Don't Miss!
- News
ಕೊರೊನಾ ಸಂಕಷ್ಟ; ಜನರಿಗೆ ನೆರವಾಗುವಂತೆ ಸ್ವಪಕ್ಷದವರಿಗೆ ಸಿದ್ದರಾಮಯ್ಯ ಮನವಿ
- Sports
ಕೊರೊನಾ ವೈರಸ್ನಿಂದ ಚೇತರಿಸಿದ ಅಕ್ಷರ್ ಪಟೇಲ್ ಡೆಲ್ಲಿ ಸ್ಕ್ವಾಡ್ಗೆ ಸೇರ್ಪೆಡೆ
- Finance
ಟಾಟಾದ ವಾಹನಗಳಿಗೆ ಬಂಪರ್ ರಿಯಾಯಿತಿ: ಪ್ರತಿ ತಿಂಗಳು ಕಡಿಮೆ ಇಎಂಐ
- Lifestyle
Hanuman Jayanti puja vidhi :ಪೂಜಾವಿಧಾನ ಹಾಗೂ ಹನುಮನನ್ನು ಒಲಿಸಿಕೊಳ್ಳುವ ಮಾರ್ಗಗಳು ಇಲ್ಲಿದೆ
- Automobiles
ಹೊಸ ಫೀಚರ್ಸ್ ಒಳಗೊಂಡ ಸೊನೆಟ್ ಹೆಚ್ಟಿಎಕ್ಸ್ ಪರಿಚಯಿಸಲಿದೆ ಕಿಯಾ ಮೋಟಾರ್ಸ್
- Education
English Language Day 2021: ಇಂಗ್ಲೀಷ್ ಭಾಷೆ ಕಲಿಯೋದು ಏಕೆ ಮುಖ್ಯ ? ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕಾರ್ತಿ ಹೇಳಿದ ಮಾತಿಗೆ ಭಾವುಕರಾದ ರಶ್ಮಿಕಾ: ಅಳಿಸಬೇಡಿ ಎಂದು ಮನವಿ
ಕನ್ನಡತಿ, ನಟಿ ರಶ್ಮಿಕಾ ಮಂದಣ್ಣ ಕಡಿಮೆ ಸಮಯದಲ್ಲಿಯೇ ತಮ್ಮ ಪ್ರತಿಭೆಯಿಂದ ಕನ್ನಡ, ತೆಲುಗು, ತಮಿಳು ಈಗ ಹಿಂದಿ ಸಿನಿಮಾರಂಗದಲ್ಲಿಯೂ ಅವಕಾಶಗಳನ್ನು ಬಾಚಿಕೊಂಡಿದ್ದಾರೆ. ಬೆಳೆಯುತ್ತಲೇ ಸಾಗುತ್ತಿದ್ದಾರೆ.
ಪರಭಾಷೆ ಸ್ಟಾರ್ ನಟರಾದ ಮಹೇಶ್ ಬಾಬು, ಅಲ್ಲು ಅರ್ಜುನ್, ವಿಜಯ್ ದೇವರಕೊಂಡ, ನಾನಿ, ನಾಗಾರ್ಜುನ, ನಿತಿನ್, ತಮಿಳಿನ ಕಾರ್ತಿ ಹೀಗೆ ಹಲವರೊಂದಿಗೆ ತೆರೆ ಹಂಚಿಕೊಂಡು, ನಾಯಕ ನಟರ ಅಭಿನಯಕ್ಕೆ ಸೆಡ್ಡು ಕೊಡುವ ರೀತಿಯಲ್ಲಿ ನಟಿಸಿ ಭೇಷ್ ಎನಿಸಿಕೊಂಡಿದ್ದಾರೆ ರಶ್ಮಿಕಾ.
ರಶ್ಮಿಕಾ ಹಾಗೂ ನಟ ಕಾರ್ತಿ ನಟಿಸಿರುವ 'ಸುಲ್ತಾನ್' ತಮಿಳು ಸಿನಿಮಾ ಕಳೆದ ವಾರವಷ್ಟೆ ಬಿಡುಗಡೆ ಆಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಸಿನಿಮಾಕ್ಕೆ ಒಳ್ಳೆಯ ಓಪನಿಂಗ್ ಸಿಕ್ಕಿದ್ದಕ್ಕೆ ಹಾಗೂ ಸಿನಿಮಾ ಒಳ್ಳೆಯ ಪ್ರದರ್ಶನ ಕಾಣುತ್ತಿರುವ ಕಾರಣ ಆ ಸಂತಸ ಹಂಚಿಕೊಳ್ಳಲು ಸಿನಿಮಾ ತಂಡವು ಕಾರ್ಯಕ್ರಮವೊಂದನ್ನು ಇಂದು (ಏಪ್ರಿಲ್ 07) ಹಮ್ಮಿಕೊಂಡಿತ್ತು.

ರಶ್ಮಿಕಾ ಅವರನ್ನು ನೆನಪಿಸಿಕೊಳ್ಳುವುದು ಮರೆಯಲಿಲ್ಲ
ಬಾಲಿವುಡ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ನಟಿ ರಶ್ಮಿಕಾ ಮಂದಣ್ಣ 'ಸುಲ್ತಾನ್' ಸಿನಿಮಾದ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ. ಆದರೆ ರಶ್ಮಿಕಾರನ್ನು ನೆನಪಿಸಿಕೊಳ್ಳುವುದನ್ನು ಅವರಿಗೆ ಧನ್ಯವಾದ ಅರ್ಪಿಸುವುದನ್ನು ಚಿತ್ರತಂಡ ಮರೆಯಲಿಲ್ಲ.

ರಶ್ಮಿಕಾರ ಅಭಿಮಾನಿ ವರ್ಗದಿಂದ ದೊಡ್ಡ ಓಪನಿಂಗ್: ಕಾರ್ತಿ
ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಕಾರ್ತಿ, 'ರಶ್ಮಿಕಾ ಮಂದಣ್ಣ ಅವರಿಗೆ ಇರುವ ದೊಡ್ಡ ಅಭಿಮಾನಿ ವರ್ಗ, 'ಸುಲ್ತಾನ್' ಸಿನಿಮಾಕ್ಕೆ ಒಳ್ಳೆಯ ಓಪನಿಂಗ್ ಸಿಗಲು ಮುಖ್ಯ ಕಾರಣಗಳಲ್ಲಿ ಒಂದು' ಎಂದು ಹೇಳಿದರು. ಅಲ್ಲದೆ ರಶ್ಮಿಕಾ ಅವರ ಶ್ರಮ, ನಟನೆಯನ್ನು ಹೊಗಳಿದರು ಕಾರ್ತಿ.

ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ನಟಿ ರಶ್ಮಿಕಾ
ಕಾರ್ತಿ, ರಶ್ಮಿಕಾರ ಬಗ್ಗೆ ಆಡಿದ ಮಾತುಗಳನ್ನು ಸಿನಿಮಾ ಪತ್ರಕರ್ತ ರಮೇಶ್ ಬಾಲಾ ಟ್ವೀಟ್ ಮಾಡಿದ್ದಾರೆ. ಆ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ರಶ್ಮಿಕಾ ಮಂದಣ್ಣ, 'ಇಷ್ಟೋಂದು ಪ್ರೀತಿಯಿಂದ ಮಾತನಾಡಬೇಡಿ ಕಾರ್ತಿ ಸರ್, ನನಗೆ ಅಳು ಬಂದು ಬಿಡುತ್ತದೆ. ಸಿನಿಮಾ ಗೆಲ್ಲುತ್ತಿರುವುದು ಎಲ್ಲರಿಂದ, ನಾವೆಲ್ಲರೂ ಒಟ್ಟಿಗೆ ಹಾಕಿದ ಶ್ರಮದಿಂದ' ಎಂದಿದ್ದಾರೆ ರಶ್ಮಿಕಾ ಮಂದಣ್ಣ.

ಬಾಲಿವುಡ್ ಸಿನಿಮಾಗಳತ್ತ ರಶ್ಮಿಕಾ ಚಿತ್ತ
ಸುಲ್ತಾನ್ ಸಿನಿಮಾವು ರಶ್ಮಿಕಾ ಮಂದಣ್ಣ ನಟಿಸಿರುವ ಮೊದಲ ತಮಿಳು ಸಿನಿಮಾ. ಪ್ರಸ್ತುತ ಹಿಂದಿ ಸಿನಿಮಾಗಳತ್ತ ಗಮನ ಹರಿಸಿರುವ ರಶ್ಮಿಕಾ, ಸಿದ್ಧಾರ್ಥ್ ಮಲ್ಹೋತ್ರಾ ಜೊತೆಗೆ 'ಮಿಷನ್ ಮಜ್ನು' ಹಾಗೂ ಅಮಿತಾಬ್ ಬಚ್ಚನ್ ಜೊತೆಗೆ 'ಗುಡ್ ಬೈ' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತೆಲುಗಿನಲ್ಲಿ ಅಲ್ಲು ಅರ್ಜುನ್ ಜೊತೆಗೆ 'ಪುಷ್ಪ' ಸಿನಿಮಾದಲ್ಲಿಯೂ ರಶ್ಮಿಕಾ ನಟಿಸಿದ್ದಾರೆ.