For Quick Alerts
  ALLOW NOTIFICATIONS  
  For Daily Alerts

  ಕೆ.ಎಲ್.ರಾಹುಲ್ ಒಳ ಉಡುಪು ಜಾಹೀರಾತಿಗೆ ಸ್ವೀಟ್ ಕಮೆಂಟ್ ಮಾಡಿದ ನಟಿ!

  |

  ಕ್ರಿಕೆಟಿಗರು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವುದು ತೀರಾ ಸಾಮಾನ್ಯ. ಅಂತೆಯೇ ಕರ್ನಾಟಕದ ಕ್ರಿಕೆಟಿಗ ಕೆ.ಎಲ್.ರಾಹುಲ್ ಹಲವು ಬ್ರ್ಯಾಂಡ್‌ಗಳೊಟ್ಟಿಗೆ ತಮ್ಮನ್ನು ಗುರುತಿಸಿಕೊಂಡಿದ್ದಾರೆ.

  ಇತ್ತೀಚೆಗೆ ಪುರುಷರ ಒಳ ಉಡುಪಿನ ಜಾಹೀರಾತಿನಲ್ಲೂ ಕೆ.ಎಲ್.ರಾಹುಲ್ ಕಾಣಿಸಿಕೊಂಡಿದ್ದಾರೆ. ಬ್ರ್ಯಾಂಡ್‌ ಒಂದರ ಅಂಡರ್‌ವೆರ್‌ಗಳನ್ನು ಧರಿಸಿ ಸ್ಟೈಲ್ ಆಗಿ ಫೊಟೊಕ್ಕೆ ಫೋಸು ನೀಡಿದ್ದಾರೆ ಕೆ.ಎಲ್.ರಾಹುಲ್.

  ಕೆ.ಎಲ್.ರಾಹುಲ್‌ರ ಅಂಡರ್‌ವೇರ್ ಫೋಟೊಗಳನ್ನು ನೋಡಿ ನಟಿ ಕಸ್ತೂರಿ ಶಂಕರ್ ಟ್ವೀಟ್ ಮಾಡಿದ್ದು, ನಟಿಯ ಟ್ವೀಟ್‌ ಮೆಚ್ಚುಗೆಗೆ ಕಾರಣವಾಗಿದೆ.

  ಕೆ.ಎಲ್.ರಾಹುಲ್ ಜಾಹೀರಾತಿಗೆ ನಟಿಯ ಟ್ವೀಟ್

  ಕೆ.ಎಲ್.ರಾಹುಲ್ ಜಾಹೀರಾತಿಗೆ ನಟಿಯ ಟ್ವೀಟ್

  ''ಸಾಮಾನ್ಯವಾಗಿ ಕ್ರಿಕೆಟಿಗರು ತಂಪು ಪೇಯಗಳು, ಕುರುಕಲು ತಿಂಡಿಗಳು, ಬಟ್ಟೆ ಬ್ರ್ಯಾಂಡ್‌ಗಳ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವುದನ್ನು ನೋಡುತ್ತಿದ್ದೆವು. ಕ್ರಿಕೆಟಿಗರು ಸಾಮಾನ್ಯವಾಗಿ ಒಳ ಉಡುಪಿನ ಜಾಹೀರಾತಿನಿಂದ ಅಂತರ ಕಾಯ್ದುಕೊಂಡಿದ್ದರು. ಅಂಥಹಾ ಜಾಹೀರಾತಿನಲ್ಲಿ ನಟಿಸಲು ನಾಚಿಕೆ ಪಟ್ಟುಕೊಳ್ಳುತ್ತಿದ್ದರು. ಆದರೆ ಈಗ ಕೆ.ಎಲ್.ರಾಹುಲ್ ಪುರುಷರ ಒಳ ಉಡುಪಿನ ಜಾಹೀರಾತಿನಲ್ಲಿ ನಟಿಸುವುದು ನೋಡಿ ಖುಷಿಯಾಗುತ್ತಿದೆ'' ಎಂದಿದ್ದಾರೆ.

  ಅವಾಚ್ಯ ಕಮೆಂಟ್ ಮಾಡುವವರಿಗೆ ಖಾರವಾದ ಟ್ವೀಟ್

  ಅವಾಚ್ಯ ಕಮೆಂಟ್ ಮಾಡುವವರಿಗೆ ಖಾರವಾದ ಟ್ವೀಟ್

  ಕಸ್ತೂರಿ ಶಂಕರ್‌ರ ಈ ಟ್ವೀಟ್ ಗೆ ಕೆಲವರು ಅವಾಚ್ಯವಾಗಿ ಕಮೆಂಟ್ ಮಾಡಿದ್ದಾರೆ. ಈ ಅವಾಚ್ಯ ಕಮೆಂಟ್‌ಗಳಿಗೆ ಮತ್ತೊಂದು ಟ್ವೀಟ್‌ ಮೂಲಕ ಚಾಟಿ ಬೀಸಿರುವ ಕಸ್ತೂರಿ ಶಂಕರ್, ''ಕ್ರೀಡಾಪಟುಗಳು ಜನರಿಗೆ ಅಗತ್ಯವಾಗಿರುವ ಉತ್ಪಗಳ ಜಾಹೀರಾತಿನಲ್ಲಿ ಕಾಣಿಸಿಕೊಳ್ಳದೇ ಇರುವುದಕ್ಕೆ, ನನ್ನ ಟ್ವೀಟ್‌ಗೆ ಕೆಟ್ಟ ಕಮೆಂಟ್ ಮಾಡುತ್ತಿರುವ ದುರ್ಜನರು ಕಾರಣ. ಧೈರ್ಯ ಇಲ್ಲದ (ನೋ ಬಾಲ್ಸ್) ಈ ದುರುಳರು ಅಂಡರ್ವೇರ್‌ ಬಗ್ಗೆ ಏಕೆ ತಲೆಕೆಡಿಸಿಕೊಳ್ಳುತ್ತಿದ್ದಾರೋ ಗೊತ್ತಿಲ್ಲ'' ಎಂದು ಖಾರವಾಗಿಯೇ ಟ್ವೀಟ್ ಮಾಡಿದ್ದಾರೆ.

  ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ನಟಿ

  ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ನಟಿ

  ಕಸ್ತೂರಿ ಶಂಕರ್ ದಕ್ಷಿಣ ಭಾರತ ಚಿತ್ರರಂಗದ ಹಿರಿಯ ನಟಿ. ತಮಿಳು, ತೆಲುಗು, ಮಲಯಾಳಂ ಹಾಗೂ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದ 'ಜಾಣ', 'ಇಬ್ಬರ ನಡುವೆ ಮುದ್ದಿನ ಆಟ', 'ತುತ್ತಾ-ಮುತ್ತ', 'ಒನ್ ಮ್ಯಾನ್ ಆರ್ಮಿ', 'ಹಬ್ಬ' ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮಿಳಿನ ಅನೇಕ ಸಿನಿಮಾಗಳಲ್ಲಿ ನಟಿಸಿರುವ ಕಸ್ತೂರಿ ಶಂಕರ್, ಸ್ಟಾರ್ ನಟರೊಟ್ಟಿಗೆ ನಾಯಕಿಯಾಗಿ ತೆರೆ ಹಂಚಿಕೊಂಡಿದ್ದಾರೆ. ಈಗಲೂ ತಮಿಳು, ತೆಲುಗು ಸಿನಿಮಾಗಳಲ್ಲಿ ಸಕ್ರಿಯರಾಗಿದ್ದಾರೆ ಈ ನಟಿ.

  ವಿವಾಹವಾಗಲಿದ್ದಾರೆ ಕೆ.ಎಲ್.ರಾಹುಲ್

  ವಿವಾಹವಾಗಲಿದ್ದಾರೆ ಕೆ.ಎಲ್.ರಾಹುಲ್

  ಇನ್ನು ಕ್ರಿಕೆಟಿಗ ಕೆ.ಎಲ್.ರಾಹುಲ್ ಭಾರತೀಯ ಕ್ರಿಕೆಟ್ ತಂಡದ ಅವಿಭಾಜ್ಯ ಬ್ಯಾಟ್ಸ್‌ಮನ್ ಆಗಿದ್ದಾರೆ. ಭಾರತ ಟಿ20 ತಂಡದ ನಾಯಕ ಸಹ ಆಗಿದ್ದಾರೆ. ಐಪಿಎಲ್‌ನಲ್ಲಿ ಲಖನೌ ತಂಡವನ್ನು ಮುನ್ನಡೆಸುತ್ತಿದ್ದಾರೆ. ಕರ್ನಾಟಕದ ಕೆ.ಎಲ್.ರಾಹುಲ್ ಶೀಘ್ರದಲ್ಲಿಯೇ ವಿವಾಹವೂ ಆಗಲಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ. ಕರ್ನಾಟಕ ಮೂಲದ ನಟ ಸುನಿಲ್ ಶೆಟ್ಟಿ ಪುತ್ರಿ ಆತಿಯಾ ಶೆಟ್ಟಿ ಜೊತೆ ಕೆಲ ವರ್ಷಗಳಿಂದ ಪ್ರೇಮದಲ್ಲಿರುವ ಕೆ.ಎಲ್.ರಾಹುಲ್ ಶೀಘ್ರವೇ ಗೃಹಸ್ಥಾಶ್ರಮಕ್ಕೆ ಕಾಲಿಡಲಿದ್ದಾರೆ.

  English summary
  Actress Kasthuri Shankar tweet about KL Rahul men's inner wear advertisement. But some people on twitter trolling her badly.
  Friday, June 3, 2022, 11:06
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X