For Quick Alerts
  ALLOW NOTIFICATIONS  
  For Daily Alerts

  ನಟಿಯ ಖಾಸಗಿ ವಿಡಿಯೋ ಲೀಕ್! ಕುಟುಂಬದವರು ಮಾಡಿದ್ದೇನು?

  By ಫಿಲ್ಮಿಬೀಟ್ ಡೆಸ್ಕ್
  |

  ನಟ-ನಟಿಯರ ಖಾಸಗಿ ವಿಡಿಯೋಗಳೆಂದು ಹೇಳಲಾಗುವ ವಿಡಿಯೋಗಳು ಆಗಿದ್ದಾಂಗೆ ಬಿಡುಗಡೆ ಆಗುತ್ತಿರುತ್ತವೆ. ಈ ವಿಡಿಯೋಗಳಲ್ಲಿ ಬಹುಪಾಲು ವಿಡಿಯೋಗಳು ನಕಲಿ ಆಗಿದ್ದು, ನಟಿಯರ ಮಾನಹಾನಿ ಮಾಡಲೆಂದು ಈ ರೀತಿಯ ವಿಡಿಯೋಗಳನ್ನು ಕೆಲವು ಕಿಡಿಗೇಡಿಗಳು ಮಾಡುತ್ತಾರೆ.

  ಇದೀಗ ಇಂಥಹುದೇ ಒಂದು ಹೊಸ ವಿಡಿಯೋ ಹರಿದಾಡುತ್ತಿದೆ. ತಮಿಳು ಧಾರಾವಾಹಿಗಳ ಜನಪ್ರಿಯ ನಟಿ ರೇಷ್ಮಾ ಅವರದ್ದು ಎನ್ನಲಾಗುತ್ತಿರುವ ವಿಡಿಯೋ ಒಂದು ಇದೀಗ ಹರಿದಾಡುತ್ತಿವೆ. ಈ ವಿಡಿಯೋ ಬಗ್ಗೆ ನಟಿ ರೇಷ್ಮಾ ಸ್ಪಷ್ಟನೆ ನೀಡಿದ್ದಾರೆ.

  ''ನಾನು ಅಮೆರಿಕದಲ್ಲಿದ್ದಾಗ ನನ್ನ ತಂಗಿ ಕರೆ ಮಾಡಿ ನಿನ್ನ ಖಾಸಗಿ ವಿಡಿಯೋ ಹರಿದಾಡುತ್ತಿದೆ ಎಂದಳು. ಆಕೆ ಹೇಳಿದ ಪ್ರಕಾರ ಆ ವಿಡಿಯೊ ಅಪ್‌ಲೋಡ್ ಆದ ಸಮಯಕ್ಕೆ ನನಗೆ ಯಾವ ಬಾಯ್‌ಫ್ರೆಂಡ್‌ ಸಹ ಇರಲಿಲ್ಲ ಹಾಗಿದ್ದರೆ ಖಾಸಗಿ ವಿಡಿಯೋ ಲೀಕ್ ಆಗಲು ಸಾಧ್ಯವೇ ಇರಲಿಲ್ಲ. ಆದರೂ ಆ ವಿಡಿಯೋನ ಲಿಂಕ್ ಅನ್ನು ಕಳಿಸುವಂತೆ ಹೇಳಿದೆ'' ಎಂದಿದ್ದಾರೆ ನಟಿ ರೇಷ್ಮಾ.

  ''ಆ ವಿಡಿಯೋ ನೋಡಿದ ಕೂಡಲೇ ಇದೊಂದು ಫೇಕ್ ವಿಡಿಯೋ. ನನ್ನ ಮುಖವನ್ನು ಬಳಸಿ ವಿಡಿಯೋ ಸೃಷ್ಟಿಸಿದ್ದಾರೆ ಎಂಬುದು ಗೊತ್ತಾಯಿತು. ಆ ವಿಡಿಯೋ ನೋಡಿ ನನ್ನ ಅಪ್ಪ-ಅಮ್ಮ ತುಸು ಗಾಬರಿಯಾಗಿದ್ದರು. ಅವರೇ ನನ್ನ ತಂಗಿಯಿಂದ ನನಗೆ ಕರೆ ಮಾಡಿಸಿದ್ದರು. ವಿಷಯ ತಿಳಿದ ಬಳಿಕ ಅವರ ಆತಂಕ ದೂರಾಯಿತು. ನನ್ನ ತಂದೆ ನಿರ್ಮಾಪಕರು, ನನ್ನ ಅಣ್ಣ ನಟ, ಅವರಿಗೆ ಇಂಥಹಾ ವಿಷಯಗಳೆಲ್ಲ ಅರ್ಥವಾಗುತ್ತದೆ'' ಎಂದಿದ್ದಾರೆ ರೇಷ್ಮಾ.

  ''ಸಿನಿಮಾ ಹಿನ್ನೆಲೆ ಇರುವ ಕುಟುಂಬ ಆದ್ದರಿಂದ ಅವರು ವಿಷಯವನ್ನು ಲಘುವಾಗಿ ತೆಗೆದುಕೊಂಡರು. ಬೇರೆ ಸಾಮಾನ್ಯ ಮಹಿಳೆಯೊಬ್ಬಾಕೆಗೆ ಹೀಗಾಗಿದ್ದಿದ್ದರೆ ಪರಸ್ಥಿತಿ ಏನಾಗಿರುತ್ತಿತ್ತು ಯೋಚಿಸಿ. ಕೆಲವು ನಟಿಯರಂತೂ ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತಾರೆ. ಆದರೆ ನನ್ನ ಕುಟುಂಬವನ್ನು ಆ ಪ್ರಕರಣವನ್ನು ಚೆನ್ನಾಗಿ ಹ್ಯಾಂಡಲ್ ಮಾಡಿದರು. ಮನೊರಂಜನಾ ಕ್ಷೇತ್ರದಲ್ಲಿರುವವರನ್ನು ಕೆಲವರು ಟಾರ್ಗೆಟ್ ಮಾಡುವ ವಿಷಯ ಅವರಿಗೆ ತಿಳಿದಿತ್ತು'' ಎಂದಿದ್ದಾರೆ ರೇಷ್ಮಾ.

  ನಟಿ ರೇಷ್ಮಾ, ತಮಿಳಿನ 'ಭಾಗ್ಯಲಕ್ಷ್ಮಿ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಅದರ ಜೊತೆಗೆ 'ತಮಿಳಾ-ತಮಿಳಾ' ಟಾಕ್‌ ಶೋನಲ್ಲಿಯೂ ಕಾಣಿಸಿಕೊಳ್ಳುತ್ತಾರೆ. ಬಿಗ್‌ಬಾಸ್‌ನಲ್ಲಿಯೂ ಭಾಗವಹಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿಯೂ ಸಕ್ರಿಯರಾಗಿದ್ದಾರೆ ರೇಷ್ಮಾ.

  English summary
  Actress Reshma's morphed indecent video viral on social media. She said my family handled the situation well.
  Saturday, December 31, 2022, 18:11
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X