For Quick Alerts
  ALLOW NOTIFICATIONS  
  For Daily Alerts

  ಜಯಲಲಿತಾ ಬಯೋಪಿಕ್: ಎಂಜಿಆರ್ ಪತ್ನಿ ಪಾತ್ರದಲ್ಲಿ ಸ್ಟಾರ್ ನಟಿ

  |

  ಬಾಲಿವುಡ್ ನಟಿ ಕಂಗನಾ ರಣಾವತ್ ನಟಿಸುತ್ತಿರುವ ಜಯಲಲಿತಾ ಬಯೋಪಿಕ್ ಚಿತ್ರ ಹಂತ ಹಂತದಲ್ಲೂ ಕುತೂಹಲ ಹೆಚ್ಚಿಸುತ್ತಲೇ ಸಾಗುತ್ತಿದೆ. ಅದರಲ್ಲು ಕಲಾವಿದರ ಆಯ್ಕೆ ವಿಚಾರದಲ್ಲಿ ತಲೈವಿ ಸಿನಿಮಾ ಬಹಳ ಸದ್ದು ಮಾಡ್ತಿದೆ.

  ಈಗಾಗಲೇ ಸ್ಟಾರ್ ಕಲಾವಿದರೇ ತುಂಬಿರುವ ಈ ಚಿತ್ರಕ್ಕೆ ಈಗ ಮತ್ತೊಬ್ಬ ಹಿರಿಯ ಕಲಾವಿದೆಯ ಪ್ರವೇಶವಾಗಿದೆ. ಹೌದು, ಎಂಜಿಆರ್ ಪತ್ನಿ ಜಾನಕಿ ರಾಮಚಂದ್ರನ್ ಪಾತ್ರದಲ್ಲಿ ರೋಜಾ ಖ್ಯಾತಿಯ ನಟಿ ಮಧು ನಟಿಸುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಮುಂದೆ ಓದಿ....

  ಜಯಲಲಿತಾ ಬಯೋಪಿಕ್ ನಲ್ಲಿ ನಟಿಸುವಂತೆ ಸ್ಟಾರ್ ನಟನಿಗೆ ಆಫರ್!

  ಜಯಲಲಿತಾ ಹೊಗಳಿದ್ದರು

  ಜಯಲಲಿತಾ ಹೊಗಳಿದ್ದರು

  ಜಯಲಲಿತಾ ಬಯೋಪಿಕ್ ಚಿತ್ರದಲ್ಲಿ ಎಂಜಿಆರ್ ಪತ್ನಿ ಪಾತ್ರ ಮಾಡುತ್ತಿರುವ ನಟಿ ಮಧು ಮುಂಬೈ ಮಿರರ್ ಜೊತೆ ಸಂತಸ ಹಂಚಿಕೊಂಡಿದ್ದಾರೆ. ''ನಾನು ಜಾನಕಿಯಮ್ಮ ಅವರನ್ನು ಭೇಟಿ ಮಾಡಿಲ್ಲ, ಆದ್ರೆ, ಜಯಲಲಿತಾ ಅವರನ್ನು ಭೇಟಿ ಮಾಡಿದ್ದೇನೆ. ರೋಜಾ ಸಿನಿಮಾದ ನಟನೆಗಾಗಿ ಅವರ ಕೈಯಿಂದ ರಾಜ್ಯ ಪ್ರಶಸ್ತಿ ಪಡೆದಿದ್ದೆ. ವೇದಿಕೆಯಲ್ಲಿ ಪ್ರಶಸ್ತಿ ನೀಡಿದ ಸಿಎಂ ''ರೋಜಾ ಚಿತ್ರದಲ್ಲಿ ನಿನ್ನ ನಟನೆ ಇಷ್ಟ ಆಯ್ತು ಎಂದಿದ್ದರು'' ಎಂಬ ಸಂಗತಿಯನ್ನು ಹಂಚಿಕೊಂಡಿದ್ದಾರೆ.

  ಎಂಜಿಆರ್ ಪಾತ್ರದಲ್ಲಿ ಅರವಿಂದ್ ಸ್ವಾಮಿ

  ಎಂಜಿಆರ್ ಪಾತ್ರದಲ್ಲಿ ಅರವಿಂದ್ ಸ್ವಾಮಿ

  ಜಯಲಲಿತಾ ಬಯೋಪಿಕ್‌ನಲ್ಲಿ ಎಂಜಿಆರ್ ಆಗಿ ತಮಿಳು ನಟ ಅರವಿಂದ್‌ ಸ್ವಾಮಿ ನಟಿಸುತ್ತಿದ್ದಾರೆ. ಅರವಿಂದ್ ಸ್ವಾಮಿ ಜೊತೆ ಮಧು ತೆರೆ ಹಂಚಿಕೊಳ್ಳಲಿದ್ದಾರೆ. ''ಎಂಜಿಆರ್ ಪತ್ನಿ ಪಾತ್ರದ ಬಗ್ಗೆ ನಿರ್ದೇಶಕರು ಬಹಳ ಅಧ್ಯಯನ ಮಾಡಿದ್ದು, ಅದು ನನಗೆ ಇಷ್ಟ ಆಗಿದೆ. ಆ ಪಾತ್ರವನ್ನು ಚೆನ್ನಾಗಿ ನಿಭಾಯಿಸಲು ಸ್ಫೂರ್ತಿ ನೀಡಿದೆ'' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

  ಎಂಜಿಆರ್ ಪಾತ್ರದಲ್ಲಿ ಜೀವ ತುಂಬಿದ ಖ್ಯಾತ ನಟ ಅರವಿಂದ್ ಸ್ವಾಮಿ

  ಎಂಜಿಆರ್ ಮತ್ತು ಜಯಲಲಿತಾ!

  ಎಂಜಿಆರ್ ಮತ್ತು ಜಯಲಲಿತಾ!

  ಎಂಜಿಆರ್ ಅವರು ಸಿನಿಮಾರಂಗದಲ್ಲಿ ದೊಡ್ಡ ನಟ ಆಗಿದ್ದರು. ಜಾನಕಿ ಅವರೊಂದಿಗೆ ವಿವಾಹವೂ ಆಗಿತ್ತು. ಈ ಸಂದರ್ಭದಲ್ಲಿ ಜಯಲಲಿತಾ ಸಿನಿಮಾ ರಂಗ ಪ್ರವೇಶ ಮಾಡಿದರು. ಎಂಜಿಆರ್ ಜೊತೆ ಹೆಚ್ಚು ಆತ್ಮೀಯರಾಗಿದ್ದರು. ದಿನಕಳೆದಂತೆ ಈ ಜೋಡಿ ಹಚ್ಚು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದರು. ತಮಿಳು ಚಿತ್ರರಂಗದ ಅತ್ಯುತ್ತಮ ಜೋಡಿಗಳ ಪೈಕಿ ಎಂಜಿಆರ್ ಮತ್ತು ಜಯಲಲಿತಾ ಸಹ ಪ್ರಮುಖರು. ಇವರಿಬ್ಬರ ಸಂಬಂಧದ ಬಗ್ಗೆಯೂ ಊಹಾಪೋಹಗಳಿದ್ದವು.

  ಶಶಿಕಲಾ ಪಾತ್ರದಲ್ಲಿ ಯಾರು?

  ಶಶಿಕಲಾ ಪಾತ್ರದಲ್ಲಿ ಯಾರು?

  ಈ ಚಿತ್ರದಲ್ಲಿ ಮಾಜಿ ಸಿಎಂ ಕರುಣಾನಿಧಿ, ಶಶಿಕಲಾ, ಶೋಭನ್‌ಬಾಬು ಪಾತ್ರಗಳು ಸಹ ಇರಲಿದೆ. ಕರುಣಾನಿಧಿ ಪಾತ್ರದಲ್ಲಿ ಪ್ರಕಾಶ್ ರೈ ಕಾಣಿಸಿಕೊಳ್ಳಲಿದ್ದಾರೆ. ಶಶಿಕಲಾ ಪಾತ್ರದಲ್ಲಿ ಪೂರ್ಣ ನಟಿಸಲಿದ್ದಾರೆ. ಶೋಭನ್ ಬಾಬು ಪಾತ್ರದಲ್ಲಿ ಜಿಶು ಸೇನಾಗುಪ್ತಾ ಅಭಿನಯಿಸಲಿದ್ದಾರೆ. ಎಎಲ್ ವಿಜಯ್ ನಿರ್ದೇಶನ ಮಾಡುತ್ತಿರುವ ಈ ಚಿತ್ರ ತಮಿಳು, ಹಿಂದಿ, ತೆಲುಗು ಭಾಷೆಯಲ್ಲಿ ತೆರೆಕಾಣಲಿದೆ.

  English summary
  Actress Madhoo is Playing the role of Janaki Ramachandran (MGR wife) in Jayalalithaa Biopic.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X