ವಿಜಯ್ ಸೇತುಪತಿ ಕೈನಲ್ಲಿವೆ ಬರೋಬ್ಬರಿ 11 ಸಿನಿಮಾಗಳು
ನಟ ವಿಜಯ್ ಸೇತುಪತಿ ಸೌತ್ ಇಂಡಿಸ್ಟ್ರಿಯ ಟ್ರೆಂಡಿಂಗ್ ಹೀರೋ. ಈ ನಟನ ಡಿಮ್ಯಾಂಡ್ ದಿನೇ ದಿನೇ ಹೆಚ್ಚಾಗುತ್ತಿದೆ. ಸದ್ಯ, ಇವರ ಕೈನಲ್ಲಿ ಬರೋಬ್ಬರಿ 11 ಸಿನಿಮಾಗಳಿವೆ.
ಬೇರೆ ಬೇರೆ ರೀತಿಯ ಪಾತ್ರಗಳನ್ನು ಪ್ರಯತ್ನ ಮಾಡುವ ವಿಜಯ್ ಸೇತುಪತಿ ಡಿಫರೆಂಟ್ ನಟನಾಗಿ ಗುರುತಿಸಿಕೊಂಡಿದ್ದಾರೆ. ಅದೇ ಕಾರಣಕ್ಕೆ ಅವರಿಗೆ ವಿಭಿನ್ನ ಸಿನಿಮಾಗಳು ಹುಡುಕಿಕೊಂಡು ಬರುತ್ತಿವೆ. ಸದ್ಯ, ಅವರು 11 ಸಿನಿಮಾಗಳನ್ನು ಹೊಂದಿದ್ದಾರೆ.
5 ಸಿನಿಮಾಗಳಲ್ಲಿ ವಿಜಯ್ ಸೇತುಪತಿ ಹೀರೋ ಆಗಿ ನಟಿಸುತ್ತಿದ್ದಾರೆ. ಈ ಐದು ಚಿತ್ರಗಳು ತಮಿಳಿನವಾಗಿವೆ. ಉಳಿದಂತೆ, 6 ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಇದರಲ್ಲಿ ಅಮೀರ್ ಖಾನ್ ಸಿನಿಮಾ, ವಿಜಯ್ ಸಿನಿಮಾಗಳು ಸಹ ಸೇರಿಕೊಂಡಿದೆ. 'ಲಾಲ್ ಸಿಂಗ್ ಚಡ್ಡಾ' ಸಿನಿಮಾದಲ್ಲಿ ವಿಜಯ್ ಸೇತುಪತಿ ನಟಿಸುತ್ತಿದ್ದು, ಇದು ಅವರ ಮೊದಲ ಹಿಂದಿ ಸಿನಿಮಾವಾಗಿದೆ.

ಸಣ್ಣ ಪುಟ್ಟ ಪಾತ್ರಗಳ ಮೂಲಕ ಚಿತ್ರರಂಗ ಪ್ರವೇಶಿಸಿದ ಈ ಕಲಾವಿದ ಇಂದು ಸ್ಟಾರ್ ನಟನಾಗಿದ್ದಾರೆ. ಹತ್ತಾರು ಸಿನಿಮಾಗಳ ಅವಕಾಶ ಹೊಂದಿದ್ದಾರೆ. ದಕ್ಷಿಣ ಭಾರತದ ಬೇಡಿಕೆಯ ನಟನಾಗಿದ್ದಾರೆ. ತನ್ನ ನಟನೆಯ ಮೂಲಕ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.


Click it and Unblock the Notifications











