For Quick Alerts
  ALLOW NOTIFICATIONS  
  For Daily Alerts

  ಕನ್ನಡಕ್ಕೆ ತಮಿಳರ 'ಚಾಲೆಂಜ್': ಹೇಗೋ, ಏನೋ!?

  By Srinath
  |

  ತಮಿಳಿನಲ್ಲಿ ಮೂರು ಚಿತ್ರಗಳನ್ನು ನಿರ್ದೇಶಿಸಿದ ಅನುಭವವಿರುವ ಗಣೇಶ್ ಕಾಮರಾಜ್ ಮತ್ತು ಇದೇ ಮೊದಲ ಬಾರಿಗೆ ಚಿತ್ರ ನಿರ್ಮಿಸುತ್ತಿರುವ ಶ್ರೀಧರನ್ ಸೇರಿ ಕನ್ನಡದಲ್ಲಿ ಚಿತ್ರವೊಂದನ್ನು ನಿರ್ಮಿಸಲಿದ್ದಾರೆ. ತಮಿಳರು ಸೇರಿಕೊಂಡು ನಿರ್ಮಿಸುತ್ತಿರುವ ಚಿತ್ರದ ಹೆಸರು 'ಚಾಲೆಂಜ್'.

  ಚಿತ್ರದ ಮುಖ್ಯ ಭೂಮಿಕೆಯಲ್ಲಿ ದಿಲೀಪ್ ರಾಜ್, ಗನ್ ಖ್ಯಾತಿಯ ಹರೀಶ್ ರಾಜ್, ಅಚ್ಯುತ್ ಕುಮಾರ್ ಮುಂತಾದವರಿದ್ದಾರೆ. ಚಿತ್ರಕ್ಕೆ ನಾಯಕಿಯಾಗಿ ಮುಂಬೈನ ಆಮದು ಬೆಡಗಿ ಸಂಜನಾ ಸಿಂಗ್. ತಮಿಳಿನ ಕಲಾಭವನ ಮಣಿಯನ್ನು ಕನ್ನಡಕ್ಕೆ ಕರೆ ತರಲಾಗುತ್ತಿದೆ.

  ಕನ್ನಡ ಗೊತ್ತಿಲ್ಲದೇ ಚಿತ್ರ ನಿರ್ದೆಶಿಸುವುದೇ ನನ್ನ ಮೊದಲ ಚಾಲೆಂಜ್ ಎನ್ನುವ ಗಣೇಶ್ ಕಾಮರಾಜ್, ಚಿತ್ರೀಕರಣ ಮುಗಿಯುವ ಹೊತ್ತಿಗೆ ಕನ್ನಡ ಚೆನ್ನಾಗಿ ಕಲಿಯುವ ಆಶಾಭಾವನೆ ಹೊಂದಿದ್ದಾರೆ. ಪಾಳು ಬಿದ್ದ ಕಾರ್ಖಾನೆಯೊಂದರಲ್ಲಿ ಆರು ಮಂದಿ ಮೂರ್ಚೆಯಿಂದ ಎಚ್ಚರಗೊಳ್ಳುತ್ತಾರೆ. ಫ್ಯಾಕ್ಟರಿಗೆ ಯಾರು ಕರೆ ತಂದರು... ಶತ್ರುಗಳಾ ಸ್ನೇಹಿತರಾ... ಅವರಿಗೆ ಹಳೆ ನೆನಪು ಬರುತ್ತಾ ಎನ್ನುವುದೇ ಚಿತ್ರದ ಕಥೆ.

  ಚಿತ್ರದಲ್ಲಿ ಎರಡು ಹಾಡುಗಳಿದ್ದು ಅದರಲ್ಲಿ ಒಂದು ಐಟಂ ಸಾಂಗ್. ತಮಿಳಿನ ಖ್ಯಾತ ನಿರ್ದೇಶಕ ಮುರುಗದಾಸ್ ಜೊತೆ ಸಹಾಯಕರಾಗಿ ಕೆಲಸ ಮಾಡಿರುವ ಮತ್ತು ಸ್ವಯಂ ಮೂರು ಚಿತ್ರ ನಿರ್ದೇಶಿಸಿದ ಅನುಭವಿರುವ ಗಣೇಶ್, 30 -35 ದಿನದೊಳಗೆ ಚಿತ್ರೀಕರಣ ಮುಕ್ತಾಯ ಗೊಳ್ಳಬೇಕೆಂದು ಪ್ಲಾನ್ ಮಾಡಿದ್ದಾರೆ. ಬೆಂಗಳೂರು ಸುತ್ತ ಮುತ್ತ ಚಿತ್ರೀಕರಣ ನಡೆಯಲಿದೆ. ನಮ್ಮ ಪ್ರಯತ್ನಕ್ಕೆ ಕನ್ನಡಿಗರು ಪ್ರೋತ್ಸಾಹ ನೀಡುತ್ತಾರೆ ಎನ್ನುವ ಆಶಾಭಾವನೆ ಗಣೇಶ್ ಹೊಂದಿದ್ದಾರೆ.

  English summary
  Kollywood director Ganesh Kamraj along with producer Sridharan is all set to make a film in Kannada, challenge. Harish Raj and Sanjana Singh will be in lead pair.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X