ಆಸ್ಪತ್ರೆಯಿಂದ ನಟ-ರಾಜಕಾರಣಿ ವಿಜಯಕಾಂತ್ ಡಿಸ್ಚಾರ್ಜ್
ತಮಿಳಿನ ಖ್ಯಾತ ನಟ ಹಾಗೂ ಡಿಎಂಡಿಕೆ ಪಕ್ಷದ ಸಂಸ್ಥಾಪಕ ವಿಜಯಕಾಂತ್ ಆರೋಗ್ಯದಲ್ಲಿ ಸುಧಾರಣೆ ಕಂಡಿದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಗುರುವಾರ ರಾತ್ರಿ ವಿಜಯಕಾಂತ್ ಆಸ್ಪತ್ರೆಯಿಂದ ಮನೆಗೆ ತೆರಳಿದರು ಎಂದು ವರದಿಯಾಗಿದೆ.
ಉಸಿರಾಟದಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆ ವಿಜಯಕಾಂತ್ ಅವರನ್ನು ಮೇ 19 ರಂದು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಾಮಾನ್ಯ ಪರೀಕ್ಷೆ ಮಾಡಿದ ನಂತರ ಎರಡು ದಿನ ಆಸ್ಪತ್ರೆಯಲ್ಲಿರಲು ವೈದ್ಯರ ಸಲಹೆ ಕೊಟ್ಟಿದ್ದರು. ವೈದ್ಯರು ಸಲಹೆಯಂತೆ ವಿಶ್ರಾಂತಿ ಪಡೆದಿದ್ದ ವಿಜಯಕಾಂತ್ ಈಗ ಮನೆಗೆ ಹಿಂತಿರುಗಿದ್ದಾರೆ.
ವಿಜಯಕಾಂತ್ ಆರೋಗ್ಯವಾಗಿ ಉತ್ತಮವಾಗಿದ್ದಾರೆ. ಅವರ ಆರೋಗ್ಯದ ಬಗ್ಗೆ ಯಾವುದೇ ವದಂತಿಗಳನ್ನು ಹಬ್ಬಿಸಬೇಡಿ ಎಂದು ಡಿಎಂಡಿಕೆ ಪಕ್ಷದ ಸದಸ್ಯರು ವಿನಂತಿಸಿದ್ದಾರೆ.

ಅಂದ್ಹಾಗೆ, ವಿಜಯಕಾಂತ್ ಅವರಿಗೆ ಕೊರೊನಾ ವೈರಸ್ ಪರೀಕ್ಷೆಯೂ ಮಾಡಲಾಗಿದ್ದು, ಫಲಿತಾಂಶ ನೆಗೆಟಿವ್ ಬಂದಿದೆ. ಕಳೆದ ವರ್ಷ ಸೆಪ್ಟೆಂಬರ್ (2020) ನಲ್ಲಿ ವಿಜಯಕಾಂತ್ ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಬಳಿಕ, ಆಸ್ಪತ್ರೆಗೆ ದಾಖಲಾಗಿ ಚೇತರಿಕೆ ಕಂಡಿದ್ದರು.
ಇತ್ತೀಚಿಗಷ್ಟೆ ನಡೆದ ತಮಿಳುನಾಡು ವಿಧಾನಸಭೆ ಚುನಾವಣೆಯ ವೇಳೆ ವಿಜಯಕಾಂತ್ ಡಿಎಂಡಿಕೆ ಪಕ್ಷದ ಪರವಾಗಿ ಪ್ರಚಾರ ಮಾಡಿದ್ದರು.


Click it and Unblock the Notifications











