For Quick Alerts
  ALLOW NOTIFICATIONS  
  For Daily Alerts

  ಅಣ್ಣಾತ್ತೆ ಸೆಟ್‌ನಲ್ಲಿ 8 ಮಂದಿಗೆ ಕೊರೊನಾ, ತಲೈವಾಗೆ ಹೆಚ್ಚಿದ ಆತಂಕ

  |

  ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯಿಸುತ್ತಿರುವ ಅಣ್ಣಾತ್ತೆ ಸಿನಿಮಾ ಸೆಟ್‌ನಲ್ಲಿ ಏಂಟು ಸದಸ್ಯರಿಗೆ ಕೊರೊನಾ ವೈರಸ್ ತಗುಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ಈ ಸುದ್ದಿ ಹೊರಬೀಳುತ್ತಿದ್ದಂತೆ ರಜನಿ ಅಭಿಮಾನಿಗಳಲ್ಲಿ ಆತಂಕ ಹೆಚ್ಚಾಗಿದೆ.

  ರಜನಿ ಸರ್ ದಯವಿಟ್ಟು ಸಿನಿಮಾ ಶೂಟಿಂಗ್‌ಗೆ ಹೋಗಬೇಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಒತ್ತಾಯ ಮಾಡ್ತಿದ್ದಾರೆ. ಅಣ್ಣಾತ್ತೆ ಚಿತ್ರತಂಡದ ಏಂಟು ಸದಸ್ಯರಿಗೆ ಸೋಂಕು ದೃಢವಾಗುತ್ತಿದ್ದಂತೆ ಚಿತ್ರೀಕರಣ ಸ್ಥಗಿತಗೊಳಿಸಲಾಗಿದೆ. ಅಷ್ಟಕ್ಕೂ, ರಜನಿಕಾಂತ್ ಎಲ್ಲಿದ್ದಾರೆ? ಏಂಟು ಜನರು ಯಾರು? ಮುಂದೆ ಓದಿ...

  ಹೈದರಾಬಾದ್‌ನಲ್ಲಿ ರಜನಿಕಾಂತ್

  ಹೈದರಾಬಾದ್‌ನಲ್ಲಿ ರಜನಿಕಾಂತ್

  ಡಿಸೆಂಬರ್‌ 15 ರಿಂದ ಅಣ್ಣಾತ್ತೆ ಸಿನಿಮಾದ ಚಿತ್ರೀಕರಣ ಹೈದರಾಬಾದ್‌ನಲ್ಲಿ ಆರಂಭವಾಗಿತ್ತು. ಸುಮಾರು ಏಳು ದಿನಗಳ ಶೂಟಿಂಗ್ ಬಳಿಕ ತಂಡದ ಏಳು ಸದಸ್ಯರಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ವರದಿಯಾಗಿದೆ. ಹೀಗಾಗಿ, ಚಿತ್ರೀಕರಣವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆಯಂತೆ. ಆ ಏಂಟು ಸದಸ್ಯರು ಯಾರು ಎನ್ನುವ ವಿಚಾರ ಸದ್ಯಕ್ಕೆ ಬಹಿರಂಗವಾಗಿಲ್ಲ.

  ಪ್ರತಿದಿನ 14 ಗಂಟೆ ಕೆಲಸ ಮಾಡ್ತಿದ್ದಾರೆ ಸೂಪರ್ ಸ್ಟಾರ್ ರಜನಿಪ್ರತಿದಿನ 14 ಗಂಟೆ ಕೆಲಸ ಮಾಡ್ತಿದ್ದಾರೆ ಸೂಪರ್ ಸ್ಟಾರ್ ರಜನಿ

  ಚೆನ್ನೈಗೆ ಹಿಂತಿರುಗಿದ ರಜನಿ

  ಚೆನ್ನೈಗೆ ಹಿಂತಿರುಗಿದ ರಜನಿ

  ಹೈದರಾಬಾದ್‌ನ ಶೂಟಿಂಗ್‌ನಲ್ಲಿ ರಜನಿಕಾಂತ್ ಸಹ ಭಾಗವಹಿಸಿದ್ದರು. ಇದೀಗ, ತಂಡದ ಇತರೆ ಸದಸ್ಯರಿಗೆ ಸೋಂಕು ಕಾಣಿಸಿಕೊಂಡ ಹಿನ್ನೆಲೆ ದಿಢೀರ್ ಅಂತ ಚೆನ್ನೈಗೆ ಹಿಂತಿರುಗಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ತಮಿಳು ವಾಹಿನಿಗಳು ವರದಿ ಮಾಡಿರುವ ಪ್ರಕಾರ ರಜನಿಕಾಂತ್‌ಗೆ ಸೋಂಕಿನ ಲಕ್ಷಣಗಳು ಸಹ ಇಲ್ಲ ಎಂದು ಹೇಳಿದೆ.

  14 ಗಂಟೆ ಕೆಲಸ ಮಾಡ್ತಿದ್ದ ರಜನಿ

  14 ಗಂಟೆ ಕೆಲಸ ಮಾಡ್ತಿದ್ದ ರಜನಿ

  ಲಾಕ್‌ಡೌನ್‌ನಿಂದ ಬ್ರೇಕ್ ತೆಗೆದುಕೊಂಡಿದ್ದ ರಜನಿಕಾಂತ್ ಸುಮಾರು ತಿಂಗಳು ನಂತರ ಶೂಟಿಂಗ್ ಆರಂಭಿಸಿದ್ದರು. ಪ್ರತಿ ದಿನ 14 ಗಂಟೆಗಳ ಕಾಲ ಕೆಲಸ ಮಾಡ್ತಿದ್ದರು ಎಂದು ಕೆಲವು ಪತ್ರಿಕೆಗಳು ವರದಿ ಮಾಡಿತ್ತು. ರಾಜಕೀಯ ಪೂರ್ವ ತಯಾರಿ ನಡೆಸಬೇಕಾದ ಅನಿವಾರ್ಯತೆ ಇರುವುದರಿಂದ ಶೂಟಿಂಗ್ ಬೇಗ ಮುಗಿಸಲು ನಿರ್ಧರಿಸಿದ್ದರು. ಆದ್ರೆ, ರಜನಿಯ ವೇಗಕ್ಕೆ ಕೊರೊನಾ ಮತ್ತೆ ಬ್ರೇಕ್ ಹಾಕಿದೆ.

  ಅಣ್ಣಾತ್ತೆ ಚಿತ್ರೀಕರಣ ಆರಂಭ: ರಜನಿಗೆ ಮಗಳು ಐಶ್ವರ್ಯ ಸಾಥ್ಅಣ್ಣಾತ್ತೆ ಚಿತ್ರೀಕರಣ ಆರಂಭ: ರಜನಿಗೆ ಮಗಳು ಐಶ್ವರ್ಯ ಸಾಥ್

  December 31 Rajinikanth ಜೀವನದಲ್ಲಿ ಮಹತ್ವದ ದಿನ | Filmibeat Kannada
  ಡಿಸೆಂಬರ್ 31ಕ್ಕೆ ರಾಜಕೀಯ ಪಕ್ಷ ಘೋಷಣೆ

  ಡಿಸೆಂಬರ್ 31ಕ್ಕೆ ರಾಜಕೀಯ ಪಕ್ಷ ಘೋಷಣೆ

  ಡಿಸೆಂಬರ್ 31ಕ್ಕೆ ತಮ್ಮ ರಾಜಕೀಯ ಪಕ್ಷವನ್ನು ಅಧಿಕೃತವಾಗಿ ಘೋಷಣೆ ಮಾಡಲಿದ್ದೇನೆ ಎಂದು ಸ್ವತಃ ರಜನಿ ಪ್ರಕಟಿಸಿದ್ದಾರೆ. ಹೀಗಾಗಿ, ಅಣ್ಣಾತ್ತೆ ಚಿತ್ರೀಕರಣ ಸಹ ಬೇಗ ಮುಗಿಸಲು ತೀರ್ಮಾನಿಸಿದ್ದರು. ಮುಂದಿನ ವರ್ಷ ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ರಜನಿಕಾಂತ್ ಸ್ಪರ್ಧೆ ಮಾಡಲಿದ್ದಾರೆ.

  English summary
  Superstar Rajinikanth starrer Annaatthe movie shoot halted due to 8 members from the crew testing Corona positive.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X