For Quick Alerts
  ALLOW NOTIFICATIONS  
  For Daily Alerts

  'ಫೋರ್ಬ್ಸ್ ಇಂಡಿಯಾ' ಪಟ್ಟಿಯಲ್ಲಿ ದಕ್ಷಿಣ ಭಾರತದ ಖ್ಯಾತ ನಟಿ ಕೀರ್ತಿ ಸುರೇಶ್

  |

  ಫೋರ್ಬ್ಸ್ ಇಂಡಿಯಾ 2021ರ 30 ವರ್ಷದೊಳಗಿನ 30 ಸಾಧಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಫೋರ್ಸ್ಬ್ 30 ವರ್ಷದೊಳಗಿನ ಯುವ ಸಾಧಕರಲ್ಲಿ ಸಿನಿಮಾರಂಗದಿಂದ ದಕ್ಷಿಣ ಭಾರತದ ಖ್ಯಾತ ನಟಿ ಕೀರ್ತಿ ಸುರೇಶ್ ಸ್ಥಾನ ಪಡೆದಿದ್ದಾರೆ.

  ಕ್ರೀಡೆ, ಸಿನಿಮಾ, ಉದ್ಯಮಿ ಸೇರಿದಂತೆ ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಿದ 30 ವರ್ಷದೊಳಗಿನ 30 ಸಾಧಕರನ್ನು ಫೋರ್ಬ್ಸ್ ಇಂಡಿಯಾ ಗುರುತಿಸಿದೆ. ದಕ್ಷಿಣ ಭಾರತದಿಂದ ಮಹಾನಟಿ ಕೀರ್ತಿ ಸುರೇಶ್ ಮತ್ತು ತೃಪ್ತಿ ದಿಮ್ರಿ ಸ್ಥಾನ ಪಡೆದಿದ್ದಾರೆ. ಈ ಬಗ್ಗೆ ಫೋರ್ಬ್ಸ್ ಇಂಡಿಯಾ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಬಹಿರಂಗ ಪಡಿಸಿದ್ದಾರೆ.

  ಸರ್ಕಾರು ವಾರಿ ಪಾಟ: ದುಬೈ ಗೆ ಬೈ-ಬೈ ಹೇಳಿದ ಮಹೇಶ್ ಬಾಬು

  ಯೂಟ್ಯೂಬರ್ ಆಶಿಶ್ ಚಂಚಲಾನಿ ಕೂಡ ಡಿಜಿಟಲ್ ಕಂಟೆಂಟ್ ಕ್ರೆಯೇಟರ್ ವಿಭಾಗದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೂ ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಸ್ಥಾನ ಪಡೆದ ಪಡೆದ ನಟಿ ಕೀರ್ತಿ ಸುರೇಶ್ ಪ್ರತಿಕ್ರಿಯೆ ನೀಡಿದ್ದಾರೆ. 'ಫೋರ್ಬ್ಸ್ ಇಂಡಿಯಾ 30 ಅಂಡರ್ 30 ಪಟ್ಟಿಯಲ್ಲಿ ವಿವಿಧ ಹಂತಗಳಲ್ಲಿ ಒಬ್ಬರಾಗಿರುವುದಕ್ಕೆ ಸಂತಸವಾಗುತ್ತಿದೆ. ಧನ್ಯವಾದಗಳು ಫೋರ್ಬ್ಸ್ ಇಂಡಿಯಾ' ಎಂದು ಹೇಳಿದ್ದಾರೆ.

  ನಟಿ ಕೀರ್ತಿ ಸುರೇಶ್ ಮಲಯಾಳಂ ಚಿತ್ರರಂಗದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ. ಬಾಲ ಕಲಾವಿದೆಯಾಗಿ ಎಂಟ್ರಿ ಕೊಟ್ಟ ಕೀರ್ತಿ ಬಳಿಕ ಕಾಲಿವುಡ್ ಸಿನಿಮಾರಂಗಕ್ಕೆ ಎಂಟ್ರಿ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ನಾನು ಸೈಲಜಾ ಚಿತ್ರದ ಮೂಲಕ ನಾಯಕಿಯಾಗಿ ತೆರೆಮೇಲೆ ಮಿಂಚಿದ್ದ ಕೀರ್ತಿ ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ.

  ಮಹಾನಟಿ ಸಿನಿಮಾದ ಅದ್ಭುತ ನಟನೆಗೆ ರಾಷ್ಟ್ರಪ್ರಶಸ್ತಿಯ ಗರಿ ಸಿಕ್ಕಿದೆ. ಸದ್ಯ ತಮಿಳು ಜೊತೆಗೆ ತೆಲುಗು ಸಿನಿಮಾರಂದಲ್ಲೂ ಮಿಂಚುತ್ತಿರುವ ಕೀರ್ತಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 28 ವರ್ಷದ ನಟಿ ಕೀರ್ತಿ ಮಹೇಶ್ ಬಾಬು ನಟನೆಯ ಸರ್ಕಾರು ವಾರಿ ಪಾಟ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರಂಗ ದೇ, ಗುಡ್ ಲಕ್ ಸಖಿ ಸೇರಿದಂತೆ ಅನೇಕ ಸಿನಿಮಾಗಳು ಕೀರ್ತಿ ಕೈಯಲ್ಲಿದೆ.

  ಸಲಾರ್ ಗೆ ಎಂಟ್ರಿ ಕೊಟ್ಟ ಕನ್ನಡದ ಸ್ಟಾರ್ ವಿಲನ್ | Filmibeat Kannada
  English summary
  South Indian famous Actress keerthy suresh on forbes 30 under 30 achievers list.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X