For Quick Alerts
  ALLOW NOTIFICATIONS  
  For Daily Alerts

  ಫೈಟ್ ದೃಶ್ಯದ ಚಿತ್ರೀಕರಣದ ವೇಳೆ ವಿಶಾಲ್‌ಗೆ ಗಾಯ

  |

  ತಮಿಳು ನಟ ವಿಶಾಲ್‌ಗೆ ಚಿತ್ರೀಕರಣ ಸಮಯದಲ್ಲಿ ನಡೆದ ಅವಘಡದಿಂದ ಗಂಭೀರ ಗಾಯವಾಗಿದೆ.

  ವಿಶಾಲ್ ತಮ್ಮ 31 ಸಿನಿಮಾದ ಚಿತ್ರೀಕರಣವನ್ನು ಹೈದರಾಬಾದ್‌ನಲ್ಲಿ ಮಾಡುತ್ತಿದ್ದು, ಕ್ಲೈಮ್ಯಾಕ್ಸ್‌ ದೃಶ್ಯದ ಚಿತ್ರೀಕರಣ ನಡೆಯುತ್ತಿದೆ. ಈ ಸಮಯ ವಿಲನ್‌ ಪಾತ್ರಧಾರಿ ಬಾಬುರಾಜ್ ಜೊತೆಗೆ ಫೈಟ್ ದೃಶ್ಯದ ಸಂದರ್ಭದಲ್ಲಿ ವಿಶಾಲ್ ಬೆನ್ನಿಗೆ ಪೆಟ್ಟಾಗಿದೆ.

  ಫೈಟ್ ದೃಶ್ಯದಲ್ಲಿ ವಿಲನ್ ಪಾತ್ರಧಾರಿ ಬಾಬುರಾಜ್, ವಿಶಾಲ್ ಅನ್ನು ಎತ್ತಿ ಗೋಡೆಗೆ ಬಿಸಾಡುವ ದೃಶ್ಯವಿದೆ. ದೃಶ್ಯದಲ್ಲಿ ವಿಶಾಲ್‌ ಬೆನ್ನಿಗೆ ರೋಪ್ ಕಟ್ಟಿ ಎಳೆಯಲಾಗಿದೆ. ಆ ಸಂದರ್ಭದಲ್ಲಿ ವಿಶಾಲ್ ಬೆನ್ನು ಜೋರಾಗಿ ಗೋಡೆಗೆ ತಾಗಿದ ಕಾರಣ ಬೆನ್ನಿಗೆ ಪೆಟ್ಟಾಗಿದೆ.

  ವಿಶಾಲ್‌ ಬೆನ್ನಿಗೆ ಗಾಯವಾಗುತ್ತಿದ್ದಂತೆಯೇ ಸೆಟ್‌ನಲ್ಲಿದ್ದ ವೈದ್ಯರು ಪ್ರಥಮ ಚಿಕಿತ್ಸೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿಯೂ ಚಿಕಿತ್ಸೆ ನೀಡಿ ವಿಶಾಲ್ ಕೆಲವು ದಿನಗಳ ವಿಶ್ರಾಂತಿ ತೆಗೆದುಕೊಳ್ಳಬೇಕು ಎಂದು ಸೂಚಿಸಿದ್ದಾರೆ.

  ವಿಶಾಲ್ ತಮ್ಮ ಸಿನಿಮಾಗಳಲ್ಲಿ ಆಕ್ಷನ್ ದೃಶ್ಯಗಳಲ್ಲಿ ತಾವೇ ಭಾಗವಹಿಸುತ್ತಾರೆ, ಡ್ಯೂಪ್ ಅನ್ನು ಹೆಚ್ಚಾಗಿ ಬಳಸುವುದಿಲ್ಲ. ಈ ಹಿಂದೆಯೂ ಫೈಟ್ ದೃಶ್ಯಗಳಲ್ಲಿ ನಟಿಸುವಾಗ ವಿಶಾಲ್‌ಗೆ ಕೆಲವು ಗಾಯಗಳಾಗಿವೆ.

  ವಿಶಾಲ್ ಇದೀಗ ನಟಿಸುತ್ತಿರುವ ಸಿನಿಮಾವನ್ನು ಹೊಸ ನಿರ್ದೇಶಕ ತು ಪಾ ಸರನವಣನ್ ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾವು ಆಕ್ಷನ್, ಸಸ್ಪೆನ್ಸ್ ಕತೆಯುಳ್ಳ ಸಿನಿಮಾ ಆಗಿದೆ. ಸಿನಿಮಾಕ್ಕೆ 'ನಾಟ್ ಎ ಕಾಮನ್ ಮ್ಯಾನ್' ಎಂಬ ಟ್ಯಾಗ್‌ ಲೈನ್ ನೀಡಲಾಗಿದೆ. ಆದರೆ ಸಿನಿಮಾಕ್ಕೆ ಹೆಸರಿನ್ನೂ ಇಟ್ಟಿಲ್ಲ.

  Recommended Video

  ಇಂದ್ರಜಿತ್ ಮೀಟರ್ ನ ಮೆಚ್ಚಲೇ ಬೇಕು

  ವಿಶಾಲ್ ನಟಿಸಿರುವ 'ಮದ ಗಜ ರಾಜ' ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಇದರ ನಡುವೆ, 'ತುಪ್ಪರಿವಾಲನ್ 2', 'ಎನಿಮಿ', 'ಪಾರಸಿಗ ರಾಜ' ಸಿನಿಮಾಗಳಲ್ಲಿ ವಿಶಾಲ್ ನಟಿಸುತ್ತಿದ್ದಾರೆ.

  English summary
  Tamil actor Vishal injured while shooting a action sequence for his 31st movie in Hyderabad. Doctor advised Vishal to take rest.
  Thursday, July 22, 2021, 14:10
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X