ಹಾಸ್ಯನಟ ಯೋಗಿಬಾಬುಗೆ ದುಬಾರಿ ಮದುವೆ ಗಿಫ್ಟ್ ನೀಡಿದ ಧನುಶ್

ಕಾಲಿವುಡ್ ಬೇಡಿಕೆಯ ಹಾಸ್ಯನಟ ಯೋಗಿಬಾಬು ಇತ್ತೀಚಿಗಷ್ಟೆ ಮದುವೆ ವಿಚಾರಕ್ಕೆ ಸುದ್ದಿಯಲ್ಲಿದ್ದರು. ಗೆಳತಿ ಭಾರ್ಗವಿ ಎಂಬುವವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

ಇದೀಗ, ಹಾಸ್ಯನಟ ಯೋಗಿಬಾಬುಗೆ ತಮಿಳು ಸೂಪರ್ ಸ್ಟಾರ್ ಧನುಶ್ ದುಬಾರಿ ಉಡುಗೊರೆ ನೀಡಿದ್ದಾರೆ. ಯೋಗಿಬಾಬು ಮದುವೆ ಸಂಭ್ರಮವನ್ನು ಸಿನಿಮಾ ಸೆಟ್ನಲ್ಲಿ ಆಚರಿಸಿ ಸಹನಟನಿಗೆ ಸರ್ಪ್ರೈಸ್ ನೀಡಿದ್ದಾರೆ. ಅಷ್ಟಕ್ಕೂ, ಧನುಶ್ ಕೊಟ್ಟು ದುಬಾರಿ ಗಿಫ್ಟ್ ಏನು? ಮುಂದೆ ಓದಿ....

ಕೇಕ್ ಕತ್ತರಿಸಿ ಸಂಭ್ರಮಿಸಿದ ಧನುಶ್

ಕೇಕ್ ಕತ್ತರಿಸಿ ಸಂಭ್ರಮಿಸಿದ ಧನುಶ್

ಧನುಶ್ ನಟನೆಯ ಕರ್ಣನ್ ಚಿತ್ರದಲ್ಲಿ ಯೋಗಿಬಾಬು ಹಾಸ್ಯನಟನಾಗಿ ನಟಿಸುತ್ತಿದ್ದಾರೆ. ಸದ್ಯ ಕರ್ಣನ್ ಚಿತ್ರೀಕರಣ ನಡೆಯುತ್ತಿದ್ದು, ಸೆಟ್ ನಲ್ಲಿ ಯೋಗಿಬಾಬುಗೆ ಧನುಶ್ ಸರ್ಪ್ರೈಸ್ ನೀಡಿದ್ದಾರೆ. ಯೋಗಿಬಾಬು ಮದುವೆ ಆದ ಪ್ರಯುಕ್ತ ಸೆಟ್ ನಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ ಧನುಶ್ ಮತ್ತು ಚಿತ್ರತಂಡ.

ಚಿನ್ನದ ಚೈನ್ ನೀಡಿದ ಧನುಶ್

ಚಿನ್ನದ ಚೈನ್ ನೀಡಿದ ಧನುಶ್

ಯೋಗಿಬಾಬು ಮದುವೆ ವಿಶೇಷವಾಗಿ ಧನುಶ್ ಚಿನ್ನದ ಚೈನ್ ಉಡುಗೊರೆಯಾಗಿ ನೀಡಿದ್ದಾರೆ. ಧನುಶ್ ಅವರ ಈ ನಡೆ ಚಿತ್ರರಂಗದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಸಹನಟನೊಬ್ಬನ ಖಾಸಗಿ ಜೀವನದ ಖುಷಿಯ ಸಂಭ್ರಮದಲ್ಲಿ ತಾನು ಭಾಗಿಯಾಗಿ, ದುಬಾರಿ ಗಿಫ್ಟ್ ನೀಡಿರುವುದು ಧನುಶ್ ಅವರ ಸರಳತೆಗೆ ಮತ್ತೊಂದು ಉದಾಹರಣೆ ಎಂದು ಹೊಗಳುತ್ತಿದ್ದಾರೆ ಅವರ ಫ್ಯಾನ್ಸ್.

ಪಟಾಸ್ ಸೆಟ್ ನಲ್ಲಿ ಸೆಲೆಬ್ರೆಷನ್

ಪಟಾಸ್ ಸೆಟ್ ನಲ್ಲಿ ಸೆಲೆಬ್ರೆಷನ್

ಈ ಹಿಂದೆ ಧನುಶ್ ನಟಿಸಿದ್ದ ಪಟಾಸ್ ಸಿನಿಮಾ ಚಿತ್ರೀಕರಣ ಸಂದರ್ಭದಲ್ಲೂ ಫೈಟ್ ಮಾಸ್ಟರ್ ಅವರ ಹುಟ್ಟುಹಬ್ಬ ಆಚರಿಸಿದ್ದರು. ಪಟಾಸ್ ಸಿನಿಮಾದ ಕೊನೆಯ ದಿನ ಚಿತ್ರೀಕರಣದ ದಿನ ಫೈಟ್ ಮಾಸ್ಟರ್ ಹುಟ್ಟುಹಬ್ಬ ಇತ್ತು. ಕೇಕ್ ತರಿಸಿ ಕಟ್ ಮಾಡಿಸಿ ಸಂಭ್ರಮಿಸಿದ್ದರು.

ಮಾರ್ಚ್ ತಿಂಗಳಲ್ಲಿ ಅರತಕ್ಷತೆ

ಮಾರ್ಚ್ ತಿಂಗಳಲ್ಲಿ ಅರತಕ್ಷತೆ

ಫೆಬ್ರವರಿ 5 ರಂದು ಖಾಸಗಿಯಾಗಿ ಕುಟುಂಬಸ್ಥರ ಹಾಗೂ ಕೆಲವೇ ಸ್ನೇಹಿತರ ಸಮ್ಮುಖದಲ್ಲಿ ವಿವಾಹವಾಗಿದ್ದ ಯೋಗಿಬಾಬು, ಮಾರ್ಚ್ ತಿಂಗಳಲ್ಲಿ ಅದ್ಧೂರಿಯಾಗು ಆರತಕ್ಷತೆ ಮಾಡಿಕೊಳ್ಳುವ ಪ್ಲಾನ್ ಮಾಡಿದ್ದಾರೆ. 2019ರ ಸಾಲಿನಲ್ಲಿ ಸುಮಾರು 30ಕ್ಕೂ ಅಧಿಕ ಚಿತ್ರಗಳಲ್ಲಿ ಯೋಗಿಬಾಬು ನಟಿಸಿರುವ ವಿಶೇಷ.

More from Filmibeat

English summary
Tamil actor Dhanush gifted a costly gift to comedian yogibabu for his marriage, at the Karnan shooting spot.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X