Don't Miss!
- Technology
PVRನಿಂದ ಭರ್ಜರಿ ಸಿಹಿಸುದ್ದಿ; ಸಿನಿಮಾ ಪ್ರಿಯರ ಕಣ್ಣಿಗೆ ಹಬ್ಬದ ಸಂಭ್ರಮ!
- Sports
Asia Cup 2023: ಪಾಕ್ನಲ್ಲಿ ಭಾರತ ಏಷ್ಯಾಕಪ್ ಆಡದಿದ್ದರೆ, ವಿಶ್ವಕಪ್ ಆಡಲ್ಲ; ಎಚ್ಚರಿಕೆ ನೀಡಿದ ಪಿಸಿಬಿ
- Automobiles
ಸೆಲ್ಟೋಸ್ನ ಗೇರ್ಬಾಕ್ಸ್ನಲ್ಲಿ ದೋಷ ಕಂಡು ಬಂದಾಗ ಉಚಿತವಾಗಿ ಬದಲಾಯಿಸಿ ಕೊಟ್ಟ ಕಿಯಾ
- News
ಬರಲಿವೆ ಎಲಿವೇಟೆಡ್ ಇಂಟರ್ಸಿಟಿ ಸೆಮಿ-ಹೈಸ್ಪೀಡ್ ರೈಲುಗಳು: ಭಾರತ ಹಾಗೂ ಕರ್ನಾಟಕದ ಯಾವ ನಗರಗಳ ನಡುವೆ ಸಂಚಾರ?
- Lifestyle
ಮಕ್ಕಳನ್ನು 'ಅಮ್ಮ' ದಡಾರದಿಂದ ರಕ್ಷಿಸಲು ಇದೇ ತಿಂಗಳು ತಪ್ಪದೆ ಕೊಡಿಸಿ MR ಲಸಿಕೆ
- Finance
Twitter: ಟ್ವಿಟ್ಟರ್ನಲ್ಲಿ ಗೋಲ್ಡ್ ಬ್ಯಾಡ್ಜ್ ಉಳಿಸಿಕೊಳ್ಳಬೇಕಾದರೆ ಇಷ್ಟು ಮೊತ್ತ ಪಾವತಿಸಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅಜಿತ್ 'ವಲಿಮೈ' ಮೊದಲ ದಿನದ ಕಲೆಕ್ಷನ್: ಬಾಕ್ಸಾಫೀಸ್ ಧೂಳೆಬ್ಬಿಸಿದ ಚಿತ್ರ!
ತಮಿಳು ನಟ ಅಜಿತ್ ಕುಮಾರ್ ಅವರ 'ವಲಿಮೈ' ಸಿನಿಮಾ ರಿಲೀಸ್ ಆಗಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಬಹು ನಿರೀಕ್ಷೆಯೊಂದಿಗೆ ರಿಲೀಸ್ ಆದ ಚಿತ್ರ ಉತ್ತಮ ಓಪನಿಂಗ್ ಪಡೆದುಕೊಂಡಿದೆ. ಎಲ್ಲೆಡೆ ಕೊರೊನಾ ಛಾಯೆ ಇನ್ನೂ ಕೂಡ ಇದೆ. ಆದರೆ ಸಿನಿಮಾಗಳಿಗೆ ಮಾತ್ರ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. 'ವಲಿಮೈ' ಸಿನಿಮಾ ಎಲ್ಲಾ ಬ್ಯಾರಿಕೇಡ್‌ಗಳನ್ನು ಒಡೆದು ಹಾಕಿ ಬಾಕ್ಸಾಫೀಸ್ ಚಿಂದಿ ಮಾಡಲು ಮುಂದಾಗಿದೆ.
ಅಜಿತ್ ಅಭಿನಯದ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸಹಜವಾಗಿಯೇ ಉತ್ತಮ ಗಳಿಕೆ ಮಾಡುತ್ತವೆ. ಹಾಗಾಗಿ 'ವಲಿಮೈ' ಚಿತ್ರದ ಮೇಲೂ ಕೂಡ ಹೆಚ್ಚಿ ನಿರೀಕ್ಷೆ ಇತ್ತು. ಅಂತೆಯೇ ಈ ಚಿತ್ರ ಕೂಡ ಬಾಕ್ಸಾಫೀಸ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ರಿಲೀಸ್ ಆದ ಮೊದಲ ದಿನವೇ ಬಾಕ್ಸಾಫಿಸ್ ಧೂಳೆಬ್ಬಿಸಿದೆ.
ಅಜಿತ್
ಅಭಿಮಾನಿಗಳ
ಮೇಲೆ
ಪೆಟ್ರೋಲ್
ಬಾಂಬ್
ದಾಳಿ!
ಹುಚ್ಚಾಟ
ಮೆರೆದ
ಅಭಿಮಾನಿಗಳು
'ವಲಿಮೈ' ಚಿತ್ರದ ಮೊದಲ ದಿನದ ಕಲೆಕ್ಷನ್ ಬಗ್ಗೆ ಮಾಹಿತಿ ಹೊರ ಬಿದ್ದಿದೆ. ಸಿನಿಮಾ ಕಲೆಕ್ಷನ್ ಕಂಡು ಚಿತ್ರ ತಂಡ ಚಿತ್ರ ತಂಡ ಖುಷಿಯಾಗಿದೆ. ಈ ಚಿತ್ರದ ಮೊದಲ ದಿನದ ಕಲೆಕ್ಷನ್ ವಿಶ್ವಾದ್ಯಂತ ಹೇಗಿದೆ, ತಮಿಳುನಾಡಿನಲ್ಲಿ ಚಿತ್ರ ಗಳಿಸಿದ್ದು ಎಷ್ಟು ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ. ಮುಂದೆ ಓದಿ...
ರಜನಿಕಾಂತ್
ಸಿನಿಮಾ
ನಿರಾಕರಿಸಿದ
ಬೋನಿಕಪೂರ್:
170ನೇ
ಸಿನಿಮಾ
ಯಾರ
ಪಾಲಿಗೆ!

ಮೊದಲ ದಿನವೇ ಬಾಕ್ಸಾಫೀಸ್ ಚಿಂದಿ ಮಾಡಿದ 'ವಲಿಮೈ'!
'ವಲಿಮೈ' ಸಿನಿಮಾ ಚಿತ್ರ ತಂಡದ ನಿರೀಕ್ಷೆಯಂತೆ, ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡ್ತಿದೆ. ವಿಶ್ವಾದ್ಯಂತ ಹೆಚ್ಚಿನ ಗಳಿಕೆ ಮಾಡಿ ಚಿತ್ರ ದಾಖಲೆ ಬರೆದಿದೆ. ಮೊದಲ ದಿನವೇ ಅರ್ಧ ಕೋಟಿ ಗಳಿಕೆಯ ಗಡಿ ಮುಟ್ಟಿದೆ 'ವಲಿಮೈ' ಸಿನಿಮಾ. ವರದಿಗಳ ಪ್ರಕಾರ 'ವಲಿಮೈ' ಮೊದಲ ದಿನದ ವಿಶ್ವಾದ್ಯಂತ ಕಲೆಕ್ಷನ್ 45 ರಿಂದ 50 ಕೋಟಿ ಆಗಿದೆಯಂತೆ. ಹಾಗಾಗಿ ಈ ವಾರಂತ್ಯದ ಒಳಗೆ ಸಿನಿಮಾ 100 ಕೋಟಿ ದಾಟಿ, 150 ಕೋಟಿ ಕಲೆ ಹಾಕ ಬಹುದು ಎನ್ನುವ ನಿರೀಕ್ಷೆ ಇದೆ.

ತಮಿಳು ನಾಡಿನಲ್ಲಿ 36 ಕೋಟಿ ಗಳಿಕೆ!
ನಟ ಅಜಿತ್‌ಗೆ ತಮಿಳುನಾಡಿನಾದ್ಯಂತ ದೊಡ್ಡ ಫ್ಯಾನ್ಸ್ ಕ್ರೇಜ್ ಇದೆ. ಹಾಗಾಗಿ ಅವರ ಸಿನಿಮಾಗಳು ತಮಿಳುನಾಡು ಬಾಕ್ಸಾಫೀಸ್‌ನಲ್ಲಿ ಮಿಸ್ ಇಲ್ಲದೇ ದಾಖಲೆ ಬರೆಯುತ್ತವೆ. 'ವಲಿಮೈ' ಸಿನಿಮಾ ಮೊದಲ ದಿನ, ಕೇವಲ ತಮಿಳುನಾಡಿನಲ್ಲಿ 36.17 ಕೋಟಿ ರೂ ಗಳಿಸಿದೆ. ವಿಶ್ವಾದ್ಯಂತ ಕಲೆಕ್ಷನ್‌ಗೆ ಹೋಲಿಸಿದರೆ ಈ ಚಿತ್ರ ತಮಿಳುನಲ್ಲೆ ಅಧಿಕ ಮೊತ್ತ ಗಳಿಸಿದೆ. ಚಿತ್ರದ ಒಟ್ಟಾರೆ ಗಳಿಕೆಯಲ್ಲಿ ತಮಿಳುನಾಡಿನದ್ದೇ ಸಿಂಹಪಾಲು. ಇನ್ನು ಈ ಚಿತ್ರ ಚೆನ್ನೈನಲ್ಲಿ ಒಂದೇ ದಿನಕ್ಕೆ 1.82 ಕೋಟಿ ರೂ. ಗಳಿಸಿದೆ ಎನ್ನುವುದು ಕೂಡ ಗಮನಾರ್ಹ.

'ವಲಿಮೈ' ರಿಲೀಸ್‌ಗೂ ಮುನ್ನವೇ ಗಳಿಸಿದೆ ಕೋಟಿ, ಕೊಟಿ!
'ವಲಿಮೈ' ಸಿನಿಮಾ ರಿಲೀಗೂ ಮುನ್ನವೇ ಕೋಟಿ, ಕೋಟಿ ಹಣ ಗಳಿಸಿದೆ. ಚಿತ್ರದ ಪ್ರೀ-ರಿಲೀಸ್ ಬ್ಯುಸಿನೆಸ್ ಬಗ್ಗೆಯೂ ಸಾಕಷ್ಟು ಚರ್ಚೆ ಆಗುತ್ತಿದೆ. 'ವಲಿಮೈ' ತಮಿಳುನಾಡು ಥಿಯೇಟ್ರಿಕಲ್ ರೈಟ್ಸ್ 62 ಕೋಟಿ ರೂ.ಗೆ ಮಾರಾಟವಾಗಿದೆಯಂತೆ. ಹಾಗೆ ಕೇರಳದಲ್ಲಿ 3.5 ಕೋಟಿ ಮತ್ತು ಕರ್ನಾಟಕದಲ್ಲಿ 5.5 ಕೋಟಿ ರೂ.ಗೆ ಮಾರಾಟ ಮಾಡಲಾಗಿದೆಯಂತೆ. ಇದರ ಜೊತೆಗೆ ಹಿಂದಿ ಥಿಯೇಟ್ರಿಕಲ್ ರೈಟ್ಸ್ ಎಲ್ಲವೂ ಸೇರಿ 'ವಲಿಮೈ' 16 ಕೋಟ ವ್ಯಾಪಾರ ಮಾಡಿದೆಯಂತೆ. ಒಟ್ಟಾರೆ ರಿಲೀಸ್‌ಗೂ ಮುನ್ನವೇ ಸಿನಿಮಾ 11 ಕೋಟಿ ರೂ. ಲಾಭದಲ್ಲಿ ಇತ್ತು ಎನ್ನಾಗಿದೆ.

'ವಲಿಮೈ'ಗೆ ಗಂಗೂಬಾಯಿ, ಭೀಮ್ಲಾ ನಾಯಕ್ ಕಂಟಕ?
'ವಲಿಮೈ' ಸಿನಿಮಾ ಫೆಬ್ರವರಿ 24ಕ್ಕೆ ರಿಲೀಸ್ ಆಗಿದೆ. ಆದರೆ ಫೆಬ್ರವರಿ 25ಕ್ಕೆ ಬಾಲಿವುಡ್ ಮತ್ತು ಟಾಲಿವುಡ್ ಚಿತ್ರಗಳಾದ ಗಂಗೂಬಾಯಿ ಕಠಿಯಾವಾಡಿ ಮತ್ತು ಭೀಮ್ಲಾ ನಾಯಕ್ ಚಿತ್ರಗಳು ರಿಲೀಸ್ ಆಗಿವೆ. ಹಾಗಾಗಿ ಈ ಚಿತ್ರಗಳು 'ವಲಿಮೈ' ಗಳಿಕೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹಾಗಾಗಿ ಸಿನಿಮಾ ವೀಕೆಂಡ್‌ನಲ್ಲಿ ಎಷ್ಟು ಗಳಿಕೆ ಮಾಡುತ್ತದೆ ಎನ್ನುವ ಬಗ್ಗೆ ಕುತೂಹಲ ಮೂಡಿದೆ.