twitter
    For Quick Alerts
    ALLOW NOTIFICATIONS  
    For Daily Alerts

    ಸಿಂಬು ನಟನೆಯ 'ಮಾನಾಡು' ಸಿನಿಮಾ ಬ್ಯಾನ್‌ಗೆ ಬಿಜೆಪಿ ಒತ್ತಾಯ

    |

    ತಮಿಳು ನಟ ಸಿಂಬು ನಟನೆಯ 'ಮಾನಾಡು' ಸಿನಿಮಾ ಕೆಲ ದಿನಗಳ ಹಿಂದಷ್ಟೆ ಬಿಡುಗಡೆ ಆಗಿತ್ತು. ಸಿನಿಮಾ ಚೆನ್ನಾಗಿಯೇ ಪ್ರದರ್ಶನ ಕಾಣುತ್ತಿದೆ, ಆದರೆ ಈ ನಡುವೆ ಸಿನಿಮಾವನ್ನು ಬ್ಯಾನ್ ಮಾಡಬೇಕೆಂದು ಒತ್ತಾಯ ಕೇಳಿ ಬರುತ್ತಿದೆ.

    ಸಿಲಂಬರಸನ್ ಅಲಿಯಾಸ್ ಸಿಂಬು ನಟನೆಯ 'ಮಾನಾಡು' ಸಿನಿಮಾವು ನವೆಂಬರ್ 25 ರಂದು ಬಿಡುಗಡೆ ಆಗಿದೆ. ಸಿನಿಮಾವು ಅಲ್ಪಸಂಖ್ಯಾತ ಸಮುದಾಯವನ್ನು ಅಪರಾಧಿಗಳಂತೆ ಬಿಂಬಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದ್ದು, ಸಿನಿಮಾವನ್ನು ರದ್ದು ಮಾಡಬೇಕೆಂದು ಒತ್ತಾಯಿಸಿದೆ.

    ಮುಸ್ಲಿಂ ಸಮಯದಾಯದವರು ಅಪರಾಧ ಮನೋಭಾವವುಳ್ಳವರು, ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವವರು ಎಂಬಂತೆ ಬಿಂಬಿಸಲಾಗಿದೆ ಹಾಗಾಗಿ ಸಿನಿಮಾವನ್ನು ರದ್ದು ಮಾಡಬೇಕು ಎಂದು ಬಿಜೆಪಿಯ ಅಲ್ಪಸಂಖ್ಯಾತ ಘಟಕ ಒತ್ತಾಯಿಸಿದೆ.

    BJP Minority Morcha Demand Ban On Simbus New Movie Maanaadu

    ''ಸಿನಿಮಾ ಒಂದು ಶಕ್ತಿಯುತ ಮಾಧ್ಯಮ, ಸಿನಿಮಾದ ಮೂಲಕ ಸಮಾಜದಲ್ಲಿ ಸಾಮರಸ್ಯ ಸಾರಬೇಕೆ ಹೊರತು ಅಸಮಾನತೆ, ದ್ವೇಷದ ಪಾಠ ಮಾಡಬಾರದು. ಅಲ್ಪಸಂಖ್ಯಾತ ಸಮಯದಾಯದವರು ಮೂಲಭೂತವಾದಿಗಳು ಎಂದು ತೋರಿಸುವುದರ ಮೂಲಕ ಮುಸ್ಲೀಮರು ಅಸುರಕ್ಷಿತ ಭಾವದಲ್ಲಿ ಮೂಡುವಂತೆ ಮಾಡಲಾಗಿದೆ'' ಎಂದು ಬಿಜೆಪಿಯ ಅಲ್ಪಸಂಖ್ಯಾತ ಘಟಕ ಕಾರ್ಯದರ್ಶಿ ಸಯ್ಯದ್ ಇಬ್ರಾಹಿಮ್ ಹೇಳಿದ್ದಾರೆ.

    'ಮಾನಾಡು' ಸಿನಿಮಾದಲ್ಲಿ 1998ರಲ್ಲಿ ನಡೆದ ಕೊಯಮತ್ತೂರು ಸರಣಿ ಬಾಂಬ್ ಸ್ಪೋಟದ ದೃಶ್ಯಗಳನ್ನು ಬಳಸಿಕೊಳ್ಳಲಾಗಿದೆ. ಅದಕ್ಕೆ ಸಂಬಂಧಿಸಿದ ಕೆಲವು ದೃಶ್ಯಗಳು ಸಿನಿಮಾದಲ್ಲಿವೆ. ಮುಸ್ಲಿಂ ಹಾಗೂ ಹಿಂದು ಸಮಯದಾಯದ ವ್ಯಕ್ತಿಗಳ ನಡುವಿನ ದೃಶ್ಯಗಳು ಸಹ ಸಿನಿಮಾದಲ್ಲಿವೆ. ಈ ಬಗ್ಗೆ ಮಾತನಾಡಿರುವ ಬಿಜೆಪಿ ಅಲ್ಪಸಂಖ್ಯಾತ ಘಟಕ ಕಾರ್ಯದರ್ಶಿ ಸಯ್ಯದ್ ಇಬ್ರಾಹಿಮ್, ''ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಈ ವಿಷಯವಾಗಿ ಗಮನವಹಿಸಿ ಸಿನಿಮಾವನ್ನು ಬ್ಯಾನ್ ಮಾಡಬೇಕು'' ಎಂದಿದ್ದಾರೆ.

    ''1998ರ ಸರಣಿ ಬಾಂಬ್ ಸ್ಪೋಟ ಆದಾಗ ಡಿಎಂಕೆ ತಮಿಳುನಾಡಿನಲ್ಲಿ ಅಧಿಕಾರದಲ್ಲಿತ್ತು. ಈಗಲೂ ಡಿಎಂಕೆಯೇ ಅಧಿಕಾರದಲ್ಲಿದ್ದು ಸಿನಿಮಾವನ್ನು ಮತ್ತೊಮ್ಮೆ ವೀಕ್ಷಿಸಿ ಸರಿಯಾಗಿ ಸೆನ್ಸಾರ್ ಮಾಡಬೇಕು ಅಥವಾ ಬ್ಯಾನ್ ಮಾಡಬೇಕು'' ಎಂದು ಇಬ್ರಾಹಿಮ್ ಒತ್ತಾಯಿಸಿದ್ದಾರೆ.

    'ಮಾನಾಡು' ಸಿನಿಮಾದ ಬಗ್ಗೆ ಮಾತ್ರವೇ ಅಲ್ಲದೆ ನಟ ಸೂರ್ಯ ನಟಿಸಿ ನಿರ್ಮಿಸಿರುವ 'ಜೈ ಭೀಮ್' ಸಿನಿಮಾದ ಬಗ್ಗೆಯೂ ಟೀಕೆ ಮಾಡಿರುವ ಇಬ್ರಾಹಿಂ ಆ ಸಿನಿಮಾ ಸಹ ಒಂದು ಸಮುದಾಯವನ್ನು ಕೆಟ್ಟದಾಗಿ ಬಿಂಬಿಸುವ ಯತ್ನ ಮಾಡಿದೆ ಎಂದಿದ್ದಾರೆ. ''ಸಮಾಜದಲ್ಲಿ ಹಲವು ಅತ್ಯುತ್ತಮ ಪ್ರೇರಣಾದಾಯಕ ಕತೆಗಳಿವೆ ಅವುಗಳನ್ನು ಸಿನಿಮಾ ಮಾಡಿ ಅದನ್ನು ಬಿಟ್ಟು ಸಮುದಾಯಗಳ ಮಧ್ಯೆ ಬಿರುಕು ಮೂಡಿಸುವಂಥಹಾ, ಸಮಾಜದಲ್ಲಿ ಹಿಂಸೆ ಉದ್ಭವಿಸಲು ಕಾರಣವಾಗುವಂಥಹಾ ಸಿನಿಮಾಗಳನ್ನು ಮಾಡಬೇಡಿ'' ಎಂದಿದ್ದಾರೆ ಸಯ್ಯದ್ ಇಬ್ರಾಹಿಮ್.

    'ಮಾನಾಡು' ಸಿನಿಮಾದಲ್ಲಿ ನಟ ಸಿಂಬು ಅಬ್ದುಲ್ ಖಾಲಿಕ್ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾವು ಟೈಮ್ ಲೂಪ್‌ ಬಗ್ಗೆ ಆಗಿದೆ. ತಮಿಳುನಾಡಿನಲ್ಲಿ ನಡೆದ ಹಲವು ಘಟನೆಗಳ ಬಗ್ಗೆ ಸಿನಿಮಾದಲ್ಲಿ ತೋರಿಸಲಾಗಿದೆ. ಸಿನಿಮಾದಲ್ಲಿ ಎಸ್‌ಜೆ ಸೂರ್ಯ ಸಹ ನಟಿಸಿದ್ದು, ಸಿನಿಮಾದ ಬಗ್ಗೆ ಒಳ್ಳೆಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ನಟ ಸಿಂಬು ವೇದಿಕೆ ಮೇಲೆ ಕಣ್ಣೀರು ಹಾಕಿದ್ದು ಬಹಳ ಸುದ್ದಿಯಾಗಿತ್ತು.

    English summary
    BJP minority morcha general secretory demand Tamil Nadu government to ban on Simbu's new movie Maanaadu for showing Muslims in bad light.
    Monday, November 29, 2021, 16:55
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X