For Quick Alerts
  ALLOW NOTIFICATIONS  
  For Daily Alerts

  ಇನ್ಸ್ಟಾಗ್ರಾಂಗೆ ಬಂದ ಕೆಲವೇ ಗಂಟೆಗಳಲ್ಲಿ ಈ ನಟಿಗೆ 1.3 ಮಿಲಿಯನ್ ಹಿಂಬಾಲಕರು

  |

  ದಕ್ಷಿಣ ಭಾರತದ ಜನಪ್ರಿಯ ನಟಿ, ತಮಿಳು ಸೂಪರ್ ಸ್ಟಾರ್ ಸೂರ್ಯ ಅವರ ಪತ್ನಿ ಜ್ಯೋತಿಕಾ ಇಂದು (ಆಗಸ್ಟ್ 31, 2021) ಇನ್ಸ್ಟಾಗ್ರಾಂಗೆ ಪಾದಾರ್ಪಣೆ ಮಾಡಿದರು. ಇನ್ಸ್ಟಾದಲ್ಲಿ ಖಾತೆ ತೆರೆದ ಕೆಲವೇ ಕ್ಷಣಗಳಲ್ಲಿ ಚೊಚ್ಚಲ ಪೋಸ್ಟ್ ಹಾಕಿ ಗಮನ ಸೆಳೆದರು. ಇನ್ನು ನಟಿ ಇನ್ಸ್ಟಾ ಖಾತೆ ತೆರೆದ ಕೆಲವೇ ಗಂಟೆಗಳಲ್ಲಿ (4 ಗಂಟೆಗೂ ಕಡಿಮೆ ಅವಧಿ) 1.3 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.

  ಜ್ಯೋತಿಕಾ ತಮ್ಮ ಮೊದಲ ಇನ್ಸ್ಟಾಗ್ರಾಂ ಪೋಸ್ಟ್‌ನಲ್ಲಿ ತ್ರಿವರ್ಣ ಧ್ವಜ ಹಿಡಿದು ನಿಂತಿರುವ ಫೋಟೋ ಶೇರ್ ಮಾಡಿದ್ದಾರೆ. ಹಿಮಾಲಯದಲ್ಲಿ ಭಾರತದ ಭಾವುಟ ಹಿಡಿದು ನಿಂತಿರುವ ಜ್ಯೋತಿಕಾ ಫೋಟೋ ವೈರಲ್ ಆಗಿದೆ. ಈ ಫೋಟೋ ಪೋಸ್ಟ್ ಆಗಿ ನಾಲ್ಕು ಗಂಟೆಗಳಲ್ಲಿ 3.4 ಲಕ್ಷ ಲೈಕ್ಸ್ ಬಂದಿದೆ.

   ನುಡಿದಂತೆ ನಡೆದ ಜ್ಯೋತಿಕ, ಸರ್ಕಾರಿ ಆಸ್ಪತ್ರೆಗೆ 25 ಲಕ್ಷ ರು. ದೇಣಿಗೆ ನುಡಿದಂತೆ ನಡೆದ ಜ್ಯೋತಿಕ, ಸರ್ಕಾರಿ ಆಸ್ಪತ್ರೆಗೆ 25 ಲಕ್ಷ ರು. ದೇಣಿಗೆ

  ''ಎಲ್ಲರಿಗೂ ನಮಸ್ಕಾರ. ಮೊದಲ ಸಲ ಸೋಶಿಯಲ್ ಮಿಡಿಯಾಗೆ ಬಂದಿದ್ದೇನೆ. ನನ್ನ ಲಾಕ್‌ಡೌನ್ ಸಮಯ ಅನೇಕ ಪಾಸಿಟಿವ್ ಅನುಭವಗಳನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳಬೇಕಿದೆ'' ಎಂದು ಬರೆದುಕೊಂಡಿದ್ದಾರೆ.

  ಪೋಸ್ಟ್‌ನಲ್ಲಿ ಮುಂದುವರಿಸಿ ''ಸ್ವಾತಂತ್ರ್ಯ ದಿನದಂದು ಹಿಮಾಲಯದಲ್ಲಿ....ಸುಂದರವಾದ ಕಾಶ್ಮೀರ ದೊಡ್ಡ ಸರೋವರಗಳು....ಈ ಅದ್ಭುತ ಸಾಹಸಕ್ಕೆ ಜೊತೆಯಾದ ರಾಹುಲ್, ಸಚಿನ್, ರೌಲ್ ಮತ್ತು ಅಶ್ವಿನ್ ಹಾಗೂ ಕಾಶ್ಮೀರ ತಂಡ ಮುಷ್ತಾಕ್ ಎನ್, ರಿಯಾಜ್ ಅವರಿಗೆ ಧನ್ಯವಾದಗಳು'' ಎಂದು ನಾಲ್ಕು ಫೋಟೋ ಹಂಚಿಕೊಂಡಿದ್ದಾರೆ.

  ಸರಳವಾಗಿ ಮದುವೆಯಾದ ಸೂರ್ಯ-ಜ್ಯೋತಿಕಾ ಇಂಟರೆಸ್ಟಿಂಗ್ ಲವ್ ಸ್ಟೋರಿಸರಳವಾಗಿ ಮದುವೆಯಾದ ಸೂರ್ಯ-ಜ್ಯೋತಿಕಾ ಇಂಟರೆಸ್ಟಿಂಗ್ ಲವ್ ಸ್ಟೋರಿ

  ಅಂದ್ಹಾಗೆ, ಜ್ಯೋತಿಕಾ ಅವರು ಇತ್ತೀಚಿಗೆ ಕಾಶ್ಮೀರಕ್ಕೆ ಸ್ನೇಹಿತರ ಜೊತೆ ಟ್ರಕ್ಕಿಂಗ್ ಹೋಗಿದ್ದರು. ಸಿನಿಮಾ, ಶೂಟಿಂಗ್‌ನಿಂದ ಬ್ರೇಕ್ ಪಡೆದುಕೊಂಡು ಎಂಜಾಯ್ ಮಾಡಿದ್ದಾರೆ. ಇನ್ನು ನಟಿ ಇನ್ಸ್ಟಾಗ್ರಾಂಗೆ ಬಂದಿರುವುದಕ್ಕೆ ಅಭಿಮಾನಿಗಳು ಥ್ರಿಲ್ ಆಗಿದ್ದು, ಎಲ್ಲರೂ ಸ್ವಾಗತ ಬಯಸಿದ್ದಾರೆ. ಕೆಲವೇ ಗಂಟೆಗಳಲ್ಲಿ 1.3 ಮಿಲಿಯನ್ ಹಿಂಬಾಲಕರು ಹೊಂದಿರುವುದು ನಿಜಕ್ಕೂ ಸರ್ಪ್ರೈಸ್. ತನ್ನ ಪತಿ ಇನ್ಸ್ಟಾಗ್ರಾಂ ಖಾತೆಗೆ ಬಂದಿರುವ ಬಗ್ಗೆ ಸೂರ್ಯ ಸಹ ಪ್ರತಿಕ್ರಿಯಿಸಿದ್ದು, ''ನನ್ನ ಪತ್ನಿ ತುಂಬಾ ಗಟ್ಟಿ. ನಿನ್ನನ್ನು ಇನ್ಸ್ಟಾದಲ್ಲಿ ನೋಡಲು ಥ್ರಿಲ್ ಆಗುತ್ತಿದೆ'' ಎಂದಿದ್ದಾರೆ.

  Actress Jyotika has Joined Instagram and Gained 1.3M Followers in a Jiffy

  ಇನ್ನು ಸಿನಿಮಾ ವಿಚಾರಕ್ಕೆ ನಟ ಶಶಿಕುಮಾರ್ ನಟನೆಯ 'ಉದನಪಿರಪ್ಪೆ' ಚಿತ್ರದಲ್ಲಿ ಜ್ಯೋತಿಕಾ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಅಕ್ಟೋಬರ್ ತಿಂಗಳಲ್ಲಿ ಅಮೇಜಾನ್ ಪ್ರೈಮ್‌ನಲ್ಲಿ ರಿಲೀಸ್ ಆಗಲಿದೆ. ವಿಶೇಷ ಅಂದ್ರೆ ಈ ಚಿತ್ರವನ್ನು ಜ್ಯೋತಿಕಾ ಮತ್ತು ಸೂರ್ಯ ತಮ್ಮದೇ ಬ್ಯಾನರ್‌ನಲ್ಲಿ ನಿರ್ಮಾಣ ಮಾಡಿದ್ದಾರೆ. ಸರವಣನ್ ಈ ಚಿತ್ರ ನಿರ್ದೇಶಿಸಿದ್ದಾರೆ.

  ಕೊನೆಯದಾಗಿ 'ಪೊನ್ಮಗಲ್ ವಂದಾಲ್' ಚಿತ್ರದಲ್ಲಿ ಜ್ಯೋತಿಕಾ ನಟಿಸಿದ್ದರು. 2020ರಲ್ಲಿ ಅಮೇಜಾನ್ ಪ್ರೈಮ್‌ನಲ್ಲಿ ಈ ಸಿನಿಮಾ ಬಿಡುಗಡೆಯಾಗಿತ್ತು. ಈ ಚಿತ್ರವನ್ನು ಸಹ ಸೂರ್ಯ-ಜ್ಯೋತಿಕಾ ಅವರೇ ನಿರ್ಮಿಸಿದ್ದರು. ಈ ಚಿತ್ರದಲ್ಲಿ ಜ್ಯೋತಿಕಾ ಜೊತೆ ಭಾಗ್ಯರಾಜ್, ಪಾರ್ಥಿಬನ್, ತ್ಯಾಗರಾಜನ್, ಪಾಂಡಿರಾಜನ್ ಸೇರಿದಂತೆ ಹಲವರು ನಟಿಸಿದ್ದರು.

  1999 ರಲ್ಲಿ 'ಪೂವೆಲ್ಲಂ ಕೆಟ್ಟುಪ್ಪರ್' ಚಿತ್ರದ ಸೆಟ್‌ನಲ್ಲಿ ಜ್ಯೋತಿಕಾ ಮತ್ತು ಸೂರ್ಯ ಮೊದಲ ಸಲ ಭೇಟಿಯಾದರು. ಆದರೆ 'ಕಾಖಾ ಕಾಖಾ' ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡುವ ಸಮಯದಲ್ಲಿ ಇಬ್ಬರ ನಡುವೆ ಪ್ರೀತಿ ಅರಳಿತು. ನಂತರ 2006ರಲ್ಲಿ ಅದ್ಧೂರಿ ಮದುವೆ ಕಾರ್ಯಕ್ರಮದಲ್ಲಿ ಸಪ್ತಪದಿ ತುಳಿದರು. 2007ರಲ್ಲಿ ಹೆಣ್ಣು ಮಗುವಿಗೆ ಈ ದಂಪತಿ ಜನ್ಮ ನೀಡಿದರು. ದಿಯಾ ಎಂದು ನಾಮಕರಣ ಮಾಡಲಾಗಿದೆ. ಆಮೇಲೆ 2010ರಲ್ಲಿ ಗಂಡು ಮಗುವಿಗೆ ಜನ್ಮ ಕೊಟ್ಟರು. ದೇವ್ ಎಂದು ಹೆಸರಿಡಲಾಗಿದೆ.

  ವಿಜಯ್ ಸೇತುಪತಿ ಮತ್ತು ತಾಪ್ಸಿ ಪನ್ನು ನಟಿಸಿರುವ 'ಅನ್ನಾಬೆಲ್ಲೆ' ಸಿನಿಮಾ ಟೀಸರ್‌ನ್ನು ಆಗಸ್ಟ್ 30ರ ಸೋಮವಾರ ನಟ ಸೂರ್ಯ ಬಿಡುಗಡೆ ಮಾಡಿದರು. ಹಿರಿಯ ಚಿತ್ರ ನಿರ್ಮಾಪಕ ಸುಂದರರಾಜನ್ ಅವರ ಮಗ ದೀಪಕ್ ಸುಂದರರಾಜನ್ 'ಅನ್ನಬೆಲ್ಲೆ' ನಿರ್ದೇಶಿಸಿದ್ದಾರೆ.

  English summary
  South indian Actress Jyotika has joined Instagram and gained 1.3M followers in a jiffy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X