For Quick Alerts
  ALLOW NOTIFICATIONS  
  For Daily Alerts

  ಚಿತ್ರೀಕರಣ ಮುಗಿಸಿದ ಸೌತ್ ಇಂಡಸ್ಟ್ರಿಯ ಬಹುನಿರೀಕ್ಷೆಯ ಸಿನಿಮಾ 'ವಾಲಿಮೈ'

  |

  ದಕ್ಷಿಣ ಭಾರತದ ಬಹುನಿರೀಕ್ಷೆ ಸಿನಿಮಾ ಎನಿಸಿಕೊಂಡಿರುವ ವಾಲಿಮೈ ಚಿತ್ರೀಕರಣ ಮುಗಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ತಮಿಳು ನಟ ಅಜಿತ್ ಕುಮಾರ್ ನಾಯಕರಾಗಿ ನಟಿಸಿರುವ 'ವಾಲಿಮೈ' ಭಾರಿ ನಿರೀಕ್ಷೆಗಳೊಂದಿಗೆ ಆರಂಭವಾಗಿತ್ತು. ಇದೀಗ, ಸಂಪೂರ್ಣವಾಗಿ ಟಾಕಿ ಪೋಷನ್ ಮುಗಿಸಿದೆ, ಕೆಲವು ಸೀನ್‌ಗಳು ಮಾತ್ರ ಬಾಕಿ ಉಳಿದಿದೆ ಎಂದು ತಿಳಿದು ಬಂದಿದೆ.

  ಇತ್ತೀಚಿಗಷ್ಟೆ ಚಿತ್ರದ ಪ್ರಮುಖ ದೃಶ್ಯಗಳ ಚಿತ್ರೀಕರಣಕ್ಕಾಗಿ ಚಿತ್ರತಂಡ ರಷ್ಯಾಗೆ ತೆರಳಿತ್ತು. ನಾಲ್ಕು ದಿನಗಳ ಶೂಟಿಂಗ್ ಬಳಿಕ ಯಶಸ್ವಿಯಾಗಿ ವಿದೇಶಿ ಶೆಡ್ಯೂಲ್‌ ಮುಗಿಸಿದೆ. ಅಜಿತ್ ಕುಮಾರ್ ಸೇರಿದಂತೆ ಪ್ರಮುಖ ಕಲಾವಿದರು ರಷ್ಯಾ ಚಿತ್ರೀಕರಣ ಮುಗಿಸಿ ಭಾರತಕ್ಕೆ ವಾಪಸ್ ಆಗಲಿದ್ದಾರೆ. ಇನ್ನು ಚಿತ್ರದ ತಾಂತ್ರಿಕ ವರ್ಗ ಅಲ್ಲೇ ಉಳಿದುಕೊಂಡು ಬಾಕಿ ಉಳಿದಿರುವ ಕೆಲಸಗಳನ್ನು ಮುಗಿಸಿಕೊಂಡು ಬರಲಿದೆ.

  ಆಗಸ್ಟ್ 25 ರಂದು ನಟ ಅಜಿತ್ ಕುಮಾರ್ ಚೆನ್ನೈನ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದರು. ರಷ್ಯಾ ಶೂಟಿಂಗ್ ಹಿನ್ನೆಲೆ ಏರ್‌ಪೋರ್ಟ್‌ಗೆ ಬಂದಿದ್ದ ನಟನನ್ನು ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದರು. ಫೋಟೋಗಳಿಗಾಗಿ ಅವರ ಫ್ಯಾನ್ಸ್ ಮುಗಿಬಿದ್ದರು. ಈಗ ಸೆಪ್ಟೆಂಬರ್ 2 ರಂದು ವಾಲಿಮೈ ಚಿತ್ರತಂಡ ಶೂಟಿಂಗ್ ಮುಗಿಸಿ ಭಾರತಕ್ಕೆ ಹಿಂತಿರುಗಿದೆ.

  ಸೌತ್ ಇಂಡಸ್ಟ್ರಿಗೆ ಫಿದಾ ಆದ ಬೋನಿ ಕಪೂರ್: ಮತ್ತೊಮ್ಮೆ ಸ್ಟಾರ್ ನಟನ ಚಿತ್ರ ನಿರ್ಮಾಣ?ಸೌತ್ ಇಂಡಸ್ಟ್ರಿಗೆ ಫಿದಾ ಆದ ಬೋನಿ ಕಪೂರ್: ಮತ್ತೊಮ್ಮೆ ಸ್ಟಾರ್ ನಟನ ಚಿತ್ರ ನಿರ್ಮಾಣ?

  ಈ ಕುರಿತು ಚಿತ್ರ ವಿಶ್ಲೇಷಕ ಮನೋಬಾಲ ವಿದ್ಯಾಬಾಲನ್ ಟ್ವಿಟ್ಟರ್ ಮೂಲಕ ಮಾಹಿತಿ ಹಂಚಿಕೊಂಡಿದ್ದು, ''ವಾಲಿಮೈ ಸಿನಿಮಾದ ಕೊನೆಯ ಸಾಹಸ ದೃಶ್ಯಗಳ ಚಿತ್ರೀಕರಣ ಮುಗಿದಿದೆ. ಎರಡನೇ ಹಾಡಿನ ಬಿಡುಗಡೆ ದಿನಾಂಕ ಹಾಗೂ ಸಿನಿಮಾ ರಿಲೀಸ್ ದಿನಾಂಕವನ್ನು ಶೀಘ್ರದಲ್ಲೇ ಚಿತ್ರತಂಡ ಅಧಿಕೃತವಾಗಿ ಘೋಷಿಸಲಿದೆ'' ಎಂದು ತಿಳಿಸಿದರು. ಮುಂದೆ ಓದಿ...

  ಎಚ್ ವಿನೋದ್ ನಿರ್ದೇಶನ

  ಎಚ್ ವಿನೋದ್ ನಿರ್ದೇಶನ

  ಅಂದ್ಹಾಗೆ, ವಾಲಿಮೈ ಚಿತ್ರವನ್ನು ಎಚ್ ವಿನೋದ್ ನಿರ್ದೇಶಿಸಿದ್ದಾರೆ. ಈ ಹಿಂದೆ ಚದುರಂಗ ವೇಟೈ, ನೇರ್ಕೊಂಡ ಪಾರ್ವೈ ಅಂತಹ ಸಿನಿಮಾಗಳನ್ನು ನಿರ್ದೇಶಿಸಿದ್ದರು. ಈಗ ಅಜಿತ್ ಜೊತೆ ಎರಡನೇ ಸಲ ಕೆಲಸ ಮಾಡ್ತಿದ್ದಾರೆ. ಈ ಹಿಂದೆ ನೇರ್ಕೊಂಡ ಪಾರ್ವೈ ಸಿನಿಮಾ ನಿರ್ಮಿಸಿದ್ದ ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

  2021ರಲ್ಲಿ ಅತಿ ಹೆಚ್ಚು ಬಳಕೆಯಾದ ಹ್ಯಾಷ್‌ಟ್ಯಾಗ್ ಯಾವ ಸಿನಿಮಾದ್ದು?2021ರಲ್ಲಿ ಅತಿ ಹೆಚ್ಚು ಬಳಕೆಯಾದ ಹ್ಯಾಷ್‌ಟ್ಯಾಗ್ ಯಾವ ಸಿನಿಮಾದ್ದು?

  ಹುಮಾ ಖುರೇಶಿ ನಟನೆ

  ಹುಮಾ ಖುರೇಶಿ ನಟನೆ

  2019ರಲ್ಲಿ ಈ ಸಿನಿಮಾ ಘೋಷಣೆಯಾಗಿತ್ತು. ಕೊರೊನಾ ವೈರಸ್ ಕಾರಣದಿಂದ ಸುಮಾರು ಒಂದೂವರೆ ವರ್ಷಗಳ ಕಾಲ ಚಿತ್ರೀಕರಣ ಮಾಡಿದೆ. ಅಜಿತ್ ಕುಮಾರ್ ಜೊತೆ ಬಾಲಿವುಡ್ ನಟಿ ಹುಮಾ ಖುರೇಶಿ, ಕಾರ್ತಿಕೇಯ ಗುಮ್ಮಮೊಂಡ, ಯೋಗಿ ಬಾಬು, ಸುಮಿತ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಈ ವರ್ಷವೇ ಸಿನಿಮಾ ರಿಲೀಸ್ ಮಾಡುವ ಲೆಕ್ಕಾಚಾರ ಇದೆ. ಈ ಕುರಿತು ಸದ್ಯದಲ್ಲೇ ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಲಿದೆ.

  ಟ್ವಿಟ್ಟರ್‌ನಲ್ಲಿ ವಾಲಿಮೈ ಟ್ರೆಂಡ್

  ಟ್ವಿಟ್ಟರ್‌ನಲ್ಲಿ ವಾಲಿಮೈ ಟ್ರೆಂಡ್

  2021ರ ಅತಿ ನಿರೀಕ್ಷೆಯ ಚಿತ್ರಗಳ ಪೈಕಿ ಅಜಿತ್ ನಟನೆಯ ವಾಲಿಮೈ ಸಿನಿಮಾ ಪ್ರಮುಖವಾದುದು. ಅದು ಎಷ್ಟರ ಮಟ್ಟಿಗೆ ಅಂದ್ರೆ 2021ರ ಮೊದಲಾರ್ಧದಲ್ಲಿ ಟ್ವಿಟ್ಟರ್ ತಾಣದಲ್ಲಿ ಹೆಚ್ಚು ಸದ್ದು ಮಾಡಿದ ಹ್ಯಾಷ್‌ಟ್ಯಾಗ್ ವಾಲಿಮೈ ಸಿನಿಮಾದ್ದು ಎನ್ನುವುದು ವಿಶೇಷ. ವರ್ಷದ ಟಾಪ್ ಹತ್ತು ಟ್ರೆಂಡಿಂಗ್ ಹ್ಯಾಷ್‌ಟ್ಯಾಗ್ ಪಟ್ಟಿ ಬಿಡುಗಡೆ ಮಾಡಿದ ಟ್ವಿಟ್ಟರ್‌ ವಾಲಿಮೈಗೆ ಮೊದಲ ಸ್ಥಾನ ನೀಡಿದೆ. ಬಳಿಕ ವಿಜಯ್ ನಟನೆಯ ಮಾಸ್ಟರ್, ಮಹೇಶ್ ಬಾಬು ಅಭಿನಯದ ಸರ್ಕಾರು ವಾರಿ ಪಾಟ ಚಿತ್ರಗಳು ಸ್ಥಾನ ಪಡೆದಿದೆ.

  ಅಜಿತ್ ಜೊತೆ ಇನ್ನೊಂದು ಸಿನಿಮಾ

  ಅಜಿತ್ ಜೊತೆ ಇನ್ನೊಂದು ಸಿನಿಮಾ

  ನೇರ್ಕೊಂಡು ಪಾರ್ವೈ ಸಿನಿಮಾ ಬಳಿಕ ಅಜಿತ್ ಕುಮಾರ್ ಜೊತೆ ವಾಲಿಮೈ ಸಿನಿಮಾ ನಿರ್ಮಾಣ ಮಾಡಿರುವ ಬೋನಿ ಕಪೂರ್, ತಲಾ ಜೊತೆ ಮತ್ತೊಂದು ಚಿತ್ರ ಮಾಡುವ ಬಗ್ಗೆ ಯೋಜನೆ ಹೊಂದಿದ್ದಾರೆ ಎಂಬ ಸುದ್ದಿಯೂ ಇದೆ. ಬಹುಶಃ ವಾಲಿಮೈ ಮುಗಿದ ನಂತರ ಬೋನಿ ಕಪೂರ್ ಮತ್ತು ಅಜಿತ್ ಕಾಂಬಿನೇಷನ್‌ನಲ್ಲಿ ಮೂರನೇ ಚಿತ್ರ ಘೋಷಣೆಯಾದರೂ ಅಚ್ಚರಿ ಇಲ್ಲ.

  English summary
  Ajith kumar's Valimai shoot wrapped. only patch works left to be completed. Second single and release date soon.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X