Just In
Don't Miss!
- Sports
ಐಪಿಎಲ್ 2021: ಸಿಎಸ್ಕೆ ಉಳಿಸಿಕೊಂಡಿರುವ, ಕೈ ಬಿಟ್ಟಿರುವ ಆಟಗಾರರ ಪಟ್ಟಿ
- Automobiles
ಒಂದು ಗಂಟೆಯಲ್ಲಿ ಈ ಬುಲೆಟ್ ಥಾಲಿಯನ್ನು ತಿಂದು ಮುಗಿಸುವವರಿಗೆ ಸಿಗಲಿದೆ ಬುಲೆಟ್ ಬೈಕ್
- News
ಕೃಷಿ ಕಾಯ್ದೆಗಳ ಕಥೆ: ರೈತರಿಗೆ ಸಮಾಧಾನ ನೀಡದ "ಸಂಧಾನ" ಸಭೆಗಳ ಸಾಲು!
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 20ರ ಚಿನ್ನ, ಬೆಳ್ಳಿ ದರ
- Lifestyle
ಕೋವಿಡ್ 19 ಲಸಿಕೆಯ ಅಡ್ಡಪರಿಣಾಮದಿಂದ ಸಾವು ಸಂಭವಿಸಲ್ಲ: ಏಮ್ಸ್ ನಿರ್ದೇಶಕ
- Education
UAS Dharwad Recruitment 2021: ರಿಸರ್ಚ್ ಅಸೋಸಿಯೇಟ್ ಹುದ್ದೆಗೆ ಜ.28ಕ್ಕೆ ನೇರ ಸಂದರ್ಶನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಆಯರತ್ತಿಲ್ ಒರುವನ್ 2' ಸಿನಿಮಾ ಘೋಷಣೆ: ಕಾರ್ತಿ ಬದಲು ಮತ್ತೊಬ್ಬ ಸೂಪರ್ ಸ್ಟಾರ್
2010 ರಲ್ಲಿ ಬಿಡುಗಡೆ ಆಗಿದ್ದ ತಮಿಳು ಸಿನಿಮಾ 'ಆಯರತ್ತಿಲ್ ಒರುವನ್' ಸಿನಿಮಾ ದಕ್ಷಿಣ ಭಾರತದ ಚಿತ್ರರಂಗ ಬೆರಗಿನಿಂದ ನೋಡಿದ ಸಿನಿಮಾ.
300, ಅಲೆಕ್ಸಾಂಡರ್ ಮಾದರಿಯ ಹಾಲಿವುಡ್ ಸಿನಿಮಾ ನೋಡಿದ್ದ ಭಾರತೀಯ ಪ್ರೇಕ್ಷಕರಿಗೆ ಅದೇ ಜಾಡಿನ ಆದರೆ ನಮ್ಮದೇ ನೆಲದ ಸಿನಿಮಾ ನೋಡಿದ ಅನುಭವವನ್ನು 'ಆಯರತ್ತಿಲ್ ಒರುವನ್' ನೀಡಿತ್ತು. ಕಾರ್ತಿ ಎಂಬ ಪ್ರತಿಭಾವಂತ ನಟನನ್ನೂ ಕೊಟ್ಟ ಸಿನಿಮಾ 'ಆಯರತ್ತಿಲ್ ಒರುವನ್'.
'ಅವೇಂಜರ್ಸ್' ನಾಯಕನ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ ದಕ್ಷಿಣದ ಸ್ಟಾರ್ ನಟ!
ತೆಲುಗಿನಲ್ಲಿ 'ಯುಗಾನಿಕೊಕ್ಕಡು' ಹೆಸರಿನಲ್ಲಿ ಡಬ್ ಆದ ಈ ಸಿನಿಮಾ ಹಿಟ್ ಆಗಿದ್ದು ಮಾತ್ರವಲ್ಲದೆ ಉತ್ತಮ ವಿಮರ್ಶೆಗಳನ್ನೂ ಗಳಿಸಿತು. ಈಗ ಈ ಸಿನಿಮಾದ ಎರಡನೇ ಸರಣಿ ನಿರ್ಮಿಸುವುದಾಗಿ ಘೋಷಿಸಲಾಗುತ್ತಿದೆ.

'ಆಯರತ್ತಿಲ್ ಒರುವನ್ 2' ಸಿನಿಮಾ ಘೋಷಣೆ
'ಆಯರತ್ತಿಲ್ ಒರುವನ್' ಸಿನಿಮಾ ನಿರ್ದೇಶಿಸಿದ್ದ ಸೆಲ್ವರಗನ್ ಅವರೇ 'ಆಯರತ್ತಿಲ್ ಒರುವನ್ 2' ಸಿನಿಮಾವನ್ನು ನಿರ್ದೇಶಿಸಲಿದ್ದಾರೆ. ಈ ಸಿನಿಮಾಕ್ಕೆ ಕಾರ್ತಿ ಬದಲು ಸೂಪರ್ ಸ್ಟಾರ್ ನಟ ಧನುಶ್ ಅನ್ನು ಆಯ್ಕೆ ಮಾಡಲಾಗಿದೆ.
ಹಾಲಿವುಡ್ ನಿರ್ದೇಶಕನ ಚಿತ್ರದಲ್ಲಿ ಧನುಶ್: ಶುಭಕೋರಿದ ನಟ ಸೂರ್ಯ

ಆಯರತ್ತಿಲ್ ಒರುವನ್ 2 ಸಿನಿಮಾದ ಪೋಸ್ಟರ್
ಆಯರತ್ತಿಲ್ ಒರುವನ್ 2 ಸಿನಿಮಾದ ಕಾರ್ಯ ಶೀಘ್ರದಲ್ಲಿ ಪ್ರಾರಂಭವಾಗುವುದಿಲ್ಲ ಬದಲಿಗೆ ಸಿನಿಮಾವು 2024 ಕ್ಕೆ ಬಿಡುಗಡೆ ಮಾಡುವ ಆಲೋಚನೆ ನಿರ್ದೇಶಕರಿಗಿದೆ. ಸಿನಿಮಾದ ಪೋಸ್ಟರ್ ಒಂದನ್ನು ನಿರ್ದೇಶಕ ಸೆಲ್ವರಗನ್ ಬಿಡುಗಡೆ ಮಾಡಿದ್ದಾರೆ.

ಪ್ರೀ ಪ್ರೊಡಕ್ಷನ್‌ಗೆ ಒಂದು ವರ್ಷ ಬೇಕು!
ಆಯರತ್ತಿಲ್ ಒರುವನ್ ಸಿನಿಮಾದಲ್ಲಿ ರಾಜ ಅಂತಿಮವಾಗಿ ಸಾವನ್ನಪ್ಪುತ್ತಾನೆ. ಆಯರತ್ತಿಲ್ ಒರುವನ್ 2 ಸಿನಿಮಾದಲ್ಲಿ ರಾಜ ಮರಳಿ ಬರಲಿದ್ದಾನಂತೆ. ಈ ಸಿನಿಮಾದಲ ಪ್ರೀ ಪ್ರೊಡಕ್ಷನ್‌ಗೆ ಒಂದು ವರ್ಷಕ್ಕೂ ಹೆಚ್ಚು ಸಮಯ ಹಿಡಿಯಲಿದೆಯಂತೆ.

ಹಾಲಿವುಡ್‌ಗೆ ಹೊರಟಿರುವ ಧನುಶ್
ನಟ ಧನುಶ್ ಈಗ ಹಾಲಿವುಡ್‌ಗೆ ಹೊರಟಿದ್ದಾರೆ. ಅದೂ ಹಾಲಿವುಡ್‌ನ ದೊಡ್ಡ ಸ್ಟಾರ್‌ಗಳ ಜೊತೆ, ದೊಡ್ಡ ಪ್ರೊಡಕ್ಷನ್ ಸಂಸ್ಥೆಯ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವೇಂಜರ್ಸ್, ಕ್ಯಾಪ್ಟನ್ ಅಮೆರಿಕ, ಎಕ್ಸ್‌ಟ್ರಾಕ್ಷನ್ ಸಿನಿಮಾ ನಿರ್ದೇಶಕರಾದ ರೊಸ್ಸೊ ಸಹೋದರ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ನಟ ಧನುಶ್. ಧನುಶ್ ನಟಿಸುತ್ತಿರುವ ಹಾಲಿವುಡ್ ಸಿನಿಮಾದಲ್ಲಿ ಕ್ಯಾಪ್ಟನ್ ಅಮೆರಿಕ ಖ್ಯಾತಿಯ ಕ್ರಿಸ್ ಇವಾನ್, ಯಾರ್ನೆ ಗ್ಲೋಸಿಂಗ್ ಅವರುಗಳು ಸಹ ಇರಲಿದ್ದಾರೆ. ಸಿನಿಮಾಕ್ಕೆ 'ದಿ ಗ್ರೇ ಮ್ಯಾನ್' ಎಂದು ಹೆಸರಿಡಲಾಗಿದೆ.