Don't Miss!
- Sports
ಆರ್ಸಿಬಿ ತನ್ನ ಆಟಗಾರರನ್ನು ನಂಬಲ್ಲ ಎಂದ ಕ್ರಿಸ್ ಗೇಲ್: ತಿರುಗಿಬಿದ್ದ ಅಭಿಮಾನಿಗಳು ಕೊಟ್ಟ ಉತ್ತರವೇನು?
- News
Vishnuvardhan Memorial: ಇಂದು ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ, ವಿಷ್ಣು ಅಭಿಮಾನಿಗಳ ಅಸಮಾಧಾನವೇನು?
- Automobiles
'ಮಹೀಂದ್ರಾ ಸ್ಕಾರ್ಪಿಯೊ ಎನ್' ಈ ರೂಪಾಂತರಗಳಿಗೆ ಬರೋಬ್ಬರಿ 2 ವರ್ಷ ಕಾಯಬೇಕು..
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Aishwarya Rajinikanth: ತನ್ನಿಬ್ಬರು ಮಕ್ಕಳ ಬಗ್ಗೆ ಭಾವನಾತ್ಮಕ ಪತ್ರ ಬರೆದ ಐಶ್ವರ್ಯ ರಜಿನಿಕಾಂತ್!
ನಿರ್ದೇಶಕಿ ನಿರ್ಮಾಪಕಿ ಐಶ್ವರ್ಯ ರಜಿನಿಕಾಂತ್ ಇತ್ತೀಚೆಗೆ ಭಾರಿ ಸುದ್ದಿಯಲ್ಲಿದ್ದಾರೆ. ಅದರಲ್ಲೂ ಧನುಷ್ ಜೊತೆ ದಾಂಪತ್ಯ ಜೀವನ ಮುರಿದುಕೊಂಡ ಬಳಕವಂತೂ ಅವರ ಬಗೆಗಿನ ಪ್ರತೀ ವಿಚಾರವೂ ದೊಡ್ಡ ಸುದ್ದಿಯಾಗುತ್ತೆ.
ಅದರಲ್ಲೂ ಕುಟುಂಬದವರ ಬಗ್ಗೆ ಚಿಕ್ಕ ಸುದ್ದಿಯೂ ಈಗ ವೈರಲ್ ಸುದ್ದಿಗಳಾಗುತ್ತಿವೆ. ವಿಚ್ಛೇದನ ಘೋಷಣೆ ಆದ ಬಳಿಕ ಸೋಷಿಯಲ್ ಮೀಡಿಯಲ್ಲಿ ಸಖತ್ ಆಕ್ಟಿವ್ ಆಗಿರುವ ಐಶ್ವರ್ಯ ರಜಿನಿಕಾಂತ್ ತನ್ನ ಪ್ರತೀ ಕೆಲಸದ ಅಪ್‌ಡೇಟ್ ಅನ್ನು ನೀಡುತ್ತಲೆ ಇರುತ್ತಾರೆ.
Samantha:
ಸಮಂತಾ
ಮತ್ತು
ನಾಗಚೈತನ್ಯ
ಇನ್‌ಸ್ಟಾಗ್ರಾಂ
ಕದನಕ್ಕೆ
ತಲೆಕೆಡಿಸಿಕೊಂಡ
ಫ್ಯಾನ್ಸ್!
ಇದೀಗ ವಿಚ್ಚೇದನದ ನಂತರ ಐಶ್ವರ್ಯ ರಜಿನಿಕಾಂತ್ ಮಕ್ಕಳ ಬಗ್ಗೆ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಮಕ್ಕಳ ಮತ್ತು ತಾಯಿಯ ಈ ಪೋಸ್ಟ್ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

ಮಕ್ಕಳ ವಿಚಾರದಲ್ಲಿ ಮತ್ತೆ ಸುದ್ದಿಯಲ್ಲಿದ್ದಾರೆ
ಐಶ್ವರ್ಯ ರಜಿನಿಕಾಂತ್ ಇತ್ತೀಚೆಗೆ ತನ್ನ ಕೆಲಸಗಳಿಂದಲೇ ಹೆಚ್ಚು ಸುದ್ದಿಯಲ್ಲಿದ್ದಾರೆ. ನಿರ್ಮಾಪಕಿಯಾಗಿದ್ದ ಐಶ್ವರ್ಯ ರಜಿನಿಕಾಂತ್ ಇತ್ತೀಚೆಗೆ ಒಂಬತ್ತು ವರ್ಷಗಳ ಬಳಿಕ ನಿರ್ದೇಶನಕ್ಕೆ ಇಳಿದಿದ್ದರು. ಇದೀಗ ಮಕ್ಕಳ ವಿಚಾರದಲ್ಲಿ ಮತ್ತೆ ಸುದ್ದಿಯಲ್ಲಿದ್ದಾರೆ. ನಟ ಧನುಷ್ ಜೊತೆ 18 ವರ್ಷಗಳ ದಾಂಪತ್ಯ ಜೇವನಕ್ಕೆ ಬ್ರೇಕ್ ಹಾಕಿದ ಬಳಿಕ ಮೊದಲ ಬಾರಿಗೆ ತನ್ನ ಮಕ್ಕಳೊಂದಿಗೆ ಇರುವ ಫೋಟೊವನ್ನು ಶೇರ್ ಮಾಡಿಕೊಂಡಿರುವ ಐಶ್ವರ್ಯ ಮಕ್ಕಳ ಬಗ್ಗೆ ಬರೆದುಕೊಂಡಿದ್ದಾರೆ.
''ನನ್ನ ಗರ್ಭದಲ್ಲಿರುವಾಗ ನೀವು ನನ್ನನ್ನು ಒದ್ದಿದ್ದೀರಿ''
ತಮ್ಮ ಇನ್‌ಸ್ಟಾಗ್ರಾಮ್ ಟೈಮ್‌ಲೈನ್‌ನಲ್ಲಿ ಹೀಗೆ ಬರೆದಿದ್ದಾರೆ ಐಶ್ವರ್ಯ ರಜಿನಿಕಾಂತ್ "ನನ್ನ ಗರ್ಭದಲ್ಲಿರುವಾಗ ನೀವು ನನ್ನನ್ನು ಒದ್ದಿದ್ದೀರಿ, ಈಗ ನೀವು ಬೆಳೆದಿದ್ದೀರಿ. ನೀವು ನನ್ನನ್ನು ಚುಂಬಿಸುತ್ತಿರುವುದನ್ನು ನಾnu ಆನಂದಿಸುತ್ತಿದ್ದೇನೆ. ನಿಮ್ಮನ್ನು ನನಗೆ ನೀಡಿರುವುದಕ್ಕೆ ನಾನು ದೇವರಿಗೆ ಧನ್ಯವಾದ ಅರ್ಪಿಸುತ್ತೇನೆ. ನನ್ನ ಪ್ರಾರ್ಥನೆ ಯಾವತ್ತು ನಿಮಗಾಗಿ ಇರಲಿದೆ. ನಿಮ್ಮ ಪ್ರೀತಿಯನ್ನು ಅಳೆಯಲು ಸಾಧ್ಯವಿಲ್ಲ. ಆದರೆ ನಿಮ್ಮನ್ನು ಜವಬ್ದಾರಿಯುತರಾಗಿ ಬೆಳೆಸುವುದು ನನ್ನ ಕರ್ತವ್ಯ. ಹಾಗೂ ನೀವು ಹೂವುಗಳಾಗಿ ಅರಳುವುದನ್ನು ನೋಡಿ ನಾನು ಧನ್ಯಳಾಗುತ್ತಿದ್ದೇನೆ" ಎಂದಿದ್ದಾರೆ.

ರಾಕ್ ವಿತ್ ರಾಜಾ ದಲ್ಲಿ ಧನುಷ್ ಮತ್ತು ಮಕ್ಕಳು
ಕೆಲ ದಿನಗಳ ಹಿಂದೆ ನಟ ಧನುಷ್ ಕೂಡ ತನ್ನಿಬ್ಬರು ಮಕ್ಕಳಾದ ಲಿಂಗ ಮತ್ತು ಯಾತ್ರ ಜೋತೆ ಡಿವೋರ್ಸ್ ಬಳಿಕ ಮೊದಲ ಬಾರಿಗೆ ಕಾಣಿಸಿಕೊಂಡಿದ್ದರು. ಚೆನ್ನೈನಲ್ಲಿ ಇಳಯರಾಜ ಅವರ ರಾಕ್ ವಿತ್ ರಾಜಾ ಸಂಗೀತ ಕಛೇರಿಯಲ್ಲಿ ಧನುಷ್ ಮತ್ತು ಮಕ್ಕಳು ಭಾಗವಹಿಸಿದ್ದರು. ಈವೆಂಟ್‌ನ ಹಲವಾರು ಚಿತ್ರಗಳು ಮತ್ತು ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಧನುಷ್ ಬಿಳಿ ಸಾಂಪ್ರದಾಯಿಕ ಉಡುಗೆಯಲ್ಲಿ ಸುಂದರವಾಗಿ ಕಾಣಿಸಿಕೊಂಡಿದ್ದರು. ಈ ಫೋಟೊಗಳು ಸಾಕಷ್ಟು ವೈರಲ್ ಆಗಿತ್ತು.

ನಿರ್ದೇಶನ ಮಾಡಿ ಸುದ್ದಿಯಾಗಿದ್ದ ಐಶ್ವರ್ಯ ರಜಿನಿಕಾಂತ್
ಇದೀಗ ಐಶ್ವರ್ಯ ರಜಿನಿಕಾಂತ್ ಕೂಡ ಮಕ್ಕಳ ಬಗ್ಗೆ ಬರೆದುಕೊಂಡಿರುವುದನ್ನು ಗಮನಿಸಿರುವ ಅಭಿಮಾನಿಗಳು ಮಕ್ಕಳೊಂದಿಗೆ ನೀವು ಇಬ್ಬರು ಇಷ್ಟು ಚನ್ನಾಗಿ ಇದ್ದೀರಾ, ನಿಮ್ಮ ಕುಟುಂಬವನ್ನು ಮತ್ತೆ ಸರಿ ಪಡಿಸಿಕೊಳ್ಳಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಹೀಗೆ ಹಲವರು ಐಶ್ವರ್ಯ ಅವರ ಪೋಸ್ಟ್‌ಗೆ ಕಮೆಂಟ್‌ಗಳನ್ನು ಮಾಡುತ್ತಿದ್ದು, ಐಶ್ವರ್ಯ ಈ ಬಗ್ಗೆ ಪ್ರತಿಕ್ರಿಯೆಯನ್ನು ನೀಡಿಲ್ಲ. ಇತ್ತೀಚೆಗಷ್ಟೆ ತಾನು ನಿರ್ದೇಶನ ಮಾಡಿದ್ದ ವೀಡಿಯೋ ಸಾಂಗ್ ಒಂದನ್ನು ಬಹು ಭಾಷೆಯಲ್ಲಿ ರಿಲೀಸ್ ಮಾಡಿ ಐಶ್ವರ್ಯ ಸುದ್ದಿಯಾಗಿದ್ದರು.