For Quick Alerts
  ALLOW NOTIFICATIONS  
  For Daily Alerts

  ಅಜಿತ್ ದಂಪತಿಗೆ ಮದುವೆ ವಾರ್ಷಿಕೋತ್ಸವದ ಸಂಭ್ರಮ: ಟ್ವಿಟ್ಟರ್ ನಲ್ಲಿ ಅಭಿಮಾನಿಗಳ ಟ್ರೆಂಡ್

  |

  ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ಜೋಡಿಗಳಲ್ಲಿ ತಲಾ ಅಜಿತ್ ಮತ್ತು ಶಾಲಿನಿ ದಂಪತಿ ಜೋಡಿಯು ಒಂದು. ಕಾಲಿವುಡ್ ನ ಈ ಮುದ್ದಾದ ದಂಪತಿ ಅನೇಕರಿಗೆ ಮಾದರಿ. ಕಾಲಿವುಡ್ ನ ಈ ಸ್ಟಾರ್ ನಟ ದಾಂಪತ್ಯ ಜೀವನಕ್ಕೆ ಕಾಲಿಟ್ಟು 20 ವರ್ಷಗಳು ಕಳೆದಿವೆ. ಹೌದು ಇಂದು ತಲಾ ಅಜಿತ್ ಮತ್ತು ಶಾಲಿನಿ ದಂಪತಿಗೆ ಮದುವೆ ವಾರ್ಷಿಕೋತ್ಸವದ ಸಂಭ್ರಮ.

  ಮಹೇಶ್ ಬಾಬು ನಂತರ 'ತಲಾ' ಅಜಿತ್ ಭೇಟಿ ಮಾಡಿದ ಶ್ರೀಮುರಳಿ..! |FILMIBEAT KANNADA

  ಕಾಲಿವುಡ್ ನಲ್ಲಿ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿರುವ ನಟ ಅಜಿತ್. ಅಭಿನಯನದ ಹೊರತಾಗಿಯೂ ಅಜಿತ್ ಅನೇಕರಿಗೆ ಮಾದರಿ. ಇಂದು ಮದುವೆ ವಾರ್ಷಿಕೋತ್ಸವಕ್ಕೆ ಅಭಿಮಾನಿಗಳಿಂದ ಶುಭಾಶಯಗಳ ಸುರಿಮಳೆಯೇ ಹರಿದುಬರುತ್ತಿದೆ. ಮುಂದೆ ಓದಿ...

  ಮುದ್ದಾದ ಜೋಡಿಗೆ ಅಭಿಮಾನಿಗಳ ಶುಭಾಶಯ

  ಮುದ್ದಾದ ಜೋಡಿಗೆ ಅಭಿಮಾನಿಗಳ ಶುಭಾಶಯ

  "ಮದುವೆ ವಾರ್ಷಿಕೋತ್ಸವದ ಶುಭಾಶಯಗಳು ಅಜಿತ್ ಶಾಲಿನಿ" ಎಂದು ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಟ್ರೆಂಡ್ ಮಾಡಿದ್ದಾರೆ. ಅಂದ್ಹಾಗೆ ಅಜಿತ್ ಕಳೆದ 20 ವರ್ಷಗಳ ಹಿಂದೆ ಅಂದರೆ ಏಪ್ರಿಲ್ 24 2000ನೇ ಇಸವಿಯಲ್ಲಿ ಅಜಿತ್, ಶಾಲಿನಿ ಜೊತೆ ಹಸೆಮಣೆ ಏರಿದ್ದಾರೆ. ಈ ದಂಪತಿಗೆ ಇಬ್ಬರು ಮಕ್ಕಳು. ಅನೋಷ್ಕಾ ಮತ್ತು ಆದ್ವಿಕ್ ಎನ್ನುವ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.

  ರೋಚಕವಾಗಿದೆ ಅಜಿತ್-ಶಾಲಿನಿ ಪ್ರೇಮಕಥೆ

  ರೋಚಕವಾಗಿದೆ ಅಜಿತ್-ಶಾಲಿನಿ ಪ್ರೇಮಕಥೆ

  ಅಜಿತ್-ಶಾಲಿನಿ ಇಬ್ಬರದ್ದು ಪ್ರೇಮ ವಿವಾಹ. ಇವರ ಪ್ರೀತಿಯ ಹಿಂದೆ ಒಂದು ರೋಚಕ ಕಥೆಯೆ ಇದೆ. ಕೇರಳ ಮೂಲದ ನಟಿ ಶಾಲಿನಿ ನಂತರ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಾರೆ. ಇಬ್ಬರ ಪ್ರೀತಿ ಪ್ರಾರಂಭವಾಗಿದ್ದು 'ಅಮರ್ಕಳಂ' ಚಿತ್ರದ ದುರಂತ ಸನ್ನಿವೇಶ.

  ಇಬ್ಬರ ಪ್ರೀತಿಗೆ ಕಾರಣವಾಯ್ತು ದುರಂತ ಸನ್ನಿವೇಶ

  ಇಬ್ಬರ ಪ್ರೀತಿಗೆ ಕಾರಣವಾಯ್ತು ದುರಂತ ಸನ್ನಿವೇಶ

  'ಅಮರ್ಕಳಂ' ಚಿತ್ರೀಕರಣದ ವೇಳೆ ಅಜಿತ್ ಚಾಕು ಹಿಡಿದು ಶಾಲಿನಿಗೆ ಬೆದರಿಸುವ ಸನ್ನಿವೇಶವಿತ್ತು. ಆದರೆ ಶಾಲಿನಿ ಕೈಗೆ ಚಾಕು ತಗುಲಿ ನಿಜಕ್ಕೂ ತೀವ್ರ ಗಾಯವಾಗಿತ್ತು. ಬಹಳ ನೊಂದುಕೊಂಡ ಅಜಿತ್, ಚಿತ್ರೀಕರಣದುದ್ದಕ್ಕೂ ಶಾಲಿನಿ ಕಾಳಜಿ ಮಾಡಿದರು. ಈ ಕಾಳಜಿ, ಆರೈಕೆ ಇಬ್ಬರ ಪ್ರೇಮಕ್ಕೆ ತಿರುಗಿತು.

  1999ರಲ್ಲಿ ಪ್ರೀತಿ ವಿಷಯ ಬಹಿರಂಗ ಪಡಿಸಿದ ಜೋಡಿ

  1999ರಲ್ಲಿ ಪ್ರೀತಿ ವಿಷಯ ಬಹಿರಂಗ ಪಡಿಸಿದ ಜೋಡಿ

  'ಅಮರ್ಕಳಂ' ಬಿಡುಗಡೆಯ ಬಳಿಕ ಈ ಜೋಡಿ ಪರಸ್ಪರ ಪ್ರೀತಿಸುತ್ತಿರುವುದನ್ನು ಹೇಳಿಕೊಂಡಿತು. 1999ರಲ್ಲಿ ಸಂದರ್ಶನವೊಂದರಲ್ಲಿ ಅಜಿತ್, ತಮ್ಮ ಮತ್ತು ಶಾಲಿನಿ ಸಂಬಂಧದ ಬಗ್ಗೆ ಮಾತನಾಡಿದ್ದರು. 'ನಾನು ನದಿಯಂತೆ. ನನ್ನ ಬದುಕು ಅನೇಕ ತಿರುವುಗಳನ್ನು ಪಡೆದುಕೊಂಡಿದೆ. ಅನೇಕ ಬಂಡೆಗಳಿಗೆ ಡಿಕ್ಕಿ ಹೊಡೆದಿದೆ. ನನ್ನ ಹೆಗಲ ಮೇಲೆ ಅನೇಕ ಸಂಗತಿಗಳನ್ನು ಹೊತ್ತು ಸಾಗಿದ್ದೇನೆ. ಈಗ ನನಗಾಗಿ ಸಾಗರವೊಂದನ್ನು ಕಂಡಿದ್ದೇನೆ. ಇದು ನನಗೆ ಸಹಾಯ ಮಾಡಲಿದೆ ಮತ್ತು ನನ್ನ ಉತ್ಸಾಹವನ್ನು ಹೆಚ್ಚಿಸಲಿದೆ ಎಂದು ನಂಬಿದ್ದೇನೆ' ಎಂದಿದ್ದರು.

  2000ರಲ್ಲಿ ಮದುವೆ

  2000ರಲ್ಲಿ ಮದುವೆ

  2000ರಲ್ಲಿ ಇಬ್ಬರೂ ದಾಂಪತ್ಯಕ್ಕೆ ಕಾಲಿರಿಸಿದರು. ಸ್ಟಾರ್ ದಂಪತಿಯ ಮದುವೆಗೆ ಚಿತ್ರರಂಗದ ಅನೇಕ ಗಣ್ಯರು ಆಗಮಿಸಿದ್ದರು. ಮದುವೆ ನಂತರ ಶಾಲಿನಿ ನಟನೆಗೆ ಗುಡ್ ಬೈ ಹೇಳಲು ನಿರ್ಧರಿಸಿದರು. ಈ ಬಗ್ಗೆ ಶಾಲಿನಿ 'ಮನೆ ಮತ್ತು ವೃತ್ತಿ ಬದುಕು ಎರಡನ್ನೂ ನಿಭಾಯಿಸಬಲ್ಲಂತಹ ವ್ಯಕ್ತಿ ನಾನಲ್ಲ. ನನ್ನ ಆದ್ಯತೆಗಳ ಬಗ್ಗೆ ನನಗೆ ಸ್ಪಷ್ಟತೆಯಿದೆ' ಎಂದು ಹೇಳಿದ್ದರು. ಈಗ 20 ವರ್ಷಗಳ ಸಂತೋಷದ ಸಾಂಸಾರಿಕ ಜೀವನ ಇವರದ್ದಾಗಿದೆ. ಅಜಿತ್ ಮತ್ತು ಶಾಲಿನಿ ನಡುವಿನ ಪ್ರೀತಿ-ಬಾಂಧವ್ಯ ಕೊಂಚವು ಕಡಿಮೆ ಆಗಿಲ್ಲ. ಇಬ್ಬರ ಬಗ್ಗೆ ಗಾಳಿಸುದ್ದಿಯೂ ಹರಿದಾಡಿಲ್ಲ. ಈ ಜೋಡಿ ಹೀಗೆ ಸಂತೋಷದಿಂದ ಇರಲಿ ಎನ್ನುವುದೇ ಅಭಿಮಾನಿಗಳ ಆಶಯ.

  English summary
  Tamil Actor Ajith and Shalini celebrating 20th wedding Anniversary.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X