For Quick Alerts
  ALLOW NOTIFICATIONS  
  For Daily Alerts

  ರಜನಿಕಾಂತ್ ರಾಜಕೀಯ ಪ್ರವೇಶ, ಕೊನೆಯ ಚಿತ್ರ ನಿರ್ಧರಿಸಿದ ತಲೈವಾ?

  |

  ತಮಿಳುನಾಡು ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಸೂಪರ್ ಸ್ಟಾರ್ ರಜನಿಕಾಂತ್ ಮಹತ್ವದ ನಿರ್ಧಾರ ಘೋಷಿಸಿದ್ದಾರೆ. ವರ್ಷದ ಹಿಂದೆಯೇ ರಾಜಕೀಯ ಪ್ರವೇಶವನ್ನು ಖಚಿತಪಡಿಸಿದ್ದ ತಲೈವಾ ಇದುವರೆಗೂ ಅಧೀಕೃತವಾಗಿ ಪಕ್ಷ ಘೋಷಣೆ ಮಾಡಿರಲಿಲ್ಲ.

  ಇದೀಗ, ರಾಜಕೀಯದ ಬಗ್ಗೆ ರಜನಿಕಾಂತ್ ಸ್ಪಷ್ಟ ನಿಲುವಿಗೆ ಬಂದಿದ್ದು, ಡಿಸೆಂಬರ್ 31 ರಂದು ರಾಜಕೀಯ ಪಕ್ಷ ಪ್ರಕಟಣೆಯ ದಿನಾಂಕ ಘೋಷಿಸಲಿದ್ದಾರೆ. ಈ ಬಗ್ಗೆ ಸ್ವತಃ ರಜನಿ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ರಾಜಕೀಯದ ಬಗ್ಗೆ ರಜನಿ ಮಾತನಾಡುತ್ತಿದ್ದಂತೆ ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಕೊನೆಯ ಸಿನಿಮಾದ ಚರ್ಚೆ ಜೋರಾಗಿದೆ. ಮುಂದೆ ಓದಿ....

  ರಜನೀಕಾಂತ್ ರಾಜಕೀಯ ಪ್ರವೇಶ ಪಕ್ಕಾ: ಡಿಸೆಂಬರ್ 31ಕ್ಕೆ ಪಕ್ಷ ಘೋಷಣೆರಜನೀಕಾಂತ್ ರಾಜಕೀಯ ಪ್ರವೇಶ ಪಕ್ಕಾ: ಡಿಸೆಂಬರ್ 31ಕ್ಕೆ ಪಕ್ಷ ಘೋಷಣೆ

  ಅಣ್ಣಾತೆ ಸಿನಿಮಾ ಕೊನೆಯದ್ದಾ?

  ಅಣ್ಣಾತೆ ಸಿನಿಮಾ ಕೊನೆಯದ್ದಾ?

  ಶಿವ ನಿರ್ದೇಶನದಲ್ಲಿ ತಯಾರಾಗುತ್ತಿರುವ ಅಣ್ಣಾತೆ ಸಿನಿಮಾದದಲ್ಲಿ ರಜನಿಕಾಂತ್ ನಟಿಸುತ್ತಿದ್ದಾರೆ. ಈಗಾಗಲೇ ಮೊದಲ ಹಂತದ ಶೂಟಿಂಗ್ ಸಹ ಮುಗಿದಿದೆ. ರಾಜಕೀಯ ಪಕ್ಷ ಘೋಷಣೆ ಮಾಡುವ ವಿಚಾರ ಹೊರಬೀಳುತ್ತಿದ್ದಂತೆ ಅಣ್ಣಾತೆ ಸಿನಿಮಾ ರಜನಿಯ ಕೊನೆಯ ಚಿತ್ರವಾಗಲಿದೆ ಎಂದು ಹೇಳಲಾಗುತ್ತಿದೆ.

  ಶೇಕಡಾ 40 ರಷ್ಟು ಚಿತ್ರೀಕರಣ ಬಾಕಿ ಇದೆ

  ಶೇಕಡಾ 40 ರಷ್ಟು ಚಿತ್ರೀಕರಣ ಬಾಕಿ ಇದೆ

  ಸ್ವತಃ ರಜನಿಕಾಂತ್ ಅವರೇ ಹೇಳಿರುವ ಪ್ರಕಾರ ಶೇಕಡಾ 60 ರಷ್ಟು ಚಿತ್ರೀಕರಣ ಮುಗಿದಿದ್ದು, ಶೇಕಡಾ 40 ರಷ್ಟು ಕೆಲಸ ಬಾಕಿ ಇದೆ. 'ಜನವರಿಯಲ್ಲಿ ಅಣ್ಣಾತೆ ಸಿನಿಮಾದಲ್ಲಿ ನಾನು ಬ್ಯುಸಿ ಇರುತ್ತೇನೆ, ಅದು ಮುಗಿದ ತಕ್ಷಣ ರಾಜಕೀಯವಾಗಿ ಸಕ್ರಿಯನಾಗುತ್ತೇನೆ' ಎಂದು ಸ್ವತಃ ರಜನಿ ಹೇಳಿದ್ದಾರೆ.

  ರಾಜಕೀಯ ಪ್ರವೇಶದ ಬಗ್ಗೆ ರಜನೀಕಾಂತ್ ಮಹತ್ವದ ಹೇಳಿಕೆರಾಜಕೀಯ ಪ್ರವೇಶದ ಬಗ್ಗೆ ರಜನೀಕಾಂತ್ ಮಹತ್ವದ ಹೇಳಿಕೆ

  ಹೊಸ ಸಿನಿಮಾ ಒಪ್ಪಿಕೊಂಡಿಲ್ಲ

  ಹೊಸ ಸಿನಿಮಾ ಒಪ್ಪಿಕೊಂಡಿಲ್ಲ

  ಸದ್ಯದವರೆಗೂ ರಜನಿಕಾಂತ್ ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ. ಬಹುಶಃ ಅಣ್ಣಾತೆ ಸಿನಿಮಾ ಮುಗಿಯುತ್ತಿದ್ದಂತೆ ಪೂರ್ಣ ಪ್ರಮಾಣದ ರಾಜಕೀಯದಲ್ಲಿ ತೊಡಗಿಕೊಳ್ಳಲಿರುವ ರಜನಿ, ಪಕ್ಷ ಸಂಘಟನೆ, ಅಭ್ಯರ್ಥಿಗಳ ಆಯ್ಕೆ, ಚುನಾವಣೆ ಪ್ರಚಾರ ಹೀಗೆ ರಾಜಕೀಯವಾಗಿ ಮುಳುಗಿ ಹೋಗಬಹುದು.

  Recommended Video

  ಸೂಪರ್ ಸ್ಟಾರ್ ನ ಲಾಂಚ್ ಮಾಡ್ತಿದೀನಿ ಅನ್ನೋ ಖುಷಿ ಇದೆ ನಂಗೆ | Super Star movie Director | Filmibeat Kannada
  ಫಲಿತಾಂಶ ನಂತರ ಸೆಕೆಂಡ್ ಇನ್ನಿಂಗ್ಸ್

  ಫಲಿತಾಂಶ ನಂತರ ಸೆಕೆಂಡ್ ಇನ್ನಿಂಗ್ಸ್

  2021ರಲ್ಲಿ ತಮಿಳುನಾಡು ವಿಧಾನಸಭೆ ಚುನಾವಣೆ ನಡೆಯಲಿದ್ದು, ಈ ಚುನಾವಣೆಯಲ್ಲಿ ರಜನಿಕಾಂತ್ ಪಕ್ಷ ಅಧಿಕಾರಕ್ಕೆ ಬರುತ್ತಾ ಇಲ್ಲವೋ ಎಂಬುದರ ಮೇಲೆ ತಲೈವಾ ಸೆಕೆಂಡ್ ಇನ್ನಿಂಗ್ಸ್ ನಿರ್ಧಾರವಾಗಲಿದೆ. ಚುನಾವಣೆ ಬಳಿಕ ಮತ್ತೆ ಸಿನಿಮಾ ಮಾಡ್ತಾರೋ ಇಲ್ಲವೋ ಎನ್ನುವುದು ಸಹ ಕಾದು ನೋಡಬೇಕಿದೆ.

  English summary
  Annaatthe movie Is the Last Film of Superstar Rajinikanth said Source.
  Friday, December 4, 2020, 9:37
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X