For Quick Alerts
  ALLOW NOTIFICATIONS  
  For Daily Alerts

  'ಫ್ರೆಂಡ್ ಶಿಪ್'ಗಾಗಿ ಸ್ಪಿನ್ ಮಾಂತ್ರಿಕ ಹರ್ಭಜನ್ ಜೊತೆ ಸೇರಿದ ಅರ್ಜುನ್ ಸರ್ಜಾ

  |
  Harbhajan singh Join Arjun Sarja 'Friendship' | Filmibeat Kannada

  ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟ ಕನ್ನಡಿಗ ಅರ್ಜುನ್ ಸರ್ಜಾ ತಮಿಳು, ತೆಲುಗು ಚಿತ್ರರಂಗದ ಜೊತೆಗೆ ಕನ್ನಡದಲ್ಲೂ ಮಿಂಚುತ್ತಿದ್ದಾರೆ. ಕಳೆದ ವರ್ಷ ರಿಲೀಸ್ ಆದ ಕುರುಕ್ಷೇತ್ರ ಸಿನಿಮಾ ಮೂಲಕ ಸರ್ಜಾ ಕನ್ನಡ ಅಭಿಮಾನಿಗಳ ಮುಂದೆ ಬಂದಿದ್ದು, ಆ ನಂತರ ಮತ್ತೆ ಕನ್ನಡಿಗರ ಮುಂದೆ ಬಂದಿಲ್ಲ.

  ತಮಿಳು ಮತ್ತು ತೆಲುಗು ಚಿತ್ರಗಳ ಜೊತೆಗೆ ಈಗ 'ಫ್ರೆಂಡ್ಶಿಪ್'ಗಾಗಿ ಟೀಂ ಇಂಡಿಯಾದ ಮಾಜಿ ಆಟಗಾರ ಮತ್ತು ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್ ಜೊತೆ ಸೇರಿಕೊಂಡಿದ್ದಾರೆ. ಅಂದ್ಹಾಗೆ 'ಫ್ರೆಂಡ್ಶಿಪ್' ಹರ್ಭಜನ್ ಸಿಂಗ್ ಅಭಿನಯದ ಮೊದಲ ತಮಿಳು ಸಿನಿಮಾ. ಈಗಾಗಲೆ ಚಿತ್ರದ ಫಸ್ಟ್ ಲುಕ್ ಮೂಲಕ ಅಭಿಮಾನಿಗಳ ಕುತೂಹಲ ಹೆಚ್ಚಿಸಿದ್ದ ಸಿನಿಮಾಗೆ ಅರ್ಜುನ್ ಸರ್ಜಾ ಎಂಟ್ರಿ ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.

  ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಟೀಂ ಇಂಡಿಯಾದ ಸ್ಪಿನ್ ಮಾಂತ್ರಿಕತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಟೀಂ ಇಂಡಿಯಾದ ಸ್ಪಿನ್ ಮಾಂತ್ರಿಕ

  ಚಿತ್ರದಲ್ಲಿ ಅರ್ಜುನ್ ಸರ್ಜಾ ಗೆಟಪ್ ಹೇಗರಿಲಿದೆ, ಯಾವ ಪಾತ್ರ ಮಾಡಲಿದ್ದಾರೆ ಎನ್ನುವುದು ಇನ್ನು ರಿವೀಲ್ ಆಗಿಲ್ಲ. ಕ್ರಿಕಟ್ ಜಗತ್ತಿನಲ್ಲಿ ದೊಡ್ಡ ಸಾಧನೆ ಮಾಡಿರುವ ಹರ್ಭಜನ್ ಸಿಂಗ್ ಮೊದಲ ಸಿನಿಮಾ ಹೇಗೆ ಮೂಡಿ ಬರಲಿದೆ ಎನ್ನುವುದು ಅಭಿಮಾನಿಗಳ ಕುತೂಹಲ.

  ಕ್ರಿಕೆಟ್ ಮೈದಾನದಲ್ಲಿ ಅಬ್ಬರಿಸುತ್ತ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಿದ್ದ ಹರ್ಭಜನ್ ಸಿಂಗ್ ಸಿನಿಮಾರಂಗದಲ್ಲೂ ಮಿಂಚುತ್ತಾರಾ ಎನ್ನುವುದನ್ನು ಕಾದುನೋಡಬೇಕು. ಅಂದ್ಹಾಗೆ 'ಫ್ರೆಂಡ್ಶಿಪ್'ಗೆ ಇಬ್ಬರು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಜಾನ್ ಪೌಲ್ ಹಾಗೂ ಶ್ಯಾಮ್ ಸೂರ್ಯ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬರುತ್ತಿದೆ.

  ಈಗಾಗಲೆ ರಿಲೀಸ್ ಆಗಿರುವ ಪೋಸ್ಟರ್ ನಲ್ಲಿ ಇಬ್ಬರು ವ್ಯಕ್ತಿಗಳ ಕೈಗಳಿಗೆ ಒಂದೇ ಬೇಡಿ ಹಾಕಲಾಗಿದೆ. ಪೋಸ್ಟರ್ ನ ಕೆಳಗೆ ಇದೆ ಮೊದಲ ಬಾರಿಗೆ ಕ್ರಿಕೆಟ್ ಲೆಜೆಂಡ್ ಒಬ್ಬರು ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಬರೆಯಲಾಗಿದೆ. ಸದ್ಯ ಅರ್ಜುನ್ ಸರ್ಜಾ ಎಂಟ್ರಿ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

  English summary
  Kannada Actor Arjun Sarja team up with Harbhajan singh for friendship movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X