Don't Miss!
- News
Budget 2023: ಸತತ 5 ಬಾರಿ ಬಜೆಟ್ ಮಂಡಿಸಿದ ಆರನೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್- ಉಳಿದವರು ಯಾರು? ತಿಳಿಯಿರಿ
- Automobiles
ರಾಜ್ಯದ ಈ ನಗರಗಳಲ್ಲಿ ಡಬ್ಬಲ್ ಡೆಕ್ಕರ್ ಎಲೆಕ್ಟ್ರಿಕ್ ಬಸ್ ಸೇವೆ: KSRTC ತೀರ್ಮಾನ!
- Finance
Budget 2023: ಬಜೆಟ್ಗೆ ಕೆಂಪು ಸೀರೆ ಉಟ್ಟ ವಿತ್ತ ಸಚಿವೆ, ವಿಶೇಷತೆಯೇನು?
- Technology
Budget 2023: ಬಜೆಟ್ ಪ್ರತಿಯನ್ನು ಪ್ರಾದೇಶಿಕ ಭಾಷೆಯಲ್ಲಿ ಡೌನ್ಲೋಡ್ ಮಾಡಲು ಹೀಗೆ ಮಾಡಿ!
- Lifestyle
ಫೆಬ್ರವರಿ ತಿಂಗಳಿನಲ್ಲಿ ಈ 5 ರಾಶಿಯವರಿಗೆ ಲಕ್ಷ್ಮಿ ಕೃಪೆಯಿದೆ
- Sports
ರಣಜಿ ಟ್ರೋಫಿ: ಕ್ವಾ. ಫೈನಲ್ನಲ್ಲಿ ಕರ್ನಾಟಕ vs ಉತ್ತರಾಖಂಡ್ ಸೆಣೆಸಾಟ: 2ನೇ ದಿನದ Live score
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಭಾರತ್ ಜೋಡೊ ಯಾತ್ರೆಯಲ್ಲಿ ಕಮಲ್: "ಭಾರತೀಯನಾಗಿ ಇಲ್ಲಿ ಬಂದಿದ್ದೇನೆ" ಎಂದ ಉಳಗ ನಾಯಗನ್
ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ 'ಭಾರತ್ ಜೋಡೋ' ಪಾದಯಾತ್ರೆಯಲ್ಲಿ ತಮಿಳು ನಟ ಕಮಲ್ ಹಾಸನ್ ಭಾಗಿ ಆಗಿದ್ದರು. "ನಾನು ಒಬ್ಬ ಭಾರತೀಯನಾಗಿ ಈ ಪಾದಯಾತ್ರೆಯಲ್ಲಿ ಭಾಗಿ ಆಗಿದ್ದೇನೆ" ಎಂದು ಉಳಗ ನಾಯಗನ್ ಹೇಳಿದ್ದಾರೆ.
ಸೆಪ್ಟೆಂಬರ್‌ನಲ್ಲಿ ಕನ್ಯಾಕುಮಾರಿಯಿಂದ ಆರಂಭವಾದ 'ಭಾರತ್ ಜೋಡೋ' ಪಾದಯಾತ್ರೆಗೆ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ಸಾಮಾನ್ಯ ಜನರು ಕೂಡ ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿದ್ದಾರೆ. ಸದ್ಯ ಪಾದಯಾತ್ರೆ ದೆಹಲಿ ಪ್ರವೇಶಿಸಿದೆ. ನಿನ್ನೆ (ಡಿಸೆಂಬರ್ 24) ರಾಷ್ಟ್ರ ರಾಜಧಾನಿಯಲ್ಲಿ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಜೊತೆಗೆ ತಮಿಳು ನಟ ಕಮಲ್ ಹಾಸನ್ ಕೂಡ ಪಾದಯಾತ್ರೆಯಲ್ಲಿ ಭಾಗಿ ಆಗಿದ್ದರು. ಫರಿದಾ ಬಾದ್ ಮೂಲಕ ದೆಹಲಿ ಪ್ರವೇಶಿಸಿದ ಯಾತ್ರೆಯಲ್ಲಿ ಜೈರಾಮ್ ರಮೇಶ್, ಪವನ್ ಖೇರಾ, ಭೂಪಿಂದರ್ ಸಿಂಗ್ ಹೂಡಾ, ರಣದೀಪ್ ಸುರ್ಜೆವಾಲಾ ಸೇರಿದಂತೆ ಹಲವರು ಮೆರಣಿಗೆಯ ಮುಂದಿನ ಸಾಲಿನಲ್ಲಿದ್ದರು.
ಬೆಟ್ಟದ
ಹೂ:
ರಾಹುಲ್-
ಹೂವಿ
ವಿಚಾರ
ಮಾಲಿನಿಗೆ
ತಿಳಿದೇ
ಹೋಯ್ತು
ಮುಂದೇನು?
ಈಗಾಗಲೇ ದೇಶದಲ್ಲಿ 'ಭಾರತ್ ಜೋಡೋ' ಯಾತ್ರೆ 3000 ಕಿಲೋ ಮೀಟರ್ ಮುಕ್ತಾಯವಾಗಿದೆ. ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಹರಿಯಾಣದಲ್ಲಿ ಪಾದಯಾತ್ರೆ ನಡೆದಿದೆ. ಕೆಂಪುಕೋಟೆವರೆಗೂ ಪಾದಯಾತ್ರೆಯಲ್ಲಿ ಭಾಗಿಯಾಗಿ ನಟ ಕಮಲ್ ಹಾಸನ್ ವೇದಿಕೆ ಏರಿ ಮಾತನಾಡಿದರು.

ದೇಶ ಒಗ್ಗೂಡಿಸಲು ನನ್ನ ನೆರವು
"ನನ್ನ ತಂದೆ ಕಾಂಗ್ರೆಸ್ ಅಭಿಮಾನಿ ಆಗಿದ್ದರು. ನಾನು ಕೂಡ ನನ್ನದೇ ಆದ ಸಿದ್ಧಾಂತಗಳನ್ನು ಹೊಂದಿದ್ದೇನೆ. ನನ್ನದೇ 'ಮಕ್ಕಳ್ ನೀದಿಮಯ್ಯಂ' ರಾಜಕೀಯ ಪಕ್ಷವನ್ನು ಆರಂಭಿಸಿದ್ದೇನೆ. ಆದರೆ ದೇಶದ ವಿಚಾರ ಬಂದಾಗ ಎಲ್ಲಾ ರಾಜಕೀಯ ಪಕ್ಷದ ಗೆರೆ ದಾಟಬೇಕಾಗುತ್ತದೆ. ಆ ಗೆರೆ ದಾಟಿ ಕಮಲ್ ಹಾಸನ್ ಆಗಿ ಇಲ್ಲಿಗೆ ಬಂದಿದ್ದೇನೆ. ಕನ್ನಡಿ ಮುಂದೆ ನಿಂತು ನನ್ನನ್ನು ನಾನು ಕೇಳಿಕೊಂಡೆ. ದೇಶಕ್ಕೆ ನನ್ನ ಅಗತ್ಯ ಇರುವ ಸಮಯ ಇದು. ದೇಶವನ್ನು ಒಡೆಯುವುದಕ್ಕೆ ಸಹಾಯ ಮಾಡಬೇಡ, ಒಗ್ಗೂಡಿಸಲು ನೆರವಾಗು ಎನ್ನುವ ಧ್ವನಿ ಕೇಳಿಬಂತು" ಎಂದು ಕಮಲ್ ಹೇಳಿದ್ದಾರೆ.

ಭಾರತೀಯನಾಗಿ ಬಂದಿದ್ದೇನೆ
"ನಾನು ಯಾಕೆ ಬಂದೆ ಎಂದು ಬಹಳ ಜನ ಕೇಳಿದರು. ನಾನು ಒಬ್ಬ ಭಾರತೀಯನಾಗಿ ಈ ಪಾದಯಾತ್ರೆಯಲ್ಲಿ ಭಾಗಿ ಆಗಿದ್ದೇನೆ. ಈ ಯಾತ್ರೆ ಈಗಷ್ಟೆ ಆರಂಭ ಆಗಿದೆ. ಇನ್ನು ಸಾಕಷ್ಟು ದೂರ ಕ್ರಮಿಸಬೇಕಿದೆ. ಸಾಕಷ್ಟು ಜನ ರಾಜಕೀಯ ಸಮೀಕರಣದ ಬಗ್ಗೆ ಕೇಳಿದರು. ಅದು ಬೇರೆ ವಿಚಾರ. ನಾನೊಬ್ಬ ಭಾರತೀಯನಾಗಿ ಇಲ್ಲಿ ಇದ್ದೇನೆ. ಇದು 5 ವರ್ಷಗಳ ಯೋಜನೆ ಅಲ್ಲ. ಇದು ಹಲವು ತಲೆಮಾರುಗಳಿಗಾಗಿರುವ ಯೋಜನೆ" ಎಂದರು.

ಪಕ್ಷ ಕಟ್ಟಿ ಸೋತ ಕಮಲ್
2018ರಲ್ಲಿ ಉಳಗ ನಾಯಕನ್ ಕಮಲ್ ಹಾಸನ್ 'ಮಕ್ಕಳ್ ನೀದಿಮಯ್ಯಂ' ಎನ್ನುವ ರಾಜಕೀಯ ಪಕ್ಷ ಸ್ಥಾಪಿಸಿದರು. 2019ರಲ್ಲಿ ಬ್ಯಾಟರಿ ಚಿಹ್ನೆಯಲ್ಲಿ ಚುನಾವಣೆಗೂ ಪಕ್ಷ ಸ್ಪರ್ಧಿಸಿತ್ತು. ಆದರೆ ಹೀನಾಯವಾಗಿ ಸೋಲುಂಡಿತ್ತು. ಸ್ವತಃ ಪಕ್ಷದ ಸಂಸ್ಥಾಪಕ ಕಮಲ್‌ಗೂ ಸೋಲಿನ ಕಹಿ ಎದುರಾಗಿತ್ತು. ದಕ್ಷಿಣ ಕೋಯಬಂತ್ತೂರು ಕ್ಷೇತ್ರದಿಂದ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿದ್ದ ಉಳಗ ನಾಯಗನ್ ಬಿಜೆಪಿ ಅಭ್ಯರ್ಥಿ ಎದುರು ಪರಾಭವಗೊಂಡಿದ್ದರು. ನಂತರ ಸಕ್ರಿಯ ರಾಜಕಾರಣದಿಂದ ದೂರವೇ ಉಳಿದಿದ್ದಾರೆ.

'ವಿಕ್ರಂ' ಚಿತ್ರದಿಂದ ಕಂಬ್ಯಾಕ್
ಚಿತ್ರರಂಗದಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿದ್ದ ಕಮಲ್ ಹಾಸನ್ 'ವಿಕ್ರಂ' ಸಿನಿಮಾ ಮೂಲಕ ಕಂಬ್ಯಾಕ್ ಮಾಡಿದ್ದರು. ಆ ಚಿತ್ರದ ಮೂಲಕ ನಿರ್ಮಾಪಕರಾಗಿಯೂ ಸಕ್ಸಸ್ ಕಂಡಿದ್ದರು. ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿ ಭಾರೀ ಲಾಭ ತಂದುಕೊಟ್ಟಿತ್ತು. ಇನ್ನು ನಿಂತೇ ಹೋಗಿದ್ದ 'ಇಂಡಿಯನ್- 2' ಸಿನಿಮಾ ಚಿತ್ರೀಕರಣ ಕೂಡ ಪುನರಾರಂಭವಾಗಿದೆ.