Don't Miss!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Sports
IND VS AUS Test: ಟೆಸ್ಟ್ ಸರಣಿಯಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪರ್ ಅಲ್ಲ: ಪದಾರ್ಪಣೆ ಮಾಡಲು ಸಜ್ಜಾದ ವಿಕೆಟ್ ಕೀಪರ್
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ತಮಿಳು ನಿರ್ದೇಶಕನ ಜೊತೆ ಕನ್ನಡ ನಟಿ ಧನ್ಯಾ ಬಾಲಕೃಷ್ಣ ಸೀಕ್ರೆಟ್ ಮ್ಯಾರೇಜ್ ಕನ್ಫರ್ಮ್
ನಟಿ ಧನ್ಯಾ ಬಾಲಕೃಷ್ಣ ರಹಸ್ಯವಾಗಿ ಮದುವೆ ಆಗಿದ್ದಾರೆ. ಬೆಂಗಳೂರು ಬೆಡಗಿ ತಮಿಳು ಸಿನಿಮಾ ನಿರ್ದೇಶಕ ಬಾಲಾಜಿ ಮೋಹನ್ ಕೈ ಹಿಡಿದಿದ್ದಾರೆ ಎನ್ನುವ ಗುಸುಗುಸು ಕೇಳಿಬಂದಿತ್ತು. ಕೆಲ ದಿನಗಳಿಂದ ಧನ್ಯಾ ಸೀಕ್ರೆಟ್ ಮ್ಯಾರೇಜ್ ಬಗ್ಗೆ ಮತ್ತೊಬ್ಬ ನಟಿ ಕಲ್ಪಿಕಾ ಗಣೇಶ್ ಯೂಟ್ಯೂಬ್ ವಿಡಿಯೋ ಮಾಡಿ ತಿಳಿಸಿದ್ದರು.
ಸ್ವತಃ ಬಾಲಾಜಿ ಮೋಹನ್ ತಮ್ಮ ಮದುವೆ ಬಗ್ಗೆ ಇದೀಗ ಮಾಹಿತಿ ನೀಡಿದ್ದಾರೆ. ತೆಲುಗು, ತಮಿಳು, ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಧನ್ಯಾ ಬೆಂಗಳೂರಿನಲ್ಲೇ ಹುಟ್ಟಿ ಬೆಳೆದವರು. ತಮ್ಮ ವೈಯಕ್ತಿಕ ಹಾಗೂ ಮದುವೆ ವಿಚಾರದ ಬಗ್ಗೆ ನಟಿ ಕಲ್ಪಿಕಾ ಸಾರ್ವಜನಿಕವಾಗಿ ಮಾತನಾಡದಂತೆ ತಡೆಯುವಂತೆ ಬಾಲಾಜಿ ಮೋಹನನ್ ಇದೀಗ ಚೆನ್ನೈ ಹೈಕೋರ್ಟ್‌ನಲ್ಲಿ ಪಿಟಿಷನ್ ದಾಖಲಿಸಿದ್ದಾರೆ. ತಾವು ಕಳೆದ ವರ್ಷ ಜನವರಿಯಲ್ಲೇ ಧನ್ಯಾ ಜೊತೆ ಮದುವೆ ಆಗಿರುವುದಕ್ಕೆ ಸಾಕ್ಷ್ಯವನ್ನು ಕೋರ್ಟ್‌ಗೆ ಒದಗಿಸಿದ್ದಾರೆ.
ರಾಕಿ
ಭಾಯ್,
ಬಾಹುಬಲಿಗಿಂತ
ಸ್ಪೀಡ್
'ಪೊನ್ನಿಯನ್
ಸೆಲ್ವನ್':
ಸೀಕ್ವೆಲ್
ರಿಲೀಸ್
ಡೇಟ್
ಬಂದೇಬಿಡ್ತು
ನಟಿ ಕಲ್ಪಿಕಾ ನಮ್ಮ ಮಾನಹಾನಿ ಆಗುವಂತೆ ವಿಡಿಯೋಗಳನ್ನು ಮಾಡಿ ಯೂಟ್ಯೂಬ್‌ನಲ್ಲಿ ಶೇರ್ ಮಾಡುತ್ತಿದ್ದಾರೆ ಎಂದು ಬಾಲಾಜಿ ಆರೋಪಿಸಿದ್ದಾರೆ. ಸದ್ಯ ಬಾಲಾಜಿ, ಧನ್ಯಾ ಮದುವೆ ವಿಚಾರ ಹಾಟ್ ಟಾಪಿಕ್ ಆಗಿದೆ. ಅಷ್ಟಕ್ಕೂ ಯಾಕೆ ಇಬ್ಬರು ರಹಸ್ಯವಾಗಿ ಮದುವೆ ಆದರು ಎಂದು ಚರ್ಚೆ ನಡೀತಿದೆ. ಮುಂದಿನ ದಿನಗಳಲ್ಲಿ ದಂಪತಿ ಒಟ್ಟಿಗೆ ಮಾಧ್ಯಮದ ಮುಂದೆ ಬರುತ್ತಾರಾ ಕಾದು ನೋಡಬೇಕು. ಅಂದಹಾಗೆ ಇದು ನಿರ್ದೇಶಕ ಬಾಲಾಜಿ ಮೋಹನನ್‌ಗೆ 2ನೇ ಮದುವೆ. ಈಗಾಗಲೇ ಬಾಲ್ಯದ ಗೆಳತಿಯನ್ನು ಮದುವೆಯಾಗಿ ವಿಚ್ಛೇದನ ಪಡೆದಿದ್ದಾರೆ.
ಧನ್ಯಾ ಬಾಲಕೃಷ್ಣ ಜೊತೆ ಬಾಲಾಜಿ 2ನೇ ಮದುವೆ ಆಗಿದ್ದಾರೆ. ಪರಸ್ಪರ ಒಪ್ಪಿ ಮೊದಲ ಮಡದಿಯಿಂದ ವಿಚ್ಛೇದನ ಪಡೆದಿದ್ದರು. ಸೂರ್ಯ ನಟನೆಯ '7th ಸೆನ್ಸ್' ಚಿತ್ರದ ಪುಟ್ಟ ಪಾತ್ರದಲ್ಲಿ ಧನ್ಯಾ ಮೊದಲು ಬಣ್ಣ ಹಚ್ಚಿದ್ದರು. ನಂತರ 'ರಾಜಾ ರಾಣಿ', 'ಸಾವಿತ್ರಿ', 'ನೇನು ಶೈಲಜಾ', 'ರಾಜುಗಾರಿ ಗದಿ' ಸೇರಿದಂತೆ ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿದ್ದರು. 'ಸಾರ್ವಜನಿಕರರಿಗೆ ಸುವರ್ಣಾವಕಾಶ' ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದರು. 'ನೋಡಿ ಸ್ವಾಮಿ ನಾವಿರೋದೇ ಹೀಗೆ', 'ಫ್ಲಿಪ್ ಫ್ಲಾಪ್' ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೋಮಲ್ ಜೊತೆ '2020' ಚಿತ್ರದಲ್ಲೂ ಮಿಂಚಿದ್ದಾರೆ.

ಇನ್ನು ನಿರ್ದೇಶಕ ಬಾಲಾಜಿ ಮೋಹನ್ ಧನುಷ್ ನಟನೆಯ 'ಮಾರಿ', 'ಮಾರಿ- 2' ಸೇರಿದಂತೆ ಒಂದಷ್ಟು ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಕೆಲ ದಿನಗಳ ಹಿಂದೆಯೇ ಇವರಿಬ್ಬರ ರಹಸ್ಯ ಮದುವೆ ಬಗ್ಗೆ ನಟಿ ಕಲ್ಪಿತಾ ಯೂಟ್ಯೂಬ್ ವಿಡಿಯೋ ಮಾಡಿದ್ದರು. ನಂತರ ಆ ವಿಡಿಯೋ ಡಿಲೀಟ್ ಆಗಿತ್ತು. ಅದಕ್ಕೆ ಗರಂ ಆಗಿ ಆಕೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಳು. ಇದೀಗ ಬಾಲಾಜಿ ತಮ್ಮ ಮದುವೆ ಬಗ್ಗೆ ಮಾಹಿತಿ ನೀಡಿದ್ದಾರೆ.