For Quick Alerts
  ALLOW NOTIFICATIONS  
  For Daily Alerts

  ದಕ್ಷಿಣ ಭಾರತದ ಮತ್ತೊಂದು ತಾರಾ ಜೋಡಿಯ ಡಿವೋರ್ಸ್? ಕೊನೆಗೂ ಮೌನ ಮುರಿದ ನಟಿ ಸ್ನೇಹಾ!

  |

  ಬಹುಭಾಷಾ ನಟಿ ಸ್ನೇಹಾ ಹಾಗೂ ನಟ ಪ್ರಸನ್ನ ಲವ್ ಮಾಡಿ ಮದುವೆ ಆಗಿದ್ದು ಗೊತ್ತೇಯಿದೆ. ಸದ್ಯ ದಂಪತಿ ನಡುವೆ ವೈಮನಸ್ಸು ಮೂಡಿದ್ದು, ಸ್ನೇಹಾ ಪತಿಯಿಂದ ದೂರಾಗಿ ಬೇರೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಇಬ್ಬರು ಡೈವೋರ್ಸ್ ತಗೋತ್ತಾರೆ ಎನ್ನುವ ಸುದ್ದಿ ಕಳೆದೊಂದು ವಾರದಿಂದ ಸೋಶಿಯಲ್ ಮೀಡಿಯಾದಲ್ಲಿ ಚಕ್ಕರ್ ಹೊಡೀತಿದೆ.

  ಚಿತ್ರರಂಗದಲ್ಲಿ ಡೈವೋರ್ಸ್ ವಿಚಾರ ಕಾಮನ್ ಅನ್ನುವಂತಾಗಿಬಿಟ್ಟಿದೆ. ಇತ್ತೀಚೆಗೆ ನಟಿ ಸಮಂತಾ ಹಾಗೂ ನಟ ನಾಗಚೈತನ್ಯಾ, ನಟ ಧನುಷ್ ಮತ್ತು ರಜನಿಕಾಂತ್ ಪುತ್ರಿ ಐಶ್ವರ್ಯ ರಜನಿಕಾಂತ್ ಡೈವೋರ್ಸ್ ತಗೆದುಕೊಳ್ಳುತ್ತಿರುವುದಾಗಿ ಘೋಷಿಸಿ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದರು. ಪ್ರೀತಿಸಿ ಮದುವೆಯಾದ ತಾರಾ ಜೋಡಿ ಹೀಗೆ ದೂರಾಗಿದ್ದು ಅಚ್ಚರಿ ಮೂಡಿಸಿತ್ತು. ಹಾಗಾಗಿ ಈಗ ಚಿತ್ರರಂಗದಲ್ಲಿ ಡೈವೋರ್ಸ್ ಗುಸುಗುಸು ಶುರುವಾಗುತ್ತಿದ್ದಂತೆ ಅಭಿಮಾನಿಗಳಲ್ಲಿ ಆತಂಕ ಶುರುವಾಗುವಂತಾಗಿದೆ. ಕಾಲಿವುಡ್ ಕ್ಯೂಟ್ ಕಪಲ್ ಸ್ನೇಹಾ ಹಾಗೂ ಪ್ರಸನ್ನ ದಂಪತಿ ಡೈವೋರ್ಸ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೀತಿದೆ. ಕೊನೆಗೂ ಈ ಬಗ್ಗೆ ನಟಿ ಸ್ನೇಹಾ ಪ್ರತಿಕ್ರಿಯಿಸಿದ್ದಾರೆ.

  "ಬೆಡ್‌ ಮೇಲೆ ಯಾವ ಹೀರೊ ಹಾಟ್ ಅಂದ್ರೆ..?" 'ನಾನು ಮತ್ತು ವರಲಕ್ಷ್ಮಿ' ಚಿತ್ರದ ನಟಿ ಎಡವಟ್ಟು!

  ಮುಂಬೈನಲ್ಲಿ ತೆಲುಗು ಕುಟುಂಬದಲ್ಲಿ ಹುಟ್ಟಿದ ಸ್ನೇಹಾ ಓದಿ ಬೆಳೆದಿದ್ದು ದುಬೈನಲ್ಲಿ. 22 ವರ್ಷಗಳ ಹಿಂದೆ ಮಲಯಾಳಂ ಚಿತ್ರದ ಮೂಲಕ ಬಣ್ಣದಲೋಕಕ್ಕೆ ಪಾದಾರ್ಪಣೆ ಮಾಡಿದ ಚೆಲುವೆ ಮುಂದೆ ತಮಿಳು, ತೆಲುಗು ಸಿನಿಮಾಗಳಲ್ಲಿ ಮಿಂಚಿ ಸೈ ಎನ್ನಿಸಿಕೊಂಡರು. ಕನ್ನಡದ 'ರವಿಶಾಸ್ತ್ರಿ' ಚಿತ್ರದಲ್ಲೂ ಸ್ನೇಹ ಮಿಂಚಿದ್ದರು.

  ಒಂದೇ ಪೋಸ್ಟ್‌ನಿಂದ ಗಾಸಿಪ್‌ಗೆ ಫುಲ್‌ಸ್ಟಾಪ್

  ಒಂದೇ ಪೋಸ್ಟ್‌ನಿಂದ ಗಾಸಿಪ್‌ಗೆ ಫುಲ್‌ಸ್ಟಾಪ್

  2012ರಲ್ಲಿ ನಟಿ ಸ್ನೇಹಾ, ನಟ ಪ್ರಸನ್ನ ಅವರನ್ನು ಪ್ರೀತಿಸಿ ಮದುವೆ ಆಗಿದ್ದರು. ದಂಪತಿಗೆ ಒಬ್ಬ ಮಗ ಹಾಗೂ ಒಬ್ಬ ಮಗಳು ಇದ್ದಾರೆ. ಕಳೆದೊಂದ ವಾರದಿಂದ ದಂಪತಿ ದೂರಾಗಲು ನಿರ್ಧರಿಸಿದ್ದಾರೆ. ಶೀಘ್ರದಲ್ಲೇ ಡೈವೋರ್ಸ್ ತೆಗೆದುಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಸದ್ದು ಮಾಡುತ್ತಿತ್ತು. ಸದ್ಯ ನಟಿ ಸ್ನೇಹಾ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಪತಿ ಪ್ರಸನ್ನ ಜೊತೆಗಿನ ಸೆಲ್ಫಿ ಪೋಸ್ಟ್ ಮಾಡಿ ಎಲ್ಲರ ವದಂತಿಗಳಿಗೂ ತೆರೆ ಎಳೆದಿದ್ದಾರೆ. ಇಬ್ಬರು ಪಿಂಕ್ ಕಲರ್ ಟೀಶರ್ಟ್‌ ತೊಟ್ಟು 'ಟ್ವಿನ್ನಿಂಗ್.. ಹ್ಯಾಪಿ ವೀಕೆಂಡ್" ಎಂದು ಸ್ನೇಹ ಬರೆದುಕೊಂಡಿದ್ದಾರೆ. ಆ ಮೂಲಕ ಇಬ್ಬರೂ ಬೇರೆ ಬೇರೆ ಕಡೆ ವಾಸಿಸುತ್ತಿದ್ದಾರೆ ಎಂದವರಿಗೆ, ಇಲ್ಲ ನಾವು ಒಟ್ಟಿಗೆ ಇದ್ದೇವೆ ಎಂದು ಸಾರಿ ಹೇಳಿದ್ದಾರೆ.

  ಎಲ್ಲಾ ಬರೀ ಊಹಾಪೋಹಾ

  ಎಲ್ಲಾ ಬರೀ ಊಹಾಪೋಹಾ

  ಹಾಗೆ ನೋಡಿದರೆ ಸ್ನೇಹಾ ಹಾಗೂ ಪ್ರಸನ್ನ ದೂರಾಗುತ್ತಿದ್ದಾರೆ ಎನ್ನುವ ಸುದ್ದಿ ಹುಟ್ಟಿಕೊಳ್ಳಲು ಯಾವುದೇ ಸುಳಿವು ಸಿಕ್ಕಿರಲಿಲ್ಲ. ಪತಿ ಹಾಗೂ ಮಕ್ಕಳ ಜೊತೆ ನಟಿ ಸ್ನೇಹಾ ದೀಪಾವಳಿ ಹಬ್ಬ ಆಚರಿಸಿದ್ದರು. ಒಟ್ಟಿಗೆ ಹುಟ್ಟುಹಬ್ಬ ಆಚರಿಸಿದ್ದರು. ಅದಕ್ಕೆ ಸಂಬಂಧಿಸಿ ಫೋಟೊಗಳನ್ನು ಸ್ನೇಹಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳುತ್ತಲೇ ಇದ್ದಾರೆ. ಅದರೂ ಕೂಡ ಇಬ್ಬರು ದೂರಾಗುತ್ತಾರೆ ಎನ್ನುವ ಗಾಸಿಪ್ ಹೇಗೆ ಹುಟ್ಟಿಕೊಳ್ತೋ ಗೊತ್ತಿಲ್ಲ. ಒಟ್ನಲ್ಲಿ ನೇರವಾಗಿ ಏನು ಹೇಳದೇ ಒಂದೇ ಒಂದು ಪೋಸ್ಟ್‌ನಿಂದ ಎಲ್ಲದಕ್ಕೂ ಫುಲ್‌ಸ್ಟಾಪ್ ಇಟ್ಟಿದ್ದಾರೆ.

  ಪ್ರೀತಿಸಿ ಮದುವೆ ಆಗಿದ್ದ ಜೋಡಿ

  ಪ್ರೀತಿಸಿ ಮದುವೆ ಆಗಿದ್ದ ಜೋಡಿ

  2009ರಲ್ಲಿ ಬಂದ 'ಅಚ್ಚಮುಂಡು ಅಚ್ಚಮುಂಡು' ಸಿನಿಮಾದಲ್ಲಿ ಮೊದಲ ಬಾರಿಗೆ ಇಬ್ಬರು ಒಟ್ಟಿಗೆ ನಟಿಸಿದ್ದರು. ಶೂಟಿಂಗ್ ವೇಳೆ ಇಬ್ಬರು ನಡುವೆ ಆತ್ಮೀಯತೆ ಬೆಳೆದಿತ್ತು. ಅಷ್ಟರಾಗಲೇ ಇಬ್ಬರ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಎನ್ನುವ ಗುಸುಗುಸು ಶುರುವಾಗಿತ್ತು. ನಂತರ 3 ವರ್ಷಗಳ ಕಾಲ ಡೇಟಿಂಗ್ ಮಾಡಿದ ಜೋಡಿ 2012ರಲ್ಲಿ ಪೋಷಕರ ಒಪ್ಪಿಗೆ ಪಡೆದು ಹಸೆಮಣೆ ಏರಿದ್ದರು. ಸ್ನೇಹ ಇತ್ತೀಚೆಗೆ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ದರ್ಶನ್ ನಟನೆಯ ಕನ್ನಡದ 'ಕುರುಕ್ಷೇತ್ರ' ಚಿತ್ರದಲ್ಲಿ ದ್ರೌಪತಿ ಪಾತ್ರದಲ್ಲಿ ಮಿಂಚಿದ್ದರು. ಧನುಷ್ ನಟನೆಯ 'ಪಟಾಸ್' ಆಕೆಯ ಕೊನೆಯ ಸಿನಿಮಾ.

  ಹೋಮ್ಲಿ ಲುಕ್‌ನಲ್ಲೇ ಹೆಚ್ಚು ನಟನೆ

  ಹೋಮ್ಲಿ ಲುಕ್‌ನಲ್ಲೇ ಹೆಚ್ಚು ನಟನೆ

  ನಟಿ ಸ್ನೇಹಾ ಸಿಕ್ಕಾಪಟ್ಟೆ ಹಾಟ್ ಲುಕ್‌ನಲ್ಲಿ ಎಂದೂ ನಟಿಸಲೇ ಇಲ್ಲ. ಸ್ಕಿನ್‌ ಶೋಗೆ ಎಂದಿಗೂ ಒಪ್ಪದ ಚೆಲುವೆ ಸದಾ ಸಾಂಪ್ರದಾಯಿಕ ಉಡುಗೆ ಹಾಗೂ ಹೋಮ್ಲಿ ಲುಕ್‌ ಪಾತ್ರಗಳಲ್ಲೇ ನಟಿಸುತ್ತಿದ್ದರು. ಆಟೋಗ್ರಾಫ್, ಸಂಕ್ರಾಂತಿ, ಪುದುಪೇಟೈ, ಪರಿವೋಂ ಸಂದಿಪ್ಪೋಂ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಸ್ನೇಹಾ ಮಿಂಚಿದ್ದಾರೆ.

  English summary
  Actress Sneha Prasanna Puts Full Stop To Divorce Rumours In Single Post. Sneha responded Rumours by sharing Selfie of herself and her husband with lovely caption. know more.
  Sunday, November 13, 2022, 13:32
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X