Just In
Don't Miss!
- Sports
ಐಪಿಎಲ್ 2021: ಔಟಾದ ಸಿಟ್ಟಿಗೆ ವಿರಾಟ್ ಕೊಹ್ಲಿ ಮಾಡಿದ್ದೇನು ನೋಡಿ! ವಿಡಿಯೋ
- News
ಹೆಚ್ಚಿನ ದರದಲ್ಲಿ ರಸಗೊಬ್ಬರ ಮಾರಾಟ ಮಾಡಿದ್ರೆ ಕಠಿಣ ಕ್ರಮ
- Automobiles
ಆಕರ್ಷಕ ಬೆಲೆಯಲ್ಲಿ ದೇಶದ ಮೊದಲ ಹೈಬ್ರಿಡ್ ಟ್ರ್ಯಾಕ್ಟರ್ ಬಿಡುಗಡೆ
- Finance
ಇನ್ಫೋಸಿಸ್ 4ನೇ ತ್ರೈಮಾಸಿಕ ವರದಿಯಂತೆ ನಿವ್ವಳ ಲಾಭ ಕುಸಿತ
- Education
SSLC Exams 2021: ಸಿಬಿಎಸ್ಇ ಪರೀಕ್ಷೆ ರದ್ದು ಬೆನ್ನಲ್ಲೇ ಎಸ್ಎಸ್ಎಲ್ಸಿ ಪರೀಕ್ಷೆ ಊಹಾಪೋಹ: ಸುರೇಶ್ ಕುಮಾರ್ ಸ್ಪಷ್ಟನ
- Lifestyle
ನಿಮ್ಮ ಮಗು 10ವರ್ಷ ತಲುಪುವಾಗ ಕಲಿಸಬೇಕಾದ ಜೀವನ ಕೌಶಲ್ಯಗಳಿವು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಅತೀ ಹೆಚ್ಚು ಚಿನ್ನದ ಪದಕ ಗೆದ್ದ ಸ್ಟಾರ್ ನಟ ಅಜಿತ್
ತಮಿಳು ಸೂಪರ್ ಸ್ಟಾರ್ ತಲಾ ಅಜಿತ್ ಬಹುಮುಖ ಪ್ರತಿಭೆ. ಸಿನಿಮಾ ಮಾತ್ರವಲ್ಲದೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಅಜಿತ್ ಗುತಿಸಿಕೊಂಡಿದ್ದಾರೆ. ಕಾರ್ ರೇಸ್, ಬೈಕ್ ರೇಸ್, ಸೈಕ್ಲಿಂಗ್ ಮತ್ತು ಸ್ಪೋರ್ಟ್ಸ್ ಎಂದರೇ ಅಜಿತ್ ಗೆ ತುಂಬಾ ಇಷ್ಟ.
ಇತ್ತೀಚಿಗೆ ಚೆನ್ನೈನಲ್ಲಿ ನಡೆದ ತಮಿಳುನಾಡು ರಾಜ್ಯ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ನಟ ಅಜಿತ್ ಹಲವು ಚಿನ್ನದ ಪದಕಗಳನ್ನು ಗೆದ್ದು ಬೀಗಿದ್ದಾರೆ. ಹೌದು, ಇತ್ತೀಚಿಗೆ ನಡೆದ 46ನೇ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಅಜಿತ್ ಬರೋಬ್ಬರಿ 6 ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಮುಂದೆ ಓದಿ..
ಬೈಕ್ ರೈಡ್ ಬಳಿಕ ಸೈಕಲ್ ಏರಿ ಹೊರಟ ಅಜಿತ್: ಸ್ಟಾರ್ ನಟನ ಸೈಕಲ್ ಪ್ರೀತಿ ಬಗ್ಗೆ ಇಂಟರೆಸ್ಟಿಂಗ್ ಮಾಹಿತಿ

ಅಭಿಮಾನಿಗಳಿಂದ ಅಭಿನಂದನೆಯ ಮಹಾಪೂರ
ಸೆಲೆಬ್ರಿಟಿಗಳು ಸಾಮಾನ್ಯವಾಗಿ ಗೆಸ್ಟ್ ಆಗಿ ಕಾರ್ಯಕ್ರಮಗಳಿಗೆ ಎಂಟ್ರಿ ಕೊಡುತ್ತಾರೆ. ಆದರೆ ಅಜಿತ್ ತಾವೆ ಸ್ಪರ್ಧಿಸಿ ಗೆದ್ದಿರುವುದು ಅಭಿಮಾನಿಗಳಿಗೆ ಸಂತಸ ತಂದಿದ್ದು ಸಾಮಾಜಿಕ ಜಾಲತಾಣದಲ್ಲಿ ಅಭಿನಂದನೆ ತಿಳಿಸುತ್ತಿದ್ದಾರೆ. ಇನ್ನು ಅಜಿತ್ ಮೆಡಲ್ ಪಡೆಯುತ್ತಿರುವ ಫೋಟೋಗಳನ್ನು ಅಭಿಮಾನಿಗಳು ಶೇರ್ ಮಾಡುತ್ತಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ.

ಸೈಕಲ್ ಸವಾರಿಯ ಫೋಟೋಗಳು ವೈರಲ್ ಆಗಿತ್ತು
ಇತ್ತೀಚಿಗಷ್ಟೆ ನಟ ಅಜಿತ್ ಸೈಕ್ಲಿಂಗ್ ಮಾಡುತ್ತಿರುವ ಫೋಟೋಗಳು ಹರಿದಾಡುತ್ತಿತ್ತು. ಬೈಕ್ ರೇಸ್ ಮುಗಿಯುತ್ತಿದ್ದಂತೆ ಸೈಕಲ್ ಸವಾರಿ ಹೊರಟಿದ್ದ ಅಜಿತ್ ಹೈದರಾಬಾದ್ ನ ರಸ್ತೆಯಲ್ಲಿ ಅಭಿಮಾನಿಗಳ ಕ್ಯಾಮರಾ ಸೆರೆಯಾಗಿದ್ದರು. ಅಜಿತ್ ಇದುವರೆಗೂ ಸುಮಾರು 30 ಸಾವಿರಕ್ಕೂ ಅಧಿಕ ಕಿಮೀ. ಸೈಕಲ್ ಸವಾರಿ ಮಾಡಿದ್ದಾರೆ.
ಅಜಿತ್ ಅಭಿಮಾನಿಗಳಿಗೆ ಸಿಹಿ ಸುದ್ದಿ: ಮತ್ತೆ ಚಿತ್ರಮಂದಿರಕ್ಕೆ ಬರ್ತಿದೆ ಸೂಪರ್ ಹಿಟ್ 'ಬಿಲ್ಲ'

2019ರಲ್ಲಿ ಸ್ಪರ್ಧಿಸಿದ್ದರು
ಇತ್ತೀಚಿಗೆ ನಟ ಅಜಿತ್ ರೈಫಲ್ ಶೂಟಿಂಗ್ ಅಭ್ಯಾಸ ಮಾಡುತ್ತಿದ್ದರು. ರೈಫಲ್ ಕ್ಲಬ್ ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು. ಅಂದಹಾಗೆ ಅಜಿತ್ ಸ್ಪರ್ಧಿಸುತ್ತಿರುವುದು ಇದೇ ಮೊದಲೇನಲ್ಲ. 2019ರಲ್ಲೂ ಸ್ಪರ್ಧಿಸಿದ್ದರು.

ವಲಿಮೈ ಸಿನಿಮಾದಲ್ಲಿ ನಟನೆ
ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಅಜಿತ್ ಸದ್ಯ ವಲಿಮೈ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಎರಡು ವರ್ಷಗಳ ಹಿಂದೆಯೆ ಈ ಸಿನಿಮಾ ಅನೌನ್ಸ್ ಮಾಡಲಾಗಿತ್ತು. ಇನ್ನು ಚಿತ್ರೀಕರಣ ಮುಕ್ತಾಯವಾಗಿಲ್ಲ. ಬಹುತೇಕ ಚಿತ್ರೀಕರಣ ಮುಗಿಸಿದ್ದು, ಸದ್ಯದಲ್ಲೇ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪ್ರಾರಂಭವಾಗಲಿದೆ.