For Quick Alerts
  ALLOW NOTIFICATIONS  
  For Daily Alerts

  ತೀವ್ರ ಚರ್ಚೆಗೆ ಗುರಿಯಾದ ನಟ ಸೂರ್ಯಾ ಹೇಳಿಕೆ: ಪ್ರಕರಣ ದಾಖಲಿಸಿ ಎಂದ ನ್ಯಾಯಾಧೀಶ

  |

  ಸಾಮಾಜಿಕ ಸಮಸ್ಯೆಗಳಿಗೆ, ತಮಗೆ ಸರಿ ಅಲ್ಲವೆಂದು ಅನ್ನಿಸಿದ್ದರ ಬಗ್ಗೆ ಆಗಾಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತಮಿಳು ನಟ ಸೂರ್ಯಾ ಮಾತನಾಡುತ್ತಿರುತ್ತಾರೆ.

  ಇದೇ ಕಾರಣದಿಂದ ಕೆಲವು ವಿವಾದಗಳಿಗೂ ಸಿಲುಕಿಹಾಕಿಕೊಂಡಿದ್ದುಂಟು ನಟ ಸೂರ್ಯಾ. ಈಗಲೂ ಹಾಗೇಯೇ ಆಗಿದೆ. ನಟ ಸೂರ್ಯಾ ನೀಟ್ ಪರೀಕ್ಷೆ ಬಗ್ಗೆ ಹಾಗೂ ಅದರ ತೀರ್ಪಿನ ಬಗ್ಗೆ ಮಾತನಾಡಿದ್ದು ದೊಡ್ಡ ಚರ್ಚೆಗೆ ಕಾರಣವಾಗಿದೆ.

  ಕೊರೊನಾ ಕಾಲದಲ್ಲೂ ಸಾವಿರಾರು ಕೋಟಿ ಬಾಚಿದ ಸಿನಿಮಾ!ಕೊರೊನಾ ಕಾಲದಲ್ಲೂ ಸಾವಿರಾರು ಕೋಟಿ ಬಾಚಿದ ಸಿನಿಮಾ!

  ಇತ್ತೀಚೆಗಷ್ಟೆ ಮೂವರು ವೈದ್ಯಕೀಯ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡರು. ಅವರು ಮೂವರೂ ಸಹ ನೀಟ್ ಪರೀಕ್ಷೆ ಬರೆಯಬೇಕಿತ್ತು. ಇದು ರಾಷ್ಟ್ರದಾದ್ಯಂತ ಭಾರಿ ಸುದ್ದಿಯಾಯಿತು. ಇದರ ಬಗ್ಗ್ ನಟ ಸೂರ್ಯಾ ಮಾತನಾಡಿದ್ದರು.

  ಸರ್ಕಾರ, ಶಿಕ್ಷಣ ತಜ್ಞರು, ನ್ಯಾಯಾಲಯದ ವಿರುದ್ಧ ಟೀಕೆ

  ಸರ್ಕಾರ, ಶಿಕ್ಷಣ ತಜ್ಞರು, ನ್ಯಾಯಾಲಯದ ವಿರುದ್ಧ ಟೀಕೆ

  ಮೂವರು ವಿದ್ಯಾರ್ಥಿಗಳ ಸಾವಿನ ಬಗ್ಗೆ, ಬಲವಂತವಾಗಿ ವಿದ್ಯಾರ್ಥಿಗಳ ಮೇಲೆ ನೀಟ್ ಪರೀಕ್ಷೆ ಹೇರುತ್ತಿರುವ ಬಗ್ಗೆ ಖಾರವಾದ ಹೇಳಿಕೆಯನ್ನು ಪ್ರಕಟಿಸಿದ್ದ ಸೂರ್ಯಾ, ಸರ್ಕಾರ, ಶಿಕ್ಷಣ ತಜ್ಞರು ಹಾಗೂ ಕೋರ್ಟ್‌ಗಳನ್ನು ಕಟುವಾಗಿ ಟೀಕಿಸಿದ್ದರು.

  ನುಡಿದಂತೆ ನಡೆದ ಜ್ಯೋತಿಕ, ಸರ್ಕಾರಿ ಆಸ್ಪತ್ರೆಗೆ 25 ಲಕ್ಷ ರು. ದೇಣಿಗೆನುಡಿದಂತೆ ನಡೆದ ಜ್ಯೋತಿಕ, ಸರ್ಕಾರಿ ಆಸ್ಪತ್ರೆಗೆ 25 ಲಕ್ಷ ರು. ದೇಣಿಗೆ

  ಮನು'ನೀತಿ' ಎಂದು ಕರೆದ ಸೂರ್ಯಾ

  ಮನು'ನೀತಿ' ಎಂದು ಕರೆದ ಸೂರ್ಯಾ

  ಕುರುಡು ಸರ್ಕಾರ ಇಂಥಹಾ ಮನು'ನೀತಿ' ಪರೀಕ್ಷೆಗಳನ್ನು ಬರೆಯುವಂತೆ ಮಾಡುತ್ತಿದೆ. ಇಂಥಹಾ ಸಂಕಷ್ಟದ ಸಮಯದಲ್ಲಿ ವಿದ್ಯಾರ್ಥಿಗಳನ್ನು ಪರೀಕ್ಷೆ ಬರೆದು ತಮ್ಮನ್ನು ತಾವು ಸಾಬೀತುಪಡಿಸುವಂತೆ ಒತ್ತಾಯ ಹೇರುತ್ತಿದೆ ಎಂದು ಸೂರ್ಯಾ ಬೇಸರ ವ್ಯಕ್ತಪಡಿಸಿದ್ದರು.

  ಕೋರ್ಟ್‌ಗಳ ಬಗ್ಗೆ ಖಾರವಾಗಿ ಅಭಿಪ್ರಾಯ

  ಕೋರ್ಟ್‌ಗಳ ಬಗ್ಗೆ ಖಾರವಾಗಿ ಅಭಿಪ್ರಾಯ

  ಕೋರ್ಟ್‌ಗಳ ಬಗ್ಗೆಯಂತೂ ಖಾರವಾಗಿಯೇ ಪ್ರತಿಕ್ರಿಯಿಸಿದ್ದ ಸೂರ್ಯಾ, ನೀಟ್ ಪರೀಕ್ಷೆ ಅರ್ಜಿಯ ವಿಚಾರಣೆಯನ್ನು ಜಡ್ಜ್‌ಗಳು ಜೀವ ಭಯಕ್ಕೆ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಮಾಡಿದ್ದಾರೆ. ಆದರೆ ವಿದ್ಯಾರ್ಥಿಗಳು ಮಾತ್ರ ರೋಗಭಯದ ನಡುವೆಯೂ ಹೋಗಿ ಪರೀಕ್ಷೆ ಬರೆಯುವಂತೆ ಆದೇಶ ಹೊರಡಿಸಿದ್ದಾರೆ ಎಂದಿದ್ದಾರೆ.

  ಪ್ರಕರಣದ ದಾಖಲಿಸಿ ಎಂದು ಪತ್ರ ಬರೆದ ನ್ಯಾಯಾಧೀಶರ

  ಪ್ರಕರಣದ ದಾಖಲಿಸಿ ಎಂದು ಪತ್ರ ಬರೆದ ನ್ಯಾಯಾಧೀಶರ

  ಸೂರ್ಯಾ ಅವರ ಕೋರ್ಟ್‌ ವಿರುದ್ಧ ಟೀಕೆಗೆ ನ್ಯಾಯಾಧೀಶರು ಆಕ್ಷೇಪ ವ್ಯಕ್ತಪಡಿಸಿದ್ದು, ಮದ್ರಾಸ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದಿರುವ ನ್ಯಾಯಾಧೀಶ ಎಸ್.ಎಂ.ಸುಬ್ರಹ್ಮಣ್ಯಂ 'ನಟ ಸೂರ್ಯಾ ನೀಡಿರುವ ಹೇಳಿಕೆ ನ್ಯಾಯಾಲಯದ ನಿಂದನೆಯಾಗಿದೆ. ಆತನ ವಿರುದ್ಧ ಅಪರಾಧ ಪ್ರಕರಣ ದಾಖಲಿಸಬೇಕು' ಎಂದಿದ್ದಾರೆ.

  ಧನುಶ್ ಕೈಬಿಟ್ಟು ವಿಜಯ್ ಕೈಹಿಡಿದ ನಿರ್ದೇಶಕ ವೆಟ್ರಿಮಾರನ್ಧನುಶ್ ಕೈಬಿಟ್ಟು ವಿಜಯ್ ಕೈಹಿಡಿದ ನಿರ್ದೇಶಕ ವೆಟ್ರಿಮಾರನ್

  DIRECTORS DIARY : ನಾನು ಇಡ್ಲಿ ನೋಡಿದ್ದೇ ಬೆಂಗಳೂರಿಗೆ ಬಂದ್ಮೇಲೆ | R Chandru | Filmibeat Kannada
  ಶಿಕ್ಷಣ ತಜ್ಞರು ಆಧುನಿಕ ದ್ರೋಣಾಚಾರ್ಯರು: ಸೂರ್ಯ ಕಿಡಿನುಡಿ

  ಶಿಕ್ಷಣ ತಜ್ಞರು ಆಧುನಿಕ ದ್ರೋಣಾಚಾರ್ಯರು: ಸೂರ್ಯ ಕಿಡಿನುಡಿ

  ಶಿಕ್ಷಣ ತಜ್ಞರ ಬಗ್ಗೆಯೂ ಟೀಕಿಸಿದ್ದ ಸೂರ್ಯಾ, 'ವಿದ್ಯಾರ್ಥಿಗಳಿಂದ ಜೀವವನ್ನು ಬೇಡುತ್ತಿರುವ ಆಧುನಿಕ ದ್ರೋಣಾಚಾರ್ಯರು' ಎಂದಿದ್ದರು. ಆದರೆ ನೆಟ್ಟಿಗರು ಸೂರ್ಯಾ ಪರವಾಗಿ ನಿಂತಿದ್ದಾರೆ. ಸ್ಟ್ಯಾಂಡ್‌ವಿತ್‌ಸೂರ್ಯಾ ಎಂದು ಹ್ಯಾಷ್‌ಟ್ಯಾಗ್ ಟ್ರೆಂಡ್ ಮಾಡಲಾಗಿತ್ತು. ಸೂರ್ಯಾ ಹೇಳಿಕೆಗೆ ಹಲವಾರು ಮಂದಿ ಬೆಂಬಲವನ್ನೂ ವ್ಯಕ್ತಪಡಿಸಿದ್ದಾರೆ.

  English summary
  Actor Suriya angry reaction about government and court decission about Neet Exams. Justice write letter to Madras HC to take action against Suriya.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X