For Quick Alerts
  ALLOW NOTIFICATIONS  
  For Daily Alerts

  ಎಂಜಿಆರ್ ಪುಣ್ಯ ಸ್ಮರಣೆ: ಅರವಿಂದ್ ಸ್ವಾಮಿಯ ಹೊಸ ಲುಕ್ ಬಿಡುಗಡೆ

  |

  ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಸೂಪರ್ ಸ್ಟಾರ್ ನಟ ಎಂಜಿಆರ್ ಅವರ ಪುಣ್ಯ ಸ್ಮರಣೆ ದಿನದ ವಿಶೇಷವಾಗಿ ಅರವಿಂದ್ ಸ್ವಾಮಿಯ ಹೊಸ ಲುಕ್ ರಿಲೀಸ್ ಆಗಿದೆ.

  ಕಂಗನಾ ರಣಾವತ್ ನಟಿಸುತ್ತಿರುವ ತಲೈವಿ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಮೂಡಿಸಿದೆ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಜೀವನ ಆಧರಿಸಿ ತಯಾರಾಗುತ್ತಿರುವ ಈ ಸಿನಿಮಾದಲ್ಲಿ ತಮಿಳು ನಟ ಅರವಿಂದ್ ಸ್ವಾಮಿ ಎಂಜಿಆರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.

  ಜಯಲಲಿತಾ ಜನ್ಮ ವಾರ್ಷಿಕೋತ್ಸವ: ರಿಲೀಸ್ ಆಯ್ತು 'ತಲೈವಿ' ಹೊಸ ಲುಕ್ಜಯಲಲಿತಾ ಜನ್ಮ ವಾರ್ಷಿಕೋತ್ಸವ: ರಿಲೀಸ್ ಆಯ್ತು 'ತಲೈವಿ' ಹೊಸ ಲುಕ್

  ಇಂದು ಎಂಜಿಆರ್ ಅವರ 33ನೇ ಪುಣ್ಯ ಸ್ಮರಣೆಯ ದಿನ. 1987 ಡಿಸೆಂಬರ್ 24 ರಂದು ಎಂಜಿಆರ್ ವಿಧಿವಶರಾಗಿದ್ದರು. ಈ ವಿಶೇಷ ದಿನದಂದು ತಲೈವಿ ಸಿನಿಮಾದಲ್ಲಿ ಎಂಜಿಆರ್ ಪಾತ್ರ ಮಾಡ್ತಿರುವ ಅರವಿಂದ್ ಸ್ವಾಮಿಯ ಹೊಸ ಚಿತ್ರಗಳು ಅನಾವರಣಗೊಂಡಿದೆ.

  ಎಂಜಿಆರ್ ಅವರಂತೆ ತಲೆಗೆ ಟೋಪಿ ಹಾಗೂ ಬಿಳಿ ಪಂಚೆ ಹಾಗೂ ಬಿಳಿ ಶರ್ಟ್ ಧರಿಸಿ ಕೈ ಮುಗಿದ ಬರುತ್ತಿರುವ ಒಂದು ಫೋಟೋ ಹಾಗೂ ಮಕ್ಕಳ ಜೊತೆ ಸಾಲಿನಲ್ಲಿ ಕುಳಿತು ಊಟ ಮಾಡುತ್ತಿರುವ ಇನ್ನೊಂದು ಫೋಟೋ ಬಿಡುಗಡೆಯಾಗಿದೆ.

  ಶೂಟಿಂಗ್ ಬಿಟ್ಟು ಇದ್ದಕ್ಕಿದ್ದಂತೆ ಚೆನ್ನೈ ಗೆ ವಾಪಾಸ್ ಆದ Rajinikanth | Filmibeat Kannnada

  ಇನ್ನುಳಿದಂತೆ ಎಎಲ್ ವಿಜಯ್ ಈ ಚಿತ್ರ ನಿರ್ದೇಶನ ಮಾಡುತ್ತಿದ್ದು, ವಿಷ್ಣುವರ್ಧನ ಇಂದುರಿ ಮತ್ತು ಶೈಲೆಶ್ ಆರ್ ಸಿಂಗ್ ನಿರ್ಮಾಣ ಮಾಡುತ್ತಿದ್ದಾರೆ. ಜಯಲಲಿತಾ ಅವರ ಆಪ್ತೆ ಶಶಿಕಲಾ ಪಾತ್ರದಲ್ಲಿ ಪೂರ್ಣ ನಟಿಸುತ್ತಿದ್ದಾರೆ.

  English summary
  Aravind swamy MGR's look released on the occasion of the Death Anniversary of MGR.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X