Don't Miss!
- Sports
Asia Cup 2023: ಎಸಿಸಿ ಸಭೆಯಲ್ಲಿ ತೀರ್ಮಾನ: ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಿಂದ ಸ್ಥಳಾಂತರ!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬಿಕ್ಕಿ, ಬಿಕ್ಕಿ ಅತ್ತ ನಟಿ 'ಕೃತಿ ಶೆಟ್ಟಿ', ನಿರೂಪಕರ ಮಹಾ ಎಡವಟ್ಟು!
ನಟಿ ಕೃತಿ ಶೆಟ್ಟಿ ಒಂದೇ ಸಿನಿಮಾದಿಂದ ದಕ್ಷಿಣ ಭಾರತ ಸಿನಿಮಾ ರಂಗದಲ್ಲಿ ಹಲ್-ಚಲ್ ಎಬ್ಬಿಸಿದ್ದಾರೆ. ತೆಲುಗಿನ 'ಉಪ್ಪೆನ' ಸಿನಿಮಾದಲ್ಲಿ ನಟಿಸಿರುವ ಕೃತಿ ಸದ್ಯ ಬಹು ಭಾಷೆಗಳಲ್ಲಿ ಬೇಡಿಕೆ ಸೃಷ್ಟಿಸಿ ಕೊಂಡಿದ್ದಾರೆ. ಸಿನಿಪ್ರೇಕ್ಷಕರ ಮನಸ್ಸಲ್ಲಿ ಮೊದಲ ಸಿನಿಮಾದ ಮೂಲಕವೇ ಸ್ಥಾನ ಗಿಟ್ಟಿಸಿ ಕೊಂಡಿದ್ದಾರೆ.
ಕೃತಿ ಶೆಟ್ಟಿ ನೋಡಲು ಮಾತ್ರವಲ್ಲ, ಅಭಿನಯದಲ್ಲೂ ಸೈ ಎನಿಸಿಕೊಂಡಿದ್ದಾರೆ. 'ಉಪ್ಪೆನ' ಚಿತ್ರ ಕೃತಿಗೆ ದೊಡ್ಡ ಮಟ್ಟದ ಯಶಸ್ಸು ತಂದು ಕೊಟ್ಟಿರುವ ಸಿನಿಮಾ. ಮೊದಲ ಸಿನಿಮಾದಲ್ಲಿ ಕೃತಿ ಹಳ್ಳಿ ಹುಡುಗಿಯಂತೆ ಕಾಣಿಸಿಕೊಂಡಿದ್ದರು. ದೇಸಿ ಲುಕ್‌ನಲ್ಲಿ ಎಂಟ್ರಿ ಕೃತಿಗೆ ಎಲ್ಲರೂ ಫಿದಾ ಆಗಿದ್ದಾರೆ.
ಕೃತಿ
ಶೆಟ್ಟಿಯನ್ನು
ತಿರಸ್ಕರಿಸಿದ
ತೆಲುಗು
ಸ್ಟಾರ್
ನಟರು:
ಕಾರಣ
ಕೇಳಿದ್ರೆ
ಅಚ್ಚರಿ
ಆಗುತ್ತೆ!
ಇತ್ತೀಚೆಗೆ ತಮಿಳು, ತೆಲುಗು ಸಿನಿಮಾಗಳ ಆಫರ್ ಕೂಡ ಕೃತಿಗೆ ಬರುತ್ತಿವೆ. ಆದರೆ ಸಿನಿಮಾ ಹೊರತಾಗಿ ನಟಿ ಕೃತಿ ಶೆಟ್ಟಿ ಕಣ್ಣೀರು ಹಾಕಿ ಸುದ್ದಿ ಆಗಿದ್ದಾರೆ. ಸಂದರ್ಶನ ಒಂದರಲ್ಲಿ ನಟಿ ಕೃತಿ ಶೆಟ್ಟಿ ಬಿಕ್ಕಿ, ಬಿಕ್ಕಿ ಅತ್ತು ಬಿಟ್ಟಿದ್ದಾರೆ. ಅದು ಯಾಕೆ ಎನ್ನುವುದನ್ನು ಮುಂದೆ ಓದಿ.

ಕೃತಿ ಶೆಟ್ಟಿ ಸಂದರ್ಶನ ನಿರೂಪಕ ಎಡವಟ್ಟು!
ನಟಿ ಕೃತಿ ಸೆಟ್ಟಿ ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ. ಇದು ತಮಿಳಿನ 'ವಾಡ ಪೋಚೆ' ಕಾರ್ಯಕ್ರಮ. ಈ ಶೋನಲ್ಲಿ ನಟಿ ಕೃತಿ ಭಾಗಿ ಆಗಿದ್ದಾರೆ. ಸಂದರ್ಶನಲ್ಲಿ ಇಬ್ಬರು ನಿರೂಪಕರು ಇದ್ದಾರೆ. ಇಬ್ಬರೂ ಕೂಡ ನಟಿ ಕೃತಿ ಶೆಟ್ಟಿಯನ್ನು ಪ್ರಶ್ನೆ ಮಾಡುತ್ತಾರೆ. ಆದರೆ ಇದ್ದಕ್ಕಿದ್ದ ಹಾಗೆ ನಿರೂಪಕರ ನಡುವೆ ಜಗಳ ಶುರುವಗುತ್ತದೆ. ಪ್ರಶ್ನೆ ಕೇಳಲು ಮತ್ತೊಬ್ಬ ನಿರೂಪಕ ಬಿಡುತ್ತಿಲ್ಲ ಎಂದು ಖ್ಯಾತೆ ತೆಗೆಯುತ್ತಾರೆ.
'ಕೆಜಿಎಫ್
2'
ಮತ್ತೊಂದು
ರೆಕಾರ್ಡ್:
'ಬಾಹುಬಲಿ
2'
ದಾಖಲೆ
ಉಡೀಸ್!

ಕೃತಿ ಮುಂದೆ ನಿರೂಪಕರ ಜಗಳ!
ನಟಿ ಕೃತಿ ಶೆಟ್ಟಿ ಸಂದರ್ಶನದಲ್ಲಿ ಪ್ರಶ್ನೆ ಕೇಳುವುದನ್ನು ನಿಲ್ಲಿಸಿ ಇಬ್ಬರೂ ನಿರೂಪಕರು ಜಗಳ ಮಾಡುತ್ತಾರೆ. ಇದನ್ನು ಕಂಡು ನಟಿ ಕೃತಿ ಶೆಟ್ಟಿ ಕಕ್ಕಾಬಿಕ್ಕಿ ಆಗುತ್ತಾರೆ. ಆದರೆ ನಿರೂಪಕರಿಬ್ಬರೂ ಕೈ ಮಿಲಾಯಿಸಿ ಜಗಳ ಮಾಡುತ್ತಾರೆ. ಇದನ್ನು ಕಂಡು ಕೃತಿ ಶಾಕ್ ಆಗುತ್ತಾರೆ. ಆದರೆ ಸುಮ್ಮನೆ ಮೈಕ್ ಹಿಡಿದು ಕೂತಿರುತ್ತಾರೆ. ಆದರೆ ಇವರ ಜಗಳ ನೋಡಿ ಕೃತಿಗೆ ದುಃಖ ಉಮ್ಮಳಿಸುತ್ತದೆ.

ಗಳ ಗಳನೇ ಅತ್ತು ಬಿಟ್ಟ ಕೃತಿ!
ಇನ್ನು ಇವರ ಜಗಳ ನೋಡಿದ ಕೃತಿಗೆ ಅಳು ಬರುತ್ತೆ. ಆಕೆ ಅಳು ತಡೆಯಲಾಗದೇ ಅತ್ತು ಬಿಡುತ್ತಾರೆ. ಇದು ತಮಾಷೆಗಾಗಿ ಮಾಡಿದ್ದು ಎಂದು ನಿರೂಪಕರು ಹೇಳುತ್ತಾರೆ. ಆದರೂ ಕೃತಿಗೆ ಅಳು ತಡೆಯಲು ಸಾಧ್ಯವಾಗುವುದಿಲ್ಲ. ಹಾಗಾಗಿ ಕೃತಿ ಅತ್ತು ಬಿಡುತ್ತಾರೆ. "ಈ ರೀತಿ ಜೋರಾಗಿ ಜಗಳ ಆಡಿದರೆ ನನಗೆ ಆಗೋದಿಲ್ಲ" ಎಂದಿದ್ದಾರೆ ಕೃತಿ ಶೆಟ್ಟಿ. ನಂತರ ನಿರೂಪಕರು ಕೃತಿಯನ್ನು ಸಮಾಧಾನ ಮಾಡುತ್ತಾರೆ.
ತೆಲುಗಿನಲ್ಲಿ
'ಗಡಂಗ್
ರಕ್ಕಮ್ಮಾ'
ಕಮಾಲ್!

ಸಾಲು, ಸಾಲು ಸಿನಿಮಾಗಳಲ್ಲಿ ಕೃತಿ ಬ್ಯುಸಿ!
ನಟಿ ಕೃತಿ ಶೆಟ್ಟಿ ಸದ್ಯ ಸಾಲು, ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ತೆಲುಗಿನ ಎರಡು ಸಿನಿಮಾಗಳು ಮತ್ತು ತಮಿಳಿನಲ್ಲಿ ನಟ ಸೂರ್ಯ ಜೊತೆಗೆ ಅಭಿನಯಿಸುತ್ತಾ ಇದ್ದಾರೆ. ಕೃತಿ ತಮ್ಮ ಮೊದಲ ಸಿನಿಮಾ 'ಉಪ್ಪೆನ' ದಿಂದಲೇ ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. ಬಳಿಕ 'ಶ್ಯಾಮ ಸಿಂಗ ರಾಯ್', 'ಬಂಗಾರ್ ರಾಜು' ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.