For Quick Alerts
  ALLOW NOTIFICATIONS  
  For Daily Alerts

  ಈ ಫೋಟೊದಲ್ಲಿರುವ ಸ್ಟಾರ್ ಸಹೋದರರನ್ನು ಗುರ್ತಿಸಬಲ್ಲಿರಾ?

  |

  ಸೌತ್‌ ಸಿನಿದುನಿಯಾದಲ್ಲಿ ನಟ ಸೂರ್ಯ ತನ್ನದೇ ಆದ ಛಾಪು ಮೂಡಿಸಿದ್ದಾರೆ. ತಮಿಳು ಮಾತ್ರವಲ್ಲದೇ ಬೇರೆ ರಾಜ್ಯಗಳಲ್ಲೂ ನಡಿಪಿನ್ ನಾಯಗನ್‌ಗೆ ದೊಡ್ಡ ಅಭಿಮಾನಿಗಳ ಬಳಗವಿದೆ. ಬರೀ ಸಿನಿಮಾಗಳಲ್ಲಿ ನಟಿಸುವುದಷ್ಟೇ ತಮ್ಮ ಸರಳ ವ್ಯಕ್ತಿತ್ವದಿಂದಲೂ ಎಲ್ಲರಿಗೂ ಆಪ್ತರಾಗಿದ್ದಾರೆ. ಚಿತ್ರರಂಗದಲ್ಲೂ ಸೂರ್ಯ 25 ವರ್ಷ ಪೂರೈಸಿರುವ ತಮಿಳು ನಟ ಸೂರ್ಯಗೆ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ. ಸಹೋದರ, ನಟ ಕಾರ್ತಿ ಬಾಲ್ಯದ ಫೋಟೊ ಶೇರ್‌ ಮಾಡಿ ಅಣ್ಣನ ಸಾಧನೆ ಕೊಂಡಾಡಿದ್ದಾರೆ.

  ಹೀಗೆ ಮುದ್ದು ಮುದ್ದಾಗಿ ಕಾಣುವ ಈ ಪುಟಾಣಿಗಳು ಈಗ ಸೌತ್‌ ಸಿನಿದುನಿಯಾದ ಸ್ಟಾರ್‌ ನಟರು. ಒಬ್ಬರಿಗಿಂತ ಒಬ್ಬರು ಅದ್ಭುತ ಕಲಾವಿದರು. ವೈವಿಧ್ಯಮಯ ಪಾತ್ರಗಳಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸ್ತಿದ್ದಾರೆ. ಈಗ ಸಹೋದರರಿಬ್ಬರೂ ಒಂದೇ ಸಿನಿಮಾದಲ್ಲಿ ನಟಿಸುವ ಸಮಯ ಹತ್ತಿರ ಬರ್ತಿದೆ. ಅಂದ ಹಾಗೆ ಈ ಪೋಟೊದಲ್ಲಿ ಇರುವುದು ತಮಿಳು ನಟ ಸೂರ್ಯ ಹಾಗೂ ಅವರ ಸಹೋದರ ಕಾರ್ತಿ. ಸ್ಟಾರ್ ನಟನ ಮಕ್ಕಳಾದರೂ ಇಬ್ಬರೂ ತಮ್ಮದೇ ಸ್ವಂತ ಪರಿಶ್ರಮದಿಂದ ಈಗ ಚಿತ್ರರಂಗದಲ್ಲಿ ಸೂಪರ್ ಸ್ಟಾರ್‌ಗಳಾಗಿ ಸದ್ದು ದರ್ಬಾರ್ ನಡೆಸ್ತಿದ್ದಾರೆ.

  ಶೀಘ್ರದಲ್ಲೇ ಅಭಿಮಾನಿಗಳನ್ನು ಭೇಟಿ ಮಾಡಲಿರೋ ರಜನಿಕಾಂತ್: ಸಹೋದರ ಕೊಟ್ಟ ಸುಳಿವು ಏನು?ಶೀಘ್ರದಲ್ಲೇ ಅಭಿಮಾನಿಗಳನ್ನು ಭೇಟಿ ಮಾಡಲಿರೋ ರಜನಿಕಾಂತ್: ಸಹೋದರ ಕೊಟ್ಟ ಸುಳಿವು ಏನು?

  1997ರಲ್ಲಿ ಬಂದ 'ನೆರುಕ್ಕು ನೇರ್' ಚಿತ್ರದಲ್ಲಿ ಇಳಯ ದಳಪತಿ ವಿಜಯ್ ಜೊತೆ ಸೆಕೆಂಡ್ ಹೀರೊ ಆಗಿ ಸೂರ್ಯ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಆ ಚಿತ್ರ ರಿಲೀಸ್ ಆಗಿ ಇಂದಿಗೆ 25 ವರ್ಷ. ಅಂದರೆ ಸೂರ್ಯ ಸಿನಿಪಯಣಕ್ಕೂ 25 ವರ್ಷ ತುಂಬಿದೆ. ಅಣ್ಣ ಈ ಸಾಧನೆಗೆ ಸಹೋದರ ಕಾರ್ತಿ ಈ ಫೋಟೊ ಶೇರ್ ಮಾಡಿ ಅಭಿನಂದನೆ ತಿಳಿಸಿದ್ದಾರೆ. ಸದ್ಯ ಈ ಫೋಟೊ ಸಿಕ್ಕಾಪಟ್ಟೆ ವೈರಲ್ ಆಗಿದೆ. 'ಸೋ ಕ್ಯೂಟ್‌' ಎಂದು ಕಾಮೆಂಟ್ ಮಾಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ.

  ಸೂರ್ಯ ಹಾಗೂ ಕಾರ್ತಿ ಇಬ್ಬರನ್ನು ಒಂದು ಮಾಸ್ ಎಂಟರ್‌ಟೈನರ್‌ ಚಿತ್ರದಲ್ಲಿ ನೋಡಬೇಕು ಎನ್ನುವುದು ಅಭಿಮಾನಿಗಳ ಆಸೆ. ಶೀಘ್ರದಲ್ಲೇ ಅದು ನೆರವೇರುವ ಸಾಧ್ಯತೆ ಇದೆ. 'ವಿಕ್ರಂ' ಸಿನಿಮಾ ಕ್ಲೈಮ್ಯಾಕ್ಸ್‌ನಲ್ಲಿ ಡ್ರಗ್ ಮಾಫಿಯಾ ಡಾನ್ ರೊಲೆಕ್ಸ್ ಪಾತ್ರದಲ್ಲಿ ನಟ ಸೂರ್ಯ ಅಬ್ಬರಿಸಿದ್ದರು. ಇದೀಗ 'ಖೈದಿ' ಸೀಕ್ವೆಲ್‌ನಲ್ಲಿ ರೊಲೆಕ್ಸ್ ಹಾಗೂ ದಿಲ್ಲಿ ಅಂದರೆ ಸೂರ್ಯ ಮತ್ತು ಕಾರ್ತಿ ಸಹೋದರರಿಬ್ಬರೂ ಎದಿರುಬದಿರಾಗುತ್ತಿದ್ದಾರೆ. ಹಾಗಾಗಿ ಈ ಸಿನಿಮಾ ಸಿಕ್ಕಾಪಟ್ಟೆ ಕುತೂಹಲ ಕೆರಳುವಂತೆ ಮಾಡಿದೆ. ತೆರೆಮೇಲೆ ಸಹೋದರರಿಬ್ಬರ ಮುಖಾಮುಖಿ ಹೇಗಿರುತ್ತೋ ಅಂತ ಊಹಿಸಿಕೊಂಡೇ ಅಭಿಮಾನಿಗಳು ಥ್ರಿಲ್ಲಾಗಿದ್ದಾರೆ.

  Can you guess these actors from their childhood pic

  ತಮಿಳಿನ ಖ್ಯಾತ ನಟ ಶಿವಕುಮಾರ್ ಮಕ್ಕಳು ಸೂರ್ಯ ಹಾಗೂ ಕಾರ್ತಿ. ಓದು ಮುಗಿಸಿ ನಟನಾಗಬೇಕು ಎಂದುಕೊಂಡಾಗ ಸೂರ್ಯ ತಂದೆ ಹೆಸರು ಹೇಳದೇ ಅವಕಾಶಗಳಿಗಾಗಿ ಅಲೆದಿದ್ದಾರೆ. ಮಣಿರತ್ನಂ ನಿರ್ಮಾಣದ 'ನೆರುಕ್ಕು ನೇರ್' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಸೂರ್ಯಗೆ ಬಾಲ ನಿರ್ದೇಶನದ 'ನಂದ' ಚಿತ್ರದಲ್ಲಿ ದೊಡ್ಡ ಬ್ರೇಕ್ ಸಿಕ್ತು.

  English summary
  Can you guess these actors from their childhood pic.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X