For Quick Alerts
  ALLOW NOTIFICATIONS  
  For Daily Alerts

  ನಟ ಸೂರಿ ಸಂಬಂಧಿಕರ ಮದುವೆಯಲ್ಲಿ 80 ಗ್ರಾಂ ಚಿಕ್ಕ ಕಳ್ಳತನ

  |

  ತಮಿಳು ಚಿತ್ರರಂಗದ ಖ್ಯಾತ ಹಾಸ್ಯ ನಟ ಸೂರಿ ಅವರ ಸಂಬಂಧಿಕರ ಮದುವೆಯಲ್ಲಿ ಭಾರಿ ಪ್ರಮಾಣದ ಚಿನ್ನ ಕಳ್ಳತನ ಆಗಿದೆ ಎಂಬ ಸುದ್ದಿ ವರದಿಯಾಗಿದೆ.

  ಕಳೆದ ಎರಡು ದಶಕದಿಂದ ತಮಿಳು ಚಿತ್ರರಂಗದಲ್ಲಿ ತೊಡಗಿಕೊಂಡಿರುವ ಸೂರಿ, ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ವಿಶೇಷವಾಗಿ ಶಿವಕಾರ್ತಿಕೇಯನ್ ಮತ್ತು ಸೂರಿ ಕಾಂಬಿನೇಷನ್ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ.

  ವಿಜಯ್ ಜಾತಿ ಬಗ್ಗೆ ತಂದೆ ಚಂದ್ರಶೇಖರ್ ಹೇಳಿದ್ದು ಹೀಗೆವಿಜಯ್ ಜಾತಿ ಬಗ್ಗೆ ತಂದೆ ಚಂದ್ರಶೇಖರ್ ಹೇಳಿದ್ದು ಹೀಗೆ

  ಇತ್ತೀಚಿಗಷ್ಟೆ ನಟ ಸೂರಿ ಅವರ ಹತ್ತಿರದ ಸಂಬಂಧಿಕರೊಬ್ಬರ ಮದುವೆ ನಡೆದಿದೆ. ಈ ವಿವಾಹ ಕಾರ್ಯಕ್ರಮಕ್ಕೆ ತಮಿಳು ಇಂಡಸ್ಟ್ರಿಯ ಅನೇಕ ಗಣ್ಯರು ಭಾಗವಹಿಸಿದ್ದರು. ಮಧುರೈನಲ್ಲಿ ನಡೆದ ಈ ಮದುವೆ ಕಾರ್ಯಕ್ರಮದಲ್ಲಿ ಕಳ್ಳರು ತಮ್ಮ ಕೈ ಚಳಕ ತೋರಿಸಿ 80 ಗ್ರಾಂ ಚಿನ್ನ ಕದ್ದಿದ್ದಾರೆ ಎಂದು ತಿಳಿದು ಬಂದಿದೆ.

  ಸೆಪ್ಟೆಂಬರ್ 9 ರಂದು ಮಧುರೈನಲ್ಲಿ ಸೂರಿ ಸಂಬಂಧಿಕರ ಮದುವೆ ನಡೆದಿದೆ. 80 ಗ್ರಾಂ ಚಿನ್ನ ಕಳ್ಳತನ ಆಗಿರುವ ಬಗ್ಗೆ ತಿಳಿದ ಬಳಿಕ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ.

  ಈ ಮದುವೆಯಲ್ಲಿ ತಮಿಳಿನ ಖ್ಯಾತ ನಟರಾದ ಶಿವಕಾರ್ತಿಕೇಯನ್, ವಿಜಯ್ ಸೇತುಪತಿ, ಕರುಣಾಸ್, ಸೀಮಾನ್ ಸೇರಿದಂತೆ ಅಗ್ರಗಣ್ಯ ಕಲಾವಿದರು ಭಾಗವಹಿಸಿದ್ದರು ಎಂದು ತಿಳಿದು ಬಂದಿದೆ. ದೂರು ದಾಖಲಿಸಿರುವ ಪೊಲೀಸರು ತನಿಖೆ ಮಾಡುತ್ತಿದ್ದಾರೆ.

  ಇನ್ನು ಸೂರಿ ಅವರ ಬಗ್ಗೆ ಹೇಳುವುದಾದರೇ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಅಣ್ಣಾತ್ತೆ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ದೀಪಾವಳಿ ಹಬ್ಬದ ಪ್ರಯುಕ್ತ ನವೆಂಬರ್ 4 ರಂದು ಬಿಡುಗಡೆಯಾಗಲಿದೆ. ಲೈಕಾ ಪ್ರೊಡಕ್ಷನ್‌ನಲ್ಲಿ ನಿರ್ಮಾಣವಾಗುತ್ತಿರುವ, ಶಿವಕಾರ್ತಿಕೇಯನ್ ನಟಿಸಿರುವ 'ಡಾನ್' ಚಿತ್ರದಲ್ಲಿಯೂ ಅಭಿನಯಿಸುತ್ತಿದ್ದಾರೆ.

  English summary
  80 grams of Gold was stolen at tamil actor Soori's niece wedding. The actor's family has lodged a complaint.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X