For Quick Alerts
  ALLOW NOTIFICATIONS  
  For Daily Alerts

  ರಜನಿಕಾಂತ್ 'ಅಣ್ಣಾತ್ತೆ' ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ

  |

  ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದಲ್ಲಿ ತಯಾರಾಗುತ್ತಿರುವ ಅಣ್ಣಾತ್ತೆ ಸಿನಿಮಾ ಯಾವಾಗ ತೆರೆಗೆ ಬರಬಹುದು ಎಂಬ ಕುತೂಹಲ ಕಾಡ್ತಿದೆ. ಈ ಕುತೂಹಲಕ್ಕೆ ಈಗ ಬ್ರೇಕ್ ಬಿದ್ದಿದೆ, ಹೌದು, ಅಣ್ಣಾತ್ತೆ ಸಿನಿಮಾದ ರಿಲೀಸ್ ದಿನಾಂಕ ಅಧಿಕೃತವಾಗಿ ಘೋಷಣೆಯಾಗಿದೆ.

  ರಜನಿಕಾಂತ್ ರಾಜಕೀಯ ಪ್ರವೇಶ ಹಿನ್ನೆಲೆ ಅಣ್ಣಾತ್ತೆ ಕೊನೆಯ ಸಿನಿಮಾ ಆಗಲಿದೆ ಎಂದು ಹೇಳಲಾಗುತ್ತಿತ್ತು. ಈ ಚಿತ್ರದ ಬಳಿಕ ತಲೈವಾ ಮತ್ತೆ ಬಣ್ಣ ಹಚ್ಚೋದು ಬಹುತೇಕ ಅನುಮಾನ ಎಂದು ಮಾತುಗಳು ಜೋರಾಗಿ ಕೇಳಿ ಬಂದಿತ್ತು. ಹಾಗಾಗಿ, ಅಣ್ಣಾತ್ತೆ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಕೊನೆ ಘಳಿಗೆಯಲ್ಲಿ ರಜನಿಕಾಂತ್ ರಾಜಕೀಯದಿಂದ ಹಿಂದೆ ಸರಿದಿದ್ದಾರೆ. ಇದೀಗ, ಅಣ್ಣಾತ್ತೆ ಸಿನಿಮಾದ ಬಿಡುಗಡೆ ದಿನಾಂಕವೂ ಪ್ರಕಟವಾಗಿದೆ. ಮುಂದೆ ಓದಿ....

  ಅಭಿಮಾನಿಗಳಲ್ಲಿ ರಜನಿಕಾಂತ್ ಮನವಿ: ಮತ್ತೆ ಮತ್ತೆ ನನಗೆ ನೋವುಂಟು ಮಾಡಬೇಡಿ ಎಂದ ಸೂಪರ್ ಸ್ಟಾರ್

  ನವೆಂಬರ್ 4ಕ್ಕೆ ಅಣ್ಣಾತ್ತೆ ಸಿನಿಮಾ

  ನವೆಂಬರ್ 4ಕ್ಕೆ ಅಣ್ಣಾತ್ತೆ ಸಿನಿಮಾ

  ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಅಣ್ಣಾತ್ತೆ ಸಿನಿಮಾ ದೀಪಾವಳಿ ಹಬ್ಬದ ಪ್ರಯುಕ್ತ ತೆರೆಗೆ ಬರ್ತಿದೆ. ನವೆಂಬರ್ 4 ರಂದು ಅಣ್ಣಾತ್ತೆ ಸಿನಿಮಾ ವರ್ಲ್ಡ್ ವೈಡ್ ಬಿಡುಗಡೆಯಾಗಲಿದೆ ಎಂದು ಸ್ವತಃ ಚಿತ್ರತಂಡ ಘೋಷಿಸಿದೆ. ಈ ಸುದ್ದಿಯನ್ನು ವಿಮರ್ಶಕ ರಮೇಶ್ ಬಾಲಾ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

  ಡಿಸೆಂಬರ್‌ನಲ್ಲಿ ಶೂಟಿಂಗ್ ಸ್ಥಗಿತ

  ಡಿಸೆಂಬರ್‌ನಲ್ಲಿ ಶೂಟಿಂಗ್ ಸ್ಥಗಿತ

  ಡಿಸೆಂಬರ್ ತಿಂಗಳಲ್ಲಿ ಅಣ್ಣಾತ್ತೆ ಚಿತ್ರೀಕರಣ ಹೈದರಾಬಾದ್‌ನಲ್ಲಿ ನಡೆಯುತ್ತಿತ್ತು. ಸೆಟ್‌ನಲ್ಲಿ ಏಂಟು ಮಂದಿಗೆ ಕೊರೊನಾ ಸೋಂಕು ತಗುಲಿದೆ ಪರಿಣಾಮ ಶೂಟಿಂಗ್ ಸ್ಥಗಿತಗೊಳಿಸಲಾಗಿತ್ತು. ಚಿತ್ರೀಕರಣದಲ್ಲಿ ರಜನಿಕಾಂತ್ ಸಹ ಭಾಗಿಯಾಗಿದ್ದರು. ನಂತರ ಚೆನ್ನೈಗೆ ಮರಳಿದ ತಲೈವಾ ಆಸ್ಪತ್ರೆಯಲ್ಲಿ ಐಸೋಲೆಟ್ ಆಗಿದ್ದರು.

  ರಾಜಕೀಯ ಪ್ರವೇಶ ನಿರ್ಧಾರ ಹಿಂಪಡೆದ ರಜನೀಕಾಂತ್: ಕಾರಣವೇನು?

  ಶಿವ ನಿರ್ದೇಶನ, ದೊಡ್ಡ ತಾರಬಳಗ

  ಶಿವ ನಿರ್ದೇಶನ, ದೊಡ್ಡ ತಾರಬಳಗ

  ಸಿರುತೈ ಶಿವ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ರಜನಿ ಮತ್ತು ಶಿವ ಕಾಂಬಿನೇಷನ್ ಹೆಚ್ಚು ನಿರೀಕ್ಷೆ ಹುಟ್ಟುಹಾಕಿದೆ. ನಯನತಾರಾ, ಕೀರ್ತಿ ಸುರೇಶ್, ಹಿರಿಯ ನಟಿ ಮೀನಾ, ಖುಷ್ಬೂ, ಪ್ರಕಾಶ್ ರಾಜ್, ಸೂರಿ ಸೇರಿದಂತೆ ಹಲವರು ನಟಿಸುತ್ತಿದ್ದಾರೆ.

  ಸ್ನೇಹಿತರ ಮಾತು ಕೇಳದೆ ಇದ್ದಿದ್ರೆ ಜಯಶ್ರೀ ಬದುಕಿರ್ತಾ ಇದ್ರು | Oneindia Kannada
  ಅಕ್ಟೋಬರ್‌ಗೆ ಆರ್ ಆರ್ ಆರ್!

  ಅಕ್ಟೋಬರ್‌ಗೆ ಆರ್ ಆರ್ ಆರ್!

  ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಚಿತ್ರದ ಬಿಡುಗಡೆ ದಿನಾಂಕವೂ ಘೋಷಣೆಯಾಗಿದೆ. ಅಕ್ಟೋಬರ್ 13 ರಂದು ಆರ್ ಆರ್ ಆರ್ ಸಿನಿಮಾ ವರ್ಲ್ಡ್ ವೈಡ್ ರಿಲೀಸ್ ಆಗಲಿದೆ ಎಂದು ರಾಜಮೌಳಿ ಪ್ರಕಟಿಸಿದ್ದಾರೆ. ರಾಮ್ ಚರಣ್ ತೇಜ ಮತ್ತು ಜೂನಿಯರ್ ಎನ್‌ಟಿಆರ್ ನಟಿಸಿದ್ದಾರೆ.

  English summary
  Superstar Rajinikanth starrer Annaatthe movie will be releasing on November 4th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X