ಹುಸಿ ಬಾಂಬ್ ಕರೆ ಮಾಡಿದ ನಟನ ಬಂಧಿಸಿದ ಪೊಲೀಸರು
ಹುಸಿ ಬಾಂಬ್ ಕರೆ ಮಾಡಿದ ಚೆನ್ನೈ ಮೂಲದ ಕೆನಡಿ ಜಾನ್ ಗಂಗಾಧರ್ ಹೆಸರಿನ ನಟನೋರ್ವನನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ.
Recommended Video
ವೆಬ್ ಸರಣಿ ಹಾಗೂ ಕೆಲವು ಕಿರು ಚಿತ್ರಗಳಲ್ಲಿ ನಟಿಸಿದ್ದ ನಟ ತೇನಾಂಪೇಟೆಯಲ್ಲಿನ ಐಶಾರಾಮಿ ಹೋಟೆಲ್ ಒಂದಕ್ಕೆ ನಿನ್ನೆ (ಆಗಸ್ಟ್ 26) ಹುಸಿ ಬಾಂಬ್ ಕರೆ ಮಾಡಿದ್ದ.
ಜಾನ್ ಗಂಗಾಧರ್ ಐಶಾರಾಮಿ ಹೋಟೆಲ್‌ನಲ್ಲಿ ಮಹೇಶ್ ಎಂಬುವರಿಗಾಗಿ ಕಾಯುತ್ತಿದ್ದರಂತೆ. ಅದೇ ಹೋಟೆಲ್‌ನಲ್ಲಿ ವೆಬ್ ಸರಣಿಯ ಚಿತ್ರೀಕರಣ ನಡೆಯುತ್ತಿದ್ದು, ಹೋಟೆಲ್‌ನ ಮ್ಯಾನೇಜರ್ ಮಹೇಶ್ ಅವರೇ ವೆಬ್ ಸರಣಿಯ ನಿರ್ಮಾಪಕ ಸಹ ಆಗಿದ್ದಾರೆ.

ಬಹು ಸಮಯ ಜಾನ್ ಗಂಗಾಧರ್ ಮಹೇಶ್ ಗಾಗಿ ಕಾದಿದ್ದಾರೆ. ಆದರೆ ಕೊನೆಗೆ ಮ್ಯಾನೇಜರ್ ಬಂದು ಚಿತ್ರೀಕರಣವನ್ನು ಬಂದ್ ಮಾಡಿದ್ದೇವೆ, ತಾವು ಹೊರಡಬಹುದು ಎಂದು ಜಾನ್ ಗೆ ತಿಳಿಸಿದ್ದಾರೆ.
ಇದರಿಂದ ಬೇಸರಗೊಂಡಿದ್ದ ಜಾನ್ ಗಂಗಾಧರ್ ಹೊರಗೆ ಬಂದು, ಹೋಟೆಲ್‌ನಲ್ಲಿ ಬಾಂಬ್ ಇರುವುದಾಗಿ ಕರೆ ಮಾಡಿದ್ದಾನೆ. ಪೊಲೀಸ್ ಕಂಟ್ರೋಲ್ ರೂಂ ಗೆ ಸಹ ಆತನೇ ಕರೆ ಮಾಡಿ ಹೋಟೆಲ್‌ನಲ್ಲಿ ಬಾಂಬ್ ಇರುವುದಾಗಿ ಹೇಳಿದ್ದಾನೆ.
ಕೂಡಲೇ ಶ್ವಾನದಳದೊಂದಿಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸುಮಾರು ಒಂದು ಗಂಟೆಗಳ ಕಾಲ ಬಾಂಬ್‌ಗಾಗಿ ಹುಡುಕಾಟ ನಡೆಸಿದ್ದಾರೆ. ನಂತರ ಹುಸಿ ಬಾಂಬ್ ಕರೆ ಮಾಡಿದವನಿಗಾಗಿ ಹುಡುಕಾಟ ನಡೆಸಿದ್ದಾರೆ.
ಜಾನ್ ಗಂಗಾಧರ್ ಅನ್ನು ಬಂಧಿಸಿದ ಪೊಲೀಸರ ಬಳಿ, ತಾನೇ ಹುಸಿ ಬಾಂಬ್ ಕರೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.


Click it and Unblock the Notifications











