For Quick Alerts
  ALLOW NOTIFICATIONS  
  For Daily Alerts

  ನಟ, ಡಿಎಂಕೆ ನಾಯಕ ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಬಂಧನ

  |

  ಖ್ಯಾತ ನಟ, ಡಿಎಂಕೆ ಪಕ್ಷದ ಮುಖಂಡ ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಅನ್ನು ತಮಿಳುನಾಡು ಪೊಲೀಸರು ಇಂದು (ನವೆಂಬರ್ 20) ಸಂಜೆ ಬಂಧಿಸಿದ್ದಾರೆ.

  ನಟನೆ ಜೊತೆಗೆ ಸಕ್ರಿಯ ರಾಜಕಾರಣಿಯೂ ಆಗಿರುವ ಉದಯನಿಧಿ ಸ್ಟಾಲಿನ್, ಡಿಎಂಕೆ ಪಕ್ಷದ ಯುವ ಘಟಕದ ಕಾರ್ಯದರ್ಶಿಯಾಗಿದ್ದಾರೆ.

  ಡಿಎಂಕೆ ಚುನಾವಣಾ ಪ್ರಚಾರ 'ವಿಡಿಯಲೈ ನೊಕ್ಕಿ' ಗೆ ಉದಯನಿಧಿ ಸ್ಟಾಲಿನ್ ಇಂದು ತಮಿಳುನಾಡಿನ ನಾಗಪಟ್ಟಿನಂ ಜಿಲ್ಲೆಯಲ್ಲಿ ಪ್ರಾರಂಭ ನೀಡಿದರು. ಭಾರಿ ಸಂಖ್ಯೆಯಲ್ಲಿ ನೆರೆದಿದ್ದ ಜನಸ್ತೋಮದ ಎದುರು ಭಾಷಣ ಮಾಡಿದರು.

  ಭಾಷಣದ ತರುವಾಯ ಪೊಲೀಸರು ಉದಯನಿಧಿ ಸ್ಟಾಲಿನ್ ಹಾಗೂ ಅವರ ಕೆಲವು ಬೆಂಬಲಿಗರನ್ನು ವಶಕ್ಕೆ ಪಡೆದು, ಕಲ್ಯಾಣ ಮಂಟಪವೊಂದರಲ್ಲಿ ಬಂಧಿಯಾಗಿಟ್ಟಿದ್ದರು.ತಮ್ಮ ನಾಯಕನನ್ನು ಪೊಲೀಸರು ಕರೆದೊಯ್ದ ಕೂಡಲೇ ಡಿಎಂಕೆ ಬೆಂಬಲಿಗರು ಪ್ರತಿಭಟನೆ ನಡೆಸಿದ್ದು, ಪೊಲೀಸರು ಹಾಗೂ ತಮಿಳುನಾಡು ಸಿಎಂ ಪಳನಿಸ್ವಾಮಿ ವಿರುದ್ಧ ಘೋಷಣೆಗಳನ್ನು ಕೂಗಿದರು.

  ಉದಯನಿಧಿ ಮಾರನ್, ಸಮಾವೇಶ ಮಾಡುವ ಮೂಲಕ ಕೋವಿಡ್ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರಾದ್ದರಿಂದ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

  ಧ್ರುವ ಸರ್ಜಾ ನೋಡಲು ಮುಗಿಬಿದ್ದ ಅಭಿಮಾನಿಗಳು | Dhruva Sarja | Filmibeat Kannada

  ತಮ್ಮ ಬಂಧನವನ್ನು ಖಂಡಿಸಿರುವ ಉದಯನಿಧಿ ಸ್ಟಾಲಿನ್, 'ನಮ್ಮ ಪಕ್ಷದ (ಡಿಎಂಕೆ) ಮುಖಂಡರು ಹಾಗೂ ನಮ್ಮ ಮೈತ್ರಿ ಪಕ್ಷಗಳ ನಾಯಕರು ಜನರನ್ನು ಭೇಟಿ ಮಾಡದಂತೆ ತಡೆಯಲು ಸಿಎಂ ಪಳನಿಸ್ವಾಮಿ ಪೊಲೀಸರನ್ನು ಬಳಸಿಕೊಳ್ಳುತ್ತಿದ್ದಾರೆ' ಎಂದಿದ್ದಾರೆ.

  English summary
  DMK leader and well known actor Udhayanidhi Stalin arrested my Nagapattinam district police for violating COVID 19 rules.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X