಿಯಲ್ಲ. ಮನರಂಜನೆಗೆ ಬೇಕಾದ ಎಲ್ಲಾ ಸರಕುಗಳು ಚಿತ್ರದಲ್ಲಿವೆ. ಪ್ರೇಕ್ಷಕರು ಕಿಸಕ್ ಅಂತ ನಗುವ ಅದೆಷ್ಟೋ ಚಟಾಕಿಗಳನ್ನ ವಿನಯ್ ಉಡಾಯಿಸಿದ್ದಾರೆ. ಕಥೆಗೆ ಪೂರಕವಾಗಿ ಹಾಡುಗಳು, ಫೈಟ್ಸ್ ಇವೆ. ಹೀಗೆ ಆಗುತ್ತೆ ಅಂದುಕೊಳ್ಳುವಷ್ಟರಲ್ಲಿ, ಇನ್ನೊಂದು ಟ್ವಿಸ್ಟ್ ಕೊಟ್ಟು ಕೊನೆಗೆ ನಗು ಮೊಗದಿಂದ ಪ್ರೇಕ್ಷಕರನ್ನ ಕಳುಹಿಸಿಕೊಡುವಲ್ಲಿ ನಿರ್ದೇಶಕ ಪ್ರಕಾಶ್ ಗೆದ್ದಿದ್ದಾರೆ. [ನನ್ನಿಂದ ನಮ್ಮಪ್ಪ-ಅಮ್ಮ ಜೂನಿಯರ್ ಆರ್ಟಿಸ್ಟ್ ಆದ್ರು-ವಿನಯ್]

ಊಟಕ್ಕೆ ಉಪ್ಪಿನಕಾಯಿಯಷ್ಟು ಸಾಹಸ

ಊಟಕ್ಕೆ ಉಪ್ಪಿನಕಾಯಿಯಷ್ಟು ಸಾಹಸ

ವಿನಯ್ ಗೆ ಬಿಲ್ಡಪ್ ಕೊಡಬೇಕು ಅಂತ ಎಲ್ಲೂ ಮೈನವಿರೇಳಿಸುವ ಸಾಹಸ ದೃಶ್ಯಗಳು ಚಿತ್ರದಲ್ಲಿಲ್ಲ. ವಾಸ್ತವಕ್ಕೆ ತೀರಾ ಹತ್ತಿರವಾಗುವ, ಸನ್ನಿವೇಶಕ್ಕೆ ಪೂರಕವಾಗಿರುವ, ಎಲ್ಲೂ 'ಅತಿಯಾಯ್ತು' ಅನ್ನಿಸದಂತಹ ಫೈಟ್ಸ್ ಇವೆ. ಇರುವ ಎರಡ್ಮೂರು ಸಾಹಸ ಸನ್ನಿವೇಶಗಳಲ್ಲಿ ವಿನಯ್ ರಾಜ್ ಕುಮಾರ್ ಪ್ರೇಕ್ಷಕರಿಂದ ಶಿಳ್ಳೆ ಗಿಟ್ಟಿಸುತ್ತಾರೆ. [ಪಾರ್ವತಮ್ಮ ಅವರಿಗೆ ಮೊಮ್ಮಗನ ಪ್ರೀತಿಯ ಉಡುಗೊರೆ]

ಕಣ್ಣಿಗೆ ಮತ್ತು ಕಿವಿಗೆ ಹಬ್ಬ

ಕಣ್ಣಿಗೆ ಮತ್ತು ಕಿವಿಗೆ ಹಬ್ಬ

'ಸಿದ್ದಾರ್ಥ' ಆಡಿಯೋ ಕೇಳಿ ಅಂಥದ್ದೇನಿಲ್ಲ ಅಂದುಕೊಂಡವರು, ಚಿತ್ರವನ್ನ ನೋಡಿ ಹೊರಬಂದಾಗ 'ಸಿದ್ದಾರ್ಥ' ಹಾಡುಗಳನ್ನ ಖಂಡಿತ ಗುನುಗುತ್ತಾರೆ. ವಿ.ಹರಿಕೃಷ್ಣ ಸಂಯೋಜಿಸಿರುವ ಹಾಡುಗಳು 'ಸಿದ್ದಾರ್ಥ'ನಿಗೆ ನಿಜಕ್ಕೂ ಪ್ಲಸ್ ಪಾಯಿಂಟ್. ಇನ್ನೂ ಫಾರಿನ್ ಲೋಕೇಷನ್ಸ್ ನಲ್ಲಿ ಕೃಷ್ಣ ಕುಮಾರ್ ಛಾಯಾಗ್ರಹಣ ಕಣ್ಣಿಗೆ ಹಬ್ಬ ನೀಡುತ್ತದೆ. [ಪೋಲಿ ಹುಡುಗನಾಗಿ ಎಂಟ್ರಿ ಕೊಟ್ಟ ವಿನಯ್ ರಾಜ್]

ಕುಟುಂಬ ಸಮೇತ ಚಿತ್ರವನ್ನ ನೋಡಿ

ಕುಟುಂಬ ಸಮೇತ ಚಿತ್ರವನ್ನ ನೋಡಿ

ಎಲ್ಲರ ಜೀವನದಲ್ಲಿ ನಡೆಯುವ ಸಾಮಾನ್ಯ ಕಥೆಯನ್ನು ನಿರ್ದೇಶಕ ಪ್ರಕಾಶ್ ಸಿಂಪಲ್ ಆಗಿ ತೋರಿಸಿದ್ದಾರೆ. ಟೆನ್ಷನ್ ಬಿಟ್ಟು ಸ್ವಲ್ಪ ರಿಲ್ಯಾಕ್ಸ್ ಆಗಬೇಕು ಅಂತ ಬಯಸೋರು ಖಂಡಿತ 'ಸಿದ್ದಾರ್ಥ' ಚಿತ್ರವನ್ನ ನೋಡಬಹುದು. ಅತಿಯಾದ ನಿರೀಕ್ಷೆಯನ್ನ ಹೊತ್ತು 'ಸಿದ್ದಾರ್ಥ' ಚಿತ್ರವನ್ನ ನೋಡಿದರೆ, ಮಜಾ ಸಿಗುವುದಿಲ್ಲ. ಸಿಂಪಲ್ 'ಸಿದ್ದಾರ್ಥ'ನನ್ನ ''ಸಿಂಪಲ್'' ಸಿದ್ದಾರ್ಥನಾಗೇ ನೋಡಿ ಆನಂದಿಸಿ. [ಮೊಟ್ಟಮೊದಲ ಬಾರಿ ಬೆಳ್ಳಿತೆರೆ ಮೇಲೆ 'ಅಣ್ಣಾವ್ರ' ಸೊಸೆ..!]

English summary
Dr.Rajkumar's grand son Vinay Rajkumar starrer Kannada movie 'Siddhartha' has hit the screens today (January 23rd). Here is the complete review of the movie

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more