»   » ವಿಮರ್ಶೆ: ಸ್ಲೋ ಮೋಷನ್ ನಲ್ಲಿ ಓಡುವ 'ರನ್ ಆಂಟನಿ'

ವಿಮರ್ಶೆ: ಸ್ಲೋ ಮೋಷನ್ ನಲ್ಲಿ ಓಡುವ 'ರನ್ ಆಂಟನಿ'

Posted By:
Subscribe to Filmibeat Kannada

ಸಿನಿಮಾ ಆರಂಭದಲ್ಲಿ - ''ಮಿಸ್ಟೇಕ್...ಮಿಸ್ಟೇಕ್...ಮಿಸ್ಟೇಕ್...ನಾವು ಮಾಡಿರುವ ಸಣ್ಣ ತಪ್ಪನ್ನ ಸರಿಪಡಿಸಿಕೊಳ್ಳಲು ಆಗದೇ ಇರುವಾಗ ನಮಗೆ ಇರುವ ಒಂದೇ ದಾರಿ...'ರನ್''


ಸಿನಿಮಾದ ಕ್ಲೈಮ್ಯಾಕ್ಸ್ ನಲ್ಲಿ - ''ಇಷ್ಟು ದಿನ ನೀನು ನಿನ್ನ ಪ್ರಾಣ ಉಳಿಸಿಕೊಳ್ಳಲು ಓಡುತ್ತಿದ್ದೆ. ಇನ್ಮೇಲೆ ಜನರ ಪ್ರಾಣ ಉಳಿಸಲು ಓಡು....ರನ್ ಆಂಟನಿ....ರನ್...''

ಈ ಎರಡು ಡೈಲಾಗ್ ಗಳ ಮಧ್ಯೆ 128 ನಿಮಿಷ ನಡೆಯುವ 'ಓಡು'ವ ಕಥೆಯೇ 'ರನ್ ಆಂಟನಿ'. ಮೊದ ಮೊದಲು ರನ್ನಿಂಗ್ ರೇಸ್ ನಲ್ಲಿ ಓಡುವಂತೆ ಬೇಗ ಬೇಗ ಓಡುವ 'ರನ್ ಆಂಟನಿ'ಯ ವೇಗಕ್ಕೆ ಸೆಕೆಂಡ್ ಹಾಫ್ ನಲ್ಲಿ ಹಾಡುಗಳಿಂದ ಬ್ರೇಕ್ ಬಿದ್ದಿದೆ.


ವಿನಯ್ ರಾಜ್ ಕುಮಾರ್ ಅಭಿನಯದ ಎರಡನೇ ಸಿನಿಮಾ 'ರನ್ ಆಂಟನಿ' ಸಂಪೂರ್ಣ ವಿಮರ್ಶೆ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳಲ್ಲಿ ಓದಿರಿ.....


Rating:
3.0/5

ಚಿತ್ರ: ರನ್ ಆಂಟನಿ
ನಿರ್ಮಾಪಕರು : ಗುರು ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪಾರ್ವತಮ್ಮ ರಾಜ್ ಕುಮಾರ್
ಕಥೆ-ಚಿತ್ರಕಥೆ-ನಿರ್ದೇಶನ : ರಘು ಶಾಸ್ತ್ರಿ
ಸಂಗೀತ : ಮಣಿಕಾಂತ್ ಕದ್ರಿ
ಛಾಯಾಗ್ರಹಣ : ಮನೋಹರ್ ಜೋಶಿ
ತಾರಾಗಣ : ವಿನಯ್ ರಾಜ್ ಕುಮಾರ್, ರುಕ್ಷಾರ್ ಮಿರ್, ಸುಶ್ಮಿತಾ ಜೋಶಿ ಮತ್ತು ಇತರರು.
ಬಿಡುಗಡೆ : ಜುಲೈ 8, 2016


ಮೊದಲ ಸೀನ್ ನಲ್ಲೇ ಆತ್ಮಹತ್ಯೆ.!

ಅತಿ ಎತ್ತರದ ಕಟ್ಟಡದ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನ ವಿಫಲವಾದಾಗ ರೈಲ್ವೇ ಸ್ಟೇಷನ್ ಗೆ ಬರುವ ಆಂಟನಿ ಡಿಸೋಜಾಗೆ (ವಿನಯ್ ರಾಜ್ ಕುಮಾರ್) ಮಧುಮಗಳು ಯಶು (ರುಕ್ಷಾರ್ ಮಿರ್) ಪರಿಚಯವಾಗುತ್ತದೆ.


ಯಾರು ಈ ಯಶು.?

ಮದುವೆ ಮನೆಯಿಂದ ಎಸ್ಕೇಪ್ ಆಗಿರುವ ಯಶು (ರುಕ್ಷಾರ್ ಮಿರ್), ಹೈದರಾಬಾದ್ ನಿಂದ ಬರುವ ತನ್ನ ಬಾಯ್ ಫ್ರೆಂಡ್ ನಿರೀಕ್ಷೆಯಲ್ಲಿರುತ್ತಾಳೆ. ಹೈದರಾಬಾದ್ ಎಕ್ಸ್ ಪ್ರೆಸ್ ನಿಂದ ಬರುವ ಬದಲು ಮುಂಬೈ ಎಕ್ಸ್ ಪ್ರೆಸ್ ನಿಂದ ಆಕೆಯ ಬಾಯ್ ಫ್ರೆಂಡ್ ಲ್ಯಾಂಡ್ ಆದ ಕೂಡಲೆ ಪ್ರೇಕ್ಷಕರ ಊಹೆಗೂ ಮೀರಿದ ದೊಡ್ಡ ಅನಾಹುತ ಸಂಭವಿಸುತ್ತೆ.


ಚಿತ್ರದ ದೊಡ್ಡ ತಿರುಳು ಇರುವುದು ಇಲ್ಲೇ.!

ಖುದ್ದಾಗಿ ಯಾವ ತಪ್ಪು ಕೂಡ ಮಾಡದೆ ಪರಿಸ್ಥಿತಿಯ ಕೈಗೊಂಬೆ ಆಗುವ ಆಂಟನಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಓಡಲು ಶುರು ಮಾಡುತ್ತಾನೆ. ಆಂಟನಿ ಅಮಾಯಕ ಅಂತ ಸಾಬೀತಾಗುತ್ತಾ.? ಅಸಲಿಗೆ ಸಂಭವಿಸುವ ಆ ದೊಡ್ಡ ಅನಾಹುತವಾದರೂ ಏನು.? ಆತ್ಮಹತ್ಯೆ ಮಾಡಿಕೊಳ್ಳಲು ಆಂಟನಿ ನಿರ್ಧರಿಸುವುದು ಯಾಕೆ? ಎಂಬುದೇ 'ರನ್ ಆಂಟನಿ'ಯ ಸಸ್ಪೆನ್ಸ್. ಅದನ್ನ ನೀವು ಚಿತ್ರಮಂದಿರದಲ್ಲೇ ನೋಡಿ, ಥ್ರಿಲ್ ಆಗಿ....


ವಿನಯ್ ರಾಜ್ ಕುಮಾರ್ ಅಭಿನಯದ ಹೇಗಿದೆ.?

ಸೀರಿಯಸ್ ಸನ್ನಿವೇಶಗಳಲ್ಲಿ ವಿನಯ್ ರಾಜ್ ಕುಮಾರ್ ಅಭಿನಯ ಅಚ್ಚುಕಟ್ಟಾಗಿದೆ. ಲವ್-ರೋಮ್ಯಾನ್ಸ್ ಗೆ ಸಂಬಂಧಿಸಿದ ಸನ್ನಿವೇಶಗಳಲ್ಲಿ ವಿನಯ್ ರಾಜ್ ಕುಮಾರ್ ಇನ್ನೂ ಪಳಗಬೇಕು. ಕೊಂಚ ಸಂಕೋಚ ಸ್ವಭಾವವನ್ನ ಬದಿಗಿಟ್ಟರೆ, ವಿನಯ್ ರಾಜ್ ಕುಮಾರ್ ಉತ್ತಮ ನಟನಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ.


ನಾಯಕಿಯರ ಪೈಕಿ ಯಾರು ಉತ್ತಮ.?

ಸುಶ್ಮಿತಾ ಜೋಶಿ ಗ್ಲಾಮರ್ ಗೊಂಬೆ. ನಟನೆಯಲ್ಲಿ ಆಕೆ ಇಮ್ಪ್ರೂವ್ ಆಗ್ಬೇಕು. ತೆರೆ ಮೇಲೆ ಸೊಗಸಾಗಿ ಕಾಣುವ ರುಕ್ಷಾರ್ ಮೀರ್ ಅಭಿನಯ ಚೆನ್ನಾಗಿದೆ.


ಉಳಿದವರ ಬಗ್ಗೆ....

ಪೊಲೀಸ್ ಆಫೀಸರ್ ಖಾನ್ ಆಗಿ ದೇವರಾಜ್, ರೈಲ್ವೇ ಸ್ಟೇಷನ್ ಟಿಕೆಟ್ ಕಲೆಕ್ಟರ್ ಆಗಿ ಬುಲೆಟ್ ಪ್ರಕಾಶ್, ಹೀಗೆ ಬಂದು ಹಾಗೆ ಹೋಗುವ ಸಾಯಿ ಕುಮಾರ್, ದತ್ತಣ್ಣ ಅಭಿನಯ ಉತ್ತಮ.


ಮೊದಲ ಪ್ರಯತ್ನದಲ್ಲೇ ರಘು ಶಾಸ್ತ್ರಿ ಪಾಸ್.!

ಮೊದಲ ಪ್ರಯತ್ನದಲ್ಲೇ ವಿಭಿನ್ನ ಕಥೆಯೊಂದಿಗೆ ಅಲ್ಲಲ್ಲಿ ಕುತೂಹಲ, ತಿರುವುಗಳನ್ನಿಟ್ಟು ನಿರ್ದೇಶಕ ರಘು ಶಾಸ್ತ್ರಿ ಕಥೆ ಹೇಳುವ ಶೈಲಿ ಗಮನಾರ್ಹ. ಹಾಡುಗಳಿಗೆ ಫುಲ್ ಸ್ಟಾಪ್ ಇಟ್ಟು 'ರನ್ ಆಂಟನಿ'ಯ ಓಟದ ವೇಗದ ಬಗ್ಗೆ ನಿರ್ದೇಶಕರು ಕೊಂಚ ಗಮನ ಹರಿಸಿದ್ರೆ ಇನ್ನೂ ಚೆನ್ನಾಗಿರುತ್ತಿತ್ತೇನೋ.!


ಟೆಕ್ನಿಕಲಿ ಸಿನಿಮಾ ಹೇಗಿದೆ.?

ಮನೋಹರ್ ಜೋಶಿ ಕ್ಯಾಮರಾ ಕೈಚಳಕ 'ರನ್ ಆಂಟನಿ'ಯ ಬಹುದೊಡ್ಡ ಪ್ಲಸ್ ಪಾಯಿಂಟ್. ಹೊನಲು ಬೆಳಕಿನ ಆಟದಲ್ಲಿ ಜೋಶಿ ಎಲ್ಲರ ಕಣ್ಣು ಕುಕ್ಕುತ್ತಾರೆ. ಸಂಕಲನ ಸ್ವಲ್ಪ ಚುರುಕಾಗಿರಬೇಕಿತ್ತು.


ಹಾಡುಗಳು ಬಗ್ಗೆ....

ಮಣಿಕಾಂತ್ ಖದ್ರಿ ಸಂಗೀತ ನೀಡಿರುವ 'ಝನಕ್...ಝನಕ್' ಹಾಡು ಮತ್ತೆ ಮತ್ತೆ ಕೇಳ್ಬಹುದು. ಬ್ಯಾಕ್ ಗ್ರೌಂಡ್ ಸಂಗೀತ 'ರನ್ ಆಂಟನಿ' ಮೂಡ್ ಗೆ ತಕ್ಕ ಹಾಗಿದೆ. ಸೆಕೆಂಡ್ ಹಾಫ್ ನಲ್ಲಿ ಹಾಡುಗಳನ್ನ ಅನವಶ್ಯಕವಾಗಿ ತುರುಕಿರುವುದರಿಂದ 'ರನ್ ಆಂಟನಿ' ಓಟ ಸ್ಲೋ ಆಗಿದೆ.


ಫೈನಲ್ ಸ್ಟೇಟ್ ಮೆಂಟ್

ನಿಸ್ಸಂಶಯವಾಗಿ ಇಡೀ ಕುಟುಂಬ ಕೂತು ನೋಡಬಹುದಾದ ಸಿನಿಮಾ 'ರನ್ ಆಂಟನಿ'. ಹಳೇ ಲವ್ ಸ್ಟೋರಿಗಳನ್ನ ನೋಡಿ ನೋಡಿ ಬೋರ್ ಆಗಿದ್ದರೆ, ಖಂಡಿತ ಒಮ್ಮೆ 'ರನ್ ಆಂಟನಿ' ನೋಡಲು ಮೋಸ ಇಲ್ಲ.


ವಿಡಿಯೋ ನೋಡಿ....

'ರನ್ ಆಂಟನಿ' ಚಿತ್ರದ ಮೊದಲ ಶೋ ನೋಡಿದ ಪ್ರೇಕ್ಷಕರು ಏನಂದ್ರು ಅಂತ ತಿಳಿಯುವ ಕುತೂಹಲ ಇದ್ರೆ ಈ ವಿಡಿಯೋ ನೋಡಿ....


English summary
Kannada Actor Vinay Rajkumar starrer Kannada Movie 'Run Antony' has hit the screens today (July 8th). Complete review of the movie is here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada