For Quick Alerts
  ALLOW NOTIFICATIONS  
  For Daily Alerts

  ರಸ್ತೆ ಬದಿ ಇಡ್ಲಿ ಮಾರುವವನಿಗೆ ಒಂದು ಲಕ್ಷ ಹಣ ನೀಡಿದ ನಟ ಅಜಿತ್: ಕಾರಣ?

  |

  ತಮಿಳಿನ ಖ್ಯಾತ ನಟ ಅಜಿತ್ ಅಲಿಯಾಸ್ ತಲಾ ಅಜಿತ್ ತಮ್ಮ ನಟನೆ, ಸಿನಿಮಾಗಳ ಜೊತೆಗೆ ತಮ್ಮ ಸರಳತೆಯಿಂದಲೂ ಖ್ಯಾತರು.

  ಮಿತ ಭಾಷಿ, ಸರಳ ವ್ಯಕ್ತಿ, ಮಾನವೀಯತೆ ಉಳ್ಳ ವ್ಯಕ್ತಿಯಾಗಿರುವ ತಲಾ ಅಜಿತ್, ಈಗ ಹಠಾತ್ತನೆ ಮತ್ತೆ ತಮ್ಮ ಮಾನವೀಯ ನಡೆಯಿಂದ ಸುದ್ದಿಗೆ ಬಂದಿದ್ದಾರೆ.

  ತಮ್ಮ ಮುಂದಿನ ಸಿನಿಮಾ 'ವಾಲಿಮಾ' ಗಾಗಿ ಹೈದರಾಬಾದ್‌ನ ರಾಮೋಜಿ ಫಿಲಂ ಸಿಟಿಯಲ್ಲಿ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ ನಟ ಅಜಿತ್. ಚಿತ್ರೀಕರಣದ ಸೆಟ್‌ನ ಬಳಿ ಒಬ್ಬ ವ್ಯಕ್ತಿ ಇಡ್ಲಿ ಮಾರಾಟ ಮಾಡುತ್ತಿದ್ದರಂತೆ. ಚಿತ್ರೀಕರಣ ನೋಡಲು ಬಂದವರಿಗೆ ಮತ್ತು ಇತತರಿಗೆ ಆತ ಇಡ್ಲಿ ಮಾಡಿ ಮಾರುತ್ತಿದ್ದರಂತೆ.

  ವಯಸ್ಸಾದ ಆ ವ್ಯಕ್ತಿಯ ಶ್ರಮವನ್ನು ಕೆಲವು ದಿನ ನೋಡಿದ ಅಜಿತ್, ತಾವೂ ಸಹ ಆತ ಮಾಡಿದ ಇಡ್ಲಿಯನ್ನು ಸವಿದಿದ್ದಾರೆ. ಇಡ್ಲಿ ರುಚಿಯನ್ನು ಬಹುವಾಗಿ ಮೆಚ್ಚಿಕೊಂಡ ತಲಾ ಅಜಿತ್, ಆ ವ್ಯಕ್ತಿಗೆ ನೆರವಿನ ರೂಪದಲ್ಲಿ ಒಂದು ಲಕ್ಷ ರೂಪಾಯಿ ಹಣ ನೀಡಿದ್ದಾರೆ.

  ಅಜಿತ್ ಹೀಗೆ ಸಹಾಯ ಮಾಡುತ್ತಿರುವುದು ಮೊದಲೇನಲ್ಲ. ಈ ಹಿಂದೆಯೂ ಹಲವು ಬಾರಿ ಹಲವು ಮಂದಿಗೆ ಅಜಿತ್ ಸಹಾಯ ಮಾಡಿದ್ದಾರೆ.

  ಬಾಕ್ಸರ್ ಮುಂದೆ ಘರ್ಜಿಸಲಿದ್ದಾರೆ ಉಪೇಂದ್ರ | Filmibeat Kannada

  ರಜನೀಕಾಂತ್ ಸಹ ಆಗಾಗ್ಗೆ ಹೀಗೆ ರಸ್ತೆ ಬದಿಯ ವ್ಯಾಪಾರಿಗಳಿಗೆ, ಭಿಕ್ಷುಕರಿಗೆ ಸಹಾಯ ಮಾಡಿದ ಕತೆಗಳು ಹಿಂದೆ ಸಾಕಷ್ಟು ಹರಿದಾಡುತ್ತಿದ್ದವು.

  English summary
  Tamil actor Ajith Kumar helped a raod side idli vendor in Hyderabad. This is not first time that Ajith Kumar helping some one.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X