»   » ಜಂಜೀರ್ : ಹಳೆ ಗಾಯಕ್ಕೆ ಹೊಸ ಮುಲಾಮು

ಜಂಜೀರ್ : ಹಳೆ ಗಾಯಕ್ಕೆ ಹೊಸ ಮುಲಾಮು

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಹಳೆ ಯಶಸ್ವಿ ಚಿತ್ರಗಳನ್ನು ಮತ್ತೊಮ್ಮೆ ರಿಮೇಕ್ ಮಾಡಿ ಹೊಸ ಪೀಳಿಗೆ ನಟರನ್ನು ಹಾಕಿಕೊಂಡು ಸಿನಿಮಾ ಮಾಡಿ ಗೆಲ್ಲುವುದು ಸುಲಭದ ಮಾತಲ್ಲ. ಈ ರೀತಿ ಗೆದ್ದ ಉದಾಹರಣೆಗಳು ಕಮ್ಮಿ. ಈಗ ರಾಮ್ ಚರಣ್ ತೇಜ ಅಭಿನಯದ 'ಜಂಜೀರ್' ಅರೆಬೆರೆ ಬೆಂದ ನಳಪಾಕವಾದರೂ ಕೆಲವರ್ಗಕ್ಕೆ ಮೃಷ್ಟಾನ್ನವಾಗಬಹುದು. ಚಿತ್ರ ದುಡ್ಡು ಮಾಡುತ್ತದೆ ನಿಜ ಆದರೆ, ಈ ರೀತಿ ರಿಮೇಕ್ ಬೇಕಿತ್ತಾ ಎಂಬ ಪ್ರಶ್ನೆ ಹುಟ್ಟುತ್ತದೆ.

ಇತ್ತೀಚೆಗೆ ಬಂದ ಅಜಯ್ ದೇವಗನ್ ಹಾಗೂ ತಮನ್ನ ಆಭಿನಯದ 'ಹಿಮ್ಮತ್ ವಾಲಾ' ಶೋಚನೀಯವಾಗಿ ನೆಲಕಚ್ಚಿದ ಉದಾಹರಣೆ ಕಣ್ಮುಂದೆ ಇರುವಾಗಲೇ ಬಿಗ್ ಬಿ ಅಮಿತಾಬ್ ಗೆ ಭಾರಿ ಹೆಸರು ತಂದುಕೊಟ್ಟ, ಪ್ರಾಣ್ ಅವರ ಮರೆಯಲಾರದ ಚಿತ್ರಗಳಲ್ಲಿ ಒಂದೆನಿಸಿರುವ 'ಜಂಜೀರ್' ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬಂದಿದೆ. ನೋ ಡೌಟ್ ಹೊಸ ರಾಮ್ ಹಾಗೂ ಪ್ರಿಯಾಂಕಾ ಅವರ ಈ ಚಿತ್ರ ಹೊಸ ಪೀಳಿಗೆಯನ್ನು ಸೆಳೆಯುತ್ತದೆ. ಆದರೆ, ಹಳೆ ಚಿತ್ರದ ಗುಂಗಿನಲ್ಲಿರುವವರಿಗೆ ಇಷ್ಟವಾಗುವುದು ಕಷ್ಟ.

Rating:
2.5/5

ರಾಮ್ ಗೋಪಾಲ್ ವರ್ಮಾ ಅವರು ಶೋಲೆ ಮಾಡಿ ಪ್ರೇಕ್ಷಕರನ್ನು ದಿಕ್ಕು ತಪ್ಪಿಸಿದಂತೆ, ಕರಣ್ ಮಲ್ಹೋತ್ರಾ 'ಅಗ್ನಿ ಪಥ್' ಮಾಡಿ ಪ್ರೇಕ್ಷಕರನ್ನು ನಿದ್ದೆ ಮಾಡುವಂತೆ ಮಾಡಿದಂತೆ ಜಂಜೀರ್ ಕೂಡಾ ಅಲ್ಲಲ್ಲಿ ಇಷ್ಟವಾಗುವ ಚಿತ್ರವಾಗಿ ಮಾತ್ರ ಮೂಡಿ ಬಂದಿದೆ. ಈಗಾಗಲೇ ಘಟಾನು ಘಟಿ ವಿಮರ್ಶಕರಿಂದ ಈ ಹೊಸ ಜಂಜೀರ್ ಗೆ ಮಿಶ್ರ ಪ್ರತಿಕ್ರಿಯೆ ಬಂದಿದೆ. ವಿಮರ್ಶೆಗಳ ಸಂಗ್ರಹಿಸಿ ನಂತರ ನೀಡಲಾಗುತ್ತದೆ. ಒನ್ ಇಂಡಿಯಾ ವಿಮರ್ಶೆ ಮುಂದುವರೆಯಲಿದೆ..

ಹಳೆ ಚಿತ್ರ ಮರೆತು ನೋಡಿ

ಜಂಜೀರ್ ಅಮಿತಾಬ್ ಚಿತ್ರ ಎನ್ನುವುದಕ್ಕಿಂತ ಪ್ರಾಣ್ ಅವರ ಚಿತ್ರ ಎಂದರೆ ತಪ್ಪಾಗಲಾರದು.

ಇಲ್ಲಿ ಪ್ರಾಣ್ ಪಾತ್ರಧಾರಿ ಸಂಜಯ್ ದತ್ ನಟನೆ ನೆನಪಲ್ಲಿ ಉಳಿಯುವುದೇ ಕಮ್ಮಿ. ಬಿಗ್ ಬಿ ಅವರ ವಿಜಯ್ ಖನ್ನ ರೋಲ್ ಯಾರೂ ಮಾಡಲು ಸಾಧ್ಯವಿಲ್ಲ ಎಂಬುದು ತಲೆಯಲ್ಲಿ ಕೂತರೇ ಹೊಸ ಚಿತ್ರ ಆರಂಭದಲ್ಲೇ ಹುಳಿ ಹುಳಿಯಾಗುತ್ತದೆ. ಅದು ಬಿಟ್ಟು ನೋಡಿದರೆ ಸಿಹಿ ಸಿಹಿ ಹುಳಿ ಹುಳಿ ಉಪ್ಪಿನಕಾಯಿಯಾಗಬಲ್ಲದು ಆದರೆ, ರಸದೌತಣ ಎಲ್ಲರಿಗೂ ಸಿಗುವುದು ಕಷ್ಟ.

ರಾಮ್ ಚರಣ್ ತೇಜ ಎಲ್ಲಾ ದೃಶ್ಯಗಳಲ್ಲಿ ಇಷ್ಟವಾಗುವುದು ಕಷ್ಟ. ಎನ್ನಾರೈ ಮಾಲ ಪಾತ್ರಧಾರಿ ಪ್ರಿಯಾಂಕಾಗೆ ಹೆಚ್ಚಿನ ಕೆಲಸವಿಲ್ಲ. ಹಾಡುಗಳನ್ನು ಹಳೆಚಿತ್ರದ ಜತೆ ದಯವಿಟ್ಟು ಹೋಲಿಸಬೇಡಿ

ನಟನೆ ಓಕೆ, ಅದರೆ

ರಾಮ್ ಚರಣ್ ತೇಜ ಕುಣಿತ, ನಟನೆ ಓಕೆ, ಪ್ರಿಯಾಂಕಾ ಛೋಪ್ರಾ ಜತೆ ಜೋಡಿ ಕೂಡಾ ಸೂಪರ್. ಖಳನಾಗಿ ಪ್ರಕಾಶ್ ರೈ ಹಾಗೂ ಜೋಡಿ ಮಾಹಿ ಗಿಲ್ ಸಹಿಸಿಕೊಳ್ಳಬಹುದು. ಶೇರ್ ಖಾನ್ ಆಗಿ ಸಂಜಯ್ ದತ್ ಆಯ್ಕೆ ಬಗ್ಗೆಯೇ ಪ್ರಶ್ನೆಗಳಿತ್ತು. ತಕ್ಕಮಟ್ಟಿನ ನಟನೆ ಹೊರ ಹೊಮ್ಮಿದ್ದರೂ ಅಸಲಿ ಶೇರ್ ಖಾನ್ ಖದರ್ ಮಾಯವಾಗಿದೆ.

ಲಾಖಿಯಾ ಸೋತಿದ್ದೆಲ್ಲಿ

ಪ್ರಕಾಶ್ ಮೆಹ್ರಾ ಅವರಿಗಿಂತ ಡಿಫರೆಂಟ್ ಆಗಿ ಚಿತ್ರ ತೆರೆಗೆ ತರಬಲ್ಲೆ ಎನ್ನುವ ನಿರ್ದೇಶಕ ಲಾಖಿಯಾ ಅವರ ಅತಿಯಾದ ಆತ್ಮವಿಶ್ವಾಸ ಕೈಕೊಟ್ಟಿದೆ. ರಘುಪತಿ ರಾಘವ ಹಿನ್ನೆಲೆ ದನಿ, ಎನ್ನಾರೈ ಗರ್ಲ್ ಆಗಿ ಪ್ರಿಯಾಂಕಾ ಪಾತ್ರ ಬೆಳವಣಿಗೆ, ಜರ್ನಲಿಸ್ಟ್ ಜೆ ಡೇ ಪಾತ್ರ ಸೃಷ್ಟಿ ಹಾಗೂ ಅದರ ಪೋಷಣೆ ಎಲ್ಲವೂ ಪೇಲವ. ರಿಮೇಕ್ ಕಿಂಗ್ ರೋಹಿತ್ ಶೆಟ್ಟಿ ಆಗಲು ಹೊರಟ್ಟಂತೆ ಹಲವು ಕಡೆ ತೋರುತ್ತದೆ.

ಏಕೆ ನೋಡಬೇಕು

ಈ ಚಿತ್ರ ಏಕೆ ನೋಡಬಾರದು ಎಂಬುದಕ್ಕೆ ಹಲವು ಕಾರಣ ನೀಡಬಹುದಾದರೂ. ಏಕೆ ನೋಡಬೇಕು ಎಂದರೆ, ರಾಮ್ ಚರಣ್ ತೇಜ, ಪ್ರಕಾಶ್ ರಾಜ್, ಸಂಜಯ್ ದತ್ ಅಥವಾ ಪ್ರಿಯಾಂಕಾ ಛೋಪ್ರಾ ಅಭಿಮಾನಿಯಾಗಿದ್ದರೆ ಒಮ್ಮೆ ನೋಡಿ ಬನ್ನಿ. ಇಲ್ಲದಿದ್ದರೆ ಡಿವಿಡಿ ಬಂದ ಮೇಲೆ ಮನೆಯಲ್ಲಿ ಆರಾಮಾಗಿ ಕೂತು ಬ್ರೇಕ್ ಮೇಲೆ ಬ್ರೇಕ್ ತೆಗೆದುಕೊಂಡು ನೋಡಿಕೊಳ್ಳಿ.. ಈ ಚಿತ್ರ ಪೈಸಾ ವಸೂಲ್ ಅಂತೂ ಖಂಡಿತ ಅಲ್ಲ. ಆದರೆ, ಅಲ್ಲಲ್ಲಿ ಇಷ್ಟವಾಗುವುದರಿಂದ ಒಮ್ಮೆ ನೋಡಲು ಅಡ್ಡಿಯಿಲ್ಲ.

English summary
Let's not get carried away. Every time a remake comes along, we get gooey-eyed and nostalgic about the original. The Zanjeer remake doen't gets it right. But, It is a masala movie so turn off your brain and enjoy
Please Wait while comments are loading...