twitter
    For Quick Alerts
    ALLOW NOTIFICATIONS  
    For Daily Alerts

    ಥಿಯೇಟರ್‌ನಲ್ಲಿ 100ರಷ್ಟು ಅನುಮತಿ: ವಿರೋಧಿಸಿದ ತಮಿಳು ನಟ ಅರವಿಂದ್ ಸ್ವಾಮಿ

    |

    ತಮಿಳುನಾಡು ಸರ್ಕಾರ ಚಿತ್ರಮಂದಿರಗಳಲ್ಲಿ ಶೇಕಡಾ 100ರಷ್ಟು ಪ್ರೇಕ್ಷಕರಿಗೆ ಅನುಮತಿ ನೀಡಿದೆ. ತಮಿಳು ನಟ ವಿಜಯ್ ನಟನೆಯ ಮಾಸ್ಟರ್ ಸಿನಿಮಾ ಜನವರಿ 13 ರಂದು ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆ ತಮಿಳುನಾಡು ಮುಖ್ಯಮಂತ್ರಿಯನ್ನು ಭೇಟಿ ಮಾಡಿದ್ದ ನಟ 'ಪೂರ್ಣ ಪ್ರಮಾಣದಲ್ಲಿ ಚಿತ್ರಮಂದಿರಗಳು ಕೆಲಸ ಮಾಡಲು ಅನುಮತಿ ಕೊಡಿ' ಎಂದು ಮನವಿ ಮಾಡಿದ್ದರು ಎಂದು ವರದಿಯಾಗಿತ್ತು.

    ಸಿಎಂ ಮತ್ತು ವಿಜಯ್ ಭೇಟಿಯ ಕೆಲವೇ ದಿನದ ಬಳಿಕ ತಮಿಳುನಾಡು ಸರ್ಕಾರ ಥಿಯೇಟರ್‌ಗಳಿಗೆ ಶೇಕಡಾ 100 ರಷ್ಟು ಅನುಮತಿ ನೀಡಿರುವುದು ಚರ್ಚೆಗೆ ಕಾರಣವಾಗಿದೆ. ಈ ನಡುವೆ ಸರ್ಕಾರದ ಈ ನಿರ್ಧಾರವನ್ನು ಹಲವರು ಸ್ವಾಗತಿಸಿದರೆ, ಅನೇಕರು ವಿರೋಧಿಸಿದ್ದಾರೆ. ನಟ ಅರವಿಂದ್ ಸ್ವಾಮಿ ಸಹ ಇದನ್ನು ಖಂಡಿಸಿದ್ದಾರೆ. ಈಗ ಅರವಿಂದ್ ಸ್ವಾಮಿ ಅವರ ಟ್ವೀಟ್‌ಗೆ ಪರ-ವಿರೋಧದ ಚರ್ಚೆ ನಡೆಯುತ್ತಿದೆ. ಮುಂದೆ ಓದಿ....

    ಚಿತ್ರಮಂದಿರಗಳಲ್ಲಿ ಶೇ. 100 ಆಸನ ಭರ್ತಿಗೆ ಸರ್ಕಾರದ ಅನುಮತಿಚಿತ್ರಮಂದಿರಗಳಲ್ಲಿ ಶೇ. 100 ಆಸನ ಭರ್ತಿಗೆ ಸರ್ಕಾರದ ಅನುಮತಿ

    100 ಪರ್ಸೆಂಟ್‌ಗಿಂತ 50 ಪರ್ಸೆಂಟ್ ಉತ್ತಮ

    100 ಪರ್ಸೆಂಟ್‌ಗಿಂತ 50 ಪರ್ಸೆಂಟ್ ಉತ್ತಮ

    ಚಿತ್ರಮಂದಿರಗಳಿಗೆ ಶೇಕಡಾ 100 ರಷ್ಟು ಅನುಮತಿ ನೀಡಿರುವ ನಿರ್ಧಾರದ ಬಗ್ಗೆ ಟ್ವೀಟ್ ಮಾಡಿರುವ ನಟ ಅರವಿಂದ್ ಸ್ವಾಮಿ ''ದೇಶದ ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ 100 ಪರ್ಸೆಂಟ್‌ಗಿಂತ 50 ಪರ್ಸೆಂಟ್ ಉತ್ತಮವಾಗಿದೆ'' ಎಂದು ಹೇಳಿದ್ದಾರೆ. ಅರವಿಂದ್ ಸ್ವಾಮಿಯ ಟ್ವೀಟ್‌ಗೆ ವಿರೋಧ ಹಾಗೂ ಬೆಂಬಲವೂ ವ್ಯಕ್ತವಾಗುತ್ತಿದೆ.

    ನಿಮ್ಮನ್ನು ಯಾರು ಒತ್ತಾಯಿಸುತ್ತಿಲ್ಲ...

    ನಿಮ್ಮನ್ನು ಯಾರು ಒತ್ತಾಯಿಸುತ್ತಿಲ್ಲ...

    ಅರವಿಂದ್ ಸ್ವಾಮಿಯ ಟ್ವೀಟ್ ಖಂಡಿಸಿರುವ ನೆಟ್ಟಿಗನೊಬ್ಬ ''ನಿಮ್ಮನ್ನು ಯಾರು ಒತ್ತಾಯ ಮಾಡುತ್ತಿಲ್ಲ. ನಿಮಗೆ ಆಸಕ್ತಿಯಿದ್ದರೆ ಹೋಗಿ ಸಿನಿಮಾ ನೋಡಿ, ಭಯ ಇದ್ದರೆ ಹೋಗಬೇಡಿ. ಇದು ಅತ್ಯಂತ ಸರಳ'' ಎಂದು ಟೀಕಿಸಿದ್ದಾರೆ. ಈ ಟ್ವೀಟ್‌ಗೆ ಅರವಿಂದ್ ಸ್ವಾಮಿಯ ಪರವಾಗಿ ಟ್ವೀಟ್ ಮಾಡಿರುವ ಮತ್ತೊಬ್ಬ ವ್ಯಕ್ತಿ ''ಇದು ಭಯ ಪ್ರಶ್ನೆಯಲ್ಲ. ಒಂದು ವೇಳೆ ಚಿತ್ರಮಂದಿರಕ್ಕೆ ಹೋಗಿ ಆ ವ್ಯಕ್ತಿ ವೈರಸ್ ಅಂಟಿಸಿಕೊಂಡು ಬಂದರೆ ಆ ಕುಟುಂಬದ ಸ್ಥಿತಿ ಏನು? ಯಾರು ಜವಾಬ್ದಾರಿ?'' ಎಂದು ಪ್ರಶ್ನಿಸಿದ್ದಾರೆ.

    ಥಿಯೇಟರ್‌ನಲ್ಲಿ 100ರಷ್ಟು ಅನುಮತಿ: ನಟಿ ಖುಷ್ಬೂ ಟ್ವೀಟ್ ವಿರುದ್ಧ ಟೀಕೆಥಿಯೇಟರ್‌ನಲ್ಲಿ 100ರಷ್ಟು ಅನುಮತಿ: ನಟಿ ಖುಷ್ಬೂ ಟ್ವೀಟ್ ವಿರುದ್ಧ ಟೀಕೆ

    ಸೋಂಕು ಹರಿಡಿದರೆ 50 ಪರ್ಸೆಂಟ್‌ಗೂ ಅವಕಾಶ ಇರಲ್ಲ

    ಸೋಂಕು ಹರಿಡಿದರೆ 50 ಪರ್ಸೆಂಟ್‌ಗೂ ಅವಕಾಶ ಇರಲ್ಲ

    ''ನಮ್ಮ ಪ್ರಕ್ರಿಯೆಗಳು ಬೇರಯವರಿಗೆ ತೊಂದರೆ ಉಂಟು ಮಾಡಬಾರದು. ನೂರರಷ್ಟು ಅನುಮತಿಯಿಂದ ವೈರಸ್ ಹರಡಿದರೆ ಕನಿಷ್ಠ 50 ಪರ್ಸೆಂಟ್ ಕಾರ್ಯನಿರ್ವಹಿಸಲು ಸಹ ಅವಕಾಶ ಸಿಗಲ್ಲ. ಆಗ ಒಂದೇ ವಾರದಲ್ಲಿ ಚಿತ್ರಮಂದಿರ ಮುಚ್ಚಬೇಕಾಗುತ್ತದೆ. ಎಲ್ಲ ಉದ್ಯಮಗಳು ಒಂದು ರೀತಿ ಪ್ರಭಾವ ಬೀರಲಿದೆ, ಇದರಲ್ಲಿ ಚಿತ್ರಮಂದಿರಗಳು ಏನು ವಿಶೇಷವಾಗಿಲ್ಲ'' ಎಂದು ವ್ಯಕ್ತಿಯೊಬ್ಬ ಅರವಿಂದ್ ಸ್ವಾಮಿ ಟ್ವೀಟ್‌ ಬೆಂಬಲಿಸಿದ್ದಾರೆ.

    50 ಪರ್ಸೆಂಟ್ ಸಂಭಾವನೆ ತಗೊಳ್ಳಿ

    50 ಪರ್ಸೆಂಟ್ ಸಂಭಾವನೆ ತಗೊಳ್ಳಿ

    ಅರವಿಂದ್ ಸ್ವಾಮಿ ಟ್ವೀಟ್‌ಗೆ ತಿರುಗೇಟು ನೀಡಿರುವ ವ್ಯಕ್ತಿಯೊಬ್ಬ ''ಹೌದು, ನಿಜ....ಇನ್ಮುಂದೆ ನೀವು ಶೇಕಡಾ 50 ಪರ್ಸೆಂಟ್ ಮಾತ್ರ ಸಂಭಾವನೆ ಪಡೆದುಕೊಳ್ಳಿ'' ಎಂದು ಹೇಳಿದ್ದಾನೆ. ''ಕೆಲವೊಮ್ಮೆ 100 ಪರ್ಸೆಂಟ್‌ಗಿಂತ 0 ಪರ್ಸೆಂಟ್ ಉತ್ತಮ'' ಎಂದು ಮತ್ತೊಬ್ಬ ವ್ಯಕ್ತಿ ಕಾಲೆಳೆದಿದ್ದಾರೆ.

    ಸ್ವಾರ್ಥ ಉದ್ಯಮದಿಂದ ಒಬ್ಬ ವ್ಯಕ್ತಿ....

    ಸ್ವಾರ್ಥ ಉದ್ಯಮದಿಂದ ಒಬ್ಬ ವ್ಯಕ್ತಿ....

    ಸಿನಿಮಾ ಇಂಡಸ್ಟ್ರಿ ಸ್ವಾರ್ಥಿಗಳ ಉದ್ಯಮ ಎಂದು ಕೆಲವರು ಟೀಕಿಸುತ್ತಾರೆ. ಈ ಹಿನ್ನೆಲೆಯಲ್ಲಿ ಅರವಿಂದ್ ಸ್ವಾಮಿ ಟ್ವೀಟ್‌ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ನೆಟ್ಟಿಗ ''ಸ್ವಾರ್ಥದ ಇಂಡಸ್ಟ್ರಿಯಿಂದ ಒಬ್ಬರಾದರೂ ವಾಸ್ತವದ ಬಗ್ಗೆ ಮಾತನಾಡಿದ್ದು ಖುಷಿ ತಂದಿದೆ'' ಎಂದು ಟ್ವೀಟ್ ಮಾಡಿದ್ದಾರೆ.

    Recommended Video

    26 ವರ್ಷದ ಬಳಿಕ ಕನ್ನಡ ಚಿತ್ರದಲ್ಲಿ ನಟಿಸಿದ ರಜನಿಕಾಂತ್ ಚಿತ್ರದ ನಾಯಕಿ | Filmibeat Kannada
    ಖುಷ್ಬೂ ಏನು ಹೇಳಿದ್ದರು?

    ಖುಷ್ಬೂ ಏನು ಹೇಳಿದ್ದರು?

    ''ಚಿತ್ರಮಂದಿರದಲ್ಲಿ ಶೇಕಡಾ 100ರಷ್ಟು ಅನುಮತಿ ನೀಡಿರುವ ಬಗ್ಗೆ ಅಸಮಾಧಾನ ಹೊಂದಿರುವವರಿಗೆ ನನ್ನದೊಂದು ಸಂದೇಶ. ನಿಮಗೆ ಚಿಂತೆ ಇದ್ದರೆ ನೀವು ಹೋಗಬೇಡಿ. ನಿಮ್ಮ ಭಯ ಅರ್ಥವಾಗುವಂತಹದ್ದೇ. ಇಲ್ಲಿ ಯಾರು ನಿಮ್ಮನ್ನು ಒತ್ತಾಯಿಸುತ್ತಿಲ್ಲ'' ಎಂದು ಖುಷ್ಬೂ ಹೇಳಿದ್ದಾರೆ. ಖುಷ್ಬೂ ಅವರ ಟ್ವೀಟ್‌ಗೂ ವಿರೋಧ ವ್ಯಕ್ತವಾಗಿತ್ತು. ವೈರಸ್ ಹರಡಿದರೆ ಯಾರು ಜವಾಬ್ದಾರಿ, ಆ ಕುಟುಂಬಕ್ಕೆ ನೀವು ಹೊಣೆಯಾಗ್ತೀರಾ ಎಂದು ಪ್ರಶ್ನಿಸಿದ್ದರು.

    English summary
    Tamil Actor Aravind swamy Reaction to Tamil Nadu govt allows 100 percent occupancy in theaters.
    Tuesday, January 5, 2021, 11:46
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X