For Quick Alerts
  ALLOW NOTIFICATIONS  
  For Daily Alerts

  Aishwaryaa Rajinikanth |ಐಶ್ವರ್ಯಾ ಪಕ್ಕದಲ್ಲಿದ್ದ ಧನುಷ್ ಹೆಸರು ತೆಗೆದ ರಜನಿ ಪುತ್ರಿ!

  |

  ಕಳೆದ ವರ್ಷ ಸಾಕಷ್ಟು ಸುದ್ದಿಯಾದ ವಿಚಾರಗಳಲ್ಲಿ ನಟ ಧನುಷ್ ಮತ್ತು ರಜನಿಕಾಂತ್ ಪುತ್ರಿ ಐಶ್ವರ್ಯಾ ಅವರ ವಿಚ್ಛೇದನದ ಸುದ್ದಿ ಕೂಡ ಹೆಚ್ಚಾಗಿ ಸೌಂಡ್ ಮಾಡಿತ್ತು. ಸಾಕಷ್ಟು ಅನ್ಯೋನ್ಯವಾಗಿದ್ದ ಈ ಜೋಡಿ ಸಡನ್ ಆಗಿ ವಿಚ್ಛೇದನ ಅನೌನ್ಸ್ ಮಾಡಿಕೊಂಡಿದ್ದಾರೆ.

  ವಿಚ್ಛೇದನ ತೀರ್ಮಾನದ ನಂತರ ಸಾಕಷ್ಟು ಬೆಳವಣಿಗೆಗಳು ಆದವು. ಕುಟುಂಬ ಸದಸ್ಯರು, ಆಪ್ತರು ಇವರಿಬ್ಬರು ಮತ್ತೆ ಒಂದಾಗುತ್ತಾರೆ. ಇದು ಆತುರದ ನಿರ್ಧಾರವಷ್ಟೆ ಎಂದು ಹೇಳಿಕೆ ನೀಡಿದ್ದರು. ಇವರು ಹೇಳುವಂತೆ ಸುದ್ದಿ ನಿಜವಾಗಲಿ ಎಂದು ಅಭಿಮಾನಿಗಳು ಕೂಡ ಅಂದುಕೊಳ್ಳುತ್ತಿದ್ದರು.

  ವಿಚ್ಛೇದನದ ನೋವು ಮರೆತು ನಿರ್ದೇಶನಕ್ಕಿಳಿದ ಐಶ್ವರ್ಯಾ ರಜನಿಕಾಂತ್!ವಿಚ್ಛೇದನದ ನೋವು ಮರೆತು ನಿರ್ದೇಶನಕ್ಕಿಳಿದ ಐಶ್ವರ್ಯಾ ರಜನಿಕಾಂತ್!

  ಡಿವೋರ್ಸ್ ಅನೌನ್ಸ್ ಆದ ಬಳಿಕ ಧನುಷ್ ಆಗಲಿ ಐಶ್ವರ್ಯಾ ಆಗಲಿ ಈ ಬಗ್ಗೆ ಮೌನ ಮುರಿದಿಲ್ಲ. ತಮ್ಮ ತಮ್ಮ ಕೆಲಸಗಳಲ್ಲಿ ಬ್ಯುಸಿ ಯಾಗಿದ್ದಾರೆ. ಇದೀಗ ಈ ವಿಚಾರದಲ್ಲಿ ಮತ್ತೊಂದು ಬೆಳವಣಿಗೆಯಾಗಿದೆ.

  ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಧನುಷ್ ಹೆಸರು ಔಟ್

  ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಧನುಷ್ ಹೆಸರು ಔಟ್

  ನಟ ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್ ಅವರು ತಮ್ಮ 18 ವರ್ಷಗಳ ಸುದೀರ್ಘ ದಾಂಪತ್ಯ ಜೀವನಕ್ಕೆ ಬ್ರೇಕ್ ಹಾಕಿದ್ದಾರೆ. ಜನವರಿ 17ರಂದು ಅಧಿಕೃತವಾಗಿ ಈ ವಿಚಾರವನ್ನು ಇಬ್ಬರು ಕೂಡ ಘೋಷಣೆ ಮಾಡಿದ್ದರು. ಇದು ಧನುಷ್, ರಜನಿಕಾಂತ್ ಅಭಿಮಾನಿಗಳಿಗೆ ಬೇಸರವನ್ನುಂಟು ಮಾಡಿತ್ತು.ಸೂಪರ್ ಸ್ಟಾರ್ ರಜನಿಕಾಂತ್ ಅವರ ಪುತ್ರಿ ಐಶ್ವರ್ಯಾ ವಿವಾಹವಾಗಿದ್ದ ತಮಿಳು ನಟ ಧನುಷ್ ವಿಚ್ಛೇದನದ ಸುದ್ದಿ ಎಲ್ಲಾ ಕಡೆ ಸಾಕಷ್ಟು ಸದ್ದು ಮಾಡಿಗಿತ್ತು. ಅಲ್ಲದೆ 18 ವರ್ಷ ಸಂಸಾರ ಮಾಡಿದ ಬಳಿಕ ಈ ಜೋಡಿ ವಿಚ್ಛೇದನ ಪಡೆದುಕೊಂಡಿದ್ದು ಯಾಕೆ ಎನ್ನುವ ಪ್ರಶ್ನೆ ಎಲ್ಲರಲ್ಲೂ ಕಾಡಿತ್ತು. ಹೀಗಿದ್ದರೂ ಕೂಡ ಐಶ್ವರ್ಯಾ ರಜನಿಕಾಂತ್ ತನ್ನ ಸೋಶಿಯಲ್ ಮೀಡಿಯಾದಿಂದ ಧನುಷ್ ಹೆಸರನ್ನು ತೆಗೆದು ಹಾಕಿರಲಿಲ್ಲಾ. ಇದು ಎಲ್ಲರಿಗೂ ಅನುಮಾನ ಉಂಟು ಮಾಡಿತ್ತು.

  ಧನುಷ್ ಹೆಸರನ್ನು ಅಳಿಸಿ ಹಾಕಿದ ಐಶ್ವರ್ಯಾ

  ಧನುಷ್ ಹೆಸರನ್ನು ಅಳಿಸಿ ಹಾಕಿದ ಐಶ್ವರ್ಯಾ

  ಈ ಅನುಮಾನಕ್ಕೆ ಈಗ ಉತ್ತರ ನೀಡಿರುವ ಐಶ್ವರ್ಯಾ ರಜನಿಕಾಂತ್ ತನ್ನ ಟ್ವಿಟ್ಟರ್ , ಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್‌ನಿಂದ ತನ್ನ ಹೆರಸಿನೊಂದಿಗೆ ಇದ್ದ ಧನುಷ್ ಹೆಸರನ್ನು ಅಳಿಸಿ ಹಾಕಿದ್ದಾರೆ. ಡಿವೋರ್ಸ್ ಅನೌನ್ಸ್ ಮಾಡಿದ ಹಲವು ತಿಂಗಳ ಬಳಿಕ ಸಮಯ ತೆಗೆದುಕೊಂಡು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಇದನ್ನು ಗಮನಿಸಿದ ಫ್ಯಾನ್ಸ್ ಇದ್ದ ಒಂದು ಹೋಪ್ಸ್ ಅನ್ನು ಕಳೆದುಕೊಂಡಿದ್ದಾರೆ. ಐಶ್ವರ್ಯಾ ರಜನಿಕಾಂತ್ ಮತ್ತು ಐಶ್ವರ್ಯಾ ಮತ್ತೆ ಒಂದಾಗೋದಿಲ್ಲ ಎಂಬುದನ್ನು ಖಾತ್ರಿ ಮಾಡಿಕೊಂಡಿದ್ದಾರೆ.

  Recommended Video

  Aishwarya Rajinikanth | ಚಿಕಿತ್ಸೆ ಪಡೆಯುತ್ತಲೇ ಅಭಿಮಾನಿಗಳಲ್ಲಿ ಸಂತಸದ ವಿಚಾರ ಹಂಚಿಕೊಂಡ ಐಶ್ವರ್ಯ.
  ಧನುಷ್ ಜೊತೆ ಸಂಬಂಧ ಕಳೆದುಕೊಳ್ಳಲು ತೀರ್ಮಾನ

  ಧನುಷ್ ಜೊತೆ ಸಂಬಂಧ ಕಳೆದುಕೊಳ್ಳಲು ತೀರ್ಮಾನ

  ಇಷ್ಟು ದಿನ ಐಶ್ವರ್ಯಾ ಸೋಶಿಯಲ್ ಮೀಡಿಯಾದಲ್ಲಿ ash_r_dhanush ಎಂದಿತ್ತು. ಆದರೇ ಈಗ ash_rajinikanth ಎಂದು ತನ್ನ ಪ್ರೊಫೈಲ್ ನೇಮ್ ಬದಲಾಯಿಸಿಕೊಂಡಿದ್ದಾರೆ. ಈ ಬದಲಾವಣೆ ಟ್ವಿಟ್ಟರ್, ಫೇಸ್ ಬುಕ್, ಇನ್‌ಸ್ಟಾಗ್ರಾಂ ಖಾತೆಗಳಲ್ಲಿ ಆಗಿದೆ. ಈ ಮೂಲಕ ಐಶ್ವರ್ಯಾ ರಜನಿಕಾಂತ್ ಸಂಪೂರ್ಣವಾಗಿ ಧನುಷ್ ಜೊತೆ ಸಂಬಂಧ ಕಳೆದುಕೊಳ್ಳಲು ತೀರ್ಮಾನಿಸಿದ್ದಾರೆ.

  ಮ್ಯೂಸಿಕ್ ವೀಡಿಯೋಗೆ ಶುಭ ಹಾರೈಸಿದ್ದ ಧನುಷ್

  ಇನ್ನು ಇತ್ತೀಚೆಗಷ್ಟೆ ಟ್ವೀಟ್ ಮಾಡಿದ ಐಶ್ವರ್ಯಾ ರಜನಿಕಾಂತ್ ಮ್ಯೂಸಿಕ್ ವಿಡಿಯೋಗೆ ಧನುಷ್ ಶುಭ ಹಾರೈಸಿದ್ದರು. "ನನ್ನ ಸ್ನೇಹಿತೆ ash_r_dhanush ನಿಮ್ಮ ಮ್ಯೂಸಿಕ್ ವಿಡಿಯೋಗೆ ಅಭಿನಂದನೆಗಳು. #payani ಗೆ ದೇವರು ಆಶೀರ್ವದಿಸಲಿ" ಎಂದು ಬರೆದುಕೊಂಡಿದ್ದರು. ಡಿವೋರ್ಸ್ ಬಳಿಕ ಉತ್ತಮ ಸ್ನೇಹಿತರಂತೆ ಇವರಿಬ್ಬರೂ ಇದ್ದಾರೆ ಅನ್ನೋದು ಈ ಮೂಲಕ ತಿಳಿದು ಬಂದಿತ್ತು. ಇನ್ನು ಧನುಷ್ ಟ್ವೀಟ್‌ಗೆ ಐಶ್ವರ್ಯಾ ರಜನಿಕಾಂತ್ "ಧನ್ಯವಾದಗಳು ಧನುಷ್.. ಗಾಡ್ ಸ್ಪೀಡ್" ಎಂದು ರೀ- ಟ್ವೀಟ್ ಮಾಡಿದ್ದರು. ಡಿವೋರ್ಸ್ ಅನೌನ್ಸ್ ಬಳಿಕವೂ ಇವರಿಬ್ಬರು ಇಷ್ಟು ಅನ್ಯೊನ್ಯವಾಗಿ ಇರೋದು ಕಂಡು ಅಭಿಮಾನಿಗಳು ಫುಲ್ ಖುಷ್ ಆಗಿದ್ರು. ಆದರೆ ಈಗ ಈ ಸುದ್ದಿ ತಿಳಿದು ಫ್ಯಾನ್ಸ್ ನಿರಾಶರಾಗಿದ್ದಾರೆ.

  English summary
  Aishwaryaa Rajinikanth has removed Dhanush’s name from her social media accounts. Earlier, her Twitter and Instagram account handles
  Friday, March 25, 2022, 9:34
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X