Just In
Don't Miss!
- News
ಬಜೆಟ್; ತವರು ಜಿಲ್ಲೆ ಶಿವಮೊಗ್ಗಕ್ಕೆ ಯಡಿಯೂರಪ್ಪ ಕೊಡುಗೆಗಳು
- Sports
ಕರ್ನಾಟಕ ಬಜೆಟ್: ಮಂಡ್ಯ ಕ್ರೀಡಾಂಗಣ ಅಭಿವೃದ್ಧಿಗೆ 10 ಕೋ.ರೂ. ಘೋಷಣೆ
- Finance
ಕರ್ನಾಟಕ ರಾಜ್ಯ ಬಜೆಟ್: ಕೃಷಿ ವಲಯಕ್ಕೆ 31,021 ಕೋಟಿ ರೂಪಾಯಿ ಅನುದಾನ
- Automobiles
ಪ್ರತಿ ಚಾರ್ಜ್ಗೆ 240 ಕಿ.ಮೀ ಮೈಲೇಜ್ ನೀಡುವ ಓಲಾ ಇವಿ ಸ್ಕೂಟರ್ ಬಿಡುಗಡೆ ಮಾಹಿತಿ ಬಹಿರಂಗ
- Lifestyle
ಸೂಪರ್ ಫುಡ್ ಆಗಿರುವ ಟೆಫ್ ಬಗ್ಗೆ ನಿಮಗೆಷ್ಟು ಗೊತ್ತು?
- Education
Women's Day 2021 Google Doodle: ಡೂಡಲ್ ಮೂಲಕ ಗೌರವ ಸಲ್ಲಿಸಿದ ಗೂಗಲ್
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅಜಿತ್ ಅಭಿಮಾನಿಗಳ ಬೇಡಿಕೆ ಕೇಳಿ ಬೆರಗಾದ ಅಶ್ವಿನ್, ಮೋಹಿನ್ ಅಲಿ
ಕ್ರಿಕೆಟ್ ಸ್ಟೇಡಿಯಂ ನಲ್ಲಿ ಒಮ್ಮೊಮ್ಮೆ ಸಖತ್ ಮಜವಾದ ವಿಷಯಗಳು ನಡೆಯುತ್ತವೆ. ಆಟಗಾರರ ಕುರಿತು ಸ್ಟೇಡಿಯಂ ನಲ್ಲಿ ಕುಳಿತ ಅಭಿಮಾನಿಗಳು ಏನಾದರೂ ಕಮೆಂಟ್ ಮಾಡುವುದು, 'ಲವ್ ಯೂ' ಅನ್ನುವುದು ಸಾಮಾನ್ಯ. ಆದರೆ ಭಾರತ ತಂಡದ ಕ್ರಿಕೆಟಿಗ ಅಶ್ವಿನ್ ಹಾಗೂ ಇಂಗ್ಲೆಂಡ್ ತಂಡದ ಆಟಗಾರ ಮೋಯಿನ್ ಅಲಿಗೆ ಭಿನ್ನ ಅನುಭವ ಆಗಿದೆ.
ಇತ್ತೀಚೆಗೆ ಚೆನ್ನೈನ ಚೆಪಾಕ್ ಸ್ಟೇಡಿಯಂ ನಲ್ಲಿ ಮುಗಿದ ಟೆಸ್ಟ್‌ನಲ್ಲಿ ಭಾರತ ಅದ್ಭುತವಾದ ಗೆಲುವು ಕಂಡಿದೆ.ಆರ್.ಅಶ್ವಿನ್ ರ ಆಲ್‌ರೌಂಡ್ ಪ್ರದರ್ಶನ ಇಂಗ್ಲೆಂಡ್ ತಂಡವು ಭಾರತದ ಮುಂದೆ ಮಂಡಿ ಊರುವಂತೆ ಮಾಡಿತು. ಆದರೆ ಆಟದ ನಡುವೆ ಆರ್.ಅಶ್ವಿನ್‌ಗೆ, ತಮಿಳಿನ ಖ್ಯಾತ ನಟ ಅಜಿತ್ ಅಭಿಮಾನಿಗಳು ಭಿನ್ನ ಬೇಡಿಕೆಯೊಂದಕ್ಕೆ ಇಟ್ಟಿದ್ದಾರೆ.
ಅಶ್ವಿನ್, ಬೌಂಡರಿಯಲ್ಲಿ ಫೀಲ್ಡಿಂಗ್ ಮಾಡಬೇಕಾದರೆ ಅಜಿತ್ ಅಭಿಮಾನಿಗಳು 'ಥಲಾ ಅಶ್ವಿನ್, ಥಲಾ ಅಶ್ವಿನ್ 'ವಾಲಿಮೈ' ಅಪ್‌ಡೇಟ್ ಕೊಡಿ' ಎಂದಂರಂತೆ. ಮೊದಲಿಗೆ ಅಶ್ವಿನ್‌ಗೆ ಇವರು ಏನು ಕೇಳುತ್ತಿದ್ದಾರೆ ಎಂದು ಗೊತ್ತಾಗಿಲ್ಲ. ಆದರೆ ಆಟದ ನಡುವೆ ಅದಕ್ಕೆ ಪ್ರತಿಕ್ರಿಯಿಸದ ಅಶ್ವಿನ್ ಆಟ ಮುಗಿದ ಮೇಲೆ ಹೋಗಿ ಏನದು ವಾಲಿಮೈ ಎಂದು ಗೂಗಲ್ ಮಾಡಿ ನೊಡಿದ್ದಾರೆ. ಆಗ ಗೊತ್ತಾಗಿದೆ ಅಶ್ವಿನ್‌ಗೆ ಅವರು ಅಜಿತ್ ಸಿನಿಮಾ 'ವಾಲಿಮೈ' ಬಗ್ಗೆ ಮಾಹಿತಿ ಕೊಡಿ ಎಂದು ಕೇಳಿದ್ದಾರೆಂದು. ಹೀಗೆಂದು ಅವರೇ ಯುಟ್ಯೂಬ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಗೂಗಲ್ ಮಾಡಿ ನೊಡಿದ ಮೇಲೆ ಬಹಳ ನಕ್ಕೆ: ಅಶ್ವಿನ್
ಈ ಬಗ್ಗೆ ಚುಟುಕು ಸಂದರ್ಶನದಲ್ಲಿ ಮಾತನಾಡಿರುವ ಆರ್.ಅಶ್ವಿನ್, 'ಅವರು ಏನು ಹೇಳುತ್ತಿದ್ದಾರೆಂದು ನನಗೆ ಗೊತ್ತಾಗಲಿಲ್ಲ. ಆದರೆ ಗೂಗಲ್ ಮಾಡಿ ನೋಡಿದ ಮೇಲೆ ಅರ್ಥವಾಯಿತು. ಆ ನಂತರ ನಾನು ಬಿದ್ದು-ಬಿದ್ದು ನಕ್ಕೆ. ಆದರೆ ಅಭಿಮಾನಿಗಳಿಗೆ ಹೇಳಲಿಚ್ಚಿಸುತ್ತೇನೆ, ಖಂಡಿತ ನನಗೆ ವಾಲಿಮೈ ಸಿನಿಮಾದ ಅಪ್‌ಡೇಟ್ ಗೊತ್ತಿಲ್ಲ' ಎಂದಿದ್ದಾರೆ.

ಮೋಯಿನ್ ಅಲಿಯನ್ನೂ ಬಿಟ್ಟಿಲ್ಲ ಅಭಿಮಾನಿಗಳು
ಇದು ಇಷ್ಟಕ್ಕೆ ಮುಗಿದಿಲ್ಲ, ಅಜಿತ್ ಅಭಿಮಾನಿಗಳು ಇಂಗ್ಲೆಂಡ್ ಫೀಲ್ಡಿಂಗ್ ವೇಲೆ ಮೋಯಿನ್ ಅಲಿ ಬೌಂಡರಿ ಗೆರೆ ಬಳಿ ಬಂದಾಗ ಅವರನ್ನೂ 'ವಾಲಿಮೈ' ಅಪ್‌ಡೇಟ್ ಗಾಗಿ ಕೇಳಿದ್ದಾರೆ. ಮಾರನೇಯ ದಿನ ಮೋಯಿನ್ ಅಲಿ, ಅಶ್ವಿನ್ ಅನ್ನು ಕೇಳಿದರಂತೆ, 'ವಾಲಿಮೈ' ಎಂದರೆ ಏನು ಎಂದು. ಮೋಯಿನ್ ಅಲಿಗೆ ಪೂರ್ಣ ವಾಗಿ ವಿವರಿಸಿದರಂತೆ ಅಶ್ವಿನ್.

'ಮಾಸ್ಟರ್' ಸಿನಿಮಾ ನೋಡಿದೆ, ಬಹಳ ಚೆನ್ನಾಗಿದೆ: ಅಶ್ವಿನ್
'ತಮಿಳುನಾಡು ಜನ ಸಿನಿಮಾವನ್ನು ಪ್ರೀತಿಸುತ್ತಾರೆ ಅದಕ್ಕೆ ನನಗೆ ಹೆಮ್ಮೆಯಿದೆ ಎಂದಿರುವ ಅಶ್ವಿನ್, 'ಈ ಘಟನೆಯನ್ನು ನಾನು ಮರೆಯುವಂತಿಲ್ಲ. ನಾನು ವಿಜಯ್ ನಟನೆಯ 'ಮಾಸ್ಟರ್' ಸಿನಿಮಾ ನೊಡಿದೆ. ಅದೂ ಸಹ ಒಳ್ಳೆಯ ಸಿನಿಮಾ, ಆದರೆ 'ವಾಲಿಮೈ' ಬಹಳ ಕಾಲ ನೆನಪಿನಲ್ಲಿ ಉಳಿಯಲಿದೆ' ಎಂದಿದ್ದಾರೆ ಆರ್.ಅಶ್ವಿನ್.

ಅಜಿತ್ ನಟನೆಯ ವಾಲಿಮೈ ಸಿನಿಮಾ
ಅಜಿತ್ ನಟಿಸುತ್ತಿರುವ ಸಿನಿಮಾ 'ವಾಲಿಮೈ' ಬಗ್ಗೆ ಇತ್ತೀಚೆಗೆ ಯಾವುದೇ ಸುದ್ದಿ ಇಲ್ಲ. ಪೋಸ್ಟರ್, ಟೀಸರ್, ಟ್ರೇಲರ್ ಯಾವುದೂ ಬಿಡುಗಡೆ ಆಗಿಲ್ಲ. ಹಾಗಾಗಿ ಅಭಿಮಾನಿಗಳು ಒತ್ತಾಯ ಮಾಡುತ್ತಿದ್ದಾರೆ. 'ವಾಲಿಮೈ' ಎಂದರೆ ಕನ್ನಡದಲ್ಲಿ ಶಕ್ತಿ ಎಂದರ್ಥ.