Don't Miss!
- News
ಬರಲಿವೆ ಎಲಿವೇಟೆಡ್ ಇಂಟರ್ಸಿಟಿ ಸೆಮಿ-ಹೈಸ್ಪೀಡ್ ರೈಲುಗಳು: ಭಾರತ ಹಾಗೂ ಕರ್ನಾಟಕದ ಯಾವ ನಗರಗಳ ನಡುವೆ ಸಂಚಾರ?
- Automobiles
ಗ್ರಾಹಕರೇ... ಮಾರುತಿ ಸುಜುಕಿಯಿಂದ ಮಹತ್ವದ ಘೋಷಣೆ
- Technology
ಹೆಚ್ಚಿನ ಡೇಟಾ ಬೇಕು ಅಂದ್ರೆ BSNLನ ಈ ಪ್ಲ್ಯಾನ್ಗಳು ಬೆಸ್ಟ್!
- Lifestyle
ಮಕ್ಕಳನ್ನು 'ಅಮ್ಮ' ದಡಾರದಿಂದ ರಕ್ಷಿಸಲು ಇದೇ ತಿಂಗಳು ತಪ್ಪದೆ ಕೊಡಿಸಿ MR ಲಸಿಕೆ
- Sports
IND vs AUS: ಭಾರತದಲ್ಲಿ ಟೆಸ್ಟ್ ಸರಣಿ ಗೆಲ್ಲಲು ಆಸ್ಟ್ರೇಲಿಯಾವನ್ನು ಬೆಂಬಲಿಸಿದ ಶ್ರೀಲಂಕಾ ಲೆಜೆಂಡ್
- Finance
Twitter: ಟ್ವಿಟ್ಟರ್‌ನಲ್ಲಿ ಗೋಲ್ಡ್ ಬ್ಯಾಡ್ಜ್ ಉಳಿಸಿಕೊಳ್ಳಬೇಕಾದರೆ ಇಷ್ಟು ಮೊತ್ತ ಪಾವತಿಸಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸೈನಾಗೆ ದ್ವಂದ್ವಾರ್ಥದ ಟ್ವೀಟ್: ಪೊಲೀಸರ ಬಳಿ ಕ್ಷಮೆ ಕೇಳಿದ ಸಿದ್ಧಾರ್ಥ್
ಬ್ಯಾಡ್ಮಿಂಟನ್ ಆಟಗಾರ್ತಿ ಮಾಜಿ ವಿಶ್ವಚಾಂಪಿಯನ್ ಸೈನಾ ನೆಹ್ವಾಲ್‌ಗೆ ದ್ವಂದ್ವಾರ್ಥ ಹೊಮ್ಮುವಂತೆ ಟ್ವೀಟ್ ಮಾಡಿದ್ದ ನಟ ಸಿದ್ಧಾರ್ಥ್ ಇದೀಗ ಪೊಲೀಸರ ಬಳಿ ಕ್ಷಮೆ ಕೋರಿದ್ದಾರೆ.
ಬಿಜೆಪಿ ಸದಸ್ಯೆಯೂ ಆಗಿರುವ ಸೈನಾ ನೆಹ್ವಾಲ್ ಮಾಡಿದ್ದ ರಾಜಕೀಯ ಸಂಬಂಧಿ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ್ದ ಸಿದ್ಧಾರ್ಥ್ ದ್ವಂದ್ವಾರ್ಥ ಹೊಮ್ಮುವಂತೆ ಟ್ವೀಟ್ ಮಾಡಿದ್ದರು. ಸಿದ್ಧಾರ್ಥ್‌ರ ಟ್ವೀಟ್ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು ಮಹಿಳಾ ಸಂಘಗಳು ಹಾಗೂ ಕೆಲವು ಖಾಸಗಿ ವ್ಯಕ್ತಿಗಳು ಸಿದ್ಧಾರ್ಥ್ ವಿರುದ್ಧ ದೂರು ದಾಖಲಿಸಿದ್ದರು.
ದೂರು ಆಧರಿಸಿ ಚೆನ್ನೈ ಪೊಲೀಸರು ಸಿದ್ಧಾರ್ಥ್ ಅವರಿಗೆ ನೊಟೀಸ್ ಜಾರಿ ಮಾಡಿ ಉತ್ತರ ನೀಡುವಂತೆ ಸೂಚಿಸಿದ್ದರು. ಇದೀಗ ಘಟನೆಗೆ ಸಂಬಂಧಿಸಿದಂತೆ ನಟ ಸಿದ್ಧಾರ್ಥ್, ಚೆನ್ನೈ ಪೊಲೀಸರ ಬಳಿ ಕ್ಷಮೆ ಕೋರಿದ್ದಾರೆ.
ಘಟನೆ ವಿವರ
ಪ್ರಧಾನಿ ಮೋದಿ ಅವರು ಪಂಜಾಬ್‌ಗೆ ಭೇಟಿ ನೀಡಿದ್ದಾಗ ಅವರ ವಾಹವನ್ನು ತಡೆದು ರೈತರು ಪ್ರತಿಭಟನೆ ಮಾಡಿದ್ದ ಘಟನೆ ಬಗ್ಗೆ ಟ್ವೀಟ್ ಮಾಡಿದ್ದ ಸೈನಾ ನೆಹ್ವಾಲ್, ಭದ್ರತಾ ಲೋಪವನ್ನು ಖಂಡಿಸಿದ್ದರು.
ಸೈನಾರ ಟ್ವೀಟ್‌ಗೆ ಪ್ರತಿಯಾಗಿ ಟ್ವೀಟ್ ಮಾಡಿದ್ದ ನಟ ಸಿದ್ಧಾರ್ಥ್, 'ಶಟಲ್‌ಕಾಕ್' ಎಂಬ ಪದವನ್ನು ದ್ವಂದ್ವಾರ್ಥ್ ಹೊಮ್ಮುವಂತೆ 'ಸಟಲ್' 'ಕಾಕ್' ಎಂದು ಬಳಸಿದ್ದರು. ಇದು ತೀವ್ರ ವಿವಾದ ಹುಟ್ಟುಹಾಕಿತ್ತು. ಮಹಿಳಾ ಆಯೋಗ, ಸೈನಾ ನೆಹ್ವಾಲ್‌ರ ತಂದೆ, ಪತಿ ಹಾಗೂ ಸ್ವತಃ ಸೈನಾ ನೆಹ್ವಾಲ್ ಸಿದ್ಧಾರ್ಥ್‌ರ ಟ್ವೀಟ್‌ಗೆ ಆಕ್ರೋಶ ವ್ಯಕ್ತಪಡಿಸಿದ್ದರು.
ಬಳಿಕ ಟ್ವಿಟ್ಟರ್‌ನಲ್ಲಿ ಸೈನಾಗೆ ಕ್ಷಮೆ ಕೇಳಿದ ಸಿದ್ಧಾರ್ಥ್, ತಮ್ಮ ಜೋಕ್ ಕೆಟ್ಟದಾಗಿತ್ತೆಂದು, ಯಾವುದೇ ಜೋಕ್ ಅನ್ನು ವಿವರಿಸುವ ಅಗತ್ಯ ಬಿತ್ತೆಂದರೆ ಅದು ಕೆಟ್ಟ ಜೋಕ್ ಎಂದೇ ಅರ್ಥ. ನನ್ನ ಉದ್ದೇಶ ನಿಮ್ಮನ್ನು ಅವಮಾನಿಸುವುದಾಗಿರಲಿಲ್ಲ. ನನ್ನ ಟ್ವೀಟ್‌ನಿಂದ ಬೇಸರವಾಗಿದ್ದರೆ ಕ್ಷಮಿಸಿ ಎಂದಿದ್ದರು ಸಿದ್ಧಾರ್ಥ್. ಇದೀಗ ಪೊಲೀಸರ ಬಳಿಯೂ ಸಿದ್ಧಾರ್ಥ್ ಮತ್ತೊಮ್ಮೆ ಕ್ಷಮೆ ಕೇಳಿದ್ದಾರೆ.