For Quick Alerts
  ALLOW NOTIFICATIONS  
  For Daily Alerts

  ವಿಜಯ್ ಹುಟ್ಟುಹಬ್ಬ; 'ದಳಪತಿ'ಗೆ ವಿಶ್ ಮಾಡಿದ ಸಿನಿ ಗಣ್ಯರು

  |

  ತಮಿಳಿನ ಖ್ಯಾತ ನಟ ದಳಪತಿ ವಿಜಯ್ ಇಂದು (ಜೂನ್ 22) ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. 47ನೇ ವಸಂತಕ್ಕೆ ಕಾಲಿಟ್ಟಿರುವ ನಟ ವಿಜಯ್‌ಗೆ ಅಭಿಮಾನಿಗಳು ಮತ್ತು ಸಿನಿ ಗಣ್ಯರಿಂದ ಶುಭಾಶಯಗಳ ಸುರಿಮಳೆಯೇ ಹರಿದುಬರುತ್ತಿದೆ.

  ಕೊರೊನಾ ಕಾರಣದಿಂದ ಅದ್ದೂರಿ ಹುಟ್ಟುಹಬ್ಬಕ್ಕೆ ಬ್ರೇಕ್ ಬಿದ್ದರೂ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಬ್ಬ ಮಾಡುತ್ತಿದ್ದಾರೆ. ನೆಚ್ಚಿನ ನಟನ ಫೋಟೋ, ವಿಡಿಯೋ ಶೇರ್ ಮಾಡುವ ಮೂಲಕ ದಳಪತಿಗೆ ವಿಶ್ ಮಾಡುತ್ತಿದ್ದಾರೆ. ಜೊತೆಗೆ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆಯಾದ ವಿಜಯ್ 'ಬೀಸ್ಟ್' ಪೋಸ್ಟರ್ ಅನ್ನು ಹಂಚಿಕೊಳ್ಳುವ ಮೂಲಕ ಸಂಭ್ರಮಿಸುತ್ತಿದ್ದಾರೆ.

  ಇನ್ನು ಸಿನಿ ಗಣ್ಯರಾದ ನಯನತಾರಾ, ಕೀರ್ತಿ ಸುರೇಶ್, ಖುಷ್ಬೂ, ರಾಧಿಕ ಶರತ್ ಕುಮಾರ್, ಧನುಷ್ ಸೇರಿದಂತೆ ಅನೇಕರು ಸಾಮಾಜಿಕ ಜಾಲತಾಣದ ಮೂಲಕ ಪ್ರೀತಿಯ ಶುಭಾಶಯ ತಿಳಿಸಿದ್ದಾರೆ. ಮುಂದೆ ಓದಿ..

  ನಟ ಧನುಷ್

  ನಟ ಧನುಷ್

  ತಮಿಳಿನ ಮತ್ತೋರ್ವ ಖ್ಯಾತ ನಟ ಧನುಷ್, "ಜನ್ಮದಿನ ಶುಭಾಶಯಗಳು ಆತ್ಮೀಯ ವಿಜಯ್ ಸರ್. ಬೀಸ್ಟ್ ಮೋಡ್ ಮಾಡಿ, ಕೀಪ್ ರಾಕಿಂಗ್" ಎಂದು ವಿಶ್ ಮಾಡಿದ್ದಾರೆ.

  ನಟಿ ನಯನತಾರಾ

  ನಟಿ ನಯನತಾರಾ

  ನಟಿ ನಯನತಾರಾ, "ನನ್ನ ಪ್ರೀತಿಯ ದಳಪತಿ ವಿಜಯ್ ಹುಟ್ಟುಹಬ್ಬದ ಶುಭಾಶಯಗಳು. ಹಾರ್ಡ್ ವರ್ಕರ್, ಅತ್ಯಂತ ವಿನಮ್ರ ಮತ್ತು ಶ್ರೇಷ್ಠ ವ್ಯಕ್ತಿತ್ವ, ಪ್ರತಿ ವ್ಯಕ್ತಿಯು ಇಷ್ಟಪಡುವ ದಳಪತಿ" ಎಂದು ಬರೆದುಕೊಂಡಿದ್ದಾರೆ.

  ಹಿರಿಯ ನಟಿ ಖುಷ್ಬೂ

  ಹಿರಿಯ ನಟಿ ಖುಷ್ಬೂ

  ಹಿರಿಯ ನಟಿ ಖುಷ್ಬೂ ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯ ತಿಳಿಸಿದ್ದಾರೆ. "ಹುಟ್ಟುಹಬ್ಬದ ಶುಭಾಶಯಗಳು ವಿಜಯ್. ನಿಮ್ಮ ಎಲ್ಲಾ ಕನಸುಗಳು ಈಡೇರಲಿ. ದೇವರು ಒಳ್ಳೆಯದು ಮಾಡಲಿ" ಎಂದಿದ್ದಾರೆ. ಜೊತೆಗೆ ವಿಜಯ್ ಜೊತೆ ಇರುವ ಸುಂದರ ಫೋಟೋವನ್ನು ಹಂಚಿಕೊಂಡಿದ್ದಾರೆ.

  ನಟಿ ರಾಧಿಕಾ ಪಂಡಿತ್

  ನಟಿ ರಾಧಿಕಾ ಪಂಡಿತ್

  "ಹುಟ್ಟುಹಬ್ಬದ ಶುಭಾಶಯಗಳು ವಿಜಯ್. ನೀವು ಯಾವಾಗಲು ತುಂಬಾ ವಿಶೇಷ ವ್ಯಕ್ತಿಯಾಗಬೇಕೆಂದು ಬಯಸುತ್ತೇನೆ. ಯಾವಾಗಲು ಸಂತೋಷದಿಂದ ಇರಿ ಮತ್ತು ಹೆಚ್ಚು ಶಕ್ತಿ ಸಿಗಲಿ" ಎಂದು ಶುಭ ಹಿರಿಯ ನಟಿ ರಾಧಿಕಾ ಶರತ್ ಕುಮಾರ್ ವಿಶ್ ಮಾಡಿದ್ದಾರೆೆ.

  ಕಮಲ್ ಹಾಸನ್

  ಕಮಲ್ ಹಾಸನ್

  "ಅದ್ಭುತ ಪ್ರತಿಭೆ ಮತ್ತು ಪ್ರೀತಿಯಿಂದ ತಮಿಳರ ಹೃದಯ ಗೆದ್ದಿರುವ ನನ್ನ ಪ್ರೀತಿಯ ಸಹೋದರ ವಿಜಯ್‌ಗೆ ಜನ್ಮದಿನದ ಶುಭಾಶಯಗಳು" ಎಂದು ವಿಶ್ ಮಾಡಿದ್ದಾರೆ.

  ದುಲ್ಕರ್ ಸಲ್ಮಾನ್

  ದುಲ್ಕರ್ ಸಲ್ಮಾನ್

  ಮಲಯಾಳಂನ ಖ್ಯಾತ ನಟ ದುಲ್ಕರ್ ಸಲ್ಮಾನ್ ಕೂಡ ಪ್ರೀತಿಯ ಶುಭಾಶಯ ತಿಳಿಸಿದ್ದಾರೆ. ವಿಜಯ್ ನಟನೆಯ ಹೊಸ ಸಿನಿಮಾ ಬೀಸ್ಟ್ ಚಿತ್ರದ ಪೋಸ್ಟರ್ ಅನ್ನು ಶೇರ್ ಮಾಡಿ, "ಹುಟ್ಟುಹಬ್ಬದ ಶುಭಾಶಯಗಳು ದಳಪತಿ ವಿಜಯ್ ಸರ್" ಎಂದು ಹೇಳಿದ್ದಾರೆ.

  ತಂದೆ ಆಗ್ತಿದ್ದಾರೆ Nikhil Kumaraswamy | Filmibeat Kannada
  ನಟ ಮೋಹನ್ ಲಾಲ್

  ನಟ ಮೋಹನ್ ಲಾಲ್

  ಮಲಯಾಳಂನ ಖ್ಯಾತ ನಟ ಮೋಹನ್ ಲಾಲ್ ಕೂಡ ಪ್ರೀತಿಯ ಶುಭಾಶಯ ತಿಳಿಸಿದ್ದಾರೆ. ಬೀಸ್ಟ್ ಸಿನಿಮಾದ ಪೋಸ್ಟರ್ ಶೇರ್ ಮಾಡಿ, ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.

  English summary
  Thalapathy Vijay celebrating his 47th birthday today. Celebrities Wish Vijay on His Birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X