For Quick Alerts
  ALLOW NOTIFICATIONS  
  For Daily Alerts

  ವೆಬ್ ಸೀರಿಸ್ ಲೋಕದಲ್ಲಿ 'ಫಿದಾ' ಸುಂದರಿ: ಸಾಯಿ ಪಲ್ಲವಿ ಅಪ್ಪನ ಪಾತ್ರದಲ್ಲಿ ಖ್ಯಾತ ನಟ

  |

  ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟಿ ಸಾಯಿ ಪಲ್ಲವಿ ಇದೀಗ ವೆಬ್ ಸೀರಿಸ್ ಗೆ ಎಂಟ್ರಿ ಕೊಟ್ಟಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ಸಾಯಿ ಇದೀಗ ತಮಿಳು ವೆಬ್ ಸೀರಿಸ್ ಮೂಲಕ ಡಿಜಿಟಲ್ ಫ್ಲಾಟ್ ಫಾರ್ಮ್ ನಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

  ಸುಧಾರಾಣಿ ವಿಚಾರದಲ್ಲಿ ಎಡವಟ್ಟು ಮಾಡಿಕೊಂಡ ಅಪೋಲೋ ಆಸ್ಪತ್ರೆ.

  ಇತ್ತೀಚಿನ ದಿನಗಳಲ್ಲಿ ಸ್ಟಾರ್ ಕಲಾವಿದರು ವೆಬ್ ಸೀರಿಸ್ ನತ್ತ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಬಾಲಿವುಡ್ ನಲ್ಲಿ ಈಗಾಗಲೆ ಬಹುತೇಕ ಕಲಾವಿದರು ವೆಬ್ ಸೀರಿಸ್ ನಲ್ಲಿ ಮಿಂಚುತ್ತಿದ್ದಾರೆ. ಅದರಲ್ಲಿಯೂ ಲಾಕ್ ಡೌನ್ ಬಳಿಕ ಹೆಚ್ಚಾಗಿ ವೆಬ್ ಸೀರಿಸ್ ಕಡೆ ಗಮನ ಹರಿಸುತ್ತಿದ್ದಾರೆ. ಇದೀಗ ದಕ್ಷಿಣ ಭಾರತೀಯ ಕಲಾವಿದರು ವೆಬ್ ಸೀರಿಸ್ ನತ್ತ ಮನಸ್ಸು ಮಾಡುತ್ತಿದ್ದಾರೆ. ಮುಂದೆ ಓದಿ...

  ಮಗನಿಗೆ ಪೊಲೀಸ್ ಖಾಕಿ ತೊಡಿಸಿ ಸಂಭ್ರಮಿಸಿದ ಪ್ರಕಾಶ್ ರೈ: ಕಾರಣ ಇದುಮಗನಿಗೆ ಪೊಲೀಸ್ ಖಾಕಿ ತೊಡಿಸಿ ಸಂಭ್ರಮಿಸಿದ ಪ್ರಕಾಶ್ ರೈ: ಕಾರಣ ಇದು

  ತಂದೆ ಮಗಳ ಪಾತ್ರದಲ್ಲಿ ಸಾಯಿ ಪಲ್ಲವಿ-ಪ್ರಕಾಶ್ ರೈ

  ತಂದೆ ಮಗಳ ಪಾತ್ರದಲ್ಲಿ ಸಾಯಿ ಪಲ್ಲವಿ-ಪ್ರಕಾಶ್ ರೈ

  ಈಗಾಗಲೆ ಖ್ಯಾತ ನಟಿಯರಾದ ಸಮಂತಾ, ಕಾಜಲ್ ಸೇರಿದ್ದಂತೆ ಅನೇಕರು ವೆಬ್ ಸೀರಿಸ್ ಗೆ ಎಂಟ್ರಿ ಕೊಟ್ಟಿದ್ದಾರೆ. ಇದೀಗ ಸಾಯಿ ಪಲ್ಲವಿ ಸಹ ಸಿದ್ಧರಾಗಿದ್ದಾರೆ. ವಿಶೇಷ ಅಂದರೆ ಸಾಯಿ ಪಲ್ಲವಿ ದಕ್ಷಿಣ ಭಾರತದ ಖ್ಯಾತ ನಟ ಪ್ರಕಾಶ್ ರೈ ಜೊತೆ ತೆರೆಹಂಚಿಕೊಳ್ಳುತ್ತಿದ್ದಾರೆ. ಪ್ರಕಾಶ್ ರೈ ನಟಿ ಸಾಯಿ ಪಲ್ಲವಿ ತಂದೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ.

  ನೆಟ್ ಫ್ಲಿಕ್ಸ್ ಬಂಡವಾಳ ಹೂಡುತ್ತಿದೆ

  ನೆಟ್ ಫ್ಲಿಕ್ಸ್ ಬಂಡವಾಳ ಹೂಡುತ್ತಿದೆ

  ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯ ವೆಬ್ ಸರಣಿಗೆ ಖ್ಯಾತ ನಿರ್ದೇಶಕ ವೆಟ್ರಿಮಾರನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ವೆಬ್ ಸೀರಿಸ್ ಗೆ ನೆಟ್ ಫ್ಲಿಕ್ಸ್ ಇಂಡಿಯಾ ಬಂಡವಾಳ ಹೂಡುತ್ತಿದೆ. ಈಗಾಗಲೆ ಪ್ರಿಪ್ರೊಡಕ್ಷನ್ ಕೆಲಸ ಮುಗಿಸಿರುವ ತಂಡ ಸದ್ಯದಲ್ಲೇ ಚಿತ್ರೀಕರಣಕ್ಕೆ ಹೊರಡಲಿದೆಯಂತೆ.

  ಮುಖದ ಮೇಲಿರುವ ಮೊಡವೆಗಳಿಂದ ಅಭದ್ರತೆ ಕಾಡುತ್ತಿತ್ತು: ನಟಿ ಸಾಯಿ ಪಲ್ಲವಿಮುಖದ ಮೇಲಿರುವ ಮೊಡವೆಗಳಿಂದ ಅಭದ್ರತೆ ಕಾಡುತ್ತಿತ್ತು: ನಟಿ ಸಾಯಿ ಪಲ್ಲವಿ

  ಸದ್ಯದಲ್ಲೇ ಪ್ರಾರಂಭವಾಗಲಿದೆ ಚಿತ್ರೀಕರಣ

  ಸದ್ಯದಲ್ಲೇ ಪ್ರಾರಂಭವಾಗಲಿದೆ ಚಿತ್ರೀಕರಣ

  ಕೊರೊನಾ ಲಾಕ್ ಡೌನ್ ನಿಂದ ವೆಬ್ ಸೀರಿಸ್ ಬಗ್ಗೆ ಯಾವದೇ ಮಾಹಿತಿ ಬಹಿರಂಗಪಡಿಸಿರಲಿಲ್ಲ. ಆದರೀಗ ಚಿತ್ರೀಕರಣಕ್ಕೆ ಅನುಮತಿ ಸಿಕ್ಕ ಹಿನ್ನಲೆ ವೆಬ್ ಸರಣಿ ಬಗ್ಗೆ ರಿವೀಲ್ ಆಗಿದೆ. ಇನ್ನೇನು ಸದ್ಯದಲ್ಲೇ ಚಿತ್ರೀಕರಣಕ್ಕೆ ಹೊರಡಲಿದೆ. ಅಂದ್ಹಾಗೆ ಸಾಯಿ ಪಲ್ಲವಿ ಬಳಿ ಲವ್ ಸ್ಟೋರಿ ಮತ್ತು ವಿರಾಟ ಪರ್ವಂ ಸಿನಿಮಾ ಕೈಯಲ್ಲಿದೆ.

  ಚಿರಂಜೀವಿ ಪುತ್ರಿಯ ವೆಬ್ ಸೀರಿಸ್ ನಲ್ಲಿ ಪ್ರಕಾಶ್ ರೈ

  ಚಿರಂಜೀವಿ ಪುತ್ರಿಯ ವೆಬ್ ಸೀರಿಸ್ ನಲ್ಲಿ ಪ್ರಕಾಶ್ ರೈ

  ಇನ್ನೂ ಪ್ರಕಾಶ್ ರೈ ಈಗಾಗಲೆ ಒಂದು ವೆಬ್ ಸೀರಿಸ್ ಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಮೆಗಾ ಸ್ಟಾರ್ ಚಿರಂಜೀವಿ ಪುತ್ರಿ ಸುಶ್ಮಿತಾ ನಿರ್ಮಾಣದಲ್ಲಿ ಬರ್ತಿರುವ ವೆಬ್ ಸೀರಿಸ್ ನಲ್ಲಿ ಪ್ರಕಾಶ್ ರೈ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಮತ್ತೊಂದು ವೆಬ್ ಸೀರಿಸ್ ಗೆ ಗ್ರೀನ್ ಸಿಗ್ನಲ್ ನೀಡುವ ಮೂಲಕ ವೆಬ್ ಸರಣಿ ಲೋಕದಲ್ಲಿ ಬ್ಯುಸಿಯಾಗುತ್ತಿದ್ದಾರೆ.

  English summary
  Actress Sai Pallavi joins hands with director Vetrimaaran for web series. Actress Sai pallavi and Prakash raj are playing father and daughter role in this web series.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X