Don't Miss!
- News
ವಾರಕ್ಕೊಮ್ಮೆ ದೆಹಲಿಗೆ ಓಡುವ ಸಿಎಂಗೆ ಫ್ರೀಡಂ ಪಾರ್ಕ್ಗೆ ಬರುವ ತಾಳ್ಮೆ ಇಲ್ಲವೇ? ಕಾಂಗ್ರೆಸ್ ಪ್ರಶ್ನೆ
- Automobiles
ಈ ಕಾರು ಮಾರುಕಟ್ಟೆಗೆ ಬಂದ್ರೆ ಯಾರೂ ದ್ವಿಚಕ್ರ ವಾಹನವನ್ನು ಖರೀದಿಸುವುದಿಲ್ಲ.. ಭಾರತದಲ್ಲಿ ಸಿಗುತ್ತಾ?
- Technology
ಬಿಎಸ್ಎನ್ಎಲ್ನ ಈ ಪೋಸ್ಟ್ಪೇಯ್ಡ್ ಪ್ಲ್ಯಾನ್ ಬೆಲೆ ಅಗ್ಗ; ಆದ್ರೆ, ರೀಚಾರ್ಜ್ ಕಷ್ಟ!
- Sports
ODIನಲ್ಲಿ ಭರ್ಜರಿ ಆಟ, ಆದರೆ ಟಿ20ಯಲ್ಲಿ ವೈಫಲ್ಯ: ಟೀಮ್ ಇಂಡಿಯಾದ 3 ಯುವ ಆಟಗಾರರ ಕಥೆಯಿದು!
- Finance
Economic Survey 2023 : ಭಾರತದ ಬೆಳವಣಿಗೆಗೆ ಐಎಂಎಫ್ ಭರವಸೆ, ಜಾಗತಿಕ ದರ ಇಳಿಸಿದ ಸಂಸ್ಥೆ
- Lifestyle
February 2023 Horoscope : ಫೆಬ್ರವರಿ ತಿಂಗಳ ಭವಿಷ್ಯ: ಮೇಷ-ಮೀನದವರೆಗಿನ ರಾಶಿಗಳ ರಾಶಿಫಲ ಹೇಗಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವಲಿಮೈ Vs ಭೀಮ್ಲಾ ನಾಯಕ್: ಬಾಕ್ಸಾಫೀಸ್‌ನಲ್ಲಿ ಇನ್ನೂ ನಿಂತಿಲ್ಲ ಗುದ್ದಾಟ
ದಕ್ಷಿಣ ಭಾರತದ ಎರಡು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಕಾದಾಡುತ್ತಿವೆ. ತಮಿಳಿನ ಸೂಪರ್‌ಸ್ಟಾರ್ ಅಜಿತ್ ಸಿನಿಮಾ 'ವಲಿಮೈ' ಹಾಗೂ ತೆಲುಗಿನ ಪವರ್‌ಸ್ಟಾರ್ ಪವನ್ ಕಲ್ಯಾಣ್ ಚಿತ್ರ 'ಭೀಮ್ಲಾ ನಾಯಕ್'. ಈ ಎರಡೂ ಸಿನಿಮಾಗಳು ವಿಶ್ವದಾದ್ಯಂತ ಬಾಕ್ಸಾಫೀಸ್ ಸಮರವನ್ನು ನಿಲ್ಲಿಸಿಲ್ಲ. ಎರಡು ಚಿತ್ರ ಬಿಡುಗಡೆಯಾದ 10 ದಿನಗಳ ಬಳಿಕವೂ ಕಾದಾಟಕ್ಕೆ ಇಳಿದಿವೆ. ಭಾರತದಲ್ಲಿ 'ವಲಿಮೈ' ಸದ್ದು ಕಡಿಮೆಯಾಗಿದ್ದರೂ, ವಿಶ್ವದಾದ್ಯಂತ ಉತ್ತಮ ಗಳಿಕೆ ಕಂಡಿದೆ.
ಇನ್ನೊಂದ್ಕಡೆ ಪವನ್ ಕಲ್ಯಾಣ್ ಅಭಿನಯದ 'ಭೀಮ್ಲಾ ನಾಯಕ್' ಭಾರತದಲ್ಲಿ ಉತ್ತಮ ಗಳಿಕೆ ಕಾಣುತ್ತಿದೆ. ಎರಡೂ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಶೇ 70ರಷ್ಟು ಗಳಿಕೆ ಮಾಡುತ್ತಿವೆ. ತಮಿಳುನಾಡಿನಲ್ಲಿ 'ವಲಿಮೈ' ಸದ್ದು ಮಾಡುತ್ತಿದ್ದರೆ, ಆಂಧ್ರ-ತೆಲಂಗಾಣದಲ್ಲಿ ಪವನ್ ಕಲ್ಯಾಣ್ 'ಭೀಮ್ಲಾ ನಾಯಕ್' ಸದ್ದುಮಾಡುತ್ತಿದೆ. ಹಾಗಿದ್ದರೆ, ಈ ಎರಡೂ ಸಿನಿಮಾಗಳೂ ಗಲ್ಲಾಪಟ್ಟೆಗೆಯಲ್ಲಿ ಇದೂವರೆಗೂ ದೋಚಿದ್ದು ಎಷ್ಟು? ಗೆದ್ದವರು ಯಾರು? ಸೋತಿದ್ದು ಯಾರು? ತಿಳಿದುಕೊಳ್ಳಲು ಮುಂದೆ ಓದಿ.
'ಭೀಮ್ಲಾ
ನಾಯಕ್'
ವಿರುದ್ಧ
ಗುಂಟೂರು
ಪೊಲೀಸ್
ಠಾಣೆಯಲ್ಲಿ
ದೂರು:
ಕಾರಣವೇನು?

'ವಲಿಮೈ' ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು?
ಅಜಿತ್ ಅಭಿನಯದ 'ವಲಿಮೈ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಉತ್ತಮ ಗಳಿಕೆ ಕಂಡಿದೆ. ಸಿನಿಮಾ ಬಿಡುಗಡೆಯಾದ 11 ದಿನಗಳಲ್ಲಿಯೇ 'ವಲಿಮೈ' ಬಾಕ್ಸಾಫೀಸ್‌ನಲ್ಲಿ 200 ಕೋಟಿ ಲೂಟಿ ಮಾಡಿದೆ. ಭಾರತದಲ್ಲಿಈ ಸಿನಿಮಾದ ಗಳಿಕೆ ಕಡಿಮೆ ಇದ್ದರೂ, ವಿಶ್ವದಾದ್ಯಂತ ಉತ್ತಮ ಗಳಿಕೆ ಕಂಡಿದೆ. ಇದೂವರೆಗೂ 'ವಲಿಮೈ' ಸುಮಾರು 214.16 ಕೋಟಿ ಗಳಿಕೆ ಕಂಡಿದೆ. 'ವಲಿಮೈ' ಮೊದಲ ವಾರ 193.41 ಕೋಟಿ ಗಳಿಸಿತ್ತು. ಅದೇ ಎರಡನೇ ವಾರ ಸಿನಿಮಾ ಗಳಿಕೆಯಲ್ಲಿ ಡ್ರಾಪ್ ಆಗಿದ್ದರೂ, 200 ಕೋಟಿ ಗಡಿ ದಾಟುವಲ್ಲಿ ಗೆದ್ದಿದೆ.

ಭೀಮ್ಲಾ ನಾಯಕ್ ಗಳಿಕೆ ಎಷ್ಟು?
ಪವನ್ ಕಲ್ಯಾಣ್ ಅಭಿನಯದ 'ಭೀಮ್ಲಾ ನಾಯಕ್' ಚಿತ್ರಕ್ಕೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೂ ಬಾಕ್ಸಾಫೀಸ್‌ನಲ್ಲಿ ಈ ಚಿತ್ರದ ಸದ್ದು ಕಡಿಮೆ ಆಗಿಲ್ಲ. ಭಾರತದ ಬಾಕ್ಸಾಫೀಸ್‌ನಲ್ಲಿ 'ವಲಿಮೈ' ಸಿನಿಮಾ ಗಳಿಕೆ ಸೂಪರ್ ಆಗಿದೆ. ಈ ಚಿತ್ರ ಮೊದಲ ವಾರ 170.74 ಕೋಟಿ ಗಳಿಕೆ ಕಂಡಿತ್ತು. ಅದೇ ಎರಡನೇ ವಾರ 183.22 ಕೋಟಿ ಲೂಟಿ ಮಾಡಿದೆ. 'ಭೀಮ್ಲಾ ನಾಯಕ್' ಬಿಡುಗಡೆಯಾದ 10 ದಿನಗಳಲ್ಲಿ ಗಳಿಕೆ ಕಂಡಿದೆ. ಅಲ್ಲದೆ 'ಭೀಮ್ಲಾ ನಾಯಕ್' ಗಳಿಕೆ ಎರಡನೇ ವಾರದ ಅಂತ್ಯದಲ್ಲಿ ಹೆಚ್ಚಾಗಿದೆ.

'ವಲಿಮೈ' Vs 'ಭೀಮ್ಲಾ ನಾಯಕ್'
ಅಜಿತ್ 'ವಲಿಮೈ' ಹಾಗೂ ಪವನ್ ಕಲ್ಯಾಣ್ ಭೀಮ್ಲಾ ನಾಯಕ್ ಭಾರತದ ಬಾಕ್ಸಾಫೀಸ್‌ನಲ್ಲಿ ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾಗಳ ಪಟ್ಟಿ ಸೇರುತ್ತಿದೆ. 'ವಲಿಮೈ' ತಮಿಳುನಾಡು ಒಂದರಲ್ಲಿಯೇ 69.52 ಕೋಟಿ ಗಳಿಕೆ ಕಂಡಿದೆ. ಅದೇ 'ಭೀಮ್ಲಾ ನಾಯಕ್' ಆಂಧ್ರ ಹಾಗೂ ತೆಲಂಗಾಣದಲ್ಲಿ 59.44 ಕೋಟಿ ಗಳಿಸಿದೆ. ಈ ಎರಡೂ ಸಿನಿಮಾಗಳೂ ಬಾಕ್ಸಾಫೀಸ್‌ನಲ್ಲಿ ನೆಕ್ ಟು ನೆಕ್ ಫೈಟ್ ಕೊಡುತ್ತಿದೆ. ಹೀಗಾಗಿ ಈ ವಾರ ಯಾವ ಸಿನಿಮಾ ಹೆಜ್ಜೆ ಗಳಿಕೆ ಮಾಡುತ್ತೆ ಅನ್ನುವ ಕುತೂಹಲವಿದೆ.

ರಿಮೇಕ್ Vs ಸ್ವಮೇಕ್
ಎರಡು ಕಾರಣಕ್ಕೆ ಈ ಬಾಕ್ಸಾಫೀಸ್ ಕದನಕ್ಕೆ ಕುತೂಹಲ ಕೆರಳಿಸಿದೆ. 'ಭೀಮ್ಲಾ ನಾಯಕ್' ರಿಮೇಕ್. 'ವಲಿಮೈ' ಸ್ವಮೇಕ್. ಹೀಗಾಗಿ ಇದು ಸ್ವಾರ್ ವರ್ಸಸ್ ಸ್ಟಾರ್ ಅಷ್ಟೇ ಅಲ್ಲ. ರಿಮೇಕ್ ವರ್ಸಸ್ ಸ್ವಮೇಕ್ ಸಿನಿಮಾ ಪೈಪೋಟಿ ಕೂಡ ಹೌದು. ಬಾಕ್ಸಾಫೀಸ್‌ನಲ್ಲಿ ರಿಮೇಕ್ ಸಿನಿಮಾ ಗೆಲ್ಲುತ್ತಾ ಇಲ್ಲಾ ಸ್ವಮೇಕ್ ಸಿನಿಮಾ ಗೆಲ್ಲುತ್ತಾ? ಅನ್ನುವ ಕುತೂಹಲ ಕೂಡ ಇದೆ. ಅಂದ್ಹಾಗೆ ವಲಿಮೈ ಸ್ವಮೇಕ್ ಆದರೆ, 'ಭೀಮ್ಲಾ ನಾಯಕ್' ಮಲಯಾಳಂ ಸಿನಿಮಾ 'ಅಯ್ಯಪ್ಪನುಂ ಕೋಶಿಯುಂ' ಸಿನಿಮಾದ ರಿಮೇಕ್.